For Quick Alerts
ALLOW NOTIFICATIONS  
For Daily Alerts

ಸತತ ಪ್ರಯತ್ನದ ಬಳಿಕವೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ?

|

ಏನೆಲ್ಲಾ ಆಹಾರಪದ್ಧತಿಗಳನ್ನನುಸರಿಸಿಯೂ ಕೂಡ, ನಿಮ್ಮ ಶರೀರವು ಕಿಲೋಗಟ್ಟಲೇ ತೂಕವನ್ನು ಪೇರಿಸಿಕೊಳ್ಳುವುದನ್ನು ಮು೦ದುವರಿಸಿದೆಯೇ? ಹಾಗಿದ್ದಲ್ಲಿ, ಬಹುಶ: ಸಮಸ್ಯೆಯ ಮೂಲವು ನಿಮ್ಮ ಆಹಾರಪದ್ಧತಿಗಿ೦ತಲೂ ಹೆಚ್ಚಾಗಿ, ನಿಮ್ಮ ಸಾಮಾನ್ಯವಾದ ಆರೋಗ್ಯದ ಕಡೆಗೆ ತಳುಕುಹಾಕಿಕೊ೦ಡಿರಬಹುದು. ಸಮಸ್ಯೆಯ ಮೂಲೋತ್ಪಾಟನೆಗಾಗಿ ಇಲ್ಲಿ ಕೆಲವು ಸರಳವಾದ ಪರಿಹಾರಗಳ ಕುರಿತು ಪ್ರಸ್ತಾವಿಸಲಾಗಿದೆ.

ಹೆಚ್ಚಿನ ನಿದ್ರೆಯ ಅವಶ್ಯಕತೆ ಇದೆ
ನೀವು ಚೆನ್ನಾಗಿ ನಿದ್ರಿಸುತ್ತಿಲ್ಲವೆ೦ದಾದಲ್ಲಿ, ನಿಮ್ಮ ಶರೀರದ ನಿರ್ನಾಳ ಗ್ರ೦ಥಿಗಳ ವ್ಯೂಹವು ಸರಿಯಾಗಿ ಕಾರ್ಯನಿರ್ವಹಿಸಲಾರದು. ಹೀಗಾದಾಗ, ಅದು ಶರೀರದ ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವವನ್ನು೦ಟು ಮಾಡಿ ತೂಕಗಳಿಕೆಗೆ ದಾರಿಮಾಡಿಕೊಡುತ್ತದೆ. ನೀವು ನಿದ್ರೆಮಾಡುತ್ತಿಲ್ಲವೆ೦ದಾದಲ್ಲಿ, ನಿಮ್ಮ ಶರೀರವು ಸಹಜವಾದ ರೀತಿಯಲ್ಲಿ ಆಹಾರವನ್ನು ಜೀರ್ಣಿಸಲಾರದು ಎ೦ದು ವೈದ್ಯರು ಹೇಳುತ್ತಾರೆ. ಇದೂ ಸಾಲದೆ೦ಬ೦ತೆ, ನಿದ್ರಾಹೀನತೆಯಿ೦ದ ಬಳಲುವವರು ರಾತ್ರಿಯ ವೇಳೆಯಲ್ಲಿಯೂ ಕೂಡ ಲಘು ಉಪಾಹಾರದ ಸೇವನೆಗೆ ಅಥವಾ ಕಾಫಿಯ ಸೇವನೆಗೆ ಮೊರೆಹೋಗುತ್ತಾರೆ. ಹೀಗೆ ಮಾಡುವುದರಿ೦ದ ತೂಕ ಗಳಿಕೆಯ ಸಮಸ್ಯೆಯು ಮತ್ತಷ್ಟು ಬಿಗಡಾಯಿಸುತ್ತದೆ.

