Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಹಾಗಲಕಾಯಿ:ಆರೋಗ್ಯಕ್ಕೆ ಸಿಹಿ, ರೋಗ ರುಜಿನಗಳಿಗೆ ಕಹಿ!
ಸಾಮಾನ್ಯವಾಗಿ ತರಕಾರಿ ಅಂಗಡಿಗಳಲ್ಲಿ ಹಾಗಲಕಾಯಿ ಇರುವುದೇ ಇಲ್ಲ. ಒಂದು ವೇಳೆ ಇದ್ದರೆ ಅದಕ್ಕೆ ಗಿರಾಕಿಗಳು ಕೇರಳೀಯರಿದ್ದರೆ ಮಾತ್ರ. ಏಕೆಂದರೆ ನಮ್ಮ ಪೂರ್ವಾಗ್ರಹ ನಂಬಿಕೆಯ ಪ್ರಕಾರ ಇದು ಮಲಯಾಳಿಗಳ ಆಹಾರ, ಇದರ ಕಹಿ ಅವರಿಗೇ ಸರಿ! ಆದರೆ ಹಾಗಲಕಾಯಿಯ ವೈಜ್ಞಾನಿಕ ವಿವರಗಳು ಬೇರೆಯೇ ಕಥೆಯನ್ನು ಹೇಳುತ್ತವೆ.
ಟೈಪ್ ೨ ಮಧುಮೇಹವನ್ನು ಗುಣಪಡಿಸಲು ಸಮರ್ಥವಿರುವ ಸಿದ್ಧ ಆಹಾರವೆಂದರೆ ಅದು ಪ್ರಥಮವಾಗಿ ಹಾಗಲಕಾಯಿ, ಆದರೆ ಇದರ ಕಹಿರುಚಿಯನ್ನು ಸಹಿಸುವ ಮನಸ್ಸಾಗಬೇಕು ಅಷ್ಟೇ. ಹಾಗಲಕಾಯಿಯನ್ನು ತರಕಾರಿಯ ರೂಪದಲ್ಲಿ ಸೇವಿಸುವುದಕ್ಕಿಂತ ಹೆಚ್ಚು ಪರಿಣಾಮವನ್ನು ಅದರ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಪಡೆಯಬಹುದು. ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು
ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್‌ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆನೀಡದೇ ಮಾಗಲು ಸಾಧ್ಯವಾಗುತ್ತದೆ. ಹಾಗಲಕಾಯಿಯ ಪ್ರಮುಖ ಆರು ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿಯಲು ಕೆಳಗಿನ ಸ್ಲೈಡ್ ಶೋ ನಿಮಗೆ ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ
ಹಾಗಲಕಾಯಿಯಲ್ಲಿ ಫೈಟೋನ್ಯೂಟ್ರಿಯೆಂಟ್‌ಗಳೆಂಬ ಆಂಟಿ ಆಕ್ಸಿಡೆಂಟುಗಳಿದ್ದು ಇವು ಕೆಟ್ಟ ಕೊಲೆಸ್ಟಾಲ್ ಕಣಗಳನ್ನು ತಮ್ಮೊಂದಿಗೆ ಅಂಟಿಸಿಕೊಂಡು ಹೋಗುವ ಕ್ಷಮತೆ ಪಡೆದಿವೆ. ಹಾಗಲಕಾಯಿಯನ್ನು ತರಕಾರಿಯ ರೂಪದಲ್ಲಿ ಆಲಿವ್ ಎಣ್ಣೆಯೊಡನೆ ಸೇವಿಸಿದರೆ ಕೊಂಚ ಕಹಿ ಎನಿಸಿದರೂ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಹಾಗಲಕಾಯಿಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಈ ಶಕ್ತಿ ದೇಹವನ್ನು ಬಾಧಿಸುವ ಹಲವಾರು ಕಾಯಿಲೆಗಳಿಗೆ ಕಾರಣವಾಗುವ ಕ್ರಿಮಿಗಳ ವಿರುದ್ಧ ಹೋರಾಡುವುದರಿಂದ ಇದು ದೇಹವನ್ನು ಕಾಪಾಡಬಹುದಾದ ಕಾಯಿಲೆಗಳ ಪಟ್ಟಿಯೂ ದೊಡ್ಡದೇ ಇದೆ.

ಕ್ಯಾನ್ಸರ್ ಬರುವುದರಿಂದ ತಡೆಗಟ್ಟುತ್ತದೆ
ಹಾಗಲಕಾಯಿಯಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸುವ ಶಕ್ತಿಯಿದೆ. ಹಾಗಲಕಾಯಿಯನ್ನು ಆಗಾಗ ತರಕಾರಿಯ ರೂಪದಲ್ಲಿ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಕ್ಯಾನ್ಸರ್ ಬರುವ ಸಂಭವವನ್ನು ಬಹಳಷ್ಟು ತಗ್ಗಿಸಬಹುದಾಗಿದೆ.

