For Quick Alerts
ALLOW NOTIFICATIONS  
For Daily Alerts

ಇವು ಸಾಮಾನ್ಯ ಬ್ರೆಡ್‌ಗಳಲ್ಲ, ದೇಹದ ತೂಕವಿಳಿಸುವಲ್ಲಿ ಎತ್ತಿದ ಕೈ

By Super
|

ಸ್ಥೂಲಕಾಯ ಇಂದು ಹೆಚ್ಚಿನ ಜನರ ಚಿಂತೆಯ ವಿಷಯವಾಗಿದೆ. ಇದಕ್ಕೆ ವಂಶಪಾರಂಪರ್ಯವಾದ ಕಾರಣಕ್ಕಿಂತಲೂ ಇಂದಿನ ದಿನದಲ್ಲಿ ಕಡಿಮೆಯಾದ ವ್ಯಾಯಾಮ ಮತ್ತು ಲಭ್ಯವಿರುವ ಉತ್ತಮ ಪೌಷ್ಟಿಕ ಆಹಾರವೇ ಮುಖ್ಯ ಕಾರಣ. ಆರೋಗ್ಯವನ್ನು ಹದಗೆಡಿಸಬಲ್ಲ ಸ್ಥೂಲಕಾಯದಿಂದ ಎಷ್ಟು ಬೇಗ ಹಿಂದಿರುತ್ತೇವೆಯೋ ಅಷ್ಟೇ ಉತ್ತಮ. ಆದರೆ ಒಮ್ಮೆ ಸ್ಥೂಲಕಾಯ ಆವರಿಸಿತೆಂದರೆ ಬೇಗನೆ ಕಡಿಮೆಗೊಳಿಸಲು ಸಾಧ್ಯವಿಲ್ಲ.

ಅಲ್ಲದೇ ಅತಿ ಬೇಗನೇ ಕರಗಿಸಲೂಬಾರದು, ಇದು ಆರೋಗ್ಯದ ಮೇಲೆ ಪರೋಕ್ಷವಾದ ಪರಿಣಾಮ ಬೀರುತ್ತದೆ. ಆರೋಗ್ಯಕರ ವಿಧಾನವೆಂದರೆ ನಿಮ್ಮ ಆಹಾರದಲ್ಲಿ ನಿಯಂತ್ರಣ, ಅಂದರೆ ಕಡಿಮೆ ಕ್ಯಾಲೋರಿಗಳಿರುವ, ಆದರೆ ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸುವಂತಹ ಆಹಾರಗಳನ್ನು ಆಯ್ಕೆಮಾಡಿಕೊಳ್ಳುವುದು ಮತ್ತು ಎಡೆಬಿಡದೇ, ನಿಯಮಿತವಾಗಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ವ್ಯಾಯಮಗಳನ್ನು ಮಾಡುತ್ತಾ ಹೋಗುವುದು. ಆಹಾರದಲ್ಲಿ ನಿಯಂತ್ರಣ ಸಾಧಿಸುವುದು ಅಷ್ಟು ಸುಲಭವಲ್ಲ, ಏಕೆಂದರೆ ನಮ್ಮ ನಿತ್ಯದ ಕೆಲಸಗಳಿಗೆ ಆಹಾರ ಬೇಕೇ ಬೇಕು.

