For Quick Alerts
ALLOW NOTIFICATIONS  
For Daily Alerts

ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು

By Super
|

ಸೀಬೆಹಣ್ಣು ಅಥವಾ ಪೇರಳೆ ಹಣ್ಣು ಸಾಧಾರಣವಾಗಿ ಎಲ್ಲೆಡೆ ವರ್ಷದ ಬಹುತೇಕ ದಿನಗಳಲ್ಲಿ ಲಭ್ಯವಿದೆ. ಈ ಹಣ್ಣಿನ ಉತ್ತಮ ಗುಣಗಳ ಬಗ್ಗೆಯೂ ನಾವು ಅರಿತಿದ್ದೇವೆ. ಆದರೆ ಈ ಗಿಡದ ಎಲೆಗಳ ಬಗ್ಗೆ ಏನನ್ನೂ ಅರಿಯದದವರಾಗಿದ್ದೇವೆ. ಆಯುರ್ವೇದದಲ್ಲಿ ಈ ಗಿಡಗ ಎಲೆಗಳಲ್ಲಿರುವ ಅದ್ಭುತ ಗುಣಗಳನ್ನು ಪ್ರಸ್ತಾಪಿಸಲಾಗಿದೆ.

ಈ ಎಲೆಗಳನ್ನು ಅರೆದು ಮಾಡಿದ ಮಿಶ್ರಣದಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು, ಬ್ಯಾಕ್ಟೀರಿಯಾ ನಿವಾರಕಗಳು ಹಾಗೂ ಉರಿಯೂತವನ್ನು ತಣಿಸುವ ಪೋಷಕಾಂಶಗಳಿವೆ. ಮುಖ್ಯವಾಗಿ ಇದರಲ್ಲಿ ಅಧಿಕವಾಗಿರುವ ಟ್ಯಾನಿನ್ ಎಂಬ ರಾಸಾಯನಿಕ ನೈಸರ್ಗಿಕವಾದ ನೋವು ನಿವಾರಕವಾಗಿದೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಈ ಎಲೆಗಳ ಅದ್ಭುತ ಗುಣಗಳನ್ನು ಅವಲೋಕಿಸೋಣ. ಸೀಬೆ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಏರಲು ಒಂದು ಪ್ರಮುಖ ಕಾರಣವೆಂದರೆ ನಮ್ಮ ಆಹಾರದ ಪಿಷ್ಟಗಳು ಕರಗಿ ವಿವಿಧ ರೂಪದ ಸಕ್ಕರೆಗಳಾಗುವುದು ಹಾಗೂ ಈ ಸಕ್ಕರೆ ಕೊಬ್ಬಿನೊಂದಿಗೆ ಮಿಳಿತವಾಗಿ ದೇಹದಲ್ಲಿ ಶೇಖರವಾಗುವುದು. ಇದಕ್ಕಾಗಿ ನಮ್ಮ ಯಕೃತ್ತು ಆಹಾರದ ಮೂಲಕ ದೇಹವನ್ನು ಸೇರಿದ ಕಾರ್ಬೋಹೈಡ್ರೇಟುಗಳನ್ನು ಕರಗಿಸಿ ಸಕ್ಕರೆಯೊಡನೆ ಸೇರಬೇಕಾಗುತ್ತದೆ. ಪೇರಳೆ ಎಲೆಯ ಮಿಶ್ರಣದಲ್ಲಿ ಕಾರ್ಬೋಹೈಡ್ರೇಟುಗಳು ಪೂರ್ಣಪ್ರಮಾಣದಲ್ಲಿ ಸಕ್ಕರೆಯಾಗದಂತೆ ತಡೆಯುವ ಹಲವು ಪೋಷಕಾಂಶಗಳಿವೆ. ಈ ಕಾರಣದಿಂದಾಗಿ ಸಕ್ಕರೆಯಾಗಿ ಪರಿವರ್ತಿತವಾದ ಪಿಷ್ಟ ಪೂರ್ಣಪ್ರಮಾಣದಲ್ಲಿ ಶೇಖರವಾಗದೇ ವಿಸರ್ಜಿಸಲ್ಪಡುತ್ತದೆ. ಪರಿಣಾಮವಾಗಿ ತೂಕ ಇಳಿಯಲು ಅನುಕೂಲವಾಗುತ್ತದೆ.

