For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ಭರದಲ್ಲಿ ಮಾಡಬಾರದ 10 ತಪ್ಪುಗಳು

By Super
|

ಇತ್ತೀಚಿನ ದಿನಗಳಲ್ಲಿ ಕಟ್ಟುಮಸ್ತಾದ ಮೈಕಟ್ಟು ಹೊಂದುವುದು ಯುವಕರಲ್ಲಿ ಒಂದು ಗೀಳಾಗಿ ಪರಿಣಮಿಸಿದೆ. ಆರೋಗ್ಯಕ್ಕಿಂತಲೂ ಪ್ರಮುಖವಾಗಿ ತಮ್ಮ ನೆಚ್ಚಿನ ತಾರೆಯರು ಪೋಸ್ಟರುಗಳ ಮೂಲಕ ತೋರುವ ಹುರಿಗಟ್ಟಿದ ಸ್ನಾಯುಗಳನ್ನು ಹೋಲುವ ಮೈಕಟ್ಟನ್ನು ಥಟ್ಟನೇ ಹೊಂದುವುದು ಇವರೆಲ್ಲರ ಆಶಯವಾಗಿರುತ್ತದೆ. ನಮ್ಮೆಲ್ಲರಲ್ಲಿ ಒಂದು ಪೂರ್ವಾಗ್ರಹ ನಂಬಿಕೆ ಇದೆ.

ಏನೆಂದರೆ ವ್ಯಾಯಾಮ ಮಾಡಿದಾಕ್ಷಣ ಬಲವಾದ ಮೈಕಟ್ಟು ಬಂದುಬಿಡುತ್ತದೆ. ವಾಸ್ತವವಾಗಿ ವ್ಯಾಯಾಮ ಮಾಡಿದಾಕ್ಷಣ ಸ್ನಾಯುಗಳು ಹುರಿಗಟ್ಟುವುದಿಲ್ಲ. ಬದಲಿಗೆ ಸತತವಾದ ಮತ್ತು ನಿಯಮಿತ ವ್ಯಾಯಾಮ, ಸೂಕ್ತ ಆಹಾರ, ಸಾಕಷ್ಟು ನಿದ್ದೆ, ನಿರಾಳವಾದ ಮನಸ್ಸು ಮೊದಲಾದವೆಲ್ಲಾ ಒಂದಕ್ಕೊಂದು ಮಿಳಿತಗೊಂಡಿವೆ.

ಆದರೆ ಇದಕ್ಕೆ ಅಪಾರವಾದ ತಾಳ್ಮೆ, ಸಮಯ ಮತ್ತು ಸತತ ಅಭ್ಯಾಸದ ಅಗತ್ಯವಿದೆ. ಆದರೆ ಇಂದಿನ ಯುವಜನಾಂಗದ ಬಳಿ ಇದಕ್ಕೆಲ್ಲಾ ಸಮಯವಿಲ್ಲ. ಬೇಗನೇ ಜಿಮ್ಮಿಗೆ ಹೋಗಿ ಬೇಗನೇ ಹೊಟ್ಟೆಯಲ್ಲಿ ಸಿಕ್ಸ್ ಪ್ಯಾಕ್ ಬಂದುಬಿಡಬೇಕು, ಅಂತಹ ಬೇಡಿಕೆ ಇಡುತ್ತಾರೆ. ಈ ಬೇಡಿಕೆ ಹಣ ಮಾಡುವವರಿಗೆ ಅಪ್ಯಾಯಮಾನವಾದ ಶಬ್ದವಾಗಿದೆ. ಅಂತೆಯೇ ಬೇಗನೇ ಸ್ನಾಯುಗಳು ಬೆಳೆಯುವ ಸುಲಭ ಉಪಾಯಗಳನ್ನು ಅನುಸರಿಸಲು ಸೂಚಿಸುತ್ತಾರೆ. ಆದರೆ ಆರೋಗ್ಯಕ್ಕೆ ಈ ಸುಲಭೋಪಾಯಗಳು ಮಾರಕವಾಗಿವೆ. ಈ ನಿಟ್ಟಿನಲ್ಲಿ ಎಸಗುವ ಸಾಮಾನ್ಯವಾದ ತಪ್ಪುಗಳಲ್ಲಿ ಪ್ರಮುಖವಾದ ಹತ್ತು ತಪ್ಪುಗಳನ್ನು ಇಲ್ಲಿ ವಿವರಿಸಲಾಗಿದೆ. ಇವುಗಳನ್ನು ಅನುಸರಿಸಿ ಮೂಲಕ ಆರೋಗ್ಯಕ್ಕೆ ಹಾನಿಯುಂಟಾಗುವುದರಿಂದ ತಪ್ಪಿಸಿಕೊಳ್ಳಿ. ಸದೃಢವಾದ ಮೂಳೆಗಳಿಗಾಗಿ ಅತ್ಯುತ್ತಮವಾದ ವ್ಯಾಯಾಮಗಳು

