For Quick Alerts
ALLOW NOTIFICATIONS  
For Daily Alerts

ಕೇವಲ ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ?

By deepak M
|

ತೂಕ ಇಳಿಸಿಕೊಳ್ಳುವ ವಿಚಾರಕ್ಕೆ ಬಂದರೆ ನಾವೆಲ್ಲರು ಡಯಟ್ ಪಾಲಿಸಲು ವಿಫಲವಾಗುವುದಿಲ್ಲವೆ? ಅದೇ ಒಂದು ವಾರದ ಒಳಗಾಗಿ ನಿಮ್ಮ ಎಲ್ಲಾ ಹೆಚ್ಚುವರಿ ಪೌಂಡ್‍ಗಳು ಕರಗಿ ಹೋಗಿ ನೀವು ಮತ್ತಷ್ಟು ಆರೋಗ್ಯಕರವಾಗಿ ಮತ್ತು ಫಿಟ್‍ ಆಗಿ ಇರಲು ಸಾಧ್ಯವಾದರೆ ಒಳ್ಳೆಯದಲ್ಲವೆ?

ಹೌದು!! ವಾರದೊಳಗೆ ತೂಕವನ್ನು ಇಳಿಸಿಕೊಳ್ಳುವ ಡಯಟ್ ಯೋಜನೆ ಇಲ್ಲಿ ನಾವು ನಿಮಗಾಗಿ ಡಯಟ್‌ನ ಸರಳವಾದ 25 ಸೂತ್ರಗಳ ಯೋಜನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ: ಇವುಗಳನ್ನು ಪಾಲಿಸಿ, ತೂಕ ಇಳಿಸಿಕೊಳ್ಳಿ. ಹಾಗಾದರೆ ಇನ್ನೇಕೆ ತಡ ? ಕೆಲವೊಂದು ಸರಳವಾದ ಡಯಟ್ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ. ಕೇವಲ ಒಂದೇ ದಿನಗಳಲ್ಲಿ ತೂಕಗಳನ್ನು ಕಡಿಮೆಗೊಳಿಸಲು ಬಯಸುವವರು ಖಂಡಿತವಾಗಿಯೂ ಇಂತಹ ಸಲಹೆಗಳನ್ನು ತಪ್ಪದೇ ಪಾಲಿಸಲೇಬೇಕು.

ತೂಕ ಇಳಿಸಿಕೊಳ್ಳಲು ಆಯುರ್ವೇದ ಸೂಚಿಸುವ ಸುಲಭ ವಿಧಾನಗಳು

ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ

ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ

ಪ್ರೋಟೀನ್ ಸಹಾಯದಿಂದ ಮಾಂಸಖಂಡಗಳನ್ನು ವೃದ್ಧೀಕರಿಸುವುದರಿಂದ ಶರೀರದ ಕೊಬ್ಬಿನಾಂಶವನ್ನು ಕಡಿಮೆಮಾಡಲು ಸಹಾಯವಾಗುತ್ತದೆ. ಅದು ಬಿಡಿ ಬಿಡಿಯಾಗಿರುವ ಕೊಬ್ಬನ್ನು ಸ್ನಾಯುಗಳನ್ನಾಗಿ ಪರಿವರ್ತಿಸುತ್ತದೆ. ಆದ್ದರಿಂದ ತಿನ್ನುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಇರುವ ಆಹಾರವನ್ನು ಬದಲಿಸಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿ ನಿಮ್ಮ ತೂಕವನ್ನು ಇಳಿಸಿಕೊಳ್ಳಿ.

ನೀರನ್ನು ಹೆಚ್ಚಿಗೆ ಸೇವಿಸಿ

ನೀರನ್ನು ಹೆಚ್ಚಿಗೆ ಸೇವಿಸಿ

ನೀರು ತೂಕವನ್ನು ಕರಗಿಸುವಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ. ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯು ಯಾವಾಗಲು ತುಂಬಿದ ಅನುಭವವನ್ನು ನೀಡುತ್ತದೆ. ಪ್ರತಿದಿನ ಅತ್ಯಗತ್ಯವಾಗಿ 4 ರಿಂದ 5 ಲೀಟರ್ ನೀರನ್ನು ಸೇವಿಸುವುದು ಅತ್ಯಗತ್ಯವೆಂಬುದನ್ನು ಮರೆಯಬೇಡಿ. ಇದು ವಾರದಲ್ಲಿ ತೂಕವನ್ನು ಕರಗಿಸಿಕೊಳ್ಳಲು ಇರುವ ಸೂತ್ರಗಳಲ್ಲಿಯೇ ಅತ್ಯಂತ ಪ್ರಮುಖ ಸೂತ್ರವೆಂಬುದನ್ನು ಮರೆಯಬೇಡಿ.

