For Quick Alerts
ALLOW NOTIFICATIONS  
For Daily Alerts

ಸೀಬೆಕಾಯಿಯಲ್ಲಿದೆ ಟಾಪ್ 13 ಆರೋಗ್ಯವರ್ಧಕ ಗುಣಗಳು

|

ಸೀಬೆಕಾಯಿಯನ್ನು ಒಂದು ಸೂಪರ್ ಫುಡ್ ಎಂದೆ ಹೇಳಬಹುದು. ಇದರ ಇದರ ಸಿಪ್ಪೆ, ಬೀಜ ಯಾವುದನ್ನು ಬಿಸಾಡುವಂತಿಲ್ಲ. ಇದರಲ್ಲಿ ನಿಮ್ಮ ದೇಹದಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳು ಹಾಗೂ ಔಷಧೀಯ ಗುಣಗಳಿವೆ.

ನೀವು ಸೀಬೆಕಾಯಿ ಪ್ರಿಯರಾಗಿದ್ದರೆ ಅದರ ಪ್ರಯೋಜನಗಳನ್ನು ಕೂಡ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲಿ ನಾವು ಸೀಬೆಕಾಯಿಯಲ್ಲಿರುವ ಅದ್ಭುತ ಆರೋಗ್ಯವರ್ಧಕ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

ಖನಿಜಾಂಶಗಳ ಆಗರ

ಖನಿಜಾಂಶಗಳ ಆಗರ

ಸೀಬೆಕಾಯಿನ್ನು ಖನಿಜಾಂಶಗಳ ಆಗರವೆಂದೇ ಹೇಳಬಹುದು. ಇದರಲ್ಲಿ ಕಬ್ಬಿಣದಂಶ, ಫಾಲಿಕ್ ಆಸಿಡ್, ನಿಕೋಟಿಕ್ ಆಸಿಡ್, ವಿಟಮಿನ್ ಎ, ಬಿ, ಸಿ ಹಾಗೂ ನಾರಿನಂಶಗಳಿವೆ ಇದರಲ್ಲಿ ವಿಟಮಿನ್ ಸಿ ಕಿತ್ತಳೆಯಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಅಧಿಕವಿದೆ.

ತೆಳ್ಳಗಾಗಲು ಡಯಟ್

ತೆಳ್ಳಗಾಗಲು ಡಯಟ್

ಸೀಬೆಕಾಯಿಯಲ್ಲಿ ನಾರಿನಂಶ ಹಾಗೂ ಖನಿಜಾಂಶಗಳು ಅಧಿಕವಿದ್ದು ಇದನ್ನು ತಿಂದರೆ ದೇಹಕ್ಕೆ ಅಗತ್ಯದ ಪೋಷಕಾಂಶ ದೊರೆಯುತ್ತದೆ, ಹೊಟ್ಟೆಯೂ ತುಂಬುವುದು. ತೆಳ್ಳಗಾಗಲು ಡಯಟ್ ಮಾಡುವವರು ಇದನ್ನು ಸೇರಿಸುವುದು ಒಳ್ಳೆಯದು.

ಮೊಡವೆ ರಹಿತ ತ್ವಚೆಗಾಗಿ

ಮೊಡವೆ ರಹಿತ ತ್ವಚೆಗಾಗಿ

ಹದಿಹರೆಯದವರಲ್ಲಿ ಕಂಡು ಬರುವ ಅತೀ ದೊಡ್ಡ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ ಬರುವುದು. ಇದನ್ನು ತಿನ್ನಿ ಹಾಗೂ ಒಂದು ಚಿಕ್ಕ ತುಂಡು ಹಣ್ಣಾದ ಸೀಬೆಕಾಯಿಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಮೊಡವೆ ಕಡಿಮೆಯಾಗುವುದು.

ಶೀತ ಉಂಟಾದರೆ ಸೀಬೆಕಾಯಿ ತಿನ್ನಿ

ಶೀತ ಉಂಟಾದರೆ ಸೀಬೆಕಾಯಿ ತಿನ್ನಿ

ಸಾಮಾನ್ಯವಾಗಿ ಶೀತ ಉಂಟಾದರೆ ಸೀಬೆಕಾಯಿ ತಿನ್ನಬಾರದು ಅನ್ನುವುದನ್ನು ನೀವು ಕೇಳಿರಬಹುದು. ಆದರೆ ಶೀತ ಉಂಟಾದರೆ ಸೀಬೆಕಾಯಿ ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹಾಗೂ ಕಬ್ಬಿಣದಂಶವಿದ್ದು ಶೀತವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣಾದ ಸೀಬೆಕಾಯಿಯನ್ನು ಪ್ರತೀದಿನ ತಿನ್ನಿ, ಉತ್ತಮ ಫಲಿತಾಂಶ ಕಾಣುವಿರಿ.