ದೇಹದ ತಾಪಮಾನವನ್ನು ಏರಿಸುವ ಪೂರ್ವ ವ್ಯಾಯಾಮಗಳನ್ನು ಮಾಡದೇ ಇರುವುದು

ದೇಹದ ತಾಪಮಾನವನ್ನು ಏರಿಸುವ ಪೂರ್ವ ವ್ಯಾಯಾಮಗಳನ್ನು ಮಾಡದೇ ಇರುವುದು

ಕಾರಿನ ಇಂಜಿನ್ನು ಶುರುವಾದ ಕೂಡಲೆ ಕೊಂಚಕಾಲ ಬಿಸಿಯಾಗಲು ಅನುವುಮಾಡಿಕೊಟ್ಟರೆ ಮುಂದಿನ ಪ್ರಯಾಣ ಸುಲಲಿತವಾಗಿರುತ್ತದೆ. ಇದೇ ಪ್ರಕಾರ ವ್ಯಾಯಾಮಕ್ಕೂ ಮೊದಲು ದೇಹವನ್ನು ಬಿಸಿಮಾಡುವ ಪೂರ್ವವ್ಯಾಯಾಮ (warm up exercise) ಗಳನ್ನು ಮಾಡುವುದು ಅತಿ ಅಗತ್ಯವಾಗಿದೆ. ನಿಧಾನಗತಿಯ ಓಟ, ಸೆಳೆತದ ವ್ಯಾಯಾಮಗಳು, ಸ್ಕಿಪ್ಪಿಂಗ್ ಮೊದಲಾದ ಸರಳ ವ್ಯಾಯಾಮಗಳಿಂದ ದೇಹ ನಿಧಾನವಾಗಿ ಬಿಸಿಯೇರುತ್ತದೆ. ಇದಕ್ಕೆ ತಗಲುವ ಸಮಯ ಸುಮಾರು ಇಪ್ಪತ್ತು ನಿಮಿಷಗಳು. ಈ ಸಮಯದಲ್ಲಿ ರಕ್ತಸಂಚಾರ ಹೆಚ್ಚಾಗಿ ಸ್ನಾಯುಗಳು ಸಡಿಲಗೊಳ್ಳುತ್ತವೆ. ಮುಂದಿನ ಹೆಚ್ಚು ಶಕ್ತಿ ಬೇಡುವ ವ್ಯಾಯಾಮಗಳಿಗೆ ರಕ್ತದಿಂದ ಪ್ರತಿ ಜೀವಕೋಶಗಳಿಗೆ ಶಕ್ತಿ ಸಮರ್ಪಕವಾಗಿ ಪೂರೈಸಲ್ಪಡುತ್ತದೆ. ಒಂದು ವೇಳೆ ಈ ಇಪ್ಪತ್ತು ನಿಮಿಷಗಳನ್ನು ಉಳಿಸಲು ನೇರವಾಗಿ ಭಾರೀ ವ್ಯಾಯಾಮಗಳನ್ನು ಪ್ರಾರಂಭಿಸಿದರೆ ಅಗತ್ಯವಿದ್ದಷ್ಟು ಶಕ್ತಿ ಪೂರೈಕೆಯಾಗದೇ ಜೀವಕೋಶಗಳು ನರಳುತ್ತವೆ. ತಕ್ಷಣ ನೋವು ವ್ಯಾಪಿಸಿ ಸುಸ್ತು ಆವರಿಸುತ್ತದೆ. ಇದು ಖಂಡಿತಾ ದೇಹಕ್ಕೆ ಒಳ್ಳೆಯದಲ್ಲ. ಇನ್ನೂ ಹೆಚ್ಚಿನ ಒತ್ತಡ ನೀಡಿದರೆ ದೇಹ ಕುಸಿಯಲೂಬಹುದಾದ ಅಪಾಯವಿದೆ.