ಯಾವುದೇ ಕಾರಣಕ್ಕು ಒಂದು ಊಟವನ್ನು ಬಿಡಬೇಡಿ

ಯಾವುದೇ ಕಾರಣಕ್ಕು ಒಂದು ಊಟವನ್ನು ಬಿಡಬೇಡಿ

ಊಟವನ್ನು ಬಿಟ್ಟು ಉಪವಾಸ ಕೂರುವುದರಿಂದ ತೂಕವನ್ನು ಇಳಿಸಿಕೊಳ್ಳಲು ಆಗುವುದಿಲ್ಲ! ನೀವು ಊಟವನ್ನು ಬಿಡುವುದರಿಂದ ನಿಮಗೆ ಹಸಿವಾಗುತ್ತದೆ. ಇದರಿಂದಾಗಿ ನೀವು ಮುಂದೆ ಸೇವಿಸುವ ಊಟವು ಮತ್ತಷ್ಟು ಹೆಚ್ಚಾಗುವ ಸಂಭವ ಅಧಿಕವಾಗಿರುತ್ತದೆ.

ಪ್ರತಿದಿನ ವ್ಯಾಯಾಮ ಮಾಡಿ

ಪ್ರತಿದಿನ ವ್ಯಾಯಾಮ ಮಾಡಿ

ಟಿವಿ ಮುಂದೆ ಕೂರುವುದರಿಂದ ನಿಮ್ಮ ತೂಕವು ಕರಗಿ ಹೋಗುವುದಿಲ್ಲ! ಮೊದಲು ಎದ್ದೇಳಿ ವರ್ಕ್‍ಔಟ್ ಮಾಡಿ. ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸಬಹುದು. ತೂಕವನ್ನು ಶೀಘ್ರವಾಗಿ ಇಳಿಸಿಕೊಳ್ಳಲು ದಿನಕ್ಕೆ ಎರಡು ಬಾರಿ ವರ್ಕ್ ಔಟ್ ಮಾಡಿ. ಇದಕ್ಕಾಗಿ ನೀವು ಜಿಮ್‍ಗೇ ಹೋಗಬೇಕು ಎಂದೆನಿಲ್ಲ. ನಿಮಗೆ ಸೂಕ್ತವಾಗುವ ಹೋಮ್ ವೀಡಿಯೊ ಅಥವ ಯೋಗ ಅಥವಾ ಇನ್ನಿತರ ಯಾವುದೇ ನಿಮ್ಮ ನೆಚ್ಚಿನ ವರ್ಕ್‍ಔಟ್‍ನಲ್ಲಿ ತೊಡಗಿಸಿಕೊಳ್ಳಿ!

ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬೇಡಿ

ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬೇಡಿ

ಬೇಡವೇ ಬೇಡ! ಕಾರ್ಬೋನೇಟೆಡ್ ಪಾನೀಯಗಳನ್ನು ಯಾವುದೇ ಕಾರಣಕ್ಕು ಸೇವಿಸಬೇಡಿ. ಇದರಲ್ಲಿರುವ ಸೋಡಾಗಳು ನಿಮ್ಮ ದೇಹದ ತೂಕವನ್ನು ಹೆಚ್ಚಿಸುತ್ತವೆಯೆಂದು ಅಧ್ಯಯನದಿಂದ ಸಾಭೀತಾಗಿದೆ.

ನಿಮ್ಮ ಡಯಟ್‌ಗೆ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಿ

ನಿಮ್ಮ ಡಯಟ್‌ಗೆ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಿ

ಕರಿದ ತಿಂಡಿಗಳ ಹಾಗು ಕುರುಕಲು ತಿಂಡಿಗಳ ಬದಲಿಗೆ ಹಣ್ಣು ಮತ್ತು ತರಕಾರಿಗಳನ್ನು ನಿಮ್ಮ ಡಯಟ್‍ನಲ್ಲಿ ಸೇರಿಸಿಕೊಳ್ಳಿ. ಹಣ್ಣು ಮತ್ತು ತರಕಾರಿಗಳಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಹಣ್ಣು ಮತ್ತು ತರಕಾರಿಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ, ಇವು ನಮ್ಮ ದೇಹಕ್ಕೆ ಅತ್ಯಗತ್ಯ ಎಂಬುದನ್ನು ಮರೆಯಬಾರದು.