ಜಾಣತನವೆಂದರೆ ಇದುವರೆಗೆ ನೀವು ಸೇವಿಸುತ್ತಾ ಬಂದಿರುವ ಆಹಾರವನ್ನು ಕಡಿಮೆಗೊಳಿಸಿ ಆ ಸ್ಥಳದಲ್ಲಿ ನಾರು ಹೆಚ್ಚಿರುವ ಮತ್ತು ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಮತ್ತು ರಕ್ತಕ್ಕೆ ಪೋಷಕಾಂಶಗಳನ್ನು ನಿಧಾನವಾಗಿ ಸೇರಿಸುವವಂತಹವಾಗಿರಬೇಕು. ಇದರಿಂದ ದಿನಕ್ಕೆ ಅಗತ್ಯವಾದ ಮೂರು ಹೊತ್ತಿನ ಊಟಗಳ ನಡುವೆ ಹಸಿವಾಗಿ ಏನನ್ನಾದರೂ ತಿನ್ನುವ (ವಿಶೇಷವಾಗಿ ಸಿದ್ಧ ಆಹಾರಗಳು) ಬಯಕೆ ಇಂಗಿಹೋಗುತ್ತದೆ. ನಾರನ್ನು ಜೀರ್ಣಿಸಿಕೊಳ್ಳುವ ಪ್ರಯತ್ನದಲ್ಲಿ ಶೇಖರವಾಗಿದ್ದ ಕೊಬ್ಬು ಖರ್ಜಾಗುವ ಮೂಲಕ ತೂಕ ಆರೋಗ್ಯಕರವಾಗಿ ಕಡಿಮೆಯಾಗುತ್ತದೆ. ಅಲ್ಲದೇ ನಿಮ್ಮ ವ್ಯಾಯಾಮಕ್ಕಾಗಿ ಅಗತ್ಯವಾದ ಶಕ್ತಿಯನ್ನು ನೀಡಲೂ ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ನಿಮ್ಮ ಆಹಾರದಲ್ಲಿ ಹೆಚ್ಚಿನ ನಾರು ಇರುವ ಬ್ರೆಡ್ ಇರುವಂತೆ ನೋಡಿಕೊಂಡರೆ ನಿಮ್ಮ ತೂಕ ಇಳಿಸಲು ಸಾಧ್ಯವಾಗುತ್ತದೆ. ಆದರೆ ಯಾವ ಬ್ರೆಡ್‌ನಲ್ಲಿ ಈ ಗುಣಗಳಿವೆ ಎಂಬ ದ್ವಂದ್ವದಲ್ಲಿ ನೀವಿದ್ದರೆ ಕೆಳಗಿನ ಸ್ಲೈಡ್ ಶೋ ನಿಮ್ಮ ಆಯ್ಕೆಯನ್ನು ಸುಲಭಗೊಳಿಸಲಿದೆ.

ಮನೆಯಲ್ಲಿ ತಯಾರಿಸಿದ ಬ್ರೆಡ್

ಮನೆಯಲ್ಲಿ ತಯಾರಿಸಿದ ಬ್ರೆಡ್

ಒಂದು ವೇಳೆ ನಿಮ್ಮ ಮನೆಯಲ್ಲಿಯೇ ಬ್ರೆಡ್ ಮಾಡಿಕೊಳ್ಳುವ ಸೌಕರ್ಯವಿದ್ದರೆ ಇದಕ್ಕಿಂತಲೂ ಉತ್ತಮವಾದ ಬ್ರೆಡ್ ಇನ್ನೊಂದಿಲ್ಲ. ಇದಕ್ಕೆ ಮೈದಾ ಬದಲಿಗೆ ಇಡಿಯ ಗೋಧಿ ಹಿಟ್ಟನ್ನು ಬಳಸುವುದು ಅತ್ಯಗತ್ಯ.ಬೇಕರಿಯಲ್ಲಿ ರುಚಿಗಾಗಿ ಹೆಚ್ಚಿನ ಉಪ್ಪು, ಯೀಸ್ಟ್ ಮತ್ತು ಸಕ್ಕರೆಗಳನ್ನು ಬಳಸಲಾಗುತ್ತದೆ. ಮನೆಯಲ್ಲಿ ತಯಾರಿಸಿದ ಬ್ರೆಡ್‌ನಲ್ಲಿ ನಿಮಗೆ ಇಷ್ಟವಾದ ಸಿಹಿಯನ್ನು ಬಳಸುವ ಮೂಲಕ ರುಚಿಕರ, ಸ್ವಾದಿಷ್ಟ ಮತ್ತು ಆರೋಗ್ಯಕರವನ್ನಾಗಿಸಬಹುದು. ಉದಾಹರಣೆಗೆ ಸಕ್ಕರೆಯ ಬದಲಿಗೆ ಜೇನು ಉಪಯೋಗಿಸುವುದು ಇತ್ಯಾದಿ.

ಬಾರ್ಲಿಯ ಬ್ರೆಡ್

ಬಾರ್ಲಿಯ ಬ್ರೆಡ್

ತೂಕವಿಳಿಸಲು ನೆರವಾಗುವ ಇನ್ನೊಂದು ಧಾನ್ಯವೆಂದರೆ ಬಾರ್ಲಿ. ಅದರಲ್ಲೂ ಮಧುಮೇಹಿಗಳಿಗೆ ಈ ಬ್ರೆಡ್ ಅತ್ಯುತ್ತಮವಾಗಿದೆ. ಬಾರ್ಲಿಯ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗಿಸಲು ನೆರವಾಗುವ ಮೂಲಕ ರಕ್ತದಲ್ಲಿ ಇನ್ಸುಲಿನ್ ಪ್ರಮಾಣದಲ್ಲಿ ನಿಯಂತ್ರಣ ಸಾಧಿಸಬಹುದು.