ನೀವು ಸೇವಿಸುತ್ತಿರುವ ಆಹಾರವನ್ನು ಗಮನಿಸದೇ ಇರುವುದು

ನೀವು ಸೇವಿಸುತ್ತಿರುವ ಆಹಾರವನ್ನು ಗಮನಿಸದೇ ಇರುವುದು

ದಿನನಿತ್ಯದ ವ್ಯಾಯಾಮದ ಮೂಲಕ ನಮ್ಮ ದೇಹದಿಂದ ಸಾವಿರಾರು ಕ್ಯಾಲೋರಿಗಳು ದಹಿಸಲ್ಪಡುತ್ತವೆ. ಇವುಗಳನ್ನು ಮತ್ತೆ ಪೂರೈಸಲು ಸೂಕ್ತ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಒಂದು ವೇಳೆ ಸೂಕ್ತ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದಿದ್ದರೆ ಅಗತ್ಯಕ್ಕಿಂತಲೂ ಕಡಿಮೆ ಕ್ಯಾಲೋರಿಗಳು ಲಭ್ಯವಾಗಿ ದೇಹ ಬಳಲುತ್ತದೆ. ಇದಕ್ಕೆ ತದ್ವಿರುದ್ದವಾಗಿ ಅಗತ್ಯಕ್ಕಿಂತಲೂ ಹೆಚ್ಚು ಕ್ಯಾಲೋರಿಗಳನ್ನು ಸೇವಿಸಿದರೆ ದೇಹ ಇನ್ನಷ್ಟು ದಪ್ಪಗಾಗುವ ಅಪಾಯವಿರುತ್ತದೆ. ಇದಕ್ಕಾಗಿ ನೀವು ಸೇವಿಸುವ ಆಹಾರಗಳ ಪಟ್ಟಿ ಮಾಡಿ ಅದರಂತೆಯೇ ಪಾಲಿಸುವುದು ಮುಖ್ಯವಾಗಿದೆ.

ಹುರಿಗಟ್ಟಲು ಅಗತ್ಯವಾದ ಪ್ರಮುಖ ವ್ಯಾಯಾಮ ಮಾಡದೇ ಇರುವುದು

ಹುರಿಗಟ್ಟಲು ಅಗತ್ಯವಾದ ಪ್ರಮುಖ ವ್ಯಾಯಾಮ ಮಾಡದೇ ಇರುವುದು

ದಿನಗಟ್ಟಲೇ ವ್ಯಾಯಾಮ ಮಾಡಿದರೂ ಸ್ನಾಯುಗಳು ಹುರಿಗಟ್ಟದೇ ಇರಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದುದು ಸ್ನಾಯುಗಳಿಗೆ ಹೆಚ್ಚಿನ ಕೆಲಸ ನೀಡುವ ವ್ಯಾಯಾಮಗಳನ್ನು ಮಾಡದೇ ಇರುವುದು. ನಿಮ್ಮ ಜಿಮ್ ನ ದೈಹಿಕ ಶಿಕ್ಷಕರು ಇದರ ಬಗ್ಗೆ ಹೆಚ್ಚು ತಿಳಿದವರಾಗಿದ್ದಾರೆ. ಅವರಿಂದ ಈ ಬಗ್ಗೆ ಪಾಠಗಳನ್ನು ಹೇಳಿಸಿಕೊಂಡು ಅನುಸರಿಸುವುದು ಅಗತ್ಯವಾಗಿದೆ.

