For Quick Alerts
ALLOW NOTIFICATIONS  
For Daily Alerts

ಕರುಳಿನ ಕಲ್ಮಶಗಳನ್ನು ಹೊರ ಹಾಕುವ ಅದ್ಭುತ ಮನೆಮದ್ದುಗಳು

By manu
|

ಕೆಲ ವರ್ಷಗಳ ಹಿಂದೆ ಆಯಾ ಹೊತ್ತಿಗಾಗಿ ಮಾಡಿದ್ದ ಅಡುಗೆಯನ್ನು ಮುಂದಿನ ಹೊತ್ತಿಗೆ ಸೇವಿಸಿದರೂ ಅದು 'ತಂಗಳು' ಎಂದು ಪರಿಗಣಿತವಾಗುತ್ತಿತ್ತು. ಇದೇ ಕಾರಣಕ್ಕೆ ಫ್ರಿಜ್‌ಗೆ ತಂಗಳು ಪೆಟ್ಟಿಗೆ ಎಂಬ ಅನ್ವರ್ಥನಾಮವೂ ಬಂದಿದೆ. ಈ ತಂಗಳನ್ನು ಸತತವಾಗಿ ಸೇವಿಸುವ ನಮಗೆ ತಾಜಾ ಆಹಾರದಲ್ಲಿ ಸಿಗುವಷ್ಟು ಪೋಷಕಾಂಶಗಳು ದೊರಕುತ್ತಿಲ್ಲ ಅಥವಾ ಅನಗತ್ಯವಾದ ಪೋಷಕಾಂಶ ಮತ್ತು ಕೊಬ್ಬುಗಳು ಭಾರೀ ಪ್ರಮಾಣದಲ್ಲಿ ದೊರಕುತ್ತಿವೆ. ಮೂರು ಹೊತ್ತು ಉಣ್ಣವನನ್ನು ಹೊತ್ತುಕೊಂಡು ಹೋಗಿ ಎನ್ನುವ ಕಾಲ ಯಾವಾಗಲೋ ಹೋಗಿದೆ. ವಾರಂತ್ಯದ ಸಲಹೆ; ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು
ಈಗ ದಿನಕ್ಕೆ ಐದಾರು ಬಾರಿ ತಿನ್ನುವ ದಿನಗಳು ಬಂದಿವೆ. ನಡುನಡುವೆ ಸೇವಿಸುವ ಸಿದ್ಧ ಆಹಾರಗಳಿಂದಾಗಿ ಹೊಟ್ಟೆ ಮತ್ತು ಮುಖ್ಯವಾಗಿ ಕರುಳುಗಳು ಹೆಚ್ಚು ಬಾಧೆಗೊಳಗಾಗುತ್ತವೆ. ಏಕೆಂದರೆ ಹೊಟ್ಟೆಯಲ್ಲಿದ್ದ ಆಹಾರ ಒಂದೆರಡು ಗಂಟೆಗಳ ಬಳಿಕ ಜೀರ್ಣಗೊಳಿಸಿ ಕರುಳುಗಳಿಗೆ ರವಾನೆಯಾಗುತ್ತದೆ. ಚಿಕ್ಕ ಕರುಳಿನಲ್ಲಿ ಕೆಲ ಹೊತ್ತು ಇದ್ದರೂ ದೊಡ್ಡ ಕರುಳಿನಲ್ಲಿ ಮರುದಿನದ ಬಹಿರ್ದೆಶೆಯವರೆಗೂ ಶೇಖರವಾಗಿರುತ್ತದೆ.

ಕರುಳುಗಳ ಸಾಮರ್ಥ್ಯಕ್ಕೂ ಮೀರಿ ನಾವು ಆಹಾರವನ್ನು ಸೇವಿಸುವುದರ ಕಾರಣ ಆಹಾರದ ಮೂಲಕ ಆಗಮನವಾದ ಹಲವು ವಿಷಕಾರಿ ವಸ್ತುಗಳನ್ನು ನಿವಾರಿಸಲು ನಮ್ಮ ಜೀರ್ಣಾಂಗ ವ್ಯವಸ್ಥೆ ಸೋಲುತ್ತದೆ. ಪರಿಣಾಮವಾಗಿ ಕರುಳಿನ ಹುಣ್ಣು, ಅತಿಸಾರ, ಅಪಾನವಾಯು, ಕರುಳಿನಲ್ಲಿ ಗಡ್ಡೆ ಮೊದಲಾದ ನೂರಾರು ತೊಂದರೆಗಳು ಎದುರಾಗುವ ಸಂಭವವಿದೆ. ಕರುಳಿನ ಕಲ್ಮಶಗಳನ್ನು ಹೊರಹಾಕುವ ಟಾಪ್ 10 ಫುಡ್ಸ್