ಮಧುಮೇಹಿಗಳಿಗೂ ಒಳ್ಳೆಯದು

ಮಧುಮೇಹಿಗಳಿಗೂ ಒಳ್ಳೆಯದು

ಜಪಾನ್ ನಲ್ಲಿರುವ ಯಾಕುಲ್ಟ್ ಕೇಂದ್ರ ವಿದ್ಯಾಲಯ(Yakult Central Institute)ದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ದೇಹದಲ್ಲಿ alpha-glucosidease enzyme ಎಂಬ ಪೋಷಕಾಂಶದ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಈ ಕಾರ್ಯವನ್ನು ಪೇರಳೆ ಎಲೆಯ ಮಿಶ್ರಣ ಉತ್ತಮವಾಗಿ ನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಸಕ್ಕರೆಯ ಇತರ ಪ್ರಾಕಾರಗಳಾದ ಸುಕ್ರೋಸ್ ಮತ್ತು ಮಾಲ್ಟೋಸ್ ಗಳನ್ನು ದೇಹವು ಹೀರಿಕೊಳ್ಳದಂತೆ ತಡೆಯುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಇಳಿಕೆಯಾಗಿ ಇನ್ಸುಲಿನ್ ಪ್ರಮಾಣದಲ್ಲಿ ಏರಿಕೆ ಮಾಡದೆಯೇ ಮಧುಮೇಹ ಹತೋಟಿಗೆ ಬರುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಸಂಶೋಧನೆಗಳ ಮೂಲಕ ಪೇರಳೆ ಎಲೆಗಳನ್ನು ಕುದಿಸಿದ ಟೀ ಮೂರು ತಿಂಗಳವರೆಗೆ ಸತತವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟರಾಲ್ (LDL=Low density lipoprotiens) ಹಾಗೂ ಟ್ರೈಗ್ಲಿಸರಾಯ್ಡ್ ಎಂಬ ವಿಷವಸ್ತುಗಳನ್ನು ಕಡಿಮೆಗೊಳಿಸುತ್ತದೆ. ವಿಶೇಷವೆಂದರೆ ರಕ್ತದಲ್ಲಿ ಜೊತೆಗೇ ಒಳ್ಳೆಯ ಕೊಲೆಸ್ಟ್ರಾಲ್ ಸಹಾ ಇದ್ದು ಇದರ ಪ್ರಮಾಣ ಕಡಿಮೆಯಾಗುವುದಿಲ್ಲ. ಅಲ್ಲದೆ ಯಕೃತ್ತಿಗೂ ಈ ಮಿಶ್ರಣ ಟಾನಿಕ್ ನಂತೆ ಸಹಕರಿಸುತ್ತದೆ.

ಅತಿಸಾರವನ್ನು ಶಮನಗೊಳಿಸುತ್ತದೆ

ಅತಿಸಾರವನ್ನು ಶಮನಗೊಳಿಸುತ್ತದೆ

ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಅತಿಸಾರ ಮತ್ತು ಆಮಶಂಕೆಯನ್ನು ನಿವಾರಿಸಲು ಪೇರಳೆ ಎಲೆಗಳ ಮಿಶ್ರಣ ಒಂದು ಉತ್ತಮ ಆಯುರ್ವೇದ ಔಷಧಿಯಾಗಿದೆ. ಇದಕ್ಕಾಗಿ ಸುಮಾರು ಎರಡು ಗ್ಲಾಸ್ ನೀರಿನಲ್ಲಿ ಮೂವತ್ತು ಗ್ರಾಂ ಪೇರಳೆ ಎಲೆಗಳನ್ನು ಒಂದು ಮುಷ್ಟಿ ಅಕ್ಕಿಹಿಟ್ಟಿನೊಂದಿಗೆ ಸುಮಾರು ಹದಿನೈದು ನಿಮಿಷ ಬೇಯಿಸಬೇಕು. ಈ ನೀರು ತಣಿದ ಬಳಿಕ ದಿನಕ್ಕೆರಡು ಬಾರಿ ಕುಡಿಯಲು ನೀಡುವುದರಿಂದ ಆಮಶಂಕೆ ಕಡಿಮೆಯಾಗುತ್ತದೆ. ಅತಿಸಾರ ಅಥವಾ ರಕ್ತಬೇಧಿಗಾಗಿ ಪೇರಳೆ ಮರದ ಬೇರನ್ನು ಹಾಗೂ ಎಲೆಗಳನ್ನು ಅರೆದು ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷ ಬೇಯಿಸಬೇಕು. ಆದರೆ ಇದರ ತಾಪಮಾನ ತೊಂಭತ್ತು ಡಿಗ್ರಿಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಈ ತಾಪಮಾನ ಮೀರಿದರೆ ಔಷಧದ ಗುಣಗಳು ಕಡಿಮೆಯಾಗುತ್ತದೆ. ತಣಿದ ಬಳಿಕ ಈ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಾ ಬಂದರೆ ಶೀಘ್ರವೇ ರಕ್ತಬೇಧಿ ಗುಣವಾಗುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುವುದು

ಜೀರ್ಣಶಕ್ತಿಯನ್ನು ಹೆಚ್ಚಿಸುವುದು

ಪೇರಳೆ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಹಲವು ಪೋಷಕಾಂಶಗಳಿವೆ. ಕೆಲವೊಮ್ಮೆ ಪ್ರಬಲ ಬ್ಯಾಕ್ಟೀರಿಯಾಗಳು ಜಠರರಸದಲ್ಲಿಯೂ ಜೀರ್ಣವಾಗದೇ ಕರುಳುಗಳಿಗೆ ಸಾಗಿಸಲ್ಪಡುತ್ತವೆ. ಕರುಳುಗಳ ಒಳಭಾಗದಲ್ಲಿ ವಿಲ್ಲೈಗಳೆಂಬ ಸೂಕ್ಷ್ಮ ದಳಗಳಿವೆ. ಇಲ್ಲಿಂದಲೇ ಕರಗಿದ ಆಹಾರದಿಂದ ಪೋಷಕಾಂಶಗಳು ಹೀರಲ್ಪಡುತ್ತವೆ. ಇವುಗಳ ಸಂದಿನಲ್ಲಿ ಈ ಬ್ಯಾಕ್ಟೀರಿಯಾಗಳು ಮನೆಮಾಡಿಕೊಂಡು ಸೋಂಕು ಹರಡುತ್ತವೆ. ಪರಿಣಾಮವಾಗಿ ವಾಂತಿ, ತಲೆ ಸುತ್ತುವುದು, ಹೊಟ್ಟೆ ನೋವು ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಇದಕ್ಕೇ ನಾವು ವಿಷಾಹಾರ (food poisoning) ಎನ್ನುತ್ತೇವೆ.

ಜೀರ್ಣಶಕ್ತಿಯನ್ನು ಹೆಚ್ಚಿಸುವುದು

ಜೀರ್ಣಶಕ್ತಿಯನ್ನು ಹೆಚ್ಚಿಸುವುದು

ಇವುಗಳನ್ನು ಅಲ್ಲಿಂದ ಹೊಡೆದೋಡಿಸಲು ಕೊಂಚ ವಿಭಿನ್ನವಾದ ರಾಸಾಯನಿಕಗಳ ಅಗತ್ಯವಿದೆ. ಪೇರಳೆ ಎಲೆಗಳನ್ನು ಜಜ್ಜಿದ ಮಿಶ್ರಣದಲ್ಲಿ ಈ ರಾಸಾಯನಿಕಗಳು ಹೇರಳವಾಗಿದ್ದು ಈ ಬ್ಯಾಕ್ಟೀರಿಯಾಗಳನ್ನು ಕರುಳುಗಳಿಂದ ಒದ್ದೋಡಿಸುತ್ತವೆ. ಇದಕ್ಕಾಗಿ ಒಂದು ಲೀಟರಿನಲ್ಲಿ ಎಂಟು ಪೇರಳೆ ಎಲೆಗಳನ್ನು ಜಜ್ಜಿ ಬೇಯಿಸಬೇಕು. ಸುಮಾರು ಐದು ನಿಮಿಷ ಕುದಿದ ಬಳಿಕ ತಣಿಯಲು ಬಿಟ್ಟು ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು. ಖಾಲಿಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.

ಅಸ್ತಮಾ ರೋಗವನ್ನೂ ಕಡಿಮೆಗೊಳಿಸುವುದು

ಅಸ್ತಮಾ ರೋಗವನ್ನೂ ಕಡಿಮೆಗೊಳಿಸುವುದು

ಪೇರಳೆ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವುದರಿಂದ ಶ್ವಾಸಕೋಶ, ಶ್ವಾಸನಾಳಗಳು ಸ್ವಚ್ಛಗೊಳ್ಳುತ್ತವೆ, ಕಟ್ಟಿದ್ದ ಕಫ ಸಡಿಲಗೊಂಡು ಹೊರಬರುತ್ತದೆ. ಗಟ್ಟಿಯಾಗಿದ್ದ ಕಫವನ್ನು ಹೊರಹಾಕಲು ಕೆಮ್ಮಿನ ಮೂಲಕ ಕಷ್ಟಪಡುತ್ತಿದ್ದ ದೇಹಕ್ಕೆ ಆರಾಮ ಸಿಗುತ್ತದೆ.