ಇಡಿಯ ಧಾನ್ಯದ ಬ್ರೆಡ್

ಇಡಿಯ ಧಾನ್ಯದ ಬ್ರೆಡ್

ತೂಕವಿಳಿಸಲು ಇಡಿಯ ಧಾನ್ಯದ ಹಿಟ್ಟಿನಿಂದ ತಯಾರಿಸಿದ ಬ್ರೆದ್ ಉತ್ತಮವಾಗಿದೆ. ಇಡಿಯ ಧಾನ್ಯಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಕಾರಣ ಸಕ್ಕರೆಯನ್ನು ಅತಿ ನಿಧಾನವಾಗಿ ರಕ್ತಕ್ಕೆ ಸೇರಿಸುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟೀನ್, ಕರಗದ ನಾರು ದೇಹಕ್ಕೆ ಪೋಷಕಾಂಶ ಮತ್ತು ಶಕ್ತಿ ನೀಡುವ ಜೊತೆಗೇ ಕರಗದ ನಾರು ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುತ್ತದೆ.

ಓಟ್ಸ್ ಬ್ರೆಡ್

ಓಟ್ಸ್ ಬ್ರೆಡ್

ಓಟ್ಸ್ ಧಾನ್ಯದಿಂದ ತಯಾರಿಸಿದ ಬ್ರೆಡ್ ಸಹಾ ತೂಕವಿಳಿಸಲು ಸಹಕರಿಸುತ್ತದೆ. ಇದು ಯಾವುದೇ ಬ್ರೆಡ್ ಗಳಿಗಿಂತ ನಿಧಾನವಾಗಿ ರಕ್ತಕ್ಕೆ ಪೋಷಕಾಂಶವನ್ನು ನೀಡುವ ಕಾರಣ ಹಸಿವನ್ನು ತುಂಬಾ ತಡವಾಗಿಸುತ್ತದೆ. ಇದರಿಂದ ನಡುನಡುವೆ ಏನಾದರೂ ತಿನ್ನುವ ಬಯಕೆ ಕಡಿಮೆಯಾಗಿ ತೂಕ ಕಡಿಮೆಯಾಗಲು ನೆರವಾಗುತ್ತದೆ.

ಪೀಟಾ ಬ್ರೆಡ್

ಪೀಟಾ ಬ್ರೆಡ್

ಸಾಮಾನ್ಯವಾಗಿ ಉಬ್ಬಿದ ಪೂರಿಯಂತಿರುವ ಎಣ್ಣೆಯಿಲ್ಲದ ಈ ರೊಟ್ಟಿಯನ್ನು ಇಡಿಯ ಗೋಧಿಹಿಟ್ಟಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದರ ವಿಶೇಷವೆಂದರೆ ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು ಕರಗದ ನಾರನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಪ್ರಮಾಣದ ಕೊಬ್ಬು ಬೇಕಾಗುತ್ತದೆ. ಪರಿಣಾಮವಾಗಿ ತೂಕ ಕಳೆದುಕೊಳ್ಳಲು ಎರಡು ಕಡೆಯಿಂದ ನೆರವು ದೊರಕುತ್ತದೆ.

ಅಗಸೆಬೀಜದ ಬ್ರೆಡ್

ಅಗಸೆಬೀಜದ ಬ್ರೆಡ್

ಅಗಸೆಬೀಜ (Flaxseed) ದಲ್ಲಿರುವ ಕಠಿಣವಾದ ನಾರುಗಳನ್ನು ಅರಗಿಸಿಕೊಳ್ಳಲು ಹೆಚ್ಚಿನ ಕ್ಯಾಲೋರಿಗಳು ಮತ್ತು ಕೊಬ್ಬು ಬಳಕೆಯಾಗುವುದರಿಂದ ಶೀಘ್ರವಾಗಿ ತೂಕವಿಳಿಸಿಕೊಳ್ಳಲು ಇದರ ಬ್ರೆಡ್ ಉತ್ತಮ ಆಯ್ಕೆಯಾಗಿದೆ.