ಆಯುರ್ವೇದದಲ್ಲಿ ಈ ತೊಂದರೆಗೆ ವಿರೇಚಕವನ್ನು ಬಳಸಲು ಸಲಹೆ ನೀಡಲಾಗುತ್ತದೆ. ವಿರೇಚಕವೆಂದರೆ ಬಲವಂತವಾಗಿ ಕರುಳುಗಳನ್ನು ಖಾಲಿ ಮಾಡಿಸುವ ಆಹಾರ ಅಥವಾ ಔಷಧ. ಆದರೆ ಈ ಬಲವಂತಕ್ಕೆ ಒಳಗಾಗುವ ಮುನ್ನ ಆರೋಗ್ಯಕಾರಿ ಮತ್ತು ಪೌಷ್ಟಿಕವಾದ ಆಹಾರಗಳನ್ನು ಸೇವಿಸುವ ಮೂಲಕ ಈ ತೊಂದರೆಯಿಂದ ನೈಸರ್ಗಿಕವದ ಪರಿಹಾರ ಪಡೆಯಬಹುದು. ಇದನ್ನು ಕುರಿತ ಅಮೂಲ್ಯ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಬೆಳ್ಳುಳ್ಳಿ ಸೇವಿಸಿ

ಬೆಳ್ಳುಳ್ಳಿ ಸೇವಿಸಿ

ಕರುಳುಗಳನ್ನು ಸ್ವಚ್ಛಗೊಳಿಸಲು ಬೆಳ್ಳುಳ್ಳಿಗಿಂತ ಉತ್ತಮ ಆಹಾರ ಇನ್ನೊಂದಿಲ್ಲ. ಕೊಂಚ ಖಾರ ಮತ್ತು ಒಗರು ರುಚಿಯನ್ನು ಹೊಂದಿರುವ ಬೆಳ್ಳಿಳ್ಳಿ ಒಂದು ನೈಸರ್ಗಿಕ ವೈರಸ್ ನಿವಾರಕ ಮತ್ತು ಜೀವಿರೋಧಿ (antibacterial) ಆಹಾರವಾಗಿದೆ. ಇದರ ಪರಾವಲಂಬಿ ಜೀವಿಗಳನ್ನು ಕೊಲ್ಲುವ ಗುಣ ಕರುಳುಗಳಿಗೆ ಅತ್ಯುತ್ತಮವಾಗಿದೆ.

ಬೆಳ್ಳುಳ್ಳಿ ಸೇವಿಸಿ

ಬೆಳ್ಳುಳ್ಳಿ ಸೇವಿಸಿ

ಇದಕ್ಕಾಗಿ ರಾತ್ರಿಯೂಟದ ಬಳಿಕ ಹಸಿ ಬೆಳ್ಳುಳ್ಳಿನ ನಾಲ್ಕರಿಂದ ಆರು ಎಸಳುಗಳನ್ನು ಜಗಿದು ನುಂಗಿರಿ. ನೇರವಾಗಿ ಜಗಿಯಲು ಕಷ್ಟವಾದರೆ ಅನ್ನದ ನಡುವೆ ಇರಿಸಿ ಒಂದೊಂದಾಗಿ ತುತ್ತ್ತುತಿನ್ನಿ. ಆದರೆ ಈ ಊಟ ಅತಿ ಕಡಿಮೆಯದ್ದಾಗಿರಬೇಕು. ಮೂರು ನಾಲ್ಕು ದಿನ ಈ ವಿಧಾನವನ್ನು ಅನುಸರಿಸಿದರೆ ನಿಧಾನವಾಗಿ ಕರುಳುಗಳಲ್ಲಿದ್ದ ತ್ಯಾಜ್ಯವೆಲ್ಲಾ ಹೊರಹರಿಯಲು ಸಾಧ್ಯವಾಗುತ್ತದೆ.

