For Quick Alerts
ALLOW NOTIFICATIONS  
For Daily Alerts

ವಿಟಮಿನ್ ಕೆ ಪ್ರಾಮುಖ್ಯತೆ

|

ಪರಿಣಿತರ ಪ್ರಕಾರ ದಿನ ನಿತ್ಯದ ಆಹಾರ ಕ್ರಮದಲ್ಲಿ ಸೇವಿಸಲೇಬೇಕಾದ ಮುಖ್ಯವಾದ ವಿಟಮಿನ್ ಎಂದರೆ ವಿಟಮಿನ್ ಕೆ. ಇದು ರಕ್ತವನ್ನು ಹೆಪ್ಪುಗಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ದೇಹದ ಇನ್ನಿತರ ಪ್ರಕ್ರಿಯೆಗಳಿಗೆ ನೆರವು ನೀಡುತ್ತದೆ. ಹಲವರು ಇದನ್ನು ಮರೆತುಹೋಗುವ ವಿಟಮಿನ್ ಎಂದೇ ಕರೆಯುತ್ತಾರೆ. ಏಕೆಂದರೆ ಇದರ ಆರೋಗ್ಯಕಾರಿ ಪ್ರಯೋಜನಗಳನ್ನು ನಿರ್ಲಕ್ಷಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಇದನ್ನು ವಿಟಮಿನ್ ಡಿಯೊಂದಿಗೆ ಸೇರಿಸ ಹೇಳಲಾಗುತ್ತಿದೆ. ಏಕೆಂದರೆ ಇವೆರಡೂ ಹೆಚ್ಚುಕಡಿಮೆ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ. ವಿಟಮಿನ್ ಡಿ ಹೃದಯ ಸಂಬಂಧಿ ವಿಷಯಗಳಲ್ಲಿ ಬಹಳ ಮುಖ್ಯವಾದುದು ಅದೇ ರೀತಿ ವಿಟಮಿನ್ ಕೆಯನ್ನು ಕೂಡ ಇದರೊಂದಿಗೆ ಬಳಸಲಾಗುವುದು. ಬೋಲ್ಡ್ ಸ್ಕೈ ಇಂದು ವಿಟಮಿನ್ ಕೆಯ ಪ್ರಾಮುಖ್ಯತೆಯನ್ನು ನಿಮಗೆ ತಿಳಿಸಿಕೊಡುತ್ತದೆ.

ವಿಟಮಿನ್ ಕೆಯ ಪ್ರಾಮುಖ್ಯತೆ

ಮೂಳೆಗಳಿಗೆ

ಮೂಳೆಗಳಿಗೆ

ಮೂಳೆಗಳ ಆರೋಗ್ಯವನ್ನು ಕಾಪಾಡಲು ವಿಟಮಿನ್ ಕೆ ಬಹಳ ಮುಖ್ಯವಾದದ್ದು. ಕ್ಯಾಲ್ಸಿಯಂ ಜೊತೆಯಲ್ಲಿ ಇದು ಕೂಡ ಮೂಳೆಗಳನ್ನು ಗಟ್ಟಿಮಾಡುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

ನೀವು ಕ್ಯಾನ್ಸರ್ ರೋಗಿಯಾಗಿದ್ದಲ್ಲಿ ವಿಟಮಿನ್ ಕೆಯನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ. ಇದರಲ್ಲಿನ ಫ್ಲವೊನಾಯಿಡ್ಸ್ ಫೈಟೊನ್ಯೂಟ್ರಿಯೆಂಟ್ ಆಗಿದ್ದು ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಸ್ಪಿನಾಚ್ ಮತ್ತು ಬ್ರೊಕೊಲಿಯಂತಹವುಗಳಲ್ಲಿ ಇದು ಹೆಚ್ಚಾಗಿದೆ.