ತೂಕ ಕಡಿಮೆಮಾಡಲು ನೆರವಾಗುತ್ತದೆ
ಇದರಲ್ಲಿರುವ ಫೈಟೋನ್ಯೂಟ್ರಿಯೆಂಟುಗಳು ಮತ್ತು ವಿವಿಧ ಪೋಷಕಾಂಶಗಳು ದೇಹದ ಕೊಬ್ಬನ್ನು ಬಹಳವಾಗಿ ಬಳಸುವುದರಿಂದ ತೂಕ ಕಡಿಮೆಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತರಾಗಿರುವವರಿಗೆ ಸೂಕ್ತವಾದ ಆಹಾರವಾಗಿದೆ.

ಕರುಳಿನಲ್ಲಿರುವ ಕ್ರಿಮಿಗಳನ್ನು ಕೊಲ್ಲುತ್ತದೆ
ಕೆಲವು ಕ್ರಿಮಿಗಳು (ಉದಾಹರಣೆಗೆ ಪಟ್ಟೆಹುಳ ಅಥವಾ tapeworm, ಮತ್ತು ಸೂಜಿಹುಳ pinworm) ಮನುಷ್ಯರ ಕರುಳುಗಳೊಳಗೆ ಅಂಟಿಕೊಂಡು ಜೀವನ ನಡೆಸುವ ಪರಾವಲಂಬಿಗಳಾಗಿವೆ. ಇವು ಕರುಳುಗಳ ಒಳಭಾಗವನ್ನು ಹೇಗೆ ಕಚ್ಚಿಹಿಡಿಯುತ್ತವೆ ಎಂದರೆ ಆಹಾರದ ಒತ್ತಡ ಇವನ್ನು ನಿವಾರಿಸಲು ಸಾಧ್ಯವಿಲ್ಲ. ಇದರ ಉಪಟಳ ಹೆಚ್ಚಾದರೆ ಬೇಧಿ, ಹೊಟ್ಟೆನೋವು ಮೊದಲಾದ ತೊಂದರೆಗಳು ಎದುರಾಗುತ್ತವೆ. ಇದಕ್ಕೆ ವೈದ್ಯರು ಮಿಲ್ಕ್ ಆಫ್ ಮೆಗ್ನೀಶಿಯಾ ಎಂಬ ಔಷಧಿಯನ್ನು ನೀಡುತ್ತಾರೆ.

ಕರುಳಿನಲ್ಲಿರುವ ಕ್ರಿಮಿಗಳನ್ನು ಕೊಲ್ಲುತ್ತದೆ
ಆದರೆ ಈ ಹುಳಗಳನ್ನು ನಿವಾರಿಸಲು ಈ ಪ್ರಬಲ ರಾಸಾಯನಿಕಕ್ಕಿಂತಲೂ ಸುಲಭ ವಿಧಾನವೊಂದಿದೆ. ಅದೆಂದರೆ ಹಾಗಲಕಾಯಿಯ ಸುಮಾರು ಹತ್ತು ಒಣಗಿದ ಜೀಜಗಳನ್ನು ಕುಟ್ಟಿಪುಡಿಮಾಡಿ ಮಜ್ಜಿಗೆಯೊಡನೆ ಕುಡಿಯುವುದು. ಇದರಿಂದ ಒಂದೆರಡು ಬಾರಿಯ ಬಹಿರ್ದೆಶೆಯಲ್ಲಿಯೇ ಎಲ್ಲಾ ಹುಳಗಳು ಹೊರಬೀಳುತ್ತವೆ. ಪರ್ಯಾಯವಾಗಿ ಹಾಗಲಕಾಯಿಯ ರಸ ಮತ್ತು ಕೊತ್ತೊಂಬರಿ ಪುಡಿಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಇಡಿಯ ರಾತ್ರಿ ತಣ್ಣೀರಿನಲ್ಲಿ ನೆನೆಸಿ ಬೆಳಿಗ್ಗೆ ಈ ನೀರಿಗೆ ಜೇನು ಬೆರೆಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದಲೂ ಹೊಟ್ಟೆಯ ಹುಳಗಳು ನಾಶವಾಗಿ ಹೊರಬೀಳುತ್ತವೆ.