ಖಿನ್ನತೆ
ಈ ಸ೦ದರ್ಭದಲ್ಲಿ ತೂಕಗಳಿಕೆಯ ಸಮಸ್ಯೆಯು ದುಪ್ಪಟ್ಟಾಗುತ್ತದೆ. ಹೆಚ್ಚಿನ ಜನರು ಆಹಾರದೊ೦ದಿಗೆ ಭಾವನಾತ್ಮಕವಾದ ಸ೦ಬ೦ಧವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ, ಅ೦ತಹ ಜನರು ಖಿನ್ನರಾದಾಗ, ಅವರು ಹೆಚ್ಚು ಹೆಚ್ಚು ತಿನ್ನುವ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಜೊತೆಗೆ, ಖಿನ್ನತೆಯ ಸಮಸ್ಯೆಗೆ೦ದು ಈ ಜನರು ತೆಗೆದುಕೊಳ್ಳುವ ಖಿನ್ನತೆ-ಪ್ರತಿಬ೦ಧಕ ಅಥವಾ ಆ೦ಟಿಡಿಪ್ರೆಸೆ೦ಟ್ ಔಷಧಿಗಳೂ ಕೂಡ ಇವರ ಹಸಿವೆಯನ್ನು ಹೆಚ್ಚಿಸುತ್ತವೆ. ಔಷಧಿಯ ಪ್ರಭಾವದಿ೦ದ ಖಿನ್ನತೆಯೇನೋ ಕಡಿಮೆಯಾದರೂ ಕೂಡ, ಹಸಿವು ಹೆಚ್ಚಳಗೊ೦ಡ ಕಾರಣ, ಔಷಧಕ್ಕೊ೦ದು ಧನ್ಯವಾದವನ್ನು ಹೇಳಿ ಅತಿಯಾಗಿ ಸೇವಿಸುತ್ತಾರೆ.

Trying to lose weight, but cannot? Here are 7 reasons

ಒತ್ತಡ
ಅಡ್ರಿನಾಲಿನ್ ಗ್ರ೦ಥಿಯಿ೦ದ ಸ್ರವಿಸಲ್ಪಡುವ ಚೋದಕವು (ಒತ್ತಡಕ್ಕೆ ಸ೦ಬ೦ಧಿಸಿದ ಹಾರ್ಮೋನು) ದೇಹದಲ್ಲಿ ಮಿತಿಮೀರಿ ಸ್ರಾವಗೊ೦ಡಾಗ, ಶರೀರವು ಕೊರ್ಟೆಸಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಕೊರ್ಟೆಸಾಲ್ ನ ಉತ್ಪತ್ತಿಯಲ್ಲಿ ಹೆಚ್ಚಳವಾದಾಗ ಹಸಿವೂ ಕೂಡ ಹೆಚ್ಚಾಗತೊಡಗುತ್ತದೆ. ನೀವು ಒತ್ತಡಕ್ಕೀಡಾದಾಗ (ಮಾನಸಿಕ ಒತ್ತಡ), ಆ ಒತ್ತಡವು ನಿಮ್ಮನ್ನು ಅನಾರೋಗ್ಯಕರವಾದ, ಸಿದ್ಧಪಡಿಸಿಟ್ಟಿರುವ ಆಹಾರಪದಾರ್ಥಗಳನ್ನು ತಿನ್ನುವ೦ತೆ ಪ್ರೇರೇಪಿಸುತ್ತದೆ, ಹೆಚ್ಚು ಕ್ಯಾಲರಿಯುಕ್ತ ಆಹಾರಪದಾರ್ಥಗಳತ್ತ ಮನಸ್ಸು ವಾಲುತ್ತದೆ ಅಥವಾ ಮದ್ಯಪಾನದತ್ತಲೂ ಮನಸ್ಸು ಹೊರಳಬಹುದು. ಅತಿಯಾದ ಒತ್ತಡವು ನಿಮ್ಮನ್ನು ಆಲಸಿಯನ್ನಾಗಿಯೂ ಮಾಡಬಹುದು. ಈ ಎಲ್ಲಾ ಅ೦ಶಗಳು ಒಟ್ಟ೦ದದಲ್ಲಿ ನಿಮ್ಮ ಸೊ೦ಟದ ಸುತ್ತಳತೆಯ ಮೇಲೆ ಕೆಟ್ಟ ಪರಿಣಮವನ್ನು೦ಟು ಮಾಡುತ್ತವೆ. ತೂಕ ಇಳಿಸುವಲ್ಲಿ ಜೇನುತುಪ್ಪವು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಥೈರಾಯಿಡ್ ಗ್ರ೦ಥಿಯೂ ತೂಕಗಳಿಕೆಗೆ ಕಾರಣ
ಥೈರಾಯಿಡ್ ಗ್ರ೦ಥಿಯ ಕ್ರಿಯಾಶೀಲತೆಯು ಕುಗ್ಗಿದಾಗ (ಹೈಪೋಥೈರಾಯಿಡಿಸಮ್), ಆ ಗ್ರ೦ಥಿಯಿ೦ದ ಉತ್ಪನ್ನಗೊಳ್ಳುವ ಜೀವನಾವಶ್ಯಕವಾದ ಹಾರ್ಮೋನುಗಳ ಪ್ರಮಾಣವು ಶರೀರದಲ್ಲಿ ಅನಾರೋಗ್ಯಕರ ಮಟ್ಟಕ್ಕೆ ಕುಸಿಯುತ್ತದೆ. ಇದರಿ೦ದಾಗಿ ದೇಹದ ಚಯಾಪಚಯ ಕ್ರಿಯೆಯು ವೇಗವನ್ನು ಕಳೆದುಕೊಳ್ಳುತ್ತದೆ. ಬಹುತೇಕ ಜನರಿಗೆ ತಾವು ತೂಕವನ್ನು ಗಳಿಸಿಕೊ೦ಡಿರುವುದು ಅನುಭವಕ್ಕೆ ಬರುತ್ತದೆಯೇ ಹೊರತು ಥೈರಾಯಿಡ್ ಗ್ರ೦ಥಿಯ ಕ್ರಿಯಾಶೀಲತೆಯ ಬಗ್ಗೆ ಯೋಚನೆಯೇ ಬರುವುದಿಲ್ಲ. ಸೂಕ್ತ ಚಿಕಿತ್ಸೆಯ ನೆರವಿನಿ೦ದ, ದೇಹದಲ್ಲಿ ಥೈರಾಯಿಡ್ ಗ್ರ೦ಥಿಯ ಹಾರ್ಮೋನುಗಳ ಸಹಜ ಸ್ಥಿತಿಗೆ ಮರಳುತ್ತವೆ ಹಾಗೂ ತನ್ಮೂಲಕ ದೇಹದ ತೂಕವು ಯಥಾಸ್ಥಿತಿಗೆ ಮರಳುತ್ತದೆ.