ಊಟ ಮಾಡುವಾಗ ಹೆಚ್ಚು ಸೇವಿಸುವುದನ್ನು ಕಡಿಮೆ ಮಾಡಿ

ಊಟ ಮಾಡುವಾಗ ಹೆಚ್ಚು ಸೇವಿಸುವುದನ್ನು ಕಡಿಮೆ ಮಾಡಿ

ಯಾವಾಗಲಾದರು ಊಟ ಮಾಡುವಾಗ ನಿಮ್ಮ ಹೊಟ್ಟೆ ಹೊಡೆದು ಹೋಗಬಹುದಾದ ಅನುಭವ ನಿಮಗಾಗಿದೆಯೇ? ನಿಮ್ಮ ಹೊಟ್ಟೆ ತುಂಬುವ ಹಾಗೆ ಸೇವಿಸಲು ಹೋಗಬೇಡಿ. ಜೋರಾಗಿ ತೇಗುವ ಮುನ್ನ ನಿಮ್ಮ ಊಟವನ್ನು ನಿಲ್ಲಿಸಿಬಿಡಿ.

ಹೆಚ್ಚು ನಾರು ಮತ್ತು ಕಡಿಮೆ ಕಾರ್ಬೊಹೈಡ್ರೇಟ್‍ಗಳು

ಹೆಚ್ಚು ನಾರು ಮತ್ತು ಕಡಿಮೆ ಕಾರ್ಬೊಹೈಡ್ರೇಟ್‍ಗಳು

ನಿಮ್ಮ ಊಟದಲ್ಲಿ ಹೆಚ್ಚು ನಾರಿನಂಶ ಮತ್ತು ಕಡಿಮೆ ಕಾರ್ಬೊಹೈಡ್ರೇಟ್‍ಗಳು ಇರುವ ಹಾಗೆ ನೋಡಿಕೊಳ್ಳಿ. ನಾರಿನಂಶವು ಜೀರ್ಣಾಂಗ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಹೊರದಬ್ಬುತ್ತದೆ. ಇದು ವಾರದಲ್ಲಿ ತೂಕವನ್ನು ಇಳಿಸಿಕೊಳ್ಳಲು ಹೋಗುವವರು ಮುಖ್ಯವಾಗಿ ಗಮನಿಸಬೇಕಾದ ಅಂಶವಾಗಿದೆ.

ನಿಮ್ಮ ಡಯಟ್‌ಗೆ ತಾಜಾ ತರಕಾರಿ ಸೂಪ್ ಸೇರಿಸಿ

ನಿಮ್ಮ ಡಯಟ್‌ಗೆ ತಾಜಾ ತರಕಾರಿ ಸೂಪ್ ಸೇರಿಸಿ

ಅಧ್ಯಯನಗಳ ಪ್ರಕಾರ ತಾಜಾ ಸೂಪ್‍ಗಳನ್ನು ನಿಮ್ಮ ಡಯಟ್‍ನಲ್ಲಿ ಸೇರಿಸಿಕೊಳ್ಳುವುದರಿಂದ, ನೀವು ಸೇವಿಸುವ ಕ್ಯಾಲೊರಿ ಪ್ರಮಾಣವನ್ನು ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ತೂಕವು ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ.

ನೀವು ಸೇವಿಸುವ ಕ್ಯಾಲೊರಿಗಳನ್ನು ಲೆಕ್ಕ ಹಾಕಿ

ನೀವು ಸೇವಿಸುವ ಕ್ಯಾಲೊರಿಗಳನ್ನು ಲೆಕ್ಕ ಹಾಕಿ

ನೀವು ಪ್ರತಿದಿನ ಸೇವಿಸುವ ಕ್ಯಾಲೊರಿಗಳನ್ನು ಲೆಕ್ಕ ಹಾಕಿ. ಅದರಲ್ಲು ಹೈನು ಉತ್ಪನ್ನಗಳನ್ನು ಸೇವಿಸುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ಮತ್ತಷ್ಟು ಉತ್ಪನ್ನ.