ಇಡಿಯ ಧಾನ್ಯದ ಖಾದ್ಯಗಳನ್ನು ಸೇವಿಸಿ

ಇಡಿಯ ಧಾನ್ಯದ ಖಾದ್ಯಗಳನ್ನು ಸೇವಿಸಿ

ನಿಮ್ಮ ನಿತ್ಯದ ಮೂರು ಹೊತ್ತಿನ ಊಟಗಳಲ್ಲಿ ಕೇವಲ ಇಡಿಯ ಧಾನ್ಯದ (whole meal) ಆಹಾರಗಳಿರುವಂತೆ ನೋಡಿಕೊಳ್ಳಿ. ಅಪ್ಪಿ ತಪ್ಪಿಯೂ ಮೈದಾ ಅಥವಾ ಮೈದಾ ಆಧಾರಿತ ಯಾವುದೇ ಆಹಾರವನ್ನು ಸೇವಿಸಬೇಡಿ. ಇಸಬ್ಗೋಲ್ (isabgol) ಪುಡಿಯನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ದಿನಕ್ಕೆ ಕನಿಷ್ಟ ಮೂರು ಲೋಟ ಕುಡಿಯುವುತು ಅತ್ಯುತ್ತಮ. ಇಡಿಯ ಗೋಧಿಯಿಂದ ಮಾಡಿದ ಹಿಟ್ಟಿನ ರೊಟ್ಟಿ, ಜೋಳ, ನವಣೆ, ರಾಗಿ ಮೊದಲಾದವು ಉತ್ತಮ ಆಯ್ಕೆಯಾಗಿವೆ. ಇದರಿಂದ ದೇಹಕ್ಕೆ ಅಗತ್ಯವಾದ ಕ್ಯಾಲೋರಿಗಳು ಲಭ್ಯವಾಗುವ ಜೊತೆಗೇ ಕರಗದ ನಾರು ಹೊರಬರುವಾಗ ತನ್ನ ಜೊತೆಯಲ್ಲಿ ಹೊಟ್ಟೆ, ಕರುಳುಗಳಲ್ಲಿದ್ದ ವಿಷಕಾರಿ ವಸ್ತುಗಳನ್ನೂ ಹೊರಹಾಕುತ್ತದೆ.

ಹಸಿರು ಟೀ ಕುಡಿಯಿರಿ

ಹಸಿರು ಟೀ ಕುಡಿಯಿರಿ

ನಿಮ್ಮ ನಿತ್ಯದ ಪೇಯಗಳನ್ನು ಕೆಲವು ದಿನಗಳ ಮಟ್ಟಿಗೆ ಹಸಿರು ಟೀಗೆ ಬದಲಾಯಿಸಿ. ದಿನಕ್ಕೆ ಕನಿಷ್ಟ ಮೂರು ಕಪ್ ಹಸಿರು ಟೀ (ಹಾಲು ಬೆರೆಸದೇ) ಕುಡಿಯಿರಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಿಮ್ಮ ಪಚನಕ್ರಿಯೆಯನ್ನು ಉತ್ತಮಗೊಳಿಸಿ ಸುಲಭ ವಿಸರ್ಜನೆಗೆ ನೆರವಾಗುತ್ತದೆ.

ಲಿಂಬೆರಸ ಸೇವಿಸಿ

ಲಿಂಬೆರಸ ಸೇವಿಸಿ

ಲಿಂಬೆ ಮತ್ತು ಸಿಟ್ರಸ್ ಆಮ್ಲವಿರುವ ಯಾವುದೇ ಹಣ್ಣಿನ ರಸ ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಉದಾಹರಣೆಗೆ ಕಿತ್ತಳೆ, ಮೂಸಂಬಿ ಚಕ್ಕೋತ ಇತ್ಯಾದಿ. ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆಯ ತೊಂದರೆ ಇದ್ದರೆ ಲಿಂಬೆರಸ ಉಪಯೋಗಿಸಬೇಡಿ, ಮೂಸಂಬಿ, ಚಕ್ಕೋತ ಉತ್ತಮ. ಇತರರು ಲಿಂಬೆರಸವನ್ನು ದಿನದಲ್ಲಿ ಮೂರು ಹೊತ್ತಾದರೂ ಕನಿಷ್ಠ ಒಂದು ಲೋಟ ಕುಡಿಯಿರಿ.

ಲಿಂಬೆರಸ ಸೇವಿಸಿ

ಲಿಂಬೆರಸ ಸೇವಿಸಿ

ಎರಡು ಊಟಗಳ ನಡುವಣ ಅವಧಿಯಲ್ಲಿ ಒಂದು ಲೋಟ ನೀರಿಗೆ ಕೇವಲ ಅರ್ಧ ಲಿಂಬೆ ರಸ (ಸಕ್ಕರೆ, ಉಪ್ಪು ಸೇರಿಸಬಾರದು) ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಂಡು ಕರುಳುಗಳ ಶುದ್ಧಿಗೆ ನೆರವಾಗುತ್ತದೆ.