ಪ್ರತಿದಿನ ಒಂದೇ ವೇಳಾಪಟ್ಟಿಯನ್ನು ಅನುಸರಿಸುವುದು

ಪ್ರತಿದಿನ ಒಂದೇ ವೇಳಾಪಟ್ಟಿಯನ್ನು ಅನುಸರಿಸುವುದು

ಇದು ಹೆಚ್ಚಿನವರು ಮಾಡುವ ಒಂದು ಸಾಮಾನ್ಯ ತಪ್ಪು ಆಗಿದೆ. ಏಕೆಂದರೆ ರುಚಿಯಂತೆಯೇ ನಮ್ಮ ದೇಹಕ್ಕೂ ವ್ಯಾಯಾಮಗಳಲ್ಲಿ ವೈವಿಧ್ಯತೆ ಅಗತ್ಯವಾಗಿದೆ. ಈ ದಿನ ಅನುಸರಿಸಿದ ವ್ಯಾಯಾಮಗಳು ಮತ್ತು ಅನುಸರಿಸಿದ ಸರತಿಯನ್ನು ಮುಂದಿನ ದಿನ ಯಥಾವತ್ತಾಗಿ ಅನುಸರಿಸಬಾರದು. ಪ್ರತಿದಿನವೂ ಬದಲಿಸುತ್ತಾ ಇರಬೇಕು. ಪ್ರತಿ ವ್ಯಾಯಾಮವೂ ದೇಹದ ವಿಭಿನ್ನ ಸ್ನಾಯುಗಳಿಗೆ ಹೆಚ್ಚಿನ ಕೆಲಸ ನೀಡುವುದರಿಂದ ಸ್ನಾಯುಗಳನ್ನು ಅನುಸರಿಸಿ ವ್ಯಾಯಾಮಗಳು ಮತ್ತು ಅದಕ್ಕೆ ತಗಲುವ ಭಾರ ಮತ್ತು ಸಂಖ್ಯೆಗಳನ್ನು ಬದಲಿಸುತ್ತಾ ಹೋಗಬೇಕು. ಉದಾಹರಣೆಗೆ ಇಂದು ಕೈ ಮತ್ತು ಸೊಂಟದ ವ್ಯಾಯಾಮಗಳನ್ನು ಮಾಡಿದರೆ ನಾಳೆ ಕಾಲು ಮತ್ತು ಹೊಟ್ಟೆಯ ಸ್ನಾಯುಗಳಿಗೆ, ನಾಡಿದ್ದು ಭುಜ ಮತ್ತು ಬೆನ್ನಿನ ಸ್ನಾಯುಗಳಿಗೆ ಅಗತ್ಯವಾದ ವ್ಯಾಯಾಮಗಳನ್ನು ಮಾಡಬೇಕು. ಈ ರೀತಿಯನ್ನು ಅನುಸರಿಸುವುದರಿಂದ ಇಡಿಯ ದೇಹಕ್ಕೆ ಅತ್ಯುತ್ತಮವಾದ ವ್ಯಾಯಾಮ ದೊರಕುತ್ತದೆ ಮತ್ತು ಆರೋಗ್ಯ ವೃದ್ಧಿಸುತ್ತದೆ.