ಸರಿಯಾಗಿ ನಿದ್ರೆಯನ್ನು ಮಾಡಿ

ಸರಿಯಾಗಿ ನಿದ್ರೆಯನ್ನು ಮಾಡಿ

ರಾತ್ರಿಯ ಹೊತ್ತು ಸರಿಯಾಗಿ ನಿದ್ದೆಯು ನಿಮಗೆ ಅಗತ್ಯವಾದ ಕಾರ್ಯವನ್ನು ಮಾಡಿ ಮುಗಿಸುತ್ತದೆ. 8 ಗಂಟೆಗಳ ನಿದ್ದೆಯನ್ನು ಪ್ರತಿದಿನ ಮಾಡಿ. ಒಳ್ಳೆಯ ನಿದ್ದೆಯು ಒಳ್ಳೆಯ ಜೀರ್ಣಕ್ರಿಯೆಗೆ ಸಹಕರಿಸುತ್ತದೆ ಮತ್ತು ಒಳ್ಳೆಯ ಜೀರ್ಣಕ್ರಿಯೆಯು ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.

ನಿಮ್ಮ ಡಯಟ್‍ಗೆ ಪ್ರೋಟಿನ್ ಭರಿತ ಆಹಾರಗಳನ್ನು ಸೇರಿಸಿ

ನಿಮ್ಮ ಡಯಟ್‍ಗೆ ಪ್ರೋಟಿನ್ ಭರಿತ ಆಹಾರಗಳನ್ನು ಸೇರಿಸಿ

ಪ್ರೋಟಿನ್ ಭರಿತ ಆಹಾರವು ಸ್ನಾಯುಗಳನ್ನು ಬೆಳೆಸುತ್ತದೆ. ನಾವು ವ್ಯಾಯಾಮ ಮಾಡಿದಾಗ ಕೊಬ್ಬು ಅನಾಯಾಸವಾಗಿ ಸ್ನಾಯುಗಳಾಗಿ ಪರಿವರ್ತನೆಯಾಗುತ್ತದೆ. ಅದಕ್ಕಾಗಿ ನಿಮ್ಮ ಆಹಾರದಲ್ಲಿ ಪ್ರೋಟಿನ್‍ಗಳು ಅಧಿಕವಾಗಿರುವ ಹಾಗೆ ನೋಡಿಕೊಳ್ಳಿ.

3 ಊಟಗಳ ಬದಲಿಗೆ 5 ರಿಂದ 6 ಸಣ್ಣ ಊಟಗಳನ್ನು ಮಾಡಿ?

3 ಊಟಗಳ ಬದಲಿಗೆ 5 ರಿಂದ 6 ಸಣ್ಣ ಊಟಗಳನ್ನು ಮಾಡಿ?

ದಿನದಲ್ಲಿ 3 ಊಟಗಳನ್ನು ಮಾಡಬೇಡಿ ಅದರ ಬದಲಿಗೆ 5 ರಿಂದ 6 ಸಣ್ಣ ಊಟಗಳನ್ನು ಮಾಡಿ. ಈ ಆಹಾರಗಳಲ್ಲಿ ಕಡಿಮೆ ಕ್ಯಾಲೊರಿಗಳು ಇರುವುದನ್ನು ಖಾತ್ರಿಪಡಿಸಿಕೊಂಡ ಮೇಲೆಯೆ ಅದನ್ನು ಸೇವಿಸಿ.

ಕುರುಕಲು ತಿಂಡಿ ತಿನ್ನುವುದನ್ನು ಬಿಡಿ

ಕುರುಕಲು ತಿಂಡಿ ತಿನ್ನುವುದನ್ನು ಬಿಡಿ

ತಿನ್ನುವ ಚಪಲವು ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಅಭಿಲಾಷೆಯ ಶತ್ರುಗಳು. ಸುಮಾರು ಜನರು ತಮ್ಮ ತಿನ್ನುವ ಚಪಲವನ್ನು ನಿಯಂತ್ರಿಸಿಕೊಳ್ಳಲಾರದೆ ಜಂಕ್ ಫುಡ್ ತಿನ್ನುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ. ನಿಮಗೆ ನಿಜಕ್ಕು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಾದಲ್ಲಿ ಮೊದಲು ಕುರುಕಲು ತಿಂಡಿ ತಿನ್ನುವುದನ್ನು ಬಿಡಿ!

