For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಸಿದ್ಧಪಡಿಸಿದ ಮೊಸರಿನ 12 ಅದ್ಭುತ ಕಮಾಲುಗಳು

By Super
|

ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ.

ಈ ಮೊಸರು ಎಲ್ಲಿ ಸಿಗುತ್ತದೆ? ಇನ್ನೆಲ್ಲಿ, ಡೈರಿಯಲ್ಲಿ. ಈ ಮೊಸರು ಅಪ್ಪಟವಾಗಿದೆಯೇ? ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ನೀವು ಕೊಳ್ಳುವ ಮೊಸರಿನಲ್ಲಿ ಅಡಕವಾಗಿರುವ ಸಂರಕ್ಷಕಗಳ ಪಟ್ಟಿಯನ್ನು ನೋಡಬೇಕಾಗುತ್ತದೆ. ಡೈರಿಯಿಂದ ನಿಮ್ಮ ಮನೆಯವರೆಗೆ ತಲುಪುವ ಮೊದಲು ಕೆಡದಿರಲು ಹಾಲು ಮತ್ತು ಮೊಸರನ್ನು ವಿವಿಧ ರೀತಿಯಲ್ಲಿ ಸಂಸ್ಕರಿಸಿ, ಸಂರಕ್ಷಕ (preservatives)ಗಳನ್ನು ಸೇರಿಸಿ ವಿತರಿಸಲಾಗುತ್ತದೆ.

ಆದರೆ ಆರೋಗ್ಯದ ದೃಷ್ಟಿಯಿಂದ ಈ ಮೊಸರಿಗಿಂತಲೂ ಮನೆಯಲ್ಲಿಯೇ ತಯಾರಿಸಿದ ಮೊಸರು ಉತ್ತಮವಾಗಿದೆ. ರೋಗಿಗಳಿಗೆ ಮತ್ತು ಪಥ್ಯದ ರೂಪದಲ್ಲಿ ಮೊಸರನ್ನು ಸೇವಿಸುವವರು ಮಾರುಕಟ್ಟೆಯಲ್ಲಿ ಸಿಗುವ ಮೊಸರಿನ ಬದಲಿಗೆ ಮನೆಯ ಮೊಸರನ್ನೇ ಸೇವಿವುದು ಒಳ್ಳೆಯದು. ಮೊಸರಿನ ಡಯಟ್ ನಿಂದ ಸ್ಲಿಮ್ ಆಗೋದು ಸುಲಭ

ಅಲ್ಲದೇ ಇಂದು ವಿವಿಧ ಸ್ವಾದಗಳನ್ನು ಒಳಗೊಂಡ ಮೊಸರೂ ಸಿಗುತ್ತಿದೆ. ಈ ಮೊಸರನ್ನು ನಿತ್ಯ ಸೇವಿಸುವುದೂ ಒಳ್ಳೆಯದಲ್ಲ ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ. ಮನೆಯ ಮೊಸರು ಹೊಟ್ಟೆಗೆ ಮಾತ್ರವಲ್ಲದೇ ನಿಮ್ಮ ಸೌಂದರ್ಯಕ್ಕೂ ಪೂರಕವಾಗಿದೆ. ಮನೆಯ ಮೊಸರು ನೋಡಲು ಅದುರು ಅದುರಾಗಿದ್ದರೆ ಮಾರುಕಟ್ಟೆಯ ಮೊಸರು ಬಿಳಿಯ ಜೀಡಿಯಂತಿರುತ್ತದೆ. ಮನೆಯ ಮೊಸರಿನ ಇನ್ನೂ ಹಲವು ಸದ್ಗುಣಗಳ ಪೈಕಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ. ಕೊಬ್ಬಿನಾಂಶ ನಿಯಂತ್ರಿಸಲು ಮೊಸರು ಸೇವನೆ ಹೇಗಿರಬೇಕು?