ರಕ್ತದೊತ್ತಡ

ರಕ್ತದೊತ್ತಡ

ರಕ್ತದೊತ್ತಡದಿಂದ ಬಳಲುತ್ತಿರುವವರು ವಿಟಮಿನ್ ಕೆಯನ್ನು ತಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬೇಕು. ಇದು ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ದೃಷ್ಟಿ

ದೃಷ್ಟಿ

ಕ್ಯಾರೆಟ್ ಜೊತೆಗೆ ಬ್ರೊಕೊಲಿ, ಕೋಸು ಮತ್ತು ಸ್ಪಿನಾಚ್ ನಂತಹ ತರಕಾರಿಗಳನ್ನು ಸೇವಿಸುವುದರಿಂದ ದೃಷ್ಟಿ ಉತ್ತಮಗೊಳ್ಳುತ್ತದೆ. ಈ ತರಕಾರಿಗಳಲ್ಲಿ ವಿಟಮಿನ್ ಕೆ ಹೆಚ್ಚಿರುತ್ತದೆ. ಇವುಗಳನ್ನು ವಾರಕ್ಕೊಮ್ಮೆಯಾದರೂ ಬಳಸಿದರೆ ಒಳ್ಳೆಯದು. ಇದು ಮಂದದೃಷ್ಟಿಯ ಸಮಸ್ಯೆಯನ್ನು ನಿವಾರಿಸುತ್ತದೆ.

ರೋಗ ನಿರೋಧಕಶಕ್ತಿ

ರೋಗ ನಿರೋಧಕಶಕ್ತಿ

ಇತ್ತೀಚಿನ ದಿನಗಳಲ್ಲಿ ಹಲವರು ರೋಗನಿರೋಧಕ ಶಕ್ತಿ ಹೆಚ್ಚಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಟಮಿನ್ ಕೆಯೊಂದೆ ಇದಕ್ಕೆ ಪರಿಹಾರ. ಹಸಿರೆಲೆ ತರಕಾರಿಗಳ ಜ್ಯೂಸ್ ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಮೆದುಳು

ಮೆದುಳು

ನಿಮಗೆ ಒತ್ತಡವುಂಟಾದಾಗ ಮೆದುಳಿಗೆ ಅದನ್ನು ಸಹಿಸಲು ಶಕ್ತಿ ಬೇಕಾಗುತ್ತದೆ. ವಿಟಮಿನ್ ಕೆಯುಕ್ತ ಆಹಾರವನ್ನು ಮೆದುಳಿನ ಆಹಾರವೆಂದು ಕರೆಯುತ್ತಾರೆ. ಇದನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ.

ನರಸಂಬಂಧಿ ಸಮಸ್ಯೆಗಳು

ನರಸಂಬಂಧಿ ಸಮಸ್ಯೆಗಳು

ಅನಿಯಂತ್ರಿತ ಒತ್ತಡದಿಂದಾಗಿ ನರವ್ಯೂಹವು ತೊಂದರೆಗೆ ಒಳಗಾಗುತ್ತದೆ. ಆಗ ನೀವು ವಿಟಮಿನ್ ಕೆ ಆಹಾರವನ್ನು ಸೇವಿಸಬೇಕು. ಮೂರ್ಛೆರೋಗಕ್ಕೆ ಇದು ಉತ್ತಮವಾದದ್ದು.

ಶುದ್ಧಿ

ಶುದ್ಧಿ

ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿರುವ ಹದಿಹರೆಯದವರು ತಮ್ಮ ರಕ್ತ ಶುದ್ಧಿಗೆ ಇದನ್ನು ಬಳಸುವುದು ಒಳ್ಳೆಯದು. ಇದಕ್ಕೆ ಇರುವ ಒಂದೇ ದಾರಿಯೆಂದರೆ ವಿಟಮಿನ್ ಕೆ ಹೆಚ್ಚಿರುವ ಹಸಿರು ತರಕಾರಿಗಳನ್ನು ತಿನ್ನುವುದು.

ಪೌಷ್ಟಿಕಾಂಶ

ಪೌಷ್ಟಿಕಾಂಶ

ಹೆಚ್ಚಿನ ಪೌಷ್ಟಿಕಾಂಶವಿರುವ ಆಹಾರಗಳಲ್ಲಿ ಇದು ಹೆಚ್ಚಿರುತ್ತದೆ. ಹಸಿರೆಲೆ ತರಕಾರಿಗಳಾದ ಎಲೆಕೋಸು ಮತ್ತು ಸ್ಪಿನಾಚ್ ಇದಕ್ಕೆ ಉತ್ತಮ ಉದಾಹರಣೆ.

