For Quick Alerts
ALLOW NOTIFICATIONS  
For Daily Alerts

ಉದ್ದಿನ ಬೇಳೆಯಲ್ಲಿರುವ ಅದ್ಭುತ ಗುಣಗಳು!

|

ಉದ್ದಿನ ಬೇಳೆಯನ್ನು ವಡೆ, ಇಡ್ಲಿ, ದೋಸೆ ಮಾಡುವಾಗ ಮೃದುವಾಗಿ ರುಚಿಯಾಗಿ ಬರಲೆಂದು ಬಳಸುತ್ತೇವೆ, ಸಾರು ಮಾಡುವಾಗಲೂ ಅಡುಗೆ ಘಮ್ಮೆನ್ನುವ ವಾಸನೆ ಬೀರಲು ಸ್ವಲ್ಪ ಉದ್ದಿನ ಬೇಳೆಯನ್ನು ಬಳಸುತ್ತೇವೆ. ನಮ್ಮ ಬಾಯಿಗೆ ರುಚಿ ನೀಡುವ ಉದ್ದಿನ ಬೇಳೆಯಲ್ಲಿ ಬಾಯಿ ರುಚಿ ಹೆಚ್ಚಿಸುವ ಗುಣ ಮಾತ್ರವಲ್ಲ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.

ಉದ್ದಿನ ಬೇಳೆಯಲ್ಲಿ ಪ್ರೊಟೀನ್, ವಿಟಮಿನ್ ಬಿ, ಕಾರ್ಬೋಹೈಡ್ರೇಟ್ಸ್ ಅಧಿಕವಾಗಿದೆ, ಮಹಿಳೆಯರಿಗೆ ಸಾಮಾನ್ಯವಾಗಿ ಕ್ಯಾಲ್ಸಿಯಂ ಮತ್ತು ಫಾಲಿಕ್ ಆಸಿಡ್ ಸಮಸ್ಯೆ ಕಂಡು ಬರುವುದು ಸಹಜ. ಉದ್ದಿನ ಬೇಳೆ ತಿಂದರೆ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಲಿಕ್ ಆಸಿಡ್ ಅಂಶವನ್ನು ಸಮತೋಲನದಲ್ಲಿ ಇಡಬಹುದು. ಇದನ್ನು ತಿನ್ನುವುದರಿಂದ ಇನ್ನು ಅನೇಕ ಪ್ರಯೋಜನಗಳನ್ನು ಪಡೆಯಬಹುದು, ಅವು ಯಾವುವು ಎಂದು ತಿಳಿಯಲು ಮುಂದೆ ಓದಿ:

ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ

ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ

ಇದರಲ್ಲಿ ಕಬ್ಬಿಣದಂಶ ಅಧಿಕವಾಗಿರುವುದರಿಂದ ದೇಹದಲ್ಲಿ ಶಕ್ತಿಯನ್ನು ವೃದ್ಧಿಸಿ, ನಮ್ಮಲ್ಲಿ ಲವಲವಿಕೆಯನ್ನು ಹೆಚ್ಚಿಸುತ್ತದೆ.

ಪ್ರೊಟೀನ್ ಅತ್ಯಧಿಕವಾಗಿದೆ

ಪ್ರೊಟೀನ್ ಅತ್ಯಧಿಕವಾಗಿದೆ

ಸಸ್ಯಹಾರಿಗಳು ಅತ್ಯುತ್ತಮವಾದ ಪ್ರೊಟೀನ್ ನ ಮೂಲ ಇದಾಗಿದೆ. ಮಾಂಸಾಹಾರಿಗಳಿಯಾದರೆ ಮೊಟ್ಟೆ, ಮಾಂಸಗಳಲ್ಲಿ ಪ್ರೊಟೀನ್ ಅಂಶ ಇರುತ್ತದೆ. ಆದರೆ ಸಸ್ಯಹಾರಿಗಳು ತಮ್ಮ ದೇಹದಲ್ಲಿ ಪ್ರೊಟೀನ್ ಅಂಶ ಕಡಿಮೆಯಾಗದಿರಲು ಈ ರೀತಿಯ ಧಾನ್ಯಗಳನ್ನು ತಿನ್ನುವುದು ಒಳ್ಳೆಯದು.

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ಇದು ಸುಲಭದಲ್ಲಿ ಜೀರ್ಣವಾಗುವುದರಿಂದ ಅಜೀರ್ಣ, ಮಲಬದ್ಧತೆ ಈ ರೀತಿಯ ಸಮಸ್ಯೆಯನ್ನು ತರುವುದಿಲ್ಲ.

ಲೈಂಗಿಕ ನಿಶ್ಯಕ್ತಿ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ

ಲೈಂಗಿಕ ನಿಶ್ಯಕ್ತಿ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ

ಉದ್ದಿನ ಬೇಳೆಯನ್ನು 4-5 ಗಂಟೆ ಕಾಲ ನೆನೆ ಹಾಕಿ ನಂತರ ತುಪ್