ನಿಮ್ಮ ವ್ಯಾಯಾಮದ ನಂತರ ಊಟ ಮಾಡಿ

ನಿಮ್ಮ ವ್ಯಾಯಾಮದ ನಂತರ ಊಟ ಮಾಡಿ

ನಿಮ್ಮ ವ್ಯಾಯಾಮ ಮುಗಿದ ನಂತರ ಊಟವನ್ನು ಸೇವಿಸಿ. ಒಂದು ವೇಳೆ ನೀವು ಪ್ರತಿದಿನ ವ್ಯಾಯಾಮ ಮಾಡುವಂತಿದ್ದಲ್ಲಿ ವ್ಯಾಯಾಮ ಮುಗಿದ ನಂತರ ಉಪಾಹಾರವನ್ನು ಮಾಡಿ.

ನಿಮ್ಮ ತಟ್ಟೆಯ ಗಾತ್ರವನ್ನು ಕಡಿಮೆ ಮಾಡಿ

ನಿಮ್ಮ ತಟ್ಟೆಯ ಗಾತ್ರವನ್ನು ಕಡಿಮೆ ಮಾಡಿ

ದೊಡ್ಡ ತಟ್ಟೆಯೆಂದರೆ ದೊಡ್ಡ ಮಟ್ಟದ ಕ್ಯಾಲೊರಿಗಳು ಎಂದರ್ಥ. ಅದಕ್ಕಾಗಿ ಚಿಕ್ಕ ತಟ್ಟೆಯಲ್ಲಿ ಆಹಾರವನ್ನು ಸೇವಿಸಿ, ಯಾವ ಕಾರಣಕ್ಕು ತಟ್ಟೆ ತುಂಬಾ ಆಹಾರವನ್ನು ಹಾಕಿಕೊಳ್ಳಬೇಡಿ!

ಎಣ್ಣೆಯಲ್ಲಿ ಕರಿದ ತಿಂಡಿಯನ್ನು ನಿಯಂತ್ರಿಸಿ

ಎಣ್ಣೆಯಲ್ಲಿ ಕರಿದ ತಿಂಡಿಯನ್ನು ನಿಯಂತ್ರಿಸಿ

ಎಣ್ಣೆಯಲ್ಲಿ ಕರಿದ ತಿಂಡಿಗಳಲ್ಲಿ ಕ್ಯಾಲೊರಿಗಳು ಅಧಿಕವಾಗಿರುತ್ತವೆ. ಆದ್ದರಿಂದ ಕರಿದ ತಿಂಡಿಗಳನ್ನು ಸೇವಿಸುವುದನ್ನು ನಿಯಂತ್ರಿಸಿ.

ಆಲೂಗಡ್ಡೆಯನ್ನು ಸೇವಿಸುವುದನ್ನು ನಿಯಂತ್ರಿಸಿ

ಆಲೂಗಡ್ಡೆಯನ್ನು ಸೇವಿಸುವುದನ್ನು ನಿಯಂತ್ರಿಸಿ

ಆಲುಗಡ್ಡೆಯನ್ನು ಸೇವಿಸುತ್ತ ತೂಕವನ್ನು ಇಳಿಸಿಕೊಳ್ಳುತ್ತೇವೆ ಮತ್ತು ಡಯಟ್ ಮಾಡುತ್ತೇವೆ ಎಂಬುದು ಸಾಧ್ಯವೇ ಇಲ್ಲ. ನೀವು ಡಯಟ್ ಮಾಡುವಾಗ ಯಾವುದೇ ಕಾರಣಕ್ಕು ಆಲೂಗಡ್ಡೆಯನ್ನು ಸೇವಿಸಬೇಡಿ. ಆಲೂಗಡ್ಡೆಗಳಲ್ಲಿ ಕಾರ್ಬೋಹೈಡ್ರೇಟ್‍ಗಳು ಮತ್ತು ಕ್ಯಾಲೊರಿಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಬೆಣ್ಣೆ, ತುಪ್ಪ ಅಥವಾ ಚೀಸ್ ಸೇವಿಸಬೇಡಿ