ಹಸಿರು ಸೊಪ್ಪುಗಳನ್ನು ಸೇವಿಸಿ

ಹಸಿರು ಸೊಪ್ಪುಗಳನ್ನು ಸೇವಿಸಿ

ಕರುಳುಗಳನ್ನು ಸ್ವಚ್ಛಗೊಳಿಸಲು ಇನ್ನೊಂದು ಸುಲಭ ವಿಧಾನವೆಂದರೆ ಹಸಿರು ಸೊಪ್ಪುಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು. ಹೆಚ್ಚಿನವರಿಗೆ ಸೊಪ್ಪು ಎಂದರೆ ತಾತ್ಸಾರ. ಸೊಪ್ಪು ತಿನ್ನಲು ನಾವೇನು ದನಗಳೇ ಎಂಬ ಉದ್ಧಟತನದ ಉತ್ತರವೂ ಬರಬಹುದು. ಆದರೆ ಕರುಳಿನಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ಬುಡಸಹಿತ ಕಿತ್ತು ಹೊರಹಾಕಲು ಹಸಿರು ಸೊಪ್ಪು ಅತ್ಯುತ್ತಮವಾಗಿದೆ. ಮುಂದೆ ಓದಿ

ಹಸಿರು ಸೊಪ್ಪುಗಳನ್ನು ಸೇವಿಸಿ

ಹಸಿರು ಸೊಪ್ಪುಗಳನ್ನು ಸೇವಿಸಿ

ಬಸಲೆ, ಹರಿವೆ, ಪಾಲಕ್, ಕೇಲ್ ಎಲೆಗಳು ಮೊದಲಾದ ದಪ್ಪನೆಯ ಎಲೆಗಳ ಸಾರು ಮತ್ತು ಪಲ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಂತರದ ದಿನಗಳಲ್ಲಿ ಕರುಳುಗಳು ಸ್ವಚ್ಛಗೊಳ್ಳುತ್ತಾ ಹೋಗುತ್ತವೆ. ಅಷ್ಟೇ ಅಲ್ಲ, ಕರುಳುಗಳಲ್ಲಿ ಇನ್ನೊಮ್ಮೆ ಸುಲಭವಾಗಿ ಬ್ಯಾಕ್ಟೀರಿಯಾಗಳು ಬಾರದಂತೆ ತಡೆಯುತ್ತದೆ.

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಒಂದು ವೇಳೆ ಕರುಳುಗಳಲ್ಲಿ ಗುಡುಗುಡು ಶಬ್ಧ ಅನವರತವಾಗಿದ್ದು ತೊಂದರೆ ನೀಡುತ್ತಿದ್ದರೆ ಇದಕ್ಕೆ ಪಪ್ಪಾಯಿ ಹಣ್ಣು ಅತ್ಯುತ್ತಮವಾದ ಪರಿಹಾರವಾಗಿದೆ.ಇದಕ್ಕಾಗಿ ಸುಮಾರು ಎರಡು ಅಥವಾ ಮೂರು ಪೊಪ್ಪಾಯಿ ಅಗತ್ಯ. ರಾತ್ರಿ ಕೇವಲ ದ್ರವಾಹಾರ ಸೇವಿಸಿ ಮಲಗಿ ಬೆಳಿಗ್ಗೆದ್ದ ಬಳಿಕ ಹೊಟ್ಟೆ ಖಾಲಿ ಮಾಡಿ ಸುಮಾರು ಅರ್ಧ ಗಂಟೆ ನಡೆಯಿರಿ. ಈಗ ಚುರುಗುಟ್ಟುತ್ತಿರುವ ಹೊಟ್ಟೆಗೆ ಕೇವಲ ಚೆನ್ನಾಗಿ ಹಣ್ಣಾದ ಪಪ್ಪಾಯಿಯನ್ನು ಮಾತ್ರ ಸೇವಿಸಿ. ನೀರನ್ನು ಕನಿಷ್ಠ ಪ್ರಮಾಣದಲ್ಲಿ ಕುಡಿಯಿರಿ.

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಮಧ್ಯಾಹ್ನದ ಊಟಕ್ಕೂ ಇದೇ ಪಪ್ಪಾಯಿ, ಸಂಜೆಗೂ ಇದೇ, ರಾತ್ರಿಯೂಟಕ್ಕೂ ಇದೇ ಪಪ್ಪಾಯಿಯನ್ನು ಸೇವಿಸಿ, ಮತ್ತೇನನ್ನೂ ಸೇವಿಸಬೇಡಿ. ಮರುದಿನ ಬೆಳಿಗ್ಗೆ ನಿಮ್ಮ ಬಹಿರ್ದೆಶೆಯ ಬಳಿಕ ನಿಮ್ಮ ಕರುಳು ಸಂಪೂರ್ಣವಾಗಿ ಖಾಲಿಯಾಗಿದ್ದು ಗುಡುಗುಡು ಎಲ್ಲಾ ಪೂರ್ಣವಾಗಿ ನಿಂತಿರುತ್ತದೆ. (ಈ ವಿಧಾನ ಗರ್ಭಿಣಿಯರಿಗೆ ಮತ್ತು ರೋಗಿಗಳಿಗೆ ಸೂಕ್ತವಲ್ಲ)

