For Quick Alerts
ALLOW NOTIFICATIONS  
For Daily Alerts

ಬೆಳಗಿನ ಸಮಯದಲ್ಲಿ ಅಪ್ಪಿತಪ್ಪಿಯೂ ಇಂತಹ ಕೆಲಸ ಮಾಡಬೇಡಿ!

By Viswanath S
|

ನೀವು ಬೆಳಗ್ಗೆ ಏಳುವಾಗ ಯಾವಾಗಲೂ ಕೆಟ್ಟ ಮೂಡಿನಲ್ಲಿ ಇರುತ್ತೀರಾ? ನೀವು ನಿಮ್ಮ ಬೆಳಗಿನ ಉಪಹಾರವನ್ನು ತಪ್ಪಿಸುತ್ತೀರಾ? ಒಂದು ಕೆಲವು ಸರಳ ಮಾರ್ಪಾಡುಗಳಿಂದ ನಿಮ್ಮ ಬೆಳಗಿನ ಪರಿಸ್ಥಿತಿಯನ್ನು ಬದಲಾಯಿಸಬಹುದು.

ಬೆಳಗ್ಗೆ ಎದ್ದು ಏನು ತಿನ್ನಬೇಕು? 20 ಐಡಿಯಾ!

ಹಠಾತ್ ಏಳುವುದು ಮತ್ತು ತಕ್ಷಣ ಜಿಮ್ಮಿಗೆ ಹೋಗುವುದು

ಹಠಾತ್ ಏಳುವುದು ಮತ್ತು ತಕ್ಷಣ ಜಿಮ್ಮಿಗೆ ಹೋಗುವುದು

ಬೆಳಗೆದ್ದ ಮೇಲೆ ಸ್ವಲ್ಪ ಆರಾಮವಾಗಿ ತೆಗೆದುಕೊಳ್ಳಿ. ಸ್ವಲ್ಪ ಆರಾಮವಾಗಿ ಎದ್ದು ನಿಮ್ಮ ಕೈಕಾಲುಗಳನ್ನು ನಿಧಾನವಾಗಿ ಚಲಿಸಿ. ಬೆಳಿಗೆ ಏಳುವಾಗ ನಿಮ್ಮ ಬಲಗಡೆ ತಿರುಗಿ ಹಾಸಿಗೆಯಿಂದ ಏಳಿ. ಹಾಗೆ ಮಾಡಿದಾಗ ನೀವು ನಿದ್ರೆ ಮಾಡುತ್ತಿದ್ದಾಗ ಸುಪ್ತಾವಸ್ಥೆಯಲ್ಲಿದ್ದ ಚೈತನ್ಯವು ಹರಿದು ಸಮತೋಲನಗೊಳಿಸುತ್ತದೆ.

ದೇಹವನ್ನು ವ್ಯಾಪಿಸಬೇಡಿ

ದೇಹವನ್ನು ವ್ಯಾಪಿಸಬೇಡಿ

ಬೆಳಗಿನ ಸಮಯವನ್ನು ಸ್ವಲ್ಪ ನಿಧಾನವಾಗಿ ತೆಗೆದುಕೊಳ್ಳಿ. ಸ್ವಲ್ಪ ಸಮಯದನಂತರ ನಿಮ್ಮ ಕೈಕಾಲುಗಳನ್ನು ನಿಧಾನವಾಗಿ ಆಡಿಸಿರಿ. ನಾವು ಬೆಳಗ್ಗೆ ಏಳುವ ಸಮಯದಲ್ಲಿ ವಿಶೇಷವಾಗಿ ನಮ್ಮ ಬೆನ್ನುಮೂಳೆಯ ಸ್ನಾಯುಗಳು ಗಟ್ಟಿಯಾಗಿದ್ದು ಬಗ್ಗಿಸಲು ಆಗುವುದಿಲ್ಲ. ಎದ್ದನಂತರ ಕೈಕಾಲುಗಳನ್ನು ಸ್ವಲ್ಪವಾದರೂ ಆಡಿಸದಿದ್ದರೆ ದೇಹವನ್ನು ಬಗ್ಗಿಸಲಾಗದೆ ಇಡೀ ದಿವಸ ನಿಮ್ಮ ಉತ್ಪಾದನಾ ಸಾಮರ್ಥ್ಯಕ್ಕೆ ಧಕ್ಕೆ ಬರಬಹುದು. ಎದ್ದ ನಂತರ ನಿಧಾನವಾಗಿ ಚಲಿಸಿ. ನಿಮ್ಮ ಕೈಕಾಲುಗಳ ಸ್ನಾಯುಗಳು ಹಿಡಿತಗೊಂಡಿದ್ದರೆ ನಿಧಾನವಾಗೆ ಚಾಚಿ. ಕೇವಲ ಮೂರರಿಂದ ನಾಲ್ಕು ಬಾರಿ ಸೌಮ್ಯವಾಗಿ ಚಾಚಿ ಕೆಲವು ಬಾರಿ ನಿಧಾನವಾಗಿ ಉಸಿರಾಟಮಾಡಿದರೆ ಕೈಕಾಲುಗಳು ಸಡಿಲಗೊಳ್ಳುವುದಕ್ಕೆ ಸಹಾಯವಾಗುತ್ತದೆ.

