For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲವೊಂದು ಸಲಹೆಗಳು

By Hemanth P
|

ಪ್ರತಿನಿತ್ಯ ನಾವು ಸವೆಸುವ ಅತ್ಯಂತ ಒತ್ತಡದ ಜೀವನಕ್ಕೆ ಪ್ರತಿಯಾಗಿ ನಮ್ಮ ದೇಹವು ಕಟ್ಟುತ್ತಿರುವ ಸುಂಕವೆಂದರೆ ಅದು ಕೆಟ್ಟ ಆರೋಗ್ಯ. ಇಂದಿನ ವ್ಯಸ್ತ ಹಾಗೂ ಒತ್ತಡದಲ್ಲಿ ಪ್ರತಿಯೊಬ್ಬರು ಯಾವುದಾದರೂ ಒಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಡಯಾಬಿಟಿಸ್, ಬೊಜ್ಜು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ತುಂಬಾ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ.

ಕಚೇರಿಯಲ್ಲಿ ಕೇವಲ ಕುರ್ಚಿ ಬಿಸಿಮಾಡುವುದನ್ನು ಬಿಟ್ಟರೆ ಬೇರೇನೂ ಮಾಡದಂತಹ ಜಡಜೀವನವು ಇದಕ್ಕೆ ಕಾರಣವಾಗಿದೆ. ಮಕ್ಕಳು ಮತ್ತು ವಯಸ್ಕರು ಸ್ವಲ್ಪ ಸಮಯ ತೆಗೆದುಕೊಂಡು ಹೊರಗಡೆ ಆಟವಾಡಬೇಕು ಅಥವಾ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕೈಯಲ್ಲಿ ಬಟಾಟೆ ಚಿಪ್ಸ್ ಹಿಡಿದುಕೊಂಡು ಗಂಟೆಗಟ್ಟಲೆ ಟಿವಿ ನೋಡುವುದು, ಕಂಪ್ಯೂಟರ್ ನಲ್ಲಿ ಗೇಮ್ಸ್ ಆಡುವುದು ಅಥವಾ ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವುದು ಸರಿಯಲ್ಲ.

ಹಾಗಿದ್ದರೆ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುವುದು ಹೇಗೆ ಮತ್ತು ಈ ಗುಮ್ಮನನ್ನು ಹೊದ್ದೋಡಿಸುವುದು ಹೇಗೆ? ಕೆಳಗೆ ಪಟ್ಟಿ ಮಾಡಲಾಗಿರುವ ಕೆಲವೊಂದು ಮಹತ್ವದ ಟಿಪ್ಸ್ ಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯ ರೋಗದ ಸಾಧ್ಯತೆ ಕಡಿಮೆ ಮಾಡಬಹುದು.

ಕೊಲೆಸ್ಟ್ರಾಲ್ ಕಡಿಮೆ ಮಾಡುವ 10 ಆಹಾರಗಳು

ತೂಕ ಇಳಿಸಲು ಪ್ರಯತ್ನಿಸಿ.

ತೂಕ ಇಳಿಸಲು ಪ್ರಯತ್ನಿಸಿ.

ಇದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಅತ್ಯುತ್ತಮ ವಿಧಾನ. ಆರೋಗ್ಯಕರ ತಿನ್ನುವ ವಾಡಿಕೆ ಅಳವಡಿಸಿ. ಚಾ, ಕಾಫಿ ಮತ್ತು ಫಾಸ್ಟ್ ಫುಡ್ ನಂತಹ ಆಹಾರ ಸೇವನೆ ಕಡಿಮೆ ಮಾಡಿ ಮತ್ತು ನೈಸರ್ಗಿಕ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರಗಳನ್ನು ತಿನ್ನಿ. ತಾಜಾ ಹಣ್ಣುಗಳು, ಬೀನ್ಸ್ ಮತ್ತು ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಇದನ್ನು ಪಾಲಿಸಿದರೆ ಮುಂದಿನ ಕೆಲವೇ ದಿನಗಳಲ್ಲಿ ನಿಮ್ಮ ತೂಕ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ವ್ಯತ್ಯಾಸ ಕಾಣಬಹುದು.

ವ್ಯಾಯಾಮ ಮಾಡುವುದು

ವ್ಯಾಯಾಮ ಮಾಡುವುದು

ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲು ಮತ್ತೊಂದು ಅಗ್ಗ ಮತ್ತು ಸುಲಭದ ವಿಧಾನವೆಂದರೆ ಅದು ವ್ಯಾಯಾಮ. ದಿನಾಲೂ ಕನಿಷ್ಠ 30 ನಿಮಿಷ ನಡೆಯುವುದರಿಂದ ನೀವು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು. ಲಿಫ್ಟ್ ಅಥವಾ ಎಲಿವೇಟರ್ ಬಳಸಬೇಡಿ. ಅದರ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. ಯಾವುದಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಈ ಸಣ್ಣ ಹೆಜ್ಜೆಗಳಿಂದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ನೆರವಾಗುತ್ತದೆ.