ಹಲ್ಲುನೋವು, ಗಂಟಲು ನೋವು ಮತ್ತು ಒಸಡುಗಳಿಗೂ ಒಳ್ಳೆಯದು

ಹಲ್ಲುನೋವು, ಗಂಟಲು ನೋವು ಮತ್ತು ಒಸಡುಗಳಿಗೂ ಒಳ್ಳೆಯದು

ಪೇರಳೆ ಎಲೆಗಳನ್ನು ಜಜ್ಜಿ ಕಡಿಮೆ ನೀರಿನಲ್ಲಿ ಬೇಯಿಸಿ ಸೋಸಿದ ನೀರಿನಿಂದ ಬೆಳಿಗ್ಗೆ ಮತ್ತು ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದರಿಂದ ಬಾಯಿಯೊಳಗಣ ಬ್ಯಾಕ್ಟೀರಿಯಾಸಹಿತ ಇತರ ಕ್ರಿಮಿಗಳು ಹೊರದಬ್ಬಲ್ಪಡುತ್ತವೆ. ಇದೇ ಕಾರಣದಿಂದ ಹಲ್ಲುನೋವು, ಗಂಟಲು ನೋವು ಕಡಿಮೆಯಾಗುವುದು. ಒಸಡುಗಳ ನಡುವೆ ಮನೆಮಾಡಿಕೊಂಡು ಹಾಯಾಗಿದ್ದ ಕ್ರಿಮಿಗಳೆಲ್ಲಾ ನಾಶವಾಗಿರುವುದರಿಂದ ಒಸಡುಗಳು ಪುನಃಶ್ಚೇತನಗೊಳ್ಳುವುವು. ಇದೇ ಕಾರಣದಿಂದಾಗಿ ಹಲವು ಆಯುರ್ವೇದಿಕ್ ಹಲ್ಲು ಮಾರ್ಜಕಗಳಲ್ಲಿ ಪೇರಳೆ ಎಲೆಗಳನ್ನು ಬಳಸುತ್ತಾರೆ. ಪೇರಳೆ ಎಲೆಗಳನ್ನು ಜಜ್ಜಿ ಗಾಢವಾದ ಮಿಶ್ರಣಮಾಡಿಕೊಂಡು ಹಲ್ಲುಜ್ಜುವ ಬ್ರಶ್ ಮೂಲಕ ನೇರವಾಗಿ ಹಲ್ಲು ಮತ್ತು ಒಸಡುಗಳನ್ನು ಉಜ್ಜಲೂ ಬಳಸಬಹುದು.

ಡೆಂಗ್ಯೂ ಜ್ವರಕ್ಕೂ ರಾಮಬಾಣವಾಗಿದೆ

ಡೆಂಗ್ಯೂ ಜ್ವರಕ್ಕೂ ರಾಮಬಾಣವಾಗಿದೆ

ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯೂ ಜ್ವರ ಇದೇ ಹೆಸರಿನ ವೈರಸ್ಸಿನ ಮೂಲಕ ಹರಡಲ್ಪಡುತ್ತದೆ. ಈ ಜ್ವರ ಪೀಡಿತರ ರಕ್ತವನ್ನು ಪರಿಶೀಲಿಸಿದರೆ ರಕ್ತದಲ್ಲಿ ಪ್ಲೇಟ್ಲೆಟ್ ಎಂಬ ಕಣ ತುಂಬಾ ಕಡಿಮೆಯಾಗಿರುವುದು ಕಂಡುಬರುತ್ತದೆ. ರಕ್ತ ಹೆಪ್ಪುಗಟ್ಟಲು ಈ ಕಣ ತುಂಬಾ ಅವಶ್ಯ. ಜ್ವರ ಹೆಚ್ಚಾಗುತ್ತಿದ್ದಂತೆ ದೇಹದೊಳಗೆ ಮತ್ತು ಹೊರಗೆ ಹಲವೆಡೆ ರಕ್ತಸ್ರಾವವಾಗಲು ತೊಡಗುತ್ತದೆ. ಈಗ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಸ್ವಾಭಾವಿಕ ಮಾರ್ಗದಲ್ಲಿ ವೈರಸ್ಸುಗಳನ್ನು ಹೊಡೆದೋಡಿಸುವುದೇ ಈ ಜ್ವರವನ್ನು ಹತೋಟಿಗೆ ತರಲು ಮಾರ್ಗ.