ಸೇಬಿನ ರಸ

ಸೇಬಿನ ರಸ

ಕರುಳಿನ ಕಲ್ಮಶಗಳನ್ನು ಹೊರಹಾಕುವಲ್ಲಿ ಸೇಬಿನ ರಸವು ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಸೇಬಿನ ಹಣ್ಣಿನ ರಸವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯೂಹದ ಕಾರ್ಯ ಚಟುವಟಿಕೆಯು ಸುಗಮವಾಗುತ್ತದೆ ಮತ್ತು ಟಾಕ್ಸಿನ್‍ಗಳು ಕಡಿಮೆಯಾಗುತ್ತವೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

*ದಿನ ಬೆಳಗ್ಗೆ ಒಂದು ಲೋಟ ಶೋಧಿಸದ ಸೇಬಿನ ಹಣ್ಣಿನ ರಸವನ್ನು ಸೇವಿಸುವ ಮೂಲಕ ದಿನವನ್ನು ಆರಂಭಿಸಿ.

*30 ನಿಮಿಷಗಳ ನಂತರ, ಒಂದು ಲೋಟ ನೀರನ್ನು ಸೇವಿಸಿ.

*ಈ ವಿಧಾನವನ್ನು ದಿನ ಪೂರ್ತಿ ಹಲವಾರು ಬಾರಿ ಪುನರಾವರ್ತಿಸಿ ಹಾಗು ಮೂರು ದಿನಗಳವರೆಗೆ ಮುಂದುವರಿಸಿ. ಇದರ ನಡುವೆ, ಒಂದು ಲೋಟ ಪ್ರೂನ್ ರಸವನ್ನು ಸೇವಿಸಿ. ಈ ಪರಿಹಾರೋಪಾಯವನ್ನು ಪಾಲಿಸುವಾಗ ಘನ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದು ಒಳ್ಳೆಯದು.

ಮೊಸರು

ಮೊಸರು

ತಾಜಾ ಮೊಸರು ಪ್ರತಿದಿನ ಸೇವಿಸುವ ಮೂಲಕ ನಿಮ್ಮ ಕರುಳನ್ನು ಆರೋಗ್ಯಕಾರಿಯಾಗಿ ಇಟ್ಟುಕೊಳ್ಳಬಹುದು. ಪ್ರೋಬಯೋಟಿಕ್ ಆಹಾರವಾಗಿರುವ ಮೊಸರು ಎಲ್ಲಾ ಸಂಸ್ಕೃತಿಗಳಲ್ಲಿ ಜೀವಂತವಾಗಿವೆ. ಇದು ನಿಮ್ಮ ದೇಹಕ್ಕೆ " ಒಳ್ಳೆಯ" ಬ್ಯಾಕ್ಟೀರಿಯಾಗಳನ್ನು ಪರಿಚಯಿಸುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಇದು ಕರುಳಿನಲ್ಲಿ ಕಂಡು ಬರುವ ಉರಿಯೂತಗಳ ಮೇಲೆ ಹೋರಾಡುತ್ತದೆ. ಅಲ್ಲದೆ ಈ ಯೋಗರ್ಟ್‍ನಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಮುಂದೆ ಓದಿ

ಮೊಸರು

ಮೊಸರು

ಇವುಗಳು ಕರುಳಿನಲ್ಲಿರುವ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಹೀಗೆ ಕರುಳಿನ ಸ್ನೇಹಿಯಾಗಿರುವ ಮೊಸರು ಜಠರದಲ್ಲಿ ಕಂಡು ಬರುವ ಅಜೀರ್ಣ, ವಾಯು, ಜೀರ್ಣಾಂಗದ ಲೋಪ ದೋಷಗಳು ಮತ್ತು ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ನೀವು ಮೊಸರು ಅನ್ನು ಹಾಗೆಯೇ ಅಥವಾ ಒಂದಷ್ಟು ಸೇಬು, ಲಿಂಬೆ, ಬಾಳೆ ಹಣ್ಣು ಮತ್ತು ಬೆರ್ರಿಗಳಂತಹ ತಾಜಾ ಹಣ್ಣುಗಳ ಜೊತೆಗೆ ಸೇವಿಸಬಹುದು.