ನಿಮ್ಮ ದಿನವನ್ನು ಒಂದು ಕಪ್ ಚಹಾದಿಂದ ಆರಂಭಿಸಿ

ನಿಮ್ಮ ದಿನವನ್ನು ಒಂದು ಕಪ್ ಚಹಾದಿಂದ ಆರಂಭಿಸಿ

ಉತ್ತಮ ಚಯಾಪಚಯದ ರಹಸ್ಯವೇನೆಂದರೆ ದಿನವನ್ನು ಒಂದು ಕಪ್ ಚಹಾದಿಂದ ಆರಂಭಗೊಳಿಸಬಾರದು ಆದರ ಬದಲು ಒಂದು ಆಮ್ಲೀಯ ಅಥವ ಕ್ಷಾರೀಯ ಪಾನಿಯದಿಂದ ಆರಂಭಿಸಿ. ನಿಮ್ಮ ದಿನವನ್ನು ಸಕ್ಕರೆ ಮತ್ತು ಹಾಲುಳ್ಳ ಕಟುವಾದ ಕಾಫೀ ಅಥವ ಟೀಯಿಂದ ಪ್ರಾರಂಭಮಾಡಬೇಡಿ. ನಿಂಬೆ ರಸ ಮತ್ತು ನೀರನ್ನು ಕುಡಿಯಿರಿ. ಅದಾದ ನಂತರ ಹಾಲಿನಾಂಶ ಹೆಚ್ಚಾಗಿರುವ ಚಹಾ ಅಥವ ಗುಣಮಟ್ಟದ ಹಸಿರು ಚಹಾ (ಗ್ರೀನ್ ಟೀ) ಕುಡಿಯಿರಿ.

ಇಂಟರ್‌ನೆಟ್‌ನಲ್ಲಿ ಮೇಲ್ ನೋಡುವುದು

ಇಂಟರ್‌ನೆಟ್‌ನಲ್ಲಿ ಮೇಲ್ ನೋಡುವುದು

ನೀವು ಎದ್ದು ಎರಡುಗಂಟೆಗಳಕಾಲ ಮೇಲ್ ಚೆಕ್ ಮಾಡದೇ ಇತರ ಕೆಲಸಗಳ ಕಡೆ ನಿಗಾ ಇಡಿ. ನಿಮ್ಮ ಜೀವನದ ಕೆಲಸಗಳು ಸುಗಮವಾಗಿರಲು ಅನಿರೀಕ್ಷಿತ ತಂತ್ರಗಳ ಸಾಧ್ಯತೆ ಇರುವ ಮೈಲ್‌ಗಳನ್ನು ನೋಡಬೇಡಿ. ನೀವೇನು ಈ ಸಮಯದಲ್ಲಿ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಶಕ್ತಿಯನ್ನು ಕಡಿಮೆ ಮಹತ್ವವಿರುವ ಕಾರ್ಯಗಳನ್ನು ಬಿಟ್ಟು ಇತರ ಅತ್ಯಂತ ಮುಖ್ಯವಾದ ಕಾರ್ಯಗಳ ಕಡೆ ಗಮನಕೊಡಿ.