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಮೊಸರು ಈಗಾಗಲೇ ಮುಕ್ಕಾಲುಪಾಲು ಜೀರ್ಣಿಸಲ್ಪಟ್ಟ ಆಹಾರವಾದುದರಿಂದ ನಮ್ಮ ಜೀರ್ಣಾಂಗಗಳು ಲೀಲಾಜಾಲವಾಗಿ ಉಳಿದ ಭಾಗವನ್ನು ಜೀರ್ಣಿಸಿ ಮುಂದೆ ಕಳುಹಿಸುತ್ತವೆ. ಕರುಳುಗಳಲ್ಲಿ ಮಲಬದ್ಧತೆಯುಂಟುಮಾಡುವ ಆಹಾರಗಳಿದ್ದರೆ ಅವುಗಳನ್ನು ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ. ಮಾರುಕಟ್ಟೆಯ ಮೊಸರಿನಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮನೆಯ ಮೊಸರಿನಷ್ಟು ಸಪರ್ಮಕವಾಗಿ ಕರುಳುಗಳಗೆ ನೆರವಾಗಲಾರದು. ಇದೇ ಕಾರಣಕ್ಕಾಗಿ ಆಯುರ್ವೇದದಲ್ಲಿ ಊಟದಲ್ಲಿ ಕಡೆಯದಾಗಿ ಮೊಸರು ಮತ್ತು ಮಜ್ಜಿಗೆಯನ್ನು ಸೇವಿಸುವಂತೆ ನಿರ್ದೇಶಿಸಲಾಗಿದೆ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಮನೆಯ ಮೊಸರಿನಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಇವು ನಿಮ್ಮ ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತವೆ. ಒಂದು ವೇಳೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ ಮೊಸರಿನಿಂದ ಈ ಕೊರತೆ ನೀಗುತ್ತದೆ. ಮಾರುಕಟ್ಟೆಯ ಮೊಸರಿನಲ್ಲಿ ಕ್ಯಾಲ್ಸಿಯಂ ಇದ್ದರೂ ಸಂರಕ್ಷಕಗಳ ಕಾರಣ ಅಷ್ಟು ಸುಲಭವಾಗಿ ನಮ್ಮ ದೇಹವನ್ನು ಸೇರಲಾರದು.

ಪ್ರೋಟೀನುಗಳನ್ನು ಪೂರೈಸುತ್ತದೆ

ಪ್ರೋಟೀನುಗಳನ್ನು ಪೂರೈಸುತ್ತದೆ

ಸಾಮಾನ್ಯವಾಗಿ ಪ್ರೋಟೀನುಗಳು ಮಾಂಸ ಮತ್ತು ಮೀನುಗಳ ಮೂಲಕ ದೊರಕುತ್ತದೆ. ಶಾಕಾಹಾರಿಗಳಿಗೆ ಪ್ರೋಟೀನುಗಳನ್ನು ನೀಡಲು ಮೊಸರು ನೆರವಾಗುತ್ತದೆ. ಪ್ರತಿದಿನ ಒಂದು ಬಟ್ಟಲು ಮೊಸರನ್ನು ಊಟದ ಜೊತೆ ಸೇವಿಸುವುದರಿಂದ ಮಾಂಸಾಹಾರಿಗಳ ದೇಹಕ್ಕೆ ಲಭ್ಯವಾದಷ್ಟೇ ಪ್ರೋಟೀನು ಶಾಕಾಹಾರಿಗಳಿಗೂ ಲಭ್ಯವಾಗುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಮುಖದ ಕಾಂತಿಯನ್ನು ಹೆಚ್ಚಿಸಲು ಈ ವಿಧಾನ ಅನುಸರಿಸಿ. ಒಂದು ಚಿಕ್ಕಚಮಚ ಮೊಸರು, ಸಮಪ್ರಮಾಣದ ಕಡಲೆಹಿಟ್ಟು, ಕೆಲವು ಹನಿ ಜೇನು ಮತ್ತು ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಇಡಿಯ ಮುಖಕ್ಕೆ ಲೇಪಿಸಿ. (ಕಣ್ಣು ರೆಪ್ಪೆಗಳಿಗೂ ಲೇಪಿಸಬಹುದು). ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಈ ಲೇಪ ಒಣಗುತ್ತದೆ. ಬಳಿಕ ಸ್ವಚ್ಛವಾದ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ತಕ್ಷಣವೇ ನಿಮ್ಮ ಚರ್ಮಕ್ಕೆ ಕಾಂತಿಯನ್ನೂ ಮತ್ತು ಮೃದುತ್ವವನ್ನೂ ನೀಡುತ್ತದೆ. ನಿಯಮಿತವಾಗಿ ಅನುಸರಿಸುವುದರಿಂದ ಚರ್ಮ ಬಹುಕಾಲ ನೆರಿಗೆಗಳಿಂದ ದೂರವಿರುತ್ತದೆ.