ನಿಮ್ಮ ತಾರೆಯರನ್ನು ನೆಚ್ಚಿಕೊಳ್ಳಬೇಡಿ

ನಿಮ್ಮ ತಾರೆಯರನ್ನು ನೆಚ್ಚಿಕೊಳ್ಳಬೇಡಿ

ಹೆಚ್ಚಿನ ಯುವಕ ಯುವತಿಯರು ತಮ್ಮ ನೆಚ್ಚಿನ ತಾರೆಯರನ್ನು ನಕಲು ಮಾಡಲೆಂದೇ ಜಿಮ್ ಸೇರಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ನಿಮ್ಮ ನೆಚ್ಚಿನ ತಾರೆಯರೂ ಈ ಮೈಕಟ್ಟು ಹೊಂದಲು ವರ್ಷಗಟ್ಟಲೇ ಕಠಿಣ ಪರಿಶ್ರಮ ಪಟ್ಟಿರುವುದನ್ನು ಮಾತ್ರ ಯಾವ ಪತ್ರಿಕೆಯೂ ಬರೆಯುವುದಿಲ್ಲ. ಅಲ್ಲದೇ ಪೋಟೋದಲ್ಲಿ ಈ ಸ್ನಾಯುಗಳನ್ನು ಹೆಚ್ಚು ಕಟ್ಟುಮಸ್ತಾಗಿರುವಂತೆ ತೋರಲು ಬೆಳಕಿನ ಮತ್ತು ಮೇಕಪ್‌ನ ಉಪಯೋಗವಾಗಿರುತ್ತದೆ. ಅಲ್ಪ ಕಾಲದ ಜಿಮ್‌ನ ಕಠಿಣ ಅಭ್ಯಾಸದಿಂದ ಸ್ನಾಯುಗಳು ಹುರಿಗಟ್ಟಿದಂತೆ ಕಂಡುಬಂದರೂ ಎರಡು ವಾರಗಳಲ್ಲಿ ಈ ವ್ಯಾಮೋಹ ಕಡಿಮೆಯಾಗಿ ವ್ಯಾಯಾಮವೂ ಕಡಿಮೆಯಾಗುತ್ತದೆ. ಪರಿಣಾಮವಾಗಿ ಹುರುಗಟ್ಟಿದ್ದ ಸ್ನಾಯುಗಳ ಮೇಲೆ ಮತ್ತೆ ಕೊಬ್ಬು ಶೇಖರವಾಗುತ್ತದೆ. ಅಲ್ಲದೇ ಮೊದಲಿಗಿಂತಲೂ ಹೆಚ್ಚು ದಪ್ಪನಾಗುವ ಸಾಧ್ಯತೆಗಳಿವೆ! ಇದಕ್ಕೆ ಕಾರಣ ನಿಮಗೆ ದೃಢಸಂಕಲ್ಪವಿಲ್ಲದಿರುವುದು ಮತ್ತು ತಾರೆಯರನ್ನು ಅನುಸರಿಸುವ ವ್ಯಾಮೋಹಕ್ಕೆ ಮರುಳಾಗುವುದು. ವಾಸ್ತವವನ್ನು ಪರಿಗಣಿಸಿ. ದೃಢಸಂಕಲ್ಪದ ಮೂಲಕವೇ ನಿಜವಾದ ಮೈಕಟ್ಟು ಪಡೆಯಲು ಸಾಧ್ಯವಾಗುತ್ತದೆ.

ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಸೇವಿಸಬೇಡಿ

ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಸೇವಿಸಬೇಡಿ

ಗಣಿತದ ಸರಳ ಸಮೀಕರಣದ ಪ್ರಕಾರ ಪಾತ್ರೆಯಿಂದ ಹೊರಹೋಗುವ ನೀರಿಗಿಂತಲೂ ಒಳಬರುವ ನೀರು ಕಡಿಮೆ ಇದ್ದರೆ ಮಾತ್ರ ಪಾತ್ರೆಯ ತೂಕ ಕಡಿಮೆಯಾಗುತ್ತಾ ಹೋಗುತ್ತದೆ. ಇದೇ ಪ್ರಕಾರ ನೀವು ವ್ಯಾಯಾಮದ ಮೂಲಕ ದಹಿಸುವ ಕ್ಯಾಲೋರಿಗಿಂತಲೂ ಕಡಿಮೆ ಕ್ಯಾಲೋರಿಗಳನ್ನು ಸೇವಿಸಿದರೆ ಮಾತ್ರ ತೂಕ ಇಳಿಯಲು ಸಾಧ್ಯವಾಗುತ್ತದೆ. ಆದರೆ ಈ ಪ್ರಮಾಣವನ್ನು ಲೆಕ್ಕ ಹಾಕುವುದು ಅಷ್ಟು ಸುಲಭವಲ್ಲ. ಇದಕ್ಕೆ ವೈದ್ಯರು ಒಂದು ಮಿತಿಯನ್ನು ನಿಗದಿಪಡಿಸಿದ್ದಾರೆ. ಪುರುಷರಿಗೆ ಗರಿಷ್ಟ 1800 ಮತ್ತು ಮಹಿಳೆಯರಿಗೆ 1200 ಕ್ಯಾಲೋರಿಗಳು ಪ್ರತಿದಿನ ಅಗತ್ಯವಿದೆ. ಇದನ್ನು ಪರಿಗಣಿಸಲು BMR [basal metabolic rate] ಎಂಬ ಕೋಷ್ಟಕವನ್ನು ನಿರ್ಮಿಸಲಾಗಿದೆ. ಇದರ ಪ್ರಕಾರ ಪ್ರತಿ ವ್ಯಕ್ತಿಯ ಅಂಕಿ ಅಂಶಗಳು ಭಿನ್ನವಾಗಿರುತ್ತವೆ. ಈ ಕೋಷ್ಟಕವನ್ನು ಅನುಸರಿಸಿ ಎಷ್ಟು ಕ್ಯಾಲೋರಿಗಳು ನಿಮಗೆ ಸೂಕ್ತ ಎಂಬುದನ್ನು ಅನುಸರಿಸಿ ಆ ಪ್ರಕಾರ ವ್ಯಾಯಾಮ ಮತ್ತು ಆಹಾರಗಳನ್ನು ಅನುಸರಿಸಿ.

ನಿಮ್ಮ ದೈಹಿಕ ಶಿಕ್ಷಕರು ಸೂಚಿಸಿದ ಮಾರ್ಗಗಳನ್ನು ಅನುಸರಿಸಿ

ನಿಮ್ಮ ದೈಹಿಕ ಶಿಕ್ಷಕರು ಸೂಚಿಸಿದ ಮಾರ್ಗಗಳನ್ನು ಅನುಸರಿಸಿ

ನಿಮ್ಮ ದೇಹ ಮತ್ತು ವ್ಯಾಯಾಮಗಳ ಬಗ್ಗೆ ನಿಮಗಿಂತಲೂ ನಿಮ್ಮ ದೈಹಿಕ ಶಿಕ್ಷಕರು ಹೆಚ್ಚು ಅರಿತವರಾಗಿದ್ದಾರೆ. ಪ್ರಥಮ ಆರು ತಿಂಗಳಾದರೂ ಅವರು ಸೂಚಿಸಿದ ವ್ಯಾಯಾಮ ಮತ್ತು ಆಹಾರಗಳನ್ನು ಯಥಾವತ್ತಾಗಿ ಅನುಸರಿಸುವುದು ಶ್ರೇಯಸ್ಕರ. ಏಕೆಂದರೆ ಕೇವಲ ನಿಮಗಿಷ್ಟವಾದ ವ್ಯಾಯಾಮಗಳನ್ನು ಮಾಡುವುದು ಅಡುಗೆಯಲ್ಲಿ ಕೇವಲ ನೀರುಳ್ಳಿ ಕೊಚ್ಚಿದಂತೆ ಆಗುತ್ತದೆ. ಸುಮಾರು ಆರು ತಿಂಗಳ ಬಳಿಕ ನೀವು ಪಡೆದ ಮೈಕಟ್ಟನ್ನು ಅನುಸರಿಸಿ ನಿಮಗೆ ಅಗತ್ಯವಾದ ವ್ಯಾಯಾಮಗಳ ಸ್ಥೂಲವಾದ ಪರಿಚಯವಾಗಿರುತ್ತದೆ. ಇದನ್ನೇ ಮುಂದೆಯೂ ಅನುಸರಿಸಿಕೊಂಡು ಹೋದರೆ ಸಾಕಷ್ಟಾಯಿತು.