ಡೆಂಗ್ಯೂ ಜ್ವರಕ್ಕೂ ರಾಮಬಾಣವಾಗಿದೆ

ಡೆಂಗ್ಯೂ ಜ್ವರಕ್ಕೂ ರಾಮಬಾಣವಾಗಿದೆ

ಪೇರಳೆ ಎಲೆಗಳಲ್ಲಿರುವ phenylephrine ಎಂಬ ಪೋಷಕಾಂಶ ರಕ್ತದ ಪ್ಲೇಟ್ಲೆಟ್‌ಗಳನ್ನು ಹೆಚ್ಚಿಸುವ ಮೂಲಕ ಡೆಂಗ್ಯೂ ಜ್ವರವನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಐದು ಕಪ್ ನೀರಿನಲ್ಲಿ ಒಂಭತ್ತು ಪೇರಳೆ ನೀರಿನಲ್ಲಿ ಕುದಿಸಬೇಕು. ಕುದಿಯಲು ಪ್ರಾರಂಭವಾದ ಬಳಿಕ ಜ್ವಾಲೆಯನ್ನು ಕಿರಿದುಗೊಳಿಸಿ ಐದು ಕಪ್ ನೀರು ಆವಿಯಾಗಿ ಮೂರು ಕಪ್ ಗಳಾಗುವವರೆಗೆ ಒಲೆಯ ಮೇಲಿರಿಸಬೇಕು. ಈ ದ್ರಾವಣ ತಣಿದ ಬಳಿಕ ಸೋಸಿ ರೋಗಿಗೆ ಊಟದ ಬಳಿಕ ದಿನಕ್ಕೆ ಮೂರು ಬಾರಿ ನೀಡಬೇಕು.

ಪ್ರೋಸ್ಟೇಟ್ ಕ್ಯಾನ್ಸರ್ ನ ಚಿಕಿತ್ಸೆಯಲ್ಲಿ ನೆರವಾಗುತ್ತದೆ

ಪ್ರೋಸ್ಟೇಟ್ ಕ್ಯಾನ್ಸರ್ ನ ಚಿಕಿತ್ಸೆಯಲ್ಲಿ ನೆರವಾಗುತ್ತದೆ

ಪುರುಷರಲ್ಲಿ ಮೂತ್ರಕೋಶದ ಕಂಠವನ್ನು ಬಳಸಿರುವ ಪ್ರೋಸ್ಟೇಟ್ ಗ್ರಂಥಕ್ಕೆ ಕ್ಯಾನ್ಸರ್ ನ ಚಿಕಿತ್ಸೆಯಲ್ಲಿ ಹಾಗೂ ಬರದಂತೆ ತಡೆಯಲು ಪೇರಳೆ ಎಲೆಗಳಲ್ಲಿರುವ anti-glycative agent ಎಂಬ ಪೋಷಕಾಂಶ ನೆರವಾಗುತ್ತದೆ.

ಅಲರ್ಜಿಗಳನ್ನು ಕಡಿಮೆಗೊಳಿಸುತ್ತವೆ

ಅಲರ್ಜಿಗಳನ್ನು ಕಡಿಮೆಗೊಳಿಸುತ್ತವೆ

ಕೆಲವರಿಗೆ ಕೆಲವೊಂದು ವಸ್ತುಗಳು ಅಲರ್ಜಿ ತರಿಸುತ್ತವೆ. histamine ಎಂಬ ಅಲರ್ಜಿಕಾರಕ ರಾಸಾಯನಿಕ ರಕ್ತದಲ್ಲಿ ಬಿಡುಗಡೆಯೇ ಈ ಅಲರ್ಜಿಗೆ ಕಾರಣ. ಪೇರಳೆ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವ ಮೂಲಕ ಈ ಅಲರ್ಜಿಯನ್ನು ಕಡಿಮೆಗೊಳಿಸಬಹುದು.

