For Quick Alerts
ALLOW NOTIFICATIONS  
For Daily Alerts

ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

|

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ದೇಹದ ತೂಕ ಕಳಕೊಂಡಾಗ ಈ ಸುಂದರಿ ಹೇಗೆ ತನ್ನ ದೇಹದ ತೂಕವನ್ನು ಇಳಿಸಿಕೊಂಡಳು ಎಂದು ಎಲ್ಲರೂ ಬೆರಗಾಗಿದ್ದರು. ಆದರೆ ವಾಸ್ತವ ಸಂಗತಿ ಏನೆಂದರೆ, ಆರೋಗ್ಯಕರವಾದ ಕೆಲವೊಂದು ಗಿಡಮೂಲಿಕೆಗಳು ಮತ್ತು ತರಕಾರಿಗಳಿಂದ ಕೂಡಿದ ಆಹಾರ ಕ್ರಮ ಹಾಗೂ ವ್ಯಾಯಾಮದಿಂದ ಅವರಿಗೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗಿದೆ ಅಷ್ಟೇ! ಸತತ ಪ್ರಯತ್ನದ ಬಳಿಕವೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ?

ಇತ್ತೀಚೆಗೆ ಮತ್ತೊಬ್ಬಳು ಬಾಲಿವುಡ್ ನಟಿ ತನ್ನ ದೇಹದ ಸೌಂದರ್ಯದ ಬಗ್ಗೆ ಹಲವಾರು ರೀತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಳು. ಹೌದು, ಅವರೇ ಪರಿಣೀತಿ ಚೋಪ್ರಾ ತಮ್ಮ ಹೊಸ ದೇಹಸೌಂದರ್ಯವನ್ನು ಫೋಟೋಗಳಲ್ಲಿ ತೋರಿಸಿದ್ದಾಳೆ ಈ ಮಾದಕ ನಟಿ. ಅಲ್ಲದೆ ತನ್ನ ದೇಹದ ತೂಕವನ್ನು ಇಳಿಸಿಕೊಂಡು ಪ್ರತಿಯೊಬ್ಬರನ್ನು ಅಚ್ಚರಿಗೊಳಿಸಿದ್ದಾಳೆ. ಹಾಗಾದರೆ ಇವರು ತೂಕ ಇಳಿಸಿಕೊಂಡ ರೀತಿ ನೋಡಿ ನಿಮಗೂ ಆಶ್ಚರ್ಯವಾಗಿರಬೇಕಲ್ಲವೇ? ಚಿಂತಿಸಬೇಡಿ ಬೋಲ್ಡ್ ಸ್ಕೈ ಇಂದು ಪ್ರಮುಖ ಗಿಡಮೂಲಿಕೆಗಳ ಪ್ರಯೋಜನಗಳನ್ನು ತಿಳಿಸಿದ್ದು, ಇದು ನಿಮ್ಮ ದೇಹದ ಕ್ಯಾಲರಿಯನ್ನು ದಹಿಸಿ, ತೂಕ ಇಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ....

ಶುಂಠಿ

ಶುಂಠಿ

ತೂಕ ಕಳಕೊಳ್ಳಲು ಇದು ಅತ್ಯುತ್ತಮ ಗಿಡಮೂಲಿಕೆ. ಇದು ನೀವು ಸೇವಿಸುವ ಆಹಾರದಲ್ಲಿರುವ ಉಷ್ಣದ ಪ್ರಭಾವನ್ನು ನಿಯಂತ್ರಿಸಿ, ಪೂರ್ಣ ತೃಪ್ತಿ ಉಂಟು ಮಾಡಿ ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ಸೇವಿಸದಂತೆ ನೋಡಿಕೊಳ್ಳುತ್ತದೆ.

ಗ್ರೀನ್ ಟೀ

ಗ್ರೀನ್ ಟೀ

ತೂಕ ಕಳಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಇಂದು ಗ್ರೀನ್ ಟೀ ಸಾಮಾನ್ಯವಾದ ಪಾನೀಯವಾಗಿದೆ. ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲರಿ ದಹಿಸಲು ನೆರವಾಗುತ್ತದೆ. ಗ್ರೀನ್ ಟೀಯನ್ನು ಆ್ಯಂಟಿಆಕ್ಸಿಡೆಂಟ್ ಗುಣಗಳಿದ್ದು, ಇದು ಕೊಬ್ಬು ದಹಿಸುವ ಪ್ರಕ್ರಿಯೆಗೆ ನೆರವಾಗುತ್ತದೆ. ಕೊಬ್ಬು ಕರಗಿಸಲು ಇದು ಅತ್ಯುತ್ತಮ ಗಿಡಮೂಲಿಕೆಗಳಲ್ಲಿ ಒಂದಾಗಿದೆ.

ಅರಿಶಿನ

ಅರಿಶಿನ

ತೂಕ ಕಳಕೊಳ್ಳಲು ಇದು ಅತ್ಯಂತ ಸರಳವಾಗಿರುವಂತಹ ಗಿಡಮೂಲಿಕೆ. ಹಾಲಿಗೆ ಅರಿಶಿನವನ್ನು ಸೇರಿಸಿ ಕುಡಿದಾಗ ಅದು ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ದಾಸವಾಳದ ಹೂ

ದಾಸವಾಳದ ಹೂ

ನೀವು ದಾಸವಾಳದ ಹೂವಿನ ರುಚಿಯನ್ನು ಪ್ರೀತಿಸಿದರೆ ಆಗ ನೀವು ಹೆಚ್ಚು ಸಮಯ ತೆಗೆದುಕೊಳ್ಳದೆ ತೂಕ ಇಳಿಸಿಕೊಳ್ಳುವುದು ಖಂಡಿತ. ಇದರಲ್ಲಿ ನ್ಯೂಟ್ರೀನ್, ಫ್ಲವನಾಯಿಡ್ ಮತ್ತು ಹಲವಾರು ರೀತಿಯ ಖನಿಜಾಂಶಗಳಿವೆ. ಇವೆಲ್ಲವೂ ನಿಮ್ಮ ದೇಹವು ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ಸ್‌ನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದನ್ನು ಯಾವುದೇ ರೀತಿಯಲ್ಲೂ ಸೇವಿಸಬಹುದು.

ಗಿನ್ ಸೆಂಗ್

ಗಿನ್ ಸೆಂಗ್

ತೂಕ ಕಳಕೊಳ್ಳಲು ಬಯಸುವವರಿಗೆ ಗಿನ್ ಸೆಂಗ್ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಈ ಗಿಡಮೂಲಿಕೆಯು ದೇಹದಲ್ಲಿನ ಕ್ಯಾಲರಿಯನ್ನು ದಹಿಸಿ ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಗಿನ್ ಸೆಂಗ್ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಉತ್ತಮಪಡಿಸಲು ಕೂಡ ಉತ್ತಮ ಔಷಧಿಯಾಗಿದೆ.

ಏಲಕ್ಕಿ

ಏಲಕ್ಕಿ

ಎಲಕ್ಕಿಯು ನಿಮ್ಮ ಚಯಾಪಚಯ (ಮೆಟಾಬೊಲಿಸಮ್) ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಬೊಜ್ಜನ್ನು ಕರಗಿಸುವಲ್ಲಿ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

English summary

Best Herbs For Weight Loss

When Sonakshi Sinha lost oodles of weight we wondered how this beauty manages to get into shape. Well, all thanks to her simple diet which consisted of healthy herbs and spices along with strenuous exercises. Here are ten herbfor weight loss, take a look.
Story first published: Thursday, June 18, 2015, 23:37 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more