ನಿಮ್ಮ ಟ್ರೆಡ್ ಮಿಲ್‌ನ ಇಳಿಜಾರನ್ನು ಬದಲಿಸುವುದೇ ಇರುವುದು

ನಿಮ್ಮ ಟ್ರೆಡ್ ಮಿಲ್‌ನ ಇಳಿಜಾರನ್ನು ಬದಲಿಸುವುದೇ ಇರುವುದು

ಯಾವುದೇ ವ್ಯಾಯಾಮದಲ್ಲಿ ಕೊಂಚ ವಿರೋಧವನ್ನು ಎದುರಿಸುವುದೇ ನಿಜವಾದ ಕಾರ್ಯವಾಗಿದೆ. ಉದಾಹರಣೆಗೆ ಭಾರವನ್ನು ಎತ್ತುವ ಮೂಲಕ ಗುರುತ್ವಾಕರ್ಷಣೆಗೆ ವಿರುದ್ದವಾಗಿ ನಾವು ಕೆಲಸ ಮಾಡುತ್ತೇವೆ. ಇದೇ ರೀತಿ ನಿಮ್ಮ ಮನೆಯಲ್ಲಿರುವ ಟ್ರೆಡ್ ಮಿಲ್ ನ ಇಳಿಜಾರನ್ನು ಕೊಂಚವೇ ಹೆಚ್ಚಿಸುವುದರಿಂದ ಹೆಚ್ಚಿನ ಬಲ ನೀಡಿದಂತಾಗುತ್ತದೆ. ಕೊಂಚ ಬದಲಾವಣೆ ಮಹತ್ತದವಾದ ವ್ಯತ್ಯಾಸವನ್ನು ಪ್ರಕಟಿಸುತ್ತದೆ.

ತೂಕವಿಳಿಸುವ ಭರದಲ್ಲಿ ಒಮ್ಮೆಲೇ ಹೆಚ್ಚಿನ ತೂಕದ ವ್ಯಾಯಾಗಳನ್ನು ಮಾಡಲು ಹವಣಿಸುವುದು

ತೂಕವಿಳಿಸುವ ಭರದಲ್ಲಿ ಒಮ್ಮೆಲೇ ಹೆಚ್ಚಿನ ತೂಕದ ವ್ಯಾಯಾಗಳನ್ನು ಮಾಡಲು ಹವಣಿಸುವುದು

ಚಿಕ್ಕ ಚಿಕ್ಕ ತೂಕಗಳಿಂದ ಪ್ರಾರಂಭವಾದ ನಿಮ್ಮ ವ್ಯಾಯಾಮಗಳು ನಿಮಗೆ ಚಿಲ್ಲರೆ ಎಂದು ಅನ್ನಿಸಿ ಅಕ್ಕಪಕ್ಕದಲ್ಲಿ ಬೇರೆಯವರು ಹೆಚ್ಚಿನ ತೂಕವನ್ನು ಬಳಸಿ ಮಾಡುವ ವ್ಯಾಯಾಮಗಳೆಡೆ ನಿಮ್ಮ ಒಲವು ಹೆಚ್ಚುತ್ತದೆ. ಇದು ಸಹಜವಾದರೂ ಅತ್ಯಂತ ಅಪಾಯಕಾರಿಯಾಗಿದೆ. ಏಕೆಂದರೆ ಈ ಹೆಚ್ಚಿನ ಭಾರವನ್ನು ತಡೆಯುವಷ್ಟು ಶಕ್ತಿಯನ್ನು ನಿಮ್ಮ ಸ್ನಾಯುಗಳು ಇನ್ನೂ ಪಡೆದಿರುವುದಿಲ್ಲ. ಇದಕ್ಕಾಗಿ ತಾಳ್ಮೆ ವಹಿಸಿ, ನಿಮ್ಮ ದೈಹಿಕ ಶಿಕ್ಷಕರ ನಿರ್ದೇಶನದಂತೆ ಕ್ರಮೇಣವಾಗಿ ಹಂತಹಂತವಾಗಿ ತೂಕವನ್ನು ಹೆಚ್ಚಿಸುತ್ತಾ ಹೋಗಿ.