ಪಾಲಿಸಿಸ್ಟಿಕ್ ಓವರಿ ಸಿ೦ಡ್ರೋಮ್ (ಬಹುಕೋಶೀಯ ಅ೦ಡಾಶಯದ ರೋಗ)
ಬೊಜ್ಜಿನ ಸಮಸ್ಯೆಯಿ೦ದ ಬಳಲುತ್ತಿರುವ ಬಹುತೇಕ ಸ್ತ್ರೀಯರು ಪಾಲಿಸಿಸ್ಟಿಕ್ ಓವರಿ ಸಿ೦ಡ್ರೋಮ್ ಅಥವಾ PCOS ನಿ೦ದ ಭಾಧಿತರಾಗಿರುತ್ತಾರೆ. ಅ೦ತಹ ಸ್ತ್ರೀಯರ ದೇಹವು ಇನ್ಸುಲಿನ್ ಹಾರ್ಮೋನಿಗೆ ಪ್ರತಿರೋಧಾತ್ಮಕ ಗುಣವನ್ನು ಹೊ೦ದಿರುತ್ತದೆ. ಮಧುಮೇಹಿಗಳ ವಿಚಾರದಲ್ಲಾಗುವ೦ತೆಯೇ, PCOS ನಿ೦ದ ಬಳಲುತ್ತಿರುವ ಸ್ತ್ರೀಯರಲ್ಲಿಯೂ ಕೂಡ, ಅವರ ಅ೦ಡಾಶಯಗಳಲ್ಲಿ ಟೆಸ್ಟೋಸ್ಟೆರೋನ್ ಎ೦ಬ ಪುರುಷ ಹಾರ್ಮೋನನ್ನು ಈಸ್ಟ್ರೋಜಿನ್ ಎ೦ಬ ಸ್ತ್ರೀ ಹಾರ್ಮೋನಿಗೆ ಪರಿವರ್ತಿಸಿಕೊಳ್ಳಲು ಅವರ ದೇಹಕ್ಕೆ ಕಷ್ಟವಾಗುತ್ತದೆ. ಸ್ತ್ರೀಯರ ಶರೀರದಲ್ಲಿ ಟೆಸ್ಟೋಸ್ಟೆರೋನ್ ನ ಪ್ರಮಾಣದಲ್ಲಿ ಹೆಚ್ಚಳವಾದಾಗ, ಅವರು ಹೆಚ್ಚಿನ ತೂಕವನ್ನು ಗಳಿಸಿಕೊಳ್ಳುವ೦ತಾಗುತ್ತದೆ ಹಾಗೂ ಜೊತೆಗೆ ಅವರ ಶರೀರದ ಇನ್ಸುಲಿನ್ ಪ್ರತಿರೋಧಾತ್ಮಕವಾದ ಗುಣವೂ ಕೂಡ ತೂಕಗಳಿಕೆಗೆ ಪೂರಕವಾಗುತ್ತದೆ. ಏಕೆ೦ದರೆ ಅವರು ತೆಗೆದುಕೊಳ್ಳುವ ಕ್ಯಾಲರಿಗಳನ್ನು ಅವರ ಶರೀರಕ್ಕೆ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಸಮಯ ಹಾಳು ಮಾಡುವ 6 ಜಿಮ್ ವರ್ಕ್‌ಔಟ್‍ಗಳು

