For Quick Alerts
ALLOW NOTIFICATIONS  
For Daily Alerts

ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?

|

ಕುಚ್ಚಲಕ್ಕಿಯು ನಾವು ಸೇವಿಸುವ ಆಹಾರಗಳಲ್ಲಿಯೇ ಅತ್ಯಂತ ಪೌಷ್ಠಿಕವಾದ ಆಹಾರವಾಗಿದೆ. ಕುಚ್ಚಲಕ್ಕಿಯ ಆರೋಗ್ಯದ ಹಿತದೃಷ್ಟಿಯಿಂದ ಬಿಳಿ ಅಕ್ಕಿಗಿಂತ ಅಧಿಕವಾದ ಪೌಷ್ಠಿಕವಾದ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಕುಚ್ಚಲಕ್ಕಿಯ ಹೊರ ಸಿಪ್ಪೆಯನ್ನು ಮಾತ್ರ ತೆಗೆಯಲು ಸಂಸ್ಕರಿಸಲಾಗುತ್ತದೆ. ಆದರೂ ಈ ಪ್ರಕ್ರಿಯೆಯಲ್ಲಿ ಕೆಲವು ಭಾಗದಷ್ಟು ಮಾತ್ರ ಪೌಷ್ಠಿಕಾಂಶವು ನಾಶವಾಗುತ್ತದೆ. ಆದರೆ ಬಿಳಿ ಅಕ್ಕಿಯಲ್ಲಿ ಅದರ ಹೊರಪದರವನ್ನು ತೆಗೆಯಲು ಹಲವು ಹಂತದ ಸಂಸ್ಕರಣೆಯು ಅಗತ್ಯವಾಗಿರುತ್ತದೆ.

ಕುಚ್ಚಲಕ್ಕಿಯು ತನ್ನಲ್ಲಿರುವ ಸಕಲ ನಾರಿನಂಶವನ್ನು ಹಾಗೆಯೇ ಉಳಿಸಿಕೊಳ್ಳುವ ಮೂಲಕ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ತೂಕವನ್ನು ಇಳಿಸಿಕೊಳ್ಳಲು ಹೇಳಿ ಮಾಡಿಸಿದ ಆಹಾರವಾಗಿರುತ್ತದೆ.

ಕುಚ್ಚಲಕ್ಕಿಯಲ್ಲಿ ಹೆಚ್ಚಿನ ನಾರಿನಂಶವಿರುವ ಕಾರಣದಿಂದ ಜೀರ್ಣವಾಗಲು ಅಧಿಕ ಶಕ್ತಿ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇದು ನಿಮ್ಮ ತಿನ್ನುವ ಚಪಲವನ್ನು ನಿಯಂತ್ರಣದಲ್ಲಿಡುತ್ತದೆ. ಕುಚ್ಚಲಕ್ಕಿಯಲ್ಲಿ ನಮ್ಮ ದೈನಂದಿನ ಅಗತ್ಯಕ್ಕೆ ಬೇಕಾದಂತಹ ಶೇ.80% ರಷ್ಟು ಮ್ಯಾಂಗನೀಸ್ ಇರುತ್ತದೆ. ಇದರ ಜೊತೆಗೆ ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟಿನ್ ಇರುತ್ತದೆ. ಬಾಸುಮತಿ, ಜಾಸ್ಮೀನ್ ಮತ್ತು ಸುಶಿ ಅಕ್ಕಿಗಳು ಸಹ ಕಂದು ಬಣ್ಣದಲ್ಲಿ ಬರುತ್ತವೆ.

ಹಾಗಾಗಿ ಯಾರು ಬೇಕಾದರು ಬಿಳಿ ಅಕ್ಕಿಯಿಂದ ಈ ಕಂದು ಬಣ್ಣದ ಕುಚ್ಚಲಕ್ಕಿಗೆ ಪರಿವರ್ತನೆ ಹೊಂದಲು ಸುಲಭವಾಗುತ್ತದೆ. ಅಲ್ಲದೆ ಕುಚ್ಚಲಕ್ಕಿಯಿಂದ ಯಾವ ತಿಂಡಿ ಬೇಕಾದರು ಸಹ ಮಾಡಲು ಇದರಿಂದ ಸುಲಭವಾಗುತ್ತದೆ. ಆದರೆ ಒಂದೆ ವ್ಯತ್ಯಾಸವೆಂದರೆ ಅನ್ನ ಅಥವಾ ತಿಂಡಿಯ ಬಣ್ಣ ಕಂದು ಬಣ್ಣದಲ್ಲಿ ಇರುತ್ತದೆ. ಇಲ್ಲಿ ನಾವು ನಿಮಗಾಗಿ ಕುಚ್ಚಲಕ್ಕಿಯ ಕೆಲವು ಆರೋಗ್ಯಕಾರಿ ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿ;

ಯಥೇಚ್ಛವಾದ ಮ್ಯಾಂಗನೀಸನ್ನು ಹೊಂದಿದೆ

ಯಥೇಚ್ಛವಾದ ಮ್ಯಾಂಗನೀಸನ್ನು ಹೊಂದಿದೆ

ಒಂದು ಕಪ್ ಕುಚ್ಚಲಕ್ಕಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಶೇ.80 ರಷ್ಟು ಮ್ಯಾಂಗನೀಸ್ ಇರುತ್ತದೆ. ಇದು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ನಂತರ ಇದರಲ್ಲಿರುವ ಕಾರ್ಬೋಹೈಡ್ರೇಟ್‍ಗಳಿಂದ ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳುವುದು ತಪ್ಪುತ್ತದೆ.