ಕೊಬ್ಬಿನಾಮ್ಲ ಅಧಿಕವಿರುವ ಆಹಾರಗಳನ್ನು ಬಳಸಿ

ಕೊಬ್ಬಿನಾಮ್ಲ ಅಧಿಕವಿರುವ ಆಹಾರಗಳನ್ನು ಬಳಸಿ

ಕೆಟ್ಟ ಕೊಲೆಸ್ಟ್ರಾಲ್ ನ್ನು ಅತ್ಯುತ್ತಮ ರೀತಿಯಲ್ಲಿ ನಿಯಂತ್ರಿಸಲು ಒಮೆಗಾ-3 ಕೊಬ್ಬಿನಾಮ್ಲ ಅಧಿಕವಿರುವ ಆಹಾರಗಳನ್ನು ಬಳಸಿ. ನೀವು ಮೀನನ್ನು ಪ್ರೀತಿಸುತ್ತಿದ್ದರೆ ಸಾಲ್ಮೊನ್, ಟುನಾ ಮತ್ತು ಬಂಗುಡೆ ತಿನ್ನಿ. ಇದರಲ್ಲಿನ ಒಮೆಗಾ-3 ಕೊಬ್ಬಿನಾಮ್ಲವು ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ, ಹಾಲು ಮತ್ತು ಆಕ್ರೋಟಾದಲ್ಲೂ ಈ ಅಂಶವು ಸಮೃದ್ಧವಾಗಿದೆ.

ಕೊಬ್ಬಿನ ಆಹಾರಗಳಿಂದ ದೂರವಿರಿ

ಕೊಬ್ಬಿನ ಆಹಾರಗಳಿಂದ ದೂರವಿರಿ

ಕೊಬ್ಬಿನ ಆಹಾರಗಳಾದ ಕುಕ್ಕೀಸ್ ಮತ್ತು ಫ್ರೈಸ್ ನಲ್ಲಿ ಟ್ರಾನ್ಸ್ ಫ್ಯಾಟ್ ಹೆಚ್ಚಿರುತ್ತದೆ. ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇದನ್ನು ಕಡಿಮೆ ಮಾಡಿ. ನೀವು ಇಂತಹ ಯಾವುದೇ ಆಹಾರವನ್ನು ಖರೀದಿಸುವ ಮೊದಲು ಅದಕ್ಕೆ ಬಳಸಲಾಗಿರುವ ಪದಾರ್ಥಗಳನ್ನು ತಿಳಿದುಕೊಳ್ಳಬಹುದು. ಇದರಲ್ಲಿ ಟ್ರಾನ್ಸ್ ಫ್ಯಾಟ್ ಇದೆಯೆಂದು ಬರೆದಿದ್ದರೆ ಅದರಿಂದ ದೂರವಿರಿ.

ಈರುಳ್ಳಿ

ಈರುಳ್ಳಿ

ಈರುಳ್ಳಿ ಕುಟುಂಬದ ಸದಸ್ಯರಾದ ಎಳಸು ಈರುಳ್ಳಿ, ಬೆಳ್ಳುಳ್ಳಿ ಮತ್ತು ಸಾಮಾನ್ಯ ಈರುಳ್ಳಿ ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಮ್ಮ ಆಹಾರ ಅಥವಾ ಸಲಾಡ್ ಗಳಲ್ಲಿ ಬಳಸಿ. ಸಾಧ್ಯವಾದಷ್ಟು ಮಟ್ಟಿಗೆ ಬೆಳ್ಳುಳ್ಳಿ ಬಳಸಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ.

ಆಲೀವ್ ಎಣ್ಣೆ ಮತ್ತು ಕ್ಯಾನೊಲಾ ಎಣ್ಣೆ ಬಳಸಿ

ಆಲೀವ್ ಎಣ್ಣೆ ಮತ್ತು ಕ್ಯಾನೊಲಾ ಎಣ್ಣೆ ಬಳಸಿ

ತರಕಾರಿ ಎಣ್ಣೆ, ಗಿಣ್ಣು, ಬೆಣ್ಣೆಯನ್ನು ಬದಲಾಯಿಸಿ ಮತ್ತು ಇದರ ಬದಲಿಗೆ ಆಲೀವ್ ಎಣ್ಣೆ ಮತ್ತು ಕ್ಯಾನೊಲಾ ಎಣ್ಣೆ ಬಳಸಿ. ಈ ಪದಾರ್ಥಗಳನ್ನು ನಿಮ್ಮ ಆಹಾರದ ತಯಾರಿ ಮತ್ತು ಸಲಾಡ್ ಗಳ ಅಲಂಕಾರಕ್ಕೆ ಬಳಸಿ. ಇದರಿಂದ ನಿಮ್ಮ ಹೃದಯಕ್ಕೆ ಅತ್ಯಾದ್ಭುತ ಲಾಭವಿದೆ.

ಧೂಮಪಾನ ತ್ಯಜಿಸಿ

ಧೂಮಪಾನ ತ್ಯಜಿಸಿ

ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶಕ್ಕೆ ತುಂಬಾ ಕೆಟ್ಟದ್ದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಉಂಟುಮಾಡುತ್ತದೆ.

English summary

Fitness tips to balance cholesterol

The stressful lifestyle that we are exposed to on a daily basis, have started taking its toll on this generations health for bad So how to control cholesterol and go about taming this monster? Listed below, u will find some time tested tips to lower down your cholesterol levels and reduce the chances of heart ailments.
Story first published: Tuesday, June 10, 2014, 14:51 [IST]
X
Desktop Bottom Promotion