ತಕ್ಷಣ ಹಸಿವಾಗುವುದನ್ನು ತಡೆಯುತ್ತದೆ

ತಕ್ಷಣ ಹಸಿವಾಗುವುದನ್ನು ತಡೆಯುತ್ತದೆ

ನಮ್ಮ ದೇಹಕ್ಕೆ ಇನ್ನೂ ಆಹಾರ ಬೇಕು ಎಂದು ನಮ್ಮ ಜೀರ್ಣಾಂಗಗಳು ಮೆದುಳಿಗೆ ನೀಡುವ ಸಂಜ್ಞೆಯೇ ಹಸಿವು. ಒಂದು ವೇಳೆ ನೀವು ತೂಕ ಕಳೆದುಕೊಳ್ಳುವ ಅಥವಾ ದೇಹವನ್ನು ಹುರಿಗಟ್ಟಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದರೆ ಅಥವಾ ಈಗಿರುವ ತೂಕವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಇಚ್ಛಿಸದೇ ಇರುವ ಮೈಕಟ್ಟನ್ನೇ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವ ಇರಾದೆಯುಳ್ಳವರಾಗಿದ್ದರೆ ಈ ಹಸಿವು ನಿಮ್ಮ ಇರಾದೆಗೆ ಕಂಟಕ ತರುತ್ತದೆ. ಈ ಹಸಿವನ್ನು ನಿಗ್ರಹಿಸಲು ಮನೆಯ ಮೊಸರು ನಿಮ್ಮ ನೆರವಿಗೆ ಬರುತ್ತದೆ. ವ್ಯಾಯಾಮಕ್ಕೂ ಮೊದಲು ಮತ್ತು ನಂತರ ಮೊಸರನ್ನು ನೀರುನೀರಾಗಿ ಸೇವಿಸುವುದರಿಂದ ದೇಹ ಹಸಿವು ಎಂದು ಕೂಗುವುದಿಲ್ಲ. ಬದಲಿಗೆ ಮಾಂಸಖಂಡಗಳು ಹುರಿಗಟ್ಟುತ್ತವೆ ಮತ್ತು ಮೂಳೆಗಳು ಇನ್ನಷ್ಟು ದೃಢವಾಗುತ್ತವೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಇಂದು ವ್ಯಾಪಕವಾಗಿ ಯುವಜನತೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಸ್ಥೂಲಕಾಯವನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ತೂಕವನ್ನು ಆರೋಗ್ಯಕರವಾಗಿ ಕಳೆದುಕೊಳ್ಳಲು ಅಥವಾ ಈಗಿರುವ ಸೌಷ್ಟವವನ್ನೇ ಕಾಪಾಡಿಕೊಳ್ಳಲು ಮೊಸರಿಗಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ. ಏಕೆಂದರೆ ಮುಕ್ಕಾಲು ಪಾಲು ಜೀರ್ಣವಾಗಿರುವ ಮೊಸರಿನಲ್ಲಿ ಉಳಿದಿರುವ ಕಾಲುಭಾಗದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಜೀರ್ಣಿಸಿಕೊಳ್ಳಲು ನಮ್ಮ ಕರುಳುಗಳಿಗೆ ಹೆಚ್ಚಿನ ಕೊಬ್ಬು ಅಗತ್ಯವಿದೆ. ಪರಿಣಾಮವಾಗಿ ಕೊಬ್ಬು ಬಳಕೆಯಾಗಿ ತೂಕ ನಿಧಾನವಾಗಿ ಇಳಿಯುತ್ತಾ ಬರುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ರಕ್ತದ ಅಧಿಕ ಒತ್ತಡವನ್ನು ಕಡಿಮೆಗೊಳಿಸಲು ಆಹಾರದಲ್ಲಿ ಪೊಟ್ಯಾಶಿಯಂ ಅಗತ್ಯವಿದೆ. ಮೊಸರಿನಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು ನಿಯಮಿತ ಸೇವನೆಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗಲು ನೆರವಾಗುತ್ತದೆ. ಉತ್ತಮ ಆರೋಗ್ಯ ಮತ್ತು ಮೈಕಟ್ಟಿಗಾಗಿ ದಿನಕ್ಕೊಂದು ಬಟ್ಟಲು ಮೊಸರನ್ನು ಊಟದ ಬಳಿಕ ಸೇವಿಸುವುದು ಉತ್ತಮವಾಗಿದೆ.