ಹೊಟ್ಟೆನೋವು

ಹೊಟ್ಟೆನೋವು

ನೀವು ಕೆಲವು ಸಾರಿ ಸಿಕ್ಕಾಪಟ್ಟೆ ಹೊಟ್ಟೆನೋವಿನಿಂದ ಬಳಲಬಹುದು. ಅಂತಹ ಸಮಯದಲ್ಲಿ ವಿಟಮಿನ್ ಕೆ ಹೆಚ್ಚಿರುವ ಆಹಾರಗಳು ಈ ನೋವಿನಿಂದ ಹೊರಬರಲು ನೆರವು ನೀಡುತ್ತವೆ. ನಿಮಗೆ ಹೊಟ್ಟೆ ನೋವು ಶುರುವಾದ ತಕ್ಷಣ ತರಕಾರಿ ಜ್ಯೂಸ್ ಕುಡಿಯಿರಿ.

ತಲೆನೋವು

ತಲೆನೋವು

ಪದೇ ಪದೇ ಕಾಡುವ ತಲೆನೋವಿನಿಂದ ಹೊರಬರಲು ನಿಮ್ಮ ಡಯೆಟ್ ನಲ್ಲಿ ವಿಟಮಿನ್ ಕೆ ಸೇರಿಸಿಕೊಳ್ಳಿ. ಇದರಿಂದ ನೀವು ತಲೆನೋವಿನಿಂದ ಮುಕ್ತರಾಗಬಹುದು.

ರಕ್ತ ಹೆಪ್ಪುಗಟ್ಟುವಿಕೆ

ರಕ್ತ ಹೆಪ್ಪುಗಟ್ಟುವಿಕೆ

ಇತ್ತೀಚಿನ ದಿನಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಜನ ಹೆಚ್ಚಾಗಿ ಎದುರಿಸುತ್ತಿದ್ದಾರೆ. ಇವು ನಿಮ್ಮ ಹೃದಯಕ್ಕೆ ಹಾನಿಯುಂಟುಮಾಡುತ್ತದೆ. ಆದ್ದರಿಂದ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಮುನ್ನಚ್ಚರಿಕೆಯ ಕ್ರಮವಾಗಿ ವಿಟಮಿನ್ ಕೆಯುಕ್ತ ಆಹಾರ ಸೇವಿಸಿ.

ಗರ್ಭಿಣಿಯರು

ಗರ್ಭಿಣಿಯರು

ಪರಿಣಿತರ ಪ್ರಕಾರ ನೀವು ಗರ್ಭಿಣಿಯರಾಗಿದ್ದಾಗ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆಗೆ ವಿಟಮಿನ್ ಕೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಬ್ರೊಕೊಲಿ ಮತ್ತು ಎಲೆಕೋಸು ಈ ಸಮಯದಲ್ಲಿ ಗರ್ಭಿಣಿಯರಿಗೆ ಒಳ್ಳೆಯದು.

ಹೊಟ್ಟೆ ಉಬ್ಬರ

ಹೊಟ್ಟೆ ಉಬ್ಬರ

ನೀವು ಹೊಟ್ಟೆ ಉಬ್ಬರದಿಂದ ನರಳುತ್ತಿರುವಿರಾದರೆ ನಿಮಗೆ ವಿಟಮಿನ್ ಕೆ ಅವಶ್ಯಕತೆಯಿದೆ ಎಂದರ್ಥ. ನಿಮಗೆ ಹೊಟ್ಟೆ ಉಬ್ಬರ ಕಾಣಿಸಿಕೊಂಡ ತಕ್ಷಣ ಹಸಿರೆಲೆ ತರಕಾರಿಗಳನ್ನು ತಿನ್ನಿ. ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ.

ಇರುಸುಮುರಿಸು

ಇರುಸುಮುರಿಸು

ನೀವು ಸಣ್ಣ ಸಣ್ಣ ಸಂಗತಿಗಳಿಂದಲೂ ಇರಿಸುಮುರಿಸಾಗುತ್ತಿರುವಿರಾ? ಪರಿಣಿತರ ಪ್ರಕಾರ ಇದಕ್ಕೆ ಕಾರಣ ವಿಟಮಿನ್ ಕೆಯ ಕೊರತೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ವಿಟಮಿನ್ ಕೆಯುಕ್ತ ಆಹಾರವನ್ನು ಸೇವಿಸಿ.

English summary

Importance Of Vitamin K For Health

According to experts, it is said that the most important Vitamin one should add to their daily diet is Vitamin K. It is this vitamin which is fat-soluble in nature and is also well know for the important role it plays in blood clotting.
Story first published: Thursday, December 19, 2013, 12:04 [IST]
X
Desktop Bottom Promotion