ಬೆಣ್ಣೆ, ತುಪ್ಪ ಅಥವಾ ಚೀಸ್ ಸೇವಿಸಬೇಡಿ

ಇವುಗಳಲ್ಲಿ ಕೊಬ್ಬಿನಂಶವು ಅಧಿಕವಾಗಿರುತ್ತದೆ. ಒಂದು ವೇಳೆ ನೀವು ತುಂಬಾ ಬೇಗ ತೂಕವನ್ನು ಇಳಿಸಿಕೊಳ್ಳುವ ಇಚ್ಛೆ ಹೊಂದಿದ್ದಲ್ಲಿ, ಇವುಗಳನ್ನು ನಿಮ್ಮ ಡಯಟ್‍ನಲ್ಲಿ ಸೇರಿಸಬೇಡಿ. ಆದರೂ ಸಹ ನಿಮ್ಮ ಆಹಾರದಲ್ಲಿ ಯೋಗರ್ಟ್ ಬಳಸಬಹುದು. ಏಕೆಂದರೆ ಅದರಲ್ಲಿ ಪ್ರೋಟಿನ್ ಪ್ರಮಾಣವು ಅಧಿಕವಾಗಿರುತ್ತದೆ.

ಹಣ್ಣಿನ ರಸವನ್ನು ಸೇವಿಸುವ ಬದಲಿಗೆ ಹಣ್ಣುಗಳನ್ನೆ ಸೇವಿಸಿ

ಹಣ್ಣಿನ ರಸವನ್ನು ಸೇವಿಸುವ ಬದಲಿಗೆ ಹಣ್ಣುಗಳನ್ನೆ ಸೇವಿಸಿ

ಹಣ್ಣುಗಳಲ್ಲಿ ಹಣ್ಣಿನ ರಸಕ್ಕಿಂತ ಅಧಿಕ ಪ್ರಮಾಣದ ಪೋಷಕಾಂಶಗಳು ಮತ್ತು ನಾರಿನಂಶಗಳು ಇರುತ್ತವೆ. ಹಣ್ಣಿನ ರಸವನ್ನು ತಯಾರಿಸುವಾಗ ಹಣ್ಣಿನಲ್ಲಿರುವ ಅತ್ಯುತ್ತಮ ಅಂಶಗಳು ಸತ್ತು ಹೋಗುತ್ತವೆ. ಆಗ ಕೇವಲ ಸಕ್ಕರೆ ಮಿಶ್ರಿತ ನೀರು ಮಾತ್ರ ನಿಮ್ಮ ಸೇವನೆಗೆ ಲಭ್ಯವಾಗುತ್ತದೆ.

ಊಟಕ್ಕೆ ಮೊದಲು ನೀರನ್ನು ಸೇವಿಸಿ

ಊಟಕ್ಕೆ ಮೊದಲು ನೀರನ್ನು ಸೇವಿಸಿ

ಊಟ ಮಾಡುವ ಮೊದಲು 2 ಲೋಟ ನೀರನ್ನು ಸೇವಿಸಿ. ಇದರಿಂದ ನಿಮ್ಮ ಹೊಟ್ಟೆಯಲ್ಲಿ ಸೇರಿದ ನೀರು ನೀವು ಸೇವಿಸುವ ಆಹಾರದ ಪ್ರಮಾನವನ್ನು ಕಡಿಮೆ ಮಾಡುತ್ತದೆ.