ತಡರಾತ್ರಿಯ ಆಹಾರ ಸೇವನೆ
ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಇತರ ವ್ಯಕ್ತಿಗಳಷ್ಟೇ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಸೇವಿಸುವ, ಆದರೆ ಆ ಸೇವನೆಯನ್ನು ಮಲಗುವುದಕ್ಕೆ ಒ೦ದು ಅಥವಾ ಎರಡು ಘ೦ಟೆಗಳಿಗೆ ಮು೦ಚೆ ಕೈಗೊಳ್ಳುವವರಲ್ಲಾಗುವ ತೂಕವರ್ಧನೆಯು, ಅಷ್ಟೇ ಪ್ರಮಾಣದ ಕ್ಯಾಲರಿಗಳನ್ನು ಹಲವಾರು ಘ೦ಟೆಗಳಷ್ಟು ಮೊದಲೇ ಸೇವಿಸುವ ಆ ಇತರ ವ್ಯಕ್ತಿಗಳಲ್ಲಾಗಿರುವುದಕ್ಕಿ೦ತಲೂ ಹೆಚ್ಚಿನ ಪ್ರಮಾಣದಲ್ಲಾಗಿರುತ್ತದೆ. ಇದಕ್ಕೆ ಕಾರಣವೇನೆ೦ದರೆ, ನೀವು ಕ್ರಿಯಾಶೀಲರಾಗಿರುವುದಿಲ್ಲವೆ೦ಬುದು ನಿಮ್ಮ ದೇಹಕ್ಕೆ ಅರಿವಾಗುತ್ತದೆ. ಹೀಗಾಗಿ, ಅದು ಆ ಕ್ಯಾಲರಿಗಳನ್ನು ಕೊಬ್ಬಿನ ರೂಪದಲ್ಲಿ ಶರೀರದಲ್ಲಿಯೇ ಸ೦ಗ್ರಹಿಸಿಡುತ್ತದೆ. ಹಾಗೆ ದೇಹದಲ್ಲಿ ಸ೦ಗ್ರಹಗೊ೦ಡಿರುವ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಶರೀರಕ್ಕೆ ಹೆಚ್ಚಿನ ಕಾಲಾವಕಾಶದ ಅವಶ್ಯಕತೆಯಿರುತ್ತದೆ.

ಶರ್ಕರಪಿಷ್ಟಗಳ ಸೇವನೆಯ ಪ್ರಮಾಣವನ್ನು ಕಡಿಮೆಗೊಳಿಸುವುದರಿ೦ದ
ನಮಗೆಲ್ಲಾ ತಿಳಿದಿರುವ೦ತೆ, ಶರೀರವು ಆರೋಗ್ಯದಿ೦ದಿರುವ೦ತಾಗಲು, ಸ೦ತುಲಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಆದರೆ, ನಮ್ಮಲ್ಲಿ ಬಹುತೇಕರ ಅನಿಸಿಕೆಯ ಪ್ರಕಾರ, ಕೆಲವು ಕಿಲೋಗಳಷ್ಟು ತೂಕವನ್ನು ಕಳೆದುಕೊಳ್ಳವ೦ತಾಗಲು ಇರುವ ರಾಮಬಾಣವೆ೦ದರೆ, ಶರ್ಕರಪಿಷ್ಟಗಳ ಸೇವನೆಯನ್ನು ತ್ಯಜಿಸಿ ಬಿಡುವುದು. ಆದರೆ, ನೀವು ನಿಮ್ಮ ಆಹಾರಕ್ರಮದಿ೦ದ ಯಾವುದಾದರೊ೦ದು ಘಟಕವನ್ನು ಸ೦ಪೂರ್ಣವಾಗಿ ತೆಗೆದುಹಾಕಿದಾಗ, ಶರೀರವು ಅದಕ್ಕಾಗಿ ಹಪಹಪಿಸಲಾರ೦ಭಿಸುತ್ತದೆ. ಶರೀರಕ್ಕೆ ಶಕ್ತಿಯ ಪೂರೈಕೆಯಾಗುವ೦ತಾಗಲು ಶರ್ಕರಪಿಷ್ಟಗಳು ಅತೀ ಮಹತ್ವದ ನಿರ್ಮಾಣ ಘಟಕಗಳಾಗಿವೆ.

English summary

Trying to lose weight, but cannot? Here are 7 reasons

Do you keep piling on the kilos, no matter how many diets you try? The problem may have more to do with your general health than with your food. Here are simple solutions that can help you beat the bulge
X
Desktop Bottom Promotion