ಶುಂಠಿ

ಶುಂಠಿ

ಶುಂಠಿಯು ಹೊಟ್ಟೆ ಉಬ್ಬುವುದನ್ನು ಮತ್ತು ಕರುಳಿನ ಕಾರ್ಯಾಚರಣೆಯನ್ನು ಉದ್ಧೀಪಿಸಲು ಮತ್ತು ದೇಹವನ್ನು ಕಲ್ಮಶಗಳು ಹಾಗು ಹಾನಿಕಾರಕ ಟಾಕ್ಸಿನ್‍ಗಳಿಂದ ಮುಕ್ತವಾಗಿರಿಸಲು ಸಹಕರಿಸುತ್ತದೆ. ಇದು ಅವಿತುಕೊಂಡ ಜೀರ್ಣಕಾರಿ ರಸಗಳನ್ನು ಉದ್ದೀಪಿಸಿ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಮುಂದೆ ಓದಿ

ಶುಂಠಿ

ಶುಂಠಿ

* ಕರುಳಿನ ಶುಚಿಗೊಳಿಸುವ ಸಲುವಾಗಿ ನೀವು ಶುಂಠಿಯನ್ನು ಯಾವ ರೂಪದಲ್ಲಿ ಬೇಕಾದರು ಸೇವಿಸಬಹುದು. ಅದು ಜಜ್ಜಿಯಾದರು ಸರಿ, ಕತ್ತರಿಸಿ ತುಂಡು ಮಾಡಿ ಇಲ್ಲವೇ ರಸ ಮಾಡಿಕೊಂಡಾದರು ಸರಿ.

* ಶುಂಠಿಯನ್ನು ಸೇವಿಸಲು ಒಂದು ಒಳ್ಳೆಯ ಆಯ್ಕೆಯೆಂದರೆ, ಶುಂಠಿರಸವನ್ನು, ಅದರ ಕಾಲುಭಾಗದಷ್ಟು ಲಿಂಬೆರಸವನ್ನು ಎರಡು ಕಪ್ ಬಿಸಿ ನೀರಿಗೆ ಬೆರೆಸಿ. ಇದಕ್ಕೆ ನಿಮ್ಮ ರುಚಿಗಾಗಿ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ಎರಡು ಅಥವಾ ಮೂರು ಭಾಗವಾಗಿ ಮಾಡಿಕೊಂಡು ದಿನ ಪೂರ್ತಿ ಸೇವಿಸಿ.

ವಿಶೇಷ ಸೂಚನೆ: ಗರ್ಭಿಣಿಯರಾದವರು ಶುಂಠಿಯನ್ನು ಸೇವಿಸುವುದು ಒಳ್ಳೆಯದಲ್ಲ.ಈ ಸಲಹೆಯು ಅವರಿಗೆ ಅನ್ವಯಿಸುವುದಿಲ್ಲ.

ನೀರು

ನೀರು

ಕರುಳನ್ನು ಶುಚಿಗೊಳಿಸಲು ನೀರು ಅತ್ಯುತ್ತಮವಾದ ಮದ್ದಾಗಿರುತ್ತದೆ. ಆದ್ದರಿಂದ ಪ್ರತಿದಿನ 10 ರಿಂದ 12 ಲೋಟ ನೀರನ್ನು ಕುಡಿಯಬೇಕಾದುದು ಅತ್ಯಗತ್ಯ. ನಿಯಮಿತವಾಗಿ ನೀರನ್ನು ಕುಡಿಯುತ್ತಿದ್ದರೆ, ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಸ್ವಾಭಾವಿಕವಾಗಿ ಹೊರ ಹಾಕಲು ಸಾಧ್ಯವಾಗುತ್ತದೆ.

ಅಧಿಕ ಫೈಬರ್ ಇರುವ ಆಹಾರಗಳು

ಅಧಿಕ ಫೈಬರ್ ಇರುವ ಆಹಾರಗಳು

ಫೈಬರ್ ಅಂದರೆ ನಾರಿನಂಶ ಹೆಚ್ಚಾಗಿ ಇರುವ ಆಹಾರಗಳು ನಿಮ್ಮ ದೇಹದಲ್ಲಿರುವ ಕೋಲನ್ ಅನ್ನು ಅಪಾಯಕಾರಿ ಟಾಕ್ಸಿನ್‍ಗಳಿಂದ ಮುಕ್ತಗೊಳಿಸುತ್ತವೆ. ನಾರಿನಂಶವು ಜೀರ್ಣಾಂಗದ ಸುಗಮ ಕಾರ್ಯ ವೈಖರಿಗೆ ಸಹಕರಿಸುತ್ತದೆ. ಜೊತೆಗೆ ಇವು ದೇಹದಲ್ಲಿನ ಕಲ್ಮಶಗಳನ್ನು ವಿಸರ್ಜಿಸಲು ಸಹ ಸಹಕರಿಸುತ್ತವೆ. ಇದರ ಜೊತೆಗೆ ಈ ಅಧಿಕ ನಾರಿನಂಶ ಇರುವ ಆಹಾರಗಳು ಕರುಳಿಗೆ ಸಂಬಂಧಿಸಿದ ಯಾವುದೇ ತರನಾದ ಸಮಸ್ಯೆಯಿಂದ ಮುಕ್ತರಾಗಲು ಸಹಕರಿಸುತ್ತದೆ. ಮುಂದೆ ಓದಿ