ನಿಮ್ಮ ಕೂದಲು ಮೃದುವಾಗುತ್ತದೆ

ನಿಮ್ಮ ಕೂದಲು ಮೃದುವಾಗುತ್ತದೆ

ಕೂದಲ ಆರೈಕೆಗೆ ಬರೆಯ ನೀರು ಮತ್ತು ಎಣ್ಣೆ ಸಾಲದು, ಆರ್ದ್ರತೆಯೂ ಬೇಕು. ಮೊಸರಿನಲ್ಲಿರುವ ನೀರಿನ ಅಂಶವನ್ನು ಕೂದಲು ಸುಲಭವಾಗಿ ಹೀರಿಕೊಳ್ಳುವುದರಿಂದ ಮೊಸರನ್ನು ನೇರವಾಗಿ ಕೂದಲಿಗೆ ಹಚ್ಚಬಹುದು. (ಬರೆಯ ನೀರನ್ನು ಕೂದಲು ಹೀರಿಕೊಳ್ಳಲಾರದು). ಉತ್ತಮ ಪರಿಣಾಮಕ್ಕಾಗಿ ಮೊಟ್ಟೆಯ ಬಿಳಿಭಾಗ ಮತ್ತು ಮನೆಯ ಮೊಸರನ್ನು ಸಮಪ್ರಮಾಣದಲ್ಲಿ ಬೆರೆಸಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ನಯವಾಗಿ ಮಸಾಜ್ ಮಾಡಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ (ತಣ್ಣೀರಾದರೆ ಉತ್ತಮ) ಸ್ನಾನ ಮಾಡಿಕೊಳ್ಳಿ. ಬಿಸಿನೀರು ಉಪಯೋಗಿಸಿದರೆ ಮೊಸರಿನ ಮೂಲಕ ಕೂದಲು ಹೀರಿರುವ ಆರ್ದ್ರತೆ ಹೊರಹೋಗುತ್ತದೆ.

ವಿವಿಧ ವಿಟಮಿನ್ ಮತ್ತು ಖನಿಜಗಳ ಆಗರವಾಗಿದೆ

ವಿವಿಧ ವಿಟಮಿನ್ ಮತ್ತು ಖನಿಜಗಳ ಆಗರವಾಗಿದೆ

ಮೊಸರಿನಲ್ಲಿ ಹಲವು ವಿಟಮಿನ್ ಮತ್ತು ಖನಿಜಗಳಿವೆ. ವಿಟಮಿನ್ ಬಿ12, ಸತು(zinc), ರಂಜಕ (phosphorus), ರೈಬೋಫ್ಲೋವಿನ್ ಮತ್ತು ಐಯೋಡಿನ್ ನಂತಹ ಖನಿಜಗಳಿವೆ. ಇವೆಲ್ಲವೂ ಅರೋಗ್ಯವನ್ನು ಸಮಗ್ರವಾಗಿ ಕಾಪಾಡುವಲ್ಲಿ ನೆರವಾಗುತ್ತವೆ.

ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ

ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ

ಕೆಲವೊಮ್ಮೆ ಬಾಯಿಯ ಒಳಭಾಗ, ಗಂಟಲಿನ ಮೇಲ್ಭಾಗ ಮತ್ತು ಧ್ವನಿಪೆಟ್ಟಿಗೆಯ ಅಕ್ಕಪಕ್ಕ ಆಹಾರದ ಪದರ ಶೇಖರಗೊಂಡು ಬ್ಯಾಕ್ಟೀರಿಯಾಗಳು ಅವುಗಳನ್ನು ಕೊಳೆಸುವುದರಿಂದ ಬಾಯಿಯಿಂದ ಸಹಿಸಲಸಾಧ್ಯವಾದ ದುರ್ವಾಸನೆ ಸೂಸುತ್ತದೆ. ಇದು ಒಸಡುಗಳಲ್ಲಿ ಬಾವು ಮೂಡಿಸುವ ಕಾಯಿಲೆ (gingivitis) ಗೂ ಕಾರಣವಾಗಬಲ್ಲುದು. ಇದನ್ನು ತಡೆಯಲು ಮೊಸರಿನ ಸೇವನೆ ಒಳ್ಳೆಯದು ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಈ ಬ್ಯಾಕ್ಟೀರಿಯಾಗಳನ್ನು ಕೊಂದು ಆಹಾರದ ಪದರವನ್ನು ಸಡಿಲಗೊಳಿಸುತ್ತದೆ. ಬಾಯಿಯನ್ನು ಮುಕ್ಕಳಿಸುವುದರಿಂದ ಈ ಸಡಿಲವಾದ ಪದರ ಕಳಚಿ ಬಾಯಿಯ ದುರ್ವಾಸನೆ ಮಾಯವಾಗುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಇತರ ಆಹಾರಗಳ ಪೌಷ್ಟಿಕತೆಯನ್ನು ಕಾಪಾಡುತ್ತದೆ