ಒಂದು ಖಚಿತವಾದ ವೇಳಾಪಟ್ಟಿ ಇಲ್ಲದೇ ಇರುವುದು

ಒಂದು ಖಚಿತವಾದ ವೇಳಾಪಟ್ಟಿ ಇಲ್ಲದೇ ಇರುವುದು

ಯಾವುದೇ ಕಾರ್ಯಕ್ಕೆ ಒಂದು ಕಾರ್ಯಸೂಚಿ ಇದ್ದರೆ ಅದರಂತೆ ನಡೆಯುವುದು ಸುಲಭವೂ ಫಲಪ್ರದವೂ ಆಗುತ್ತದೆ. ತೂಕ ಇಳಿಸುವ ನಿಟ್ಟಿನಲ್ಲಿಯೂ ಒಂದು ನಿಗದಿತ ಕಾರ್ಯಸೂಚಿ ಇದ್ದರೆ ಅದರ ಪ್ರಕಾರ ವ್ಯಾಯಾಮ ಮತ್ತು ಆಹಾರಗಳನ್ನು ಅನುಸರಿಸುವುದು ಸುಲಭವಾಗುತ್ತದೆ. ನಿಮ್ಮ ದೈಹಿಕ ಶಿಕ್ಷಕರು ಈ ಕಾರ್ಯಸೂಚಿಯನ್ನು ರೂಪಿಸಲು ಸಹಾಯ ನೀಡುತ್ತಾರೆ. ಇದರ ಪ್ರಕಾರವೇ ನಡೆದುಕೊಳ್ಳಲು ಪ್ರಯತ್ನಿಸಿ. ಸಮಯದ ಪ್ರಕಾರ ನಿಮ್ಮ ತೂಕ ಸಮರ್ಪಕವಾಗಿ ಇಳಿಯುತ್ತಿದೆಯೇ ಇಲ್ಲವೇ ಎಂಬ ವಿವರಗಳನ್ನು ಪರಾಮರ್ಶಿಸಿಕೊಳ್ಳಬಹುದು. ಅದರ ಪ್ರಕಾರ ನಿಮ್ಮ ವ್ಯಾಯಾಮಗಳು ತೀರಾ ತೀವ್ರಗತಿಯಲ್ಲಿವೆಯೇ ನಿಧಾನಗತಿಯಲ್ಲಿವೆಯೇ ಎಂದು ವಿಮರ್ಶಿಸಿ ಅದರ ಪ್ರಕಾರ ಮುಂದಿನ ವ್ಯಾಯಾಮಗಳನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಪ್ರಕಾರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೇ ತೂಕವನ್ನೂ ಸಮರ್ಪಕವಾಗಿ ಇಳಿಸಬಹುದು.

English summary

10 Gym Mistakes That Fail Weight Loss

Everybody wants instant results when they start off with a weight-loss regime. While there isn't a secret formula for that, there are a few things that you can do to avoid the common pitfalls that befall weight loss enthusiasts. There are some gym mistakes to avoid at all costs. Take a look. Missing out on warm-up,
X
Desktop Bottom Promotion