ಉಪಾಹಾರ ಸೇವಿಸುವುದನ್ನು ತಪ್ಪಿಸಬೇಡಿ

ಉಪಾಹಾರ ಸೇವಿಸುವುದನ್ನು ತಪ್ಪಿಸಬೇಡಿ

ಇತ್ತೀಚಿನ ವರದಿಗಳ ಪ್ರಕಾರ ಉಪಾಹಾರ ಸೇವಿಸುವುದನ್ನು ತಪ್ಪಿಸಿಕೊಂಡರೆ ಅದು ಬೊಜ್ಜು, ಮಧುಮೇಹ ಮತ್ತು ದುರ್ಬಲ ಪ್ರತಿರಕ್ಷಣೆ (ಇಮ್ಮ್ಯೂನಿಟಿ) ಗೆ ಉತ್ತೇಜನಕೊಟ್ಟ ಹಾಗಾಗುತ್ತದೆ. ಬೆಳಗಿನ ಉಪಹಾರವನ್ನು ತಪ್ಪಿಸಿಕೊಂಡು ಇಡೀ ದಿನ ತಪ್ಪು ಆಹಾರಗಳನ್ನು ತಿನ್ನುವಂತಾಗುತ್ತದೆ. ನೀವು ಒಬ್ಬ ರಾಜನ ಹಾಗೆ ಬೆಳಗಿನ ಉಪಹಾರ ಮಾಡಬೇಕಾಗಿಲ್ಲ ಆದರೆ ನೀವು ಏನನ್ನಾದರೂ ಸೇವಿಸಲೇ ಬೇಕು.

ಏಳುವಾಗಲೇ ಕೋಪದಿಂದೇಳುವುದು

ಏಳುವಾಗಲೇ ಕೋಪದಿಂದೇಳುವುದು

ಬಹಳಷ್ಟು ಜನರು ಬೆಳಗಿನ ಸಮಯದಲ್ಲಿ ಅತಿಯಾದ ಕಾರ್ಯಕ್ರಮಗಳನ್ನು ತುಂಬಿಕೊಂಡಿರುತ್ತಾರೆ. ಹಾಗಿದ್ದಾಗ, ಅವುಗಳು ತಲೆಯಲ್ಲೇ ತುಂಬಿಕೊಂಡಿದ್ದು ಬೆಳಗೇಳುವಾಗ ಮುಂಗೋಪದಿಂದಿರುವ ಸಾಧ್ಯತೆಗಳು ಇರುತ್ತವೆ. ನೀವು ನಿಮ್ಮ ದಿನದ ಕಾರ್ಯಕ್ರಮಗಳ ಬಗ್ಗೆ ವೇಳಾಪಟ್ಟಿ ಅಥವಾ ಯೋಜನೆ ಮಾಡುವುದಿಲ್ಲವೇ?. ಬಹಳಷ್ಟು ಜನರು ತಾವು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಒಂದು ಯೋಜನೆ ಅಥವಾ ವೇಳಾಪಟ್ಟಿ ಮುಂಚೆಯೇ ಮಾಡುವುದಿಲ್ಲ. ಇಂತಹವರು ದಿನ ಪೂರ್ತಿ ಕೆಲಸಗಳಲ್ಲಿ ನಿರತರಾಗಿ ದಿನದ ಕೊನೆಯಲ್ಲಿ ಮರುದಿನ ಮಾಡುವ ಕೆಲಸಗಳ ಬಗ್ಗೆ ಯೋಚಿಸುವುದನ್ನು ಇಷ್ಟಪಡುವುದಿಲ್ಲ. ಆದರೂ ಮಾರನೆಯದಿನದ ಉಪಹಾರ, ಊಟ ಮತ್ತು ಧರಿಸುವ ಬಟ್ಟೆಗಳ ಬಗ್ಗೆ ಯೋಚಿಸಿ ಯೋಜನೆ ಮಾಡುವುದು ಒಳ್ಳೆಯದು. ಹಿಂದಿನ ರಾತ್ರಿಯೇ ಮಾರನೇ ದಿನದ ಉಪಹಾರವನ್ನು ಯೋಜಿಸಿ.

English summary

Avoid these morning mistakes

Are you always in a bad mood when you wake up? Do you skip breakfast? A few simple changes can transform your mornings.
Story first published: Friday, September 26, 2014, 17:49 [IST]
X
Desktop Bottom Promotion