ವೀರ್ಯವೃದ್ಧಿಗೆ ನೆರವಾಗುತ್ತದೆ

ವೀರ್ಯವೃದ್ಧಿಗೆ ನೆರವಾಗುತ್ತದೆ

ಸಂತಾನಫಲ ಪ್ರಾಪ್ತಿಯಾಗದ ದಂಪತಿಗಳಲ್ಲಿ ಒಂದು ವೇಳೆ ದೋಷ ಪುರುಷರಲ್ಲಿದೆ ಎಂದಾದರೆ ಉತ್ಪತ್ತಿಯಾದ ವೀರ್ಯಗಳ ಸಂಖ್ಯೆಯಲ್ಲಿ ಕಡಿಮೆ ಇರುವುದು ಮುಖ್ಯ ಕಾರಣವಾಗಿರಬಹುದು. ಅಂಡಾಣುವಿನೊಂದಿಗೆ ಸಂಯೋಜನೆಗೊಳ್ಳಲು ಕನಿಷ್ಟ ೧೫ ಮಿಲಿಯನ್/ಎಂ.ಎಲ್. ಇರಬೇಕು. (ಕೆಲವು ಪುರುಷರಲ್ಲಿ ೧೪ ಮಿಲಿಯನ್ ಇದ್ದಾಗಲೂ ಫಲಕಂಡಿದೆ) ಇದಕ್ಕಿಂತ ಕಡಿಮೆ ಇದ್ದರೆ ಫಲಕಾಣದು.

ವೀರ್ಯವೃದ್ಧಿಗೆ ನೆರವಾಗುತ್ತದೆ

ವೀರ್ಯವೃದ್ಧಿಗೆ ನೆರವಾಗುತ್ತದೆ

ಸಂಶೋಧನೆಗಳ ಮೂಲಕ ಈ ಸಂಖ್ಯೆ ಕಡಿಮೆ ಇರುವ ಪುರುಷರ ವೀರ್ಯ ಫಲವತ್ತತೆ ಪಡೆಯಲು ವಿಫಲವಾಗಿದೆ. ಪೇರಳೆ ಎಲೆಗಳನ್ನು ಕುದಿಸಿ ಸೋಸಿದ ನೀರನ್ನು ಸತತವಾಗಿ ಕುಡಿಯುವ ಮೂಲಕ ಈ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತದೆ. ಪರಿಣಾಮವಾಗಿ ಸಂತಾನಭಾಗ್ಯ ಪ್ರಾಪ್ತಿಯಾಗಲು ನೆರವಾಗುತ್ತದೆ.

ಗಾಯಗಳು ಹಾಗೂ ನಂಜು ಬೇಗನೇ ಮಾಗುತ್ತದೆ

ಗಾಯಗಳು ಹಾಗೂ ನಂಜು ಬೇಗನೇ ಮಾಗುತ್ತದೆ

ಪೇರಳೆ ಎಲೆಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಹಾಗೂ ಗಾಯಗಳ ಮೂಲಕ ದೇಹವನ್ನು ಪ್ರವೇಶಿಸದಂತೆ ತಡೆಯುವ ಹಲವು ಪೋಷಕಾಂಶಗಳಿವೆ. ಸಾಮಾನ್ಯವಾದ ಗಾಯ, ಗೀರು, ಮೊದಲಾದವುಗಳ ಮೇಲೆ ಎಲೆಗಳನ್ನು ಜಜ್ಜಿ ಪೇಸ್ಟ್ ನಂತೆ ಹಚ್ಚುವುದರಿಂದ ಹಾಗೂ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವುದರಿಂದ ನಂಜು ಆಗದಿರುವಂತೆ ನೋಡಿಕೊಳ್ಳುತ್ತದೆ. ಬಾಣಂತಿಯರಲ್ಲಿ ಗರ್ಭಾಶಯದ ಊತವನ್ನು ಕಡಿಮೆಗೊಳಿಸಲು ಹಾಗೂ ದೇಹದೊಳಗಣ ಸ್ರಾವಗಳನ್ನು ಶೀಘ್ರವಾಗಿ ಒಣಗುವಂತೆ ಮಾಡಲು ಸಹಕರಿಸುತ್ತದೆ.

ಚರ್ಮದ ಕಾಂತಿ ಉತ್ತಮಗೊಳ್ಳುವುದು

ಚರ್ಮದ ಕಾಂತಿ ಉತ್ತಮಗೊಳ್ಳುವುದು

ಪೇರಳೆ ಎಲೆಗಳನ್ನು ಜಜ್ಜಿ ಮಾಡಿದ ಪೇಸ್ಟ್ ಸೌಂದರ್ಯಕಾರಕವಾಗಿಯೂ ಉಪಯೋಗಿಸಲ್ಪಡುತ್ತದೆ. ಚರ್ಮದ ಹಲವು ತೊಂದರೆಗಳಿಗೆ ಇದರಿಂದ ಉಪಶಮನ ದೊರಕುತ್ತದೆ. ಪ್ರಮುಖವಾದವುಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಮೊಡವೆ ಮತ್ತು ಕಪ್ಪುಚುಕ್ಕೆ (Black spot) ಗಳ ನಿರ್ಮೂಲನೆ