ಪ್ರತಿ 2 ದಿನಕ್ಕೆ ಒಮ್ಮೆ ನಿಮ್ಮ ತೂಕವನ್ನು ಪರೀಕ್ಷಿಸಿ

ಪ್ರತಿ 2 ದಿನಕ್ಕೆ ಒಮ್ಮೆ ನಿಮ್ಮ ತೂಕವನ್ನು ಪರೀಕ್ಷಿಸಿ

ಸಾಧ್ಯವಾದರೆ ಒಂದು ಒಳ್ಳೆಯ ತೂಕ ಪರೀಕ್ಷಿಸುವ ಯಂತ್ರವನ್ನು ತಂದುಕೊಳ್ಳಿ. ಪ್ರತಿ 2 ದಿನಕ್ಕೆ ಒಮ್ಮೆ ನಿಮ್ಮ ತೂಕವನ್ನು ಪರೀಕ್ಷಿಸಿಕೊಳ್ಳಿ. ಇದು ನಿಮ್ಮ ತೂಕದ ಬೆಳವಣಿಗೆಯ ಕುರಿತು ನಿಗಾವಹಿಸುವಂತೆ ಮಾಡುತ್ತದೆ ಮತ್ತು ತೂಕ ಇಳಿಸುವ ಬೆಳವಣಿಗೆ ವರದಿಯನ್ನು ಕಣ್ಣ ಮುಂದೆಯೇ ತೋರಿಸುತ್ತದೆ. ಇದರ ಜೊತೆಗೆ ನಿಮ್ಮ BMI ಮತ್ತು BMRಗಳನ್ನು ಸದಾ ಪರೀಕ್ಷಿಸುತ್ತ ಇರಿ.

ಡಯಟ್ ಯೋಜನೆಯಿಂದ ಯಾವುದೇ ಕಾರಣಕ್ಕು ಹಿಂದೆ ಸರಿಯಬೇಡಿ

ಡಯಟ್ ಯೋಜನೆಯಿಂದ ಯಾವುದೇ ಕಾರಣಕ್ಕು ಹಿಂದೆ ಸರಿಯಬೇಡಿ

ಒಂದು ವೇಳೆ ನೀವು ಡಯಟ್ ಪಾಲಿಸುತ್ತಿದ್ದಲ್ಲಿ, ಯಾವುದೇ ಕಾರಣಕ್ಕು ಅದರಿಂದ ಹಿಂದೆ ಸರಿಯಬೇಡಿ.

ಕ್ಯಾಲೊರಿಗಳು ತೂಕವನ್ನು ಇಳಿಸಿಕೊಳ್ಳುವಾಗ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತವೆ. ಯಾವಾಗ ನಿಮ್ಮ ದೇಹವು 7000 ಕ್ಯಾಲೊರಿಗಳನ್ನು ಸಂಗ್ರಹಿಸಿಕೊಳ್ಳುತ್ತದೆಯೋ, ಆಗ ನಿಮ್ಮ ತೂಕವು 1 ಕೆ.ಜಿ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ ಯಾವಾಗ ನಿಮ್ಮ ದೇಹವು 7000 ಕ್ಯಾಲೊರಿಗಳನ್ನು ಕರಗಿಸುತ್ತದೆಯೋ, ಆಗ ನಿಮ್ಮ ದೇಹದ ತೂಕದಲ್ಲಿ 1 ಕೆ.ಜಿ ತೂಕ ಇಳಿಯುತ್ತದೆ. ಇದರಿಂದಾಗಿ ಬೇಗ ತೂಕವನ್ನು ಇಳಿಸಿಕೊಳ್ಳಬೇಕೆಂದರೆ ಅಧಿಕ ಕ್ಯಾಲೊರಿಗಳನ್ನು ಕರಗಿಸಬೇಕು. ಟೊಮಾಟೊ, ಹೂಕೋಸು, ಸೌತೆಕಾಯಿ, ಗ್ರೇಪ್ ಫ್ರೂಟ್, ಕಿತ್ತಳೆ, ಸೆಲೆರಿ, ಕ್ಯಾರೆಟ್, ಸ್ಟ್ರಾಬೆರ್ರಿಗಳು, ಸೇಬುಗಳು, ಕಲ್ಲಂಗಡಿ ಇತ್ಯಾದಿ ಹಣ್ಣು ಮತ್ತು ತರಕಾರಿಗಳು ನಿಮ್ಮ ದೇಹದಲ್ಲಿನ ಕ್ಯಾಲೊರಿಗಳನ್ನು ಶೀಘ್ರವಾಗಿ ಕರಗಿಸುತ್ತವೆ. ಅತ್ಯುತ್ತಮ ಫಲಿತಾಂಶಗಳನ್ನು ನಿಮ್ಮದಾಗಿಸಿಕೊಳ್ಳಲು ಇವುಗಳನ್ನು ನಿಮ್ಮ ಡಯಟ್‍ನಲ್ಲಿ ಸೇರಿಸಿ.

English summary

Diet Plan to Lose Weight in a Week

Don’t we all? Unfortunately, when it comes to weight loss, most of us fail to follow a diet. Wouldn’t it be better if those extra pounds would vanish within a week in a healthy way and you stay fit?
X
Desktop Bottom Promotion