ತೂಕ ಇಳಿಸಿಕೊಳ್ಳಲು ಸಹಕಾರಿ

ತೂಕ ಇಳಿಸಿಕೊಳ್ಳಲು ಸಹಕಾರಿ

ಕುಚ್ಚಲಕ್ಕಿಯ ಜನಪ್ರಿಯ ಪ್ರಯೋಜನವೆಂದರೆ ತೂಕ ಇಳಿಸಲು ಇದು ಸಹಕಾರಿ. ಇದರಲ್ಲಿರುವ ಕೊಬ್ಬನ್ನು ಕರಗಿಸುವ ಗುಣಗಳು ಮತ್ತು ಯಥೇಚ್ಛವಾದ ನಾರಿನಂಶವು ನಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ಇದನ್ನು ಸೇವಿಸಿದರೆ ಜೀರ್ಣಿಸಿಕೊಳ್ಳಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದಾಗಿ ಹೊಟ್ಟೆ ಹಸಿವಾಗುವ ಅನುಭವವಾಗುವುದು ತಡವಾಗುತ್ತದೆ. ಹಾಗಾಗಿ ನಮ್ಮ ತಿನ್ನುವ ಚಪಲಕ್ಕೆ ಇದರಿಂದ ಕಡಿವಾಣ ಬೀಳುತ್ತದೆ.

ಉತ್ತಮ ಎಣ್ಣೆಯಂಶಗಳನ್ನು ಒಳಗೊಂಡಿದೆ

ಉತ್ತಮ ಎಣ್ಣೆಯಂಶಗಳನ್ನು ಒಳಗೊಂಡಿದೆ

ಕುಚ್ಚಲಕ್ಕಿಯಲ್ಲಿ ಸ್ವಾಭಾವಿಕವಾಗಿ ಹಲವಾರು ಎಣ್ಣೆಯಂಶಗಳು ಇದ್ದು, ನಿಮ್ಮ ದೇಹಕ್ಕೆ ಇದು ಉತ್ತಮವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಸ್ವಾಭಾವಿಕವಾದ ಎಣ್ಣೆಗಳು ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಸಾಮಾನ್ಯ ಮಟ್ಟಕ್ಕೆ ಇಳಿಸಿ, ನಿಯಂತ್ರಣದಲ್ಲಿಡುತ್ತವೆ.

ಹೃದಯಕ್ಕೆ ಉತ್ತಮ

ಹೃದಯಕ್ಕೆ ಉತ್ತಮ

ಕುಚ್ಚಲಕ್ಕಿಯು ಒಂದು ವಿಧವಾದ ಹೋಲ್ ಗ್ರೇನ್ ಆಗಿದ್ದು, ಸಂಸ್ಕರಣೆಯ ಹಂತದಲ್ಲಿ ಯಾವುದೇ ಬಗೆಯ ಪೋಷಕಾಂಶದ ಕೊರತೆಯ ಭಯ ಇದಕ್ಕೆ ತಟ್ಟುವುದಿಲ್ಲ. ಇದರ ಈ ಪರಿಪೂರ್ಣ ಗುಣವು ರಕ್ತನಾಳಗಳನ್ನು ಸದೃಢಗೊಳಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗು ಹೃದ್ರೋಗವನ್ನು ತಡೆಯುತ್ತದೆ.

ಅಂಟಿ- ಆಕ್ಸಿಡೆಂಟ್

ಅಂಟಿ- ಆಕ್ಸಿಡೆಂಟ್

ಹಲವಾರು ಅಧ್ಯಯನಗಳ ಪ್ರಕಾರ ಕುಚ್ಚಲಕ್ಕಿಯು ಅತ್ಯುತ್ತಮವಾದ ಅಂಟಿ-ಆಕ್ಸಿಡೆಂಟ್ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರಲ್ಲಿರುವ ಫೈಟೊನ್ಯೂಟ್ರಿಯೆಂಟ್‍ಗಳ ಸಲುವಾಗಿ ಇದರಲ್ಲಿ ಈ ಗುಣಗಳು ಬಂದಿವೆ, ಹೀಗಾಗಿ ಇದೊಂದು ಪರಿಪೂರ್ಣ ಧಾನ್ಯವಾಗಿದೆ. ಕುಚ್ಚಲಕ್ಕಿಯಲ್ಲಿರುವ ಅಂಟಿ ಆಕ್ಸಿಡೆಂಟ್‍ಗಳು ಹಲವಾರು ರೋಗರುಜಿನಗಳನ್ನು ತಡೆಯುವುದರ ಜೊತೆಗೆ, ವಯಸ್ಸಾಗುವುದನ್ನು ಸಹ ತಡೆಯುತ್ತದೆ.

ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಕುಚ್ಚಲಕ್ಕಿಯಲ್ಲಿ ಮ್ಯಗ್ನಿಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ದೇಹದಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಸ್ರವಿಕೆಯಲ್ಲಿ ಪಾಲ್ಗೊಳ್ಳುವ ಸುಮಾರು 300 ಕಿಣ್ವಗಳನ್ನು ಉತ್ಪತಿ ಮಾಡಲು ಸಹಕರಿಸುತ್ತದೆ. ಕಾರ್ಬೋಹೈಡ್ರೇಟ್‍ಗಳ ಸಮೃದ್ಧ ಆಗರವಾಗಿರುವ ಈ ಕುಚ್ಚಲಕ್ಕಿಯು ನಮ್ಮ ದೇಹಕ್ಕೆ ಅಗತ್ಯವಾದ ಪರಿಪೂರ್ಣ ಆಹಾರವನ್ನು ಒದಗಿಸುತ್ತದೆ. ಇದು ಇತರೆ ಅಕ್ಕಿ ಮತ್ತು ಧಾನ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ಮೂಳೆಗಳಿಗೆ ಉತ್ತಮ

ಮೂಳೆಗಳಿಗೆ ಉತ್ತಮ

ಕುಚ್ಚಲಕ್ಕಿಯಲ್ಲಿ ಮ್ಯಗ್ನಿಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಕ್ಯಾಲ್ಸಿಯಂ ಅನ್ನು ಸಮತೋಲನದಲ್ಲಿಡುವ ಮೂಲಕ ನರಗಳಿಗೆ ಮತ್ತು ಸ್ನಾಯುಗಳಿಗೆ ಆಕರ್ಷಕ ರೂಪವನ್ನು ತಂದು ನೀಡುತ್ತದೆ. ಮ್ಯಗ್ನಿಶಿಯಂ ಮತ್ತು ಕ್ಯಾಲ್ಸಿಯಂ ಎರಡೂ ಮೂಳೆಗಳ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿರುವ ವಸ್ತುಗಳು. ನಮ್ಮ ದೇಹದಲ್ಲಿನ ಮೂರನೆಯ ಎರಡು ಭಾಗದಷ್ಟು ಮ್ಯಗ್ನಿಶಿಯಂ ಮೂಳೆಗಳಲ್ಲಿಯೇ ಅಡಕಗೊಂಡಿರುತ್ತವೆ.

ಹಸುಗೂಸುಗಳಿಗೆ ಮತ್ತು ಮಕ್ಕಳಿಗೆ ಅತ್ಯುತ್ತಮ ಆಹಾರ

ಹಸುಗೂಸುಗಳಿಗೆ ಮತ್ತು ಮಕ್ಕಳಿಗೆ ಅತ್ಯುತ್ತಮ ಆಹಾರ

ಕುಚ್ಚಲಕ್ಕಿಯಲ್ಲಿ ಮತ್ತು ಕುಚ್ಚಲಕ್ಕಿಯ ಸರಿಯಲ್ಲಿ ಮಕ್ಕಳಿಗೆ ಬೇಕಾಗಿರುವ ಅತ್ಯಾವಶ್ಯಕ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ಸಂಸ್ಕರಿಸದಿದ್ದರು ಸಹ ಇದರಲ್ಲಿ ಯಥೇಚ್ಛವಾಗಿ ಪೋಷಕಾಂಶಗಳು ಮತ್ತು ನಾರಿನಂಶಗಳು ಇರುತ್ತವೆ. ಅದರಲ್ಲೂ ವೇಗವಾಗಿ ಬೆಳೆಯುವ ಮಕ್ಕಳ ಮತ್ತು ಹಸುಗೂಸುಗಳ ಪೋಷಕಾಂಶಗಳ ಅಗತ್ಯತೆಯನ್ನು ಪೂರೈಸಲು ಕುಚ್ಚಲಕ್ಕಿಯು ಹೇಳಿ ಮಾಡಿಸಿದ ಆಹಾರಾವಾಗಿದೆ. ಕುಚ್ಚಲಕ್ಕಿಯನ್ನು ಸೇವಿಸುವುದರಿಂದಾಗಿ ಅಸ್ತಮಾ ಬರುವ ಸಾಧ್ಯತೆಯನ್ನು ಶೇ.50ರಷ್ಟು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ.

English summary

Health benefits of brown rice

Brown rice makes any average rice user to switch from white to brown easily as major dishes prepared with white rice can be done with brown variety. Here are a few heath benefits of brown rice
X
Desktop Bottom Promotion