ಇತರ ಆಹಾರಗಳ ಪೌಷ್ಟಿಕತೆಯನ್ನು ಕಾಪಾಡುತ್ತದೆ

ಸಾಮಾನ್ಯವಾಗಿ ಎರಡು ಬಣ್ಣಗಳು ಸೇರಿದರೆ ಇನ್ನೊಂದು ಬಣ್ಣ ರೂಪುಗೊಳ್ಳುತ್ತದೆ. ಅಂತೆಯೇ ಅಡುಗೆಯಲ್ಲಿ ವಿವಿಧ ಆಹಾರವಸ್ತುಗಳನ್ನು ಸೇರಿಸುವುದರಿಂದ ಪ್ರತಿ ಆಹಾರವಸ್ತುವಿನ ಅಂಶ ಇನ್ನೊಂದರ ಅಂಶದೊಡನೆ ವರ್ತಿಸಿ ಪೌಷ್ಟಿಕತೆಯಲ್ಲಿ ಏರುಪೇರಾಗಬಹುದು. ಆದರೆ ಮೊಸರಿನಲ್ಲಿ ಹಾಗಲ್ಲ. ಮೊಸರು ಅತ್ಯಂತ ಸೌಮ್ಯವಾಗಿರುವುದರಿಂದ (ಅಂದರೆ ಈಗಾಗಲೇ ಮುಕ್ಕಾಲುವಾಸಿ ಜೀರ್ಣವಾಗಿರುವುದರಿಂದ) ಇದರೊಡನೆ ಸೇರಿಸುವ ಬೇರೆ ಯಾವುದೇ ಆಹಾರದ ಪೌಷ್ಟಿಕತೆಯನ್ನು ಬದಲಿಸುವುದಿಲ್ಲ. ಹಾಗಾಗಿ ಮೊಸರಿನೊಂದಿಗೆ ಸೇವಿಸಿದ ಇತರ ಆಹಾರಗಳ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಮನೆಯ ಮೊಸರು ತಯಾರಿಸುವುದು ಹೇಗೆ? (ಹೆಪ್ಪು ಹಾಕಲು ಸ್ವಲ್ಪ ಮನೆಯ ಮೊಸರು ಅಗತ್ಯ)

ಮನೆಯ ಮೊಸರು ತಯಾರಿಸುವುದು ಹೇಗೆ? (ಹೆಪ್ಪು ಹಾಕಲು ಸ್ವಲ್ಪ ಮನೆಯ ಮೊಸರು ಅಗತ್ಯ)

* ಅಪ್ಪಟ ಹಸುವಿನ ಹಾಲನ್ನು (ನೀರು ಬೆರೆಸದೇ) ಕುದಿಸಿ ತಣಿಯಲು ಬಿಡಿ

* ಅರ್ಧ ತಣಿದ ಬಳಿಕ ನಾಲ್ಕು ಕಪ್ ಹಾಲಿಗೆ ಕಾಲು ಕಪ್ ಪ್ರಮಾಣದಲ್ಲಿ ಮೊಸರನ್ನು ಬೆರೆಸಿ

* ಚಮಚ ಅಥವಾ ಕೈ ತಿರುಗಣೆಯ ಮಿಕ್ಸರ್ ಬಳಸಿ ನಯವಾಗಿ ಮಿಶ್ರಣ ಮಾಡಿ

* ಈ ಹಾಲನ್ನು ಗಟ್ಟಿಯಾಗಿ ಮುಚ್ಚಿ ಅಲ್ಲಾಡದಂತೆ ಒಂದು ಮೂಲೆಯಲ್ಲಿರಿಸಿ.

* ಆರು ಘಂಟೆಗಳ ಬಳಿಕ ಅಪ್ಪಟ ಮನೆಯ ಮೊಸರು ಸಿದ್ಧವಾಗುತ್ತದೆ.

ಕಿವಿಮಾತು: ಮೊಸರಿಗೆ ಹೆಪ್ಪು ಹಾಕುವಾಗ ಬಾಳೆ ಎಲೆಯ ತುದಿಯ ಒಂದು ಚೂರನ್ನು ಸೇರಿಸಿದರೆ ಮೊಸರು ಇನ್ನಷ್ಟು ಮೃದು ಮತ್ತು ಒತ್ತೊತ್ತಾಗಿರುತ್ತದೆ.

English summary

12 Benefits of Homemade Yogurt

Yogurt is one of the top nutritional foods. There are some beneficial bacteria in yogurt that help to have a good digestive system. There are other benefits of homemade yogurt. Homemade yogurt is good for your skin too. So you can use it in your face pack as well. Here are some benefits of homemade yogurt.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X