ಮೊಡವೆ ಮತ್ತು ಕಪ್ಪುಚುಕ್ಕೆ (Black spot) ಗಳ ನಿರ್ಮೂಲನೆ

ಹದಿಹರೆಯದಲ್ಲಿ ಮೊಡವೆಗಳ ತೊಂದರೆ ಸರ್ವೇಸಾಮಾನ್ಯವಾಗಿದೆ. ಕೆಂಪಾದ ದೊಡ್ಡ ಮೊಡವೆಗಳೂ, ಕಪ್ಪುಚುಕ್ಕೆಗಳೂ ಸಹಜ ಸೌಂದರ್ಯವನ್ನು ಕುಂದಿಸುತ್ತವೆ. ಪೇರಳೆ ಎಲೆಗಳಲ್ಲಿ ಇದಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಆಂಟಿಸೆಪ್ಟಿಕ್ ಗುಣಗಳಿವೆ. ಇದಕ್ಕಾಗಿ ಪೇರಳೆ ಎಲೆಗಳನ್ನು ಜಜ್ಜೆ ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಹಚ್ಚಿ ಕೆಲಕಾಲ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ತಣ್ಣೀರಿನಿಂದ ಮೃದುವಾದ ಸೋಪು ದ್ರಾವಣ ಬಳಸಿ ತೊಳೆದುಕೊಳ್ಳಿ. ಪ್ರತಿದಿನ ಎರಡರಿಂದ ಮೂರು ಬಾರಿಯಂತೆ ತೊಳೆದುಕೊಳ್ಳುವುದರಿಂದ ಶೀಘ್ರವೇ ಮೊಡವೆ ಮತ್ತು ಕಪ್ಪುಚುಕ್ಕೆಗಳು ಕಡಿಮೆಯಾಗುತ್ತವೆ.

ಬ್ಲ್ಯಾಕ್ ಹೆಡ್ ಗಳನ್ನು ನಿರ್ಮೂಲನ ಮಾಡುತ್ತದೆ

ಬ್ಲ್ಯಾಕ್ ಹೆಡ್ ಗಳನ್ನು ನಿರ್ಮೂಲನ ಮಾಡುತ್ತದೆ

ಚರ್ಮದಾಳಕ್ಕೆ ಇಳಿದು ತುದಿ ಮಾತ್ರ ಚರ್ಮದ ಮಟ್ಟದಲ್ಲಿ ಕಪ್ಪಗಾಗಿ ಕಾಣುವ ಬ್ಲ್ಯಾಕ್ ಹೆಡ್ (ಕಪ್ಪು ತಲೆ)ಯನ್ನು ಬುಡಸಹಿತ ನಿರ್ಮೂಲನೆ ಮಾಡುವುದು ಅಷ್ಟು ಸುಲಭವಲ್ಲ. ಅಕ್ಕಪಕ್ಕದ ಚರ್ಮವನ್ನು

ಚಿವುಟುವುದರಿಂದ ಕೇವಲ ಮೇಲ್ಭಾಗ ತುಂಡಾಗಿ ಹೊರಬಂದರೂ ಕೆಲದಿನಗಳಲ್ಲಿಯೇ ಈ ಸ್ಥಳದಲ್ಲಿ ಮತ್ತೆ ತುಂಬಿಕೊಂಡು ಪ್ರಕಟವಾಗುತ್ತದೆ. ಇದನ್ನು ಬುಡಸಹಿಸ ನಿರ್ಮೂಲನೆಗೊಳಿಸಲು ಕೆಲವು ಪೇರಳೆ ಎಲೆಗಳನ್ನು ಮಿಕ್ಸಿಯಲ್ಲಿ ಸ್ವಲ್ಪ ನೀರಿನೊಂಗಿದೆ ಗೊಟಾಯಿಸಿಕೊಳ್ಳಿ. ಈ ದ್ರಾವಣವನ್ನು ಬಳಸಿ ಮುಖವನ್ನು ಉಜ್ಜಿಕೊಂಡು ತೊಳೆದುಕೊಳ್ಳುವ ಮೂಲಕ ಬ್ಲಾಕ್ ಹೆಡ್ ಗಳು ನಿವಾರಣೆಯಾಗುತ್ತವೆ.

ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ

ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ

ವಯಸ್ಸಾದಂತೆ ನಮ್ಮ ಚರ್ಮದ ಸುಕ್ಕುಗಳು ಇನ್ನಷ್ಟು ಆಳಕ್ಕೆ ಇಳಿದು ನೆರಿಗೆಗಳು ಮೂಡುತ್ತವೆ. ಇದಕ್ಕೆ free radicals ಎಂಬ ವಸ್ತುಗಳು ಕಾರಣವಾಗಿವೆ. ಪೇರಳೆ ಎಲೆಗಳನ್ನು ಜಜ್ಜಿ ಕುದಿಸಿ ತಣಿಸಿ ತಯಾರಿಸಿದ ದ್ರಾವಣವನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಹಚ್ಚುವ ಮೂಲಕ ನೆರಿಗೆಗಳ ಆಗಮನವನ್ನು ತಡೆಯಬಹುದು.

ತುರಿಕೆಯನ್ನು ಕಡಿಮೆಮಾಡುತ್ತದೆ

ತುರಿಕೆಯನ್ನು ಕಡಿಮೆಮಾಡುತ್ತದೆ

ತುರಿಕೆ ಹಲವು ಬಾರಿ ಭಾರೀ ಮುಜುಗರವನ್ನುಂಟುಮಾಡುತ್ತದೆ. ಚರ್ಮದಲ್ಲಿ ಮನೆಮಾಡಿರುವ ಹಲವು ಕ್ರಿಮಿಗಳ ಕಾಲುಗಳಲ್ಲಿರುವ ಚೂಪಾದ ಮುಳ್ಳುಗಳೇ ಇದಕ್ಕೆ ಕಾರಣ. ಪೇರಳೆ ಎಲೆಗಳ ಮಿಶ್ರಣದಿಂದ ಈ ಕ್ರಿಮಿಗಳನ್ನು ಓಡಿಸುವ ಮೂಲಕ ತುರಿಕೆಯನ್ನು ಶಮನಮಾಡಿಕೊಳ್ಳಬಹುದು.

ನಿಮ್ಮ ಕೂದಲ ಆರೈಕೆಗೂ ಒಳ್ಳೆಯದು

ನಿಮ್ಮ ಕೂದಲ ಆರೈಕೆಗೂ ಒಳ್ಳೆಯದು

ಪೇರಳೆ ಎಲೆಗಳಲ್ಲ್ ಹಲವು ಪೋಷಕಾಂಶಗಳೂ, ಆಂಟಿ ಆಕ್ಸಿಡೆಂಟುಗಳೂ ಇರುವುದರಿಂದ ಕೂದಲು ಸಮೃದ್ಧವಾಗಿ ಬೆಳೆಯಲು ಸಹಕರಿಸುತ್ತದೆ.

ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ

ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ

ಸಾಮಾನ್ಯವಾಗಿ ನಾವೆಲ್ಲರೂ ಪ್ರತಿದಿನ ಸುಮಾರು ನೂರು ಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ಆದರೆ ಅಷ್ಟೇ ಪ್ರಮಾಣದಲ್ಲಿ ಹೊಸ ಕೂದಲು ಹುಟ್ಟಿದರೆ ಮಾತ್ರ ಕೂದಲಿನ ದಟ್ಟತೆ ಹೆಚ್ಚಾಗುತ್ತದೆ. ಬದಲಿಗೆ ನೂರಕ್ಕಿಂತಲೂ ಕಡಿಮೆ ಕೂದಲು ಹುಟ್ಟಿದರೆ ಕೂದಲುದುರುವ ತೊಂದರೆ ಇದೆ ಎಂದು ಅರ್ಥ. ಹೊಸ ಕೂದಲನ್ನು ಹುಟ್ಟುವ ಪ್ರಕ್ರಿಯೆಗೆ ಪೇರಳೆ ಎಲೆ ನೆರವಾಗುತ್ತದೆ. ಇದಕ್ಕಾಗಿ ಒಂದು ಮುಷ್ಟಿ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಇಪ್ಪತ್ತು ನಿಮಿಷ ಕುದಿಸಿ ತಣಿದ ಬಳಿಕ ಕೂದಲುಗಳ ಬುಡಕ್ಕೆ ನಯವಾಗಿ ಮಸಾಜ್ ಮಾಡಬೇಕು. ಸುಮಾರು ಒಂದು ಘಂಟೆಯ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು.

English summary

Amazing Benefits of Guava Leaves for Skin, Hair and Health

Most of us know about the health benefits of guava fruit. But we are unaware of the fact that even guava leaves have several medicinal properties and offer an array of health benefits. Guava leaves are regarded as herbal treatment for several diseases. The health benefits of guava leaves are given below.
X
Desktop Bottom Promotion