ಅಧಿಕ ಫೈಬರ್ ಇರುವ ಆಹಾರಗಳು

ಅಧಿಕ ಫೈಬರ್ ಇರುವ ಆಹಾರಗಳು

ನಿಮ್ಮ ಆಹಾರದಲ್ಲಿ ಬೆರ್ರಿ, ಪೀಯರ್ಸ್ ಮತ್ತು ಸೇಬುಗಳಂತಹ ಹಣ್ಣುಗಳನ್ನು ಸೇವಿಸುವುದರಿಂದ ನಾರಿನಂಶವನ್ನು ನಿಮ್ಮದಾಗಿಸಿಕೊಳ್ಳಬಹುದು. ಇದರ ಜೊತೆಗೆ ಪಲ್ಲೆ ಹೂವು, ಅಲಸಂದೆ, ಬ್ರೊಕ್ಕೊಲಿ, ಧಾನ್ಯಗಳು, ವೋಲ್ ಗ್ರೇನ್, ಒಣ ಹಣ್ಣುಗಳು ಮತ್ತು ಬೀಜಗಳಲ್ಲಿ ಒಳ್ಳೆಯ ಪ್ರಮಾಣದ ನಾರಿನಂಶವು ಇರುತ್ತದೆ.

ಅಗಸೆ ಬೀಜ

ಅಗಸೆ ಬೀಜ

ಅಗಸೆ ಬೀಜಗಳಲ್ಲಿ ಅಂದರೆ ಫ್ಲಾಕ್ಸ್ ಸೀಡ್‍ಗಳಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು, ಆಂಟಿ ಆಕ್ಸಿಡೆಂಟ್‍ಗಳು ಮತ್ತು ಸ್ವಾಭಾವಿಕ ನಾರಿನಂಶಗಳು ಎಲ್ಲವೂ ಸೇರಿ ಕೋಲನ್ ಸ್ವಚ್ಛಗೊಳಿಸುವ ಅತ್ಯುತ್ತಮ ಆಹಾರ ಪದಾರ್ಥವನ್ನಾಗಿ ಮಾಡಿವೆ.ಅಗಸೆ ಬೀಜಗಳು ನೀರನ್ನು ಹೀರಿಕೊಳ್ಳುತ್ತವೆ ಮತ್ತು ಕೋಲನ್ ಅನ್ನು ಹಿಗ್ಗಿಸುತ್ತವೆ. ಇದರ ಜೊತೆಗೆ ಇವು ಟಾಕ್ಸಿನ್ ಹೀರಿಕೊಂಡು ಕರುಳಿನ ಮೂಲಕ ಕಲ್ಮಶಗಳು ಸಾಗಿ ಹೋಗಲು ದಾರಿ ಮಾಡಿಕೊಡುತ್ತದೆ. ಇದರ ಜೊತೆಗೆ ಅಗಸೆ ಬೀಜವು ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹ ಬರದಂತೆ ತಡೆಯುತ್ತದೆ.

ಉಪ್ಪು

ಉಪ್ಪು

1. ಕುಡಿಯುವ ನೀರಿನಲ್ಲಿ ಒಂದು ಟೇಬಲ್ ಚಮಚದಷ್ಟು ಸಮುದ್ರದ ಉಪ್ಪನ್ನು ಬೆರೆಸಿ ಮತ್ತು ಕುದಿಸಿ.