 ಪ್ರತ್ಯಾಮ್ಲ(antioxidants)

ಪ್ರತ್ಯಾಮ್ಲ(antioxidants)

ಸೀಬೆಕಾಯಿಯ ಸಿಪ್ಪೆಯಲ್ಲಿ antioxidants ಅಧಿಕವಿದ್ದು ಸ್ತನ ಕ್ಯಾನ್ಸರ್, ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿಯಲ್ಲಿ ಕಂಡು ಬರುವ ಕ್ಯಾನ್ಸರ್ ಅನ್ನು ತಡೆಯುತ್ತದೆ.

ಕಣ್ಣಿಗೆ ತುಂಬಾ ಒಳ್ಳೆಯದು

ಕಣ್ಣಿಗೆ ತುಂಬಾ ಒಳ್ಳೆಯದು

ಇದರಲ್ಲಿ ವಿಟಮಿನ್ ಎ ಶೇ. 21 ಇದ್ದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಇರುಳು ಕುರುಡು ಉಂಟಾಗದಂತೆ ಕಣ್ಣನ್ನು ರಕ್ಷಣೆ ಮಾಡುತ್ತದೆ.

ಅಧಿಕ ರಕ್ತದೊತ್ತಡವಿದೆಯೇ?

ಅಧಿಕ ರಕ್ತದೊತ್ತಡವಿದೆಯೇ?

ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರು ಇದನ್ನು ತಿಂದರೆ ಒಳ್ಳೆಯದು. ಇದರಲ್ಲಿ ಶೇ. 20ರಷ್ಟು ಪೊಟಾಷ್ಯಿಯಂ ಇದ್ದು , ಸೋಡಿಯಂನ ಉತ್ಪತ್ತಿಯನ್ನು ಕಡಿಮೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಥೈರಾಯ್ಡ್ ಗ್ರಂಥಿ

ಥೈರಾಯ್ಡ್ ಗ್ರಂಥಿ

ನಮ್ಮ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಗಳ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾದರೆ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಸೀಬೆಕಾಯಿ ಥೈರಾಯ್ಡ್ ಹಾರ್ಮೋನ್ ಗಳ ಉತ್ಪತ್ತಿಗೆ ಸಹಕಾರಿಯಾಗಿದೆ.

 ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ

ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ

ಇದರಲ್ಲಿ ಮ್ಯಾಗ್ನಿಷಿಯಂ ಇರುವುದರಿಂದ ಸ್ನಾಯುಗಳಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ ಅದಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಇದರಿಂದ ಮೈಕೈ ಸೆಳೆತ ಕಡಿಮೆಯಾಗುವುದು.

 ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಬಿ ಗುಂಪಿನ ವಿಟಮಿನ್ ಗಳು ಮೆದುಳಿಗೆ ಅವಶ್ಯಕ. ಸೀಬೆಕಾಯಿಯಲ್ಲಿ ಬಿ3 ಹಾಗೂ ಬಿ6 ವಿಟಮಿನ್ ಇದ್ದು ಮೆದುಳಿನ ನರಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ತ್ವಚೆಗೆ ಒಳ್ಳೆಯದು

ತ್ವಚೆಗೆ ಒಳ್ಳೆಯದು

ಸೀಬೆಕಾಯಿಯಲ್ಲಿ ವಿಟಮಿನ್ ಇ ಇದೆ. ತ್ವಚೆ ರಕ್ಷಣೆಯಲ್ಲಿ ವಿಟಮಿನ್ ಇ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು

ಗರ್ಭಿಣಿಯರಿಗೆ ಒಳ್ಳೆಯದು

ಇದರಲ್ಲಿ ಫಾಲಿಕ್ ಆಸಿಡ್ ಹಾಗೂ ಇತರ ಖನಿಜಾಂಶಗಳು ಇರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ.

English summary

Top Health Benefit Of Guava | Tips For Health | ಸೀಬೆಕಾಯಿಯ ಟಾಪ್ 10 ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Looking for other sources of fiber? Grab a delicious guava. It is rich in fiber, one of the most talked about nutrients today as it has found to be beneficial in a wide range of disease prevention.
X
Desktop Bottom Promotion