ಅಮಲಿನಿಂದ ಹೊರಬರಲು ನೆರವಾಗುತ್ತದೆ
ಕೆಲವೊಮ್ಮೆ ಮದ್ಯದ ಅಥವಾ ಇತರ ಔಷಧಿಗಳ ಅಡ್ಡಪರಿಣಾಮದಿಂದಾಗಿ ಬಹುಕಾಲ ಅಮಲು ಇಳಿಯದೇ ಇದ್ದರೆ ಒಂದು ಲೋಟ ಹಾಗಲಕಾಯಿಯ ಜ್ಯೂಸ್ ಕುಡಿಯುವುದರಿಂದ ಅಮಲು ಕೂಡಲೇ ಇಳಿದು ಸ್ವಸ್ಥತೆಯನ್ನು ಅನುಭವಿಸಬಹುದು.

ಹಾಗಲಕಾಯಿಯ ಸೇವನೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು
ಪ್ರಮಾಣ: ಒಂದು ದಿನಕ್ಕೆ ಎರಡು ಹಾಗಲಕಾಯಿಗಳಿಗಿಂತ ಹೆಚ್ಚು ಸೇವಿಸಬಾರದು, ಏಕೆಂದರೆ ಇದರಿಂದ ಅತಿಸಾರ ಉಂಟಾಗಬಹುದು.
*ಎಂದಿಗೂ ಖಾಲಿಹೊಟ್ಟೆಯಲ್ಲಿ ಸೇವಿಸಬಾರದು
*ಮಧುಮೇಹಿಗಳು: ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಮಧುಮೇಹಿಗಳು ಒಂದು ವೇಳೆ ಇದಕ್ಕಾಗಿ ಔಷಧಿಗಳನ್ನು (hypoglycemic drugs) ಸೇವಿಸುತ್ತಿದ್ದರೆ ಹಾಗಲಕಾಯಿಯ ನಿಯಮಿತ ಸೇವನೆಯ ಮೂಲಕ ಈ ಔಷಧಿಯ ಪ್ರಮಾಣವನ್ನು ಕಡಿಮೆಗೊಳಿಸಬಹುದು. ವೈದ್ಯರ ಸಲಹೆ ಪಡೆಯಿರಿ.

ಹಾಗಲಕಾಯಿಯ ಸೇವನೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು
*ಗರ್ಭಿಣಿಯರಿಗೆ ಉತ್ತಮವಲ್ಲ: ಒಂದು ವೇಳೆ ಹೆಚ್ಚು ಪ್ರಮಾಣದಲ್ಲಿ ಹಾಗಲಕಾಯಿಯ ಜ್ಯೂಸ್ ಸೇವಿಸಿದರೆ ಪೂರ್ಣಮಾಸ ತುಂಬುವ ಮೊದಲೇ ಹೆರಿಗೆಯಾಗುವ ಸಂಭವವಿರುವುದರಿಂದ ಗರ್ಭಿಣಿಯರು ಐದು ತಿಂಗಳು ತುಂಬಿದ ಬಳಿಕ ಹಾಗಲಕಾಯಿಯ ಹೆಸರನ್ನೆತ್ತದಿರುವುದೇ ಉತ್ತಮ.
*ಕ್ಷಾರವಸ್ತುಗಳಿಗೆ ಅಲರ್ಜಿಯಿದ್ದವರಿಗೂ ತಕ್ಕುದಲ್ಲ: ಒಂದು ವೇಳೆ ಕ್ಷಾರೀಯ (alkaloid substances) ವಸ್ತುಗಳಿಗೆ ಅಲರ್ಜಿಯಿದ್ದರೆ ಹಾಗಲಕಾಯಿ ಅವರಿಗೆ ಒಳ್ಳೆಯದಲ್ಲ. ಇದರಿಂದ ಅತಿಜೊಲ್ಲು ಸುರಿಯುವುದು, ಮುಖ ಕೆಂಪಾಗುವುದು, ಕಣ್ಣು ಮಂಜಾಗುವುದು, ಹೊಟ್ಟೆನೋವು, ವಾಕರಿಕೆ, ವಾಂತಿ, ಮಾಂಸಖಂಡಗಳಲ್ಲಿ ಶಕ್ತಿಯಿಲ್ಲದಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಇನ್ನುಳಿದಂತೆ ಇದು ಎಲ್ಲರಿಗೂ ಉತ್ತಮವಾದ ಆಹಾರವಾಗಿದೆ. ಹಾಗಲಕಾಯಿಯ ಖಾದ್ಯದಲ್ಲಿ ಬೆಲ್ಲ ಸೇರಿಸಿದರೆ ಇದರ ಕಹಿಯನ್ನು ಸಹಿಸಲು ಸಾಧ್ಯವಾಗುತ್ತದೆ.



Click it and Unblock the Notifications