2. ಈ ಮಿಶ್ರಣವನ್ನು ಬೆಚ್ಚಗೆ ಅಥವಾ ತಣ್ಣಗೆ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

3. ಕೆಲವು ನಿಮಿಷಗಳಷ್ಟು ತಡೆದು, ನಂತರ ನಿಮ್ಮ ಹೊಟ್ಟೆಯನ್ನು ಮೇಲ್ಮುಖವಾಗಿ ಮಾಡಿಕೊಂಡು ಮಲಗಿ, ಜಠರದಿಂದ ಕೋಲನ್ ಭಾಗದವರೆಗೆ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಜೀರ್ಣಾಂಗವನ್ನು ಉದ್ಧೀಪಿಸುತ್ತದೆ ಮತ್ತು ಅಪಾಯಕಾರಿ ಟಾಕ್ಸಿನ್‍ಗಳನ್ನು ದೇಹದಿಂದ ಹೊರಹಾಕುತ್ತದೆ. ಮುಂದೆ ಓದಿ

ಉಪ್ಪು

ಉಪ್ಪು

ಇದರ ಜೊತೆಗೆ ದೇಹದಲ್ಲಿನ ಕಲ್ಮಶಗಳು, ಪ್ರತಿನಿತ್ಯದ ಮಲ, ಪ್ಯಾರಸೈಟ್‍ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕರುಳಿನಿಂದ ಖಾಲಿ ಮಾಡುತ್ತದೆ.

4. ಇದನ್ನು ಪ್ರತಿ ತಿಂಗಳಿಗೆ ಐದು ಬಾರಿಯವರೆಗೆ ಮಾಡಿ. ಈ ಮಿಶ್ರಣವು ಡಯೇರ್ರಿಯಾವನ್ನುಂಟು ಮಾಡಬಹುದು.

ಅದಕ್ಕಾಗಿ ಸಾಧ್ಯವಾದಷ್ಟು ನೀರನ್ನು ಕುಡಿಯಿರಿ ಮತ್ತು ದಿನ ಪೂರ್ತಿ ತಾಜಾ ಹಣ್ಣಿನ ರಸಗಳನ್ನು ಸೇವಿಸಿ. ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗ ಸಮಸ್ಯೆಯಿದ್ದಲ್ಲಿ ಈ ಪರಿಹಾರವನ್ನು ಪ್ರಯತ್ನಿಸಲು ಹೋಗಬೇಡಿ.

ಅಲೋವಿರಾ

ಅಲೋವಿರಾ

ಅಲೋವಿರಾ ಅಥವಾ ಲೋಳೆಯು ಲಕ್ಸೇಟಿವ್ ಆಗಿ ವರ್ತಿಸುತ್ತದೆ. ಹೀಗಾಗಿ ಇದು ದೇಹವನ್ನು ಟಾಕ್ಸಿನ್ ಮುಕ್ತಗೊಳಿಸುವ ಕಾರ್ಯವನ್ನು ಸುಲಭವಾಗಿ ಮಾಡುತ್ತದೆ. ಇದರಿಂದಾಗಿ ಕೋಲನ್ ಸ್ವಚ್ಛಗೊಳಿಸಲು ಇದು ಪರಿಣಾಮಕಾರಿಯಾದ ಪದಾರ್ಥವಾಗಿದೆ. ಅಲೋವಿರಾ ಜೆಲ್‍ನಲ್ಲಿರುವ ಔಷಧೀಯ ಗುಣಗಳು ನಿಮ್ಮ ಕೋಲನ್‍ನ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ, ಇದು ತಲೆ ನೋವು, ತ್ವಚೆಯ ಇನ್‍ಫೆಕ್ಷನ್‍ಗಳು, ಡಯೇರ್ರಿಯಾ, ಗ್ಯಾಸ್ಟ್ರಿಕ್ಟ್ ನೋವು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಕರಿಸುತ್ತದೆ.ಮುಂದೆ ಓದಿ

ಅಲೋವಿರಾ

ಅಲೋವಿರಾ

1. ತಾಜಾ ಅಲೋವಿರಾ ಜೆಲ್‍ಗೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಮತ್ತು ಇದನ್ನು ಮಿಕ್ಸರಿನಲ್ಲಿ ಹಾಕಿಕೊಂಡು ಜ್ಯೂಸ್ ಮಾಡಿಕೊಳ್ಳಿ.

2. ಈ ಜ್ಯೂಸನ್ನು ರೆಫ್ರಿಜಿರೇಟರಿನಲ್ಲಿ ಹಾಕಿ ಎರಡು ಮೂರು ಗಂಟೆಗಳ ಕಾಲ ಬಿಡಿ. 3. ಇದನ್ನು ಸ್ವಲ್ಪ ದಿನಗಳವರೆಗೆ ದಿನದಲ್ಲಿ ಆಗಾಗ ಸೇವಿಸುತ್ತ ಇರಿ.

English summary

Best Foods For Colon Cleansing

We all eat unhealthy food these days, and the food available in the market lacks the required nutrients for the body. This results in various gastrointestinal problems which lead to colon diseases. Lets check some of the best foods for colon cleansing in this article.
X
Desktop Bottom Promotion