ಇಡಿಯ ಗೋಧಿಹಿಟ್ಟಿನ (Whole Wheat) ಬ್ರೆಡ್

ಇಡಿಯ ಗೋಧಿಹಿಟ್ಟಿನ (Whole Wheat) ಬ್ರೆಡ್

ಗೋಧಿಯ ಕಾಳಿನ ರಚನೆಯನ್ನು ಗಮನಿಸಿದರೆ ಹೊರಕವಚ ( bran), ಹಿಟ್ಟು (endosperm), ಮತ್ತು ಮೊಳಕೆ (germ). ಇದರಲ್ಲಿ ಹೊರಕವಚ ಮತ್ತು ಮೊಳಕೆಯನ್ನು ನಿವಾರಿಸಿದರೆ ಸಿಗುವುದೇ ಮೈದಾ. ಆದರೆ ಮೈದಾದಲ್ಲಿ ನಾರು ಇರುವುದೇ ಇಲ್ಲ. ಇವೆರಡೂ ಕವಚ ಮತ್ತು ಮೊಳಕೆಯಲ್ಲಿರುತ್ತವೆ. ಆದ್ದರಿಂದ ಇಡಿಯ ಗೋಧಿಹಿಟ್ಟಿನಿಂದ ತಯಾರಿಸಿದ ಬ್ರೆಡ್ ಸೇವಿಸುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಪೋಷಕಾಂಶಗಳ ಜೊತೆಗೇ ಕರಗದ ನಾರು ಸಹಾ ದೊರಕುತ್ತದೆ. ಇದು ತೂಕ ಇಳಿಸಲು ನೆರವಾಗುತ್ತದೆ.

ಚಿಕ್ಕ ಗೋಧಿ (Rye) ಬ್ರೆಡ್

ಚಿಕ್ಕ ಗೋಧಿ (Rye) ಬ್ರೆಡ್

ನೋಡಲು ಚಿಕ್ಕದಾದ ಗೋಧಿಯಂತಿರುವ ಚಿಕ್ಕ ಗೋಧಿ ಅಥವಾ ರೈ ಕಾಳುಗಳ ಹಿಟ್ಟಿನಿಂದ ತಯಾರಿಸಿದ ಬ್ರೆಡ್ ಸಹಾ ತೂಕವಿಳಿಸಲು ನೆರವಾಗುತ್ತದೆ. ಇದು ಗೋಧಿಯ ಸ್ವಾದ ಹೊಂದಿದ್ದರೂ ಗೋಧಿಗಿಂತ ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಕಾರಣ ಪರೋಕ್ಷವಾಗಿ ತೂಕವಿಳಿಸಲು ಸಾಧ್ಯವಾಗುತ್ತದೆ.

ಮೊಳಕೆ ಬರಿಸಿದ ಕಾಳುಗಳ ಬ್ರೆಡ್ (Ezekiel Bread)

ಮೊಳಕೆ ಬರಿಸಿದ ಕಾಳುಗಳ ಬ್ರೆಡ್ (Ezekiel Bread)

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗದ ಈ ಬ್ರೆಡ್ ತೂಕವಿಳಿಸಲು ಅತ್ಯುತ್ತಮವಾದ ಬ್ರೆಡ್ ಆಗಿದೆ. ಏಕೆಂದರೆ ಇದಕ್ಕೆ ನೈಸರ್ಗಿಕವಾಗಿ ಬೆಳೆಸಿದ ಗೋಧಿ ಅಥವಾ ಬೇರಾವುದಾದರೂ ಕಾಳುಗಳನ್ನು ಮೊಳಕೆ ಬರಿಸಿ ಬಳಿಕ ಮಾಡಿದ ಹಿಟ್ಟಿನ್ನು ಬಳಸಲಾಗಿರುತ್ತದೆ. ಮೊಳಕೆ ಬರಿಸಿದ ಕಾಳುಗಳಲ್ಲಿ ಪೋಷಕಾಂಶಗಳು ಯಥೇಚ್ಛವಾಗಿರುತ್ತವೆ. ಇವು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಇದರಲ್ಲಿರುವ ನಾರು ಕೊಬ್ಬು ಕರಗಿಸಲು ನೆರವಾಗುತ್ತದೆ.

English summary

9 Types Of Bread For Weight Loss

Ladies and gentlemen, it is time to lose weight today. With the help of a few exercises and a handful of home remedies to help burn fat we are sure that you will lose weight rapidly and in no time. Here are nine types of bread you can consume the next time you feel the need of indulging into a slice. Look out for whole wheat bread and multi grain too as it will provide you with the best satisfaction in terms of cravings. Take a look:
X
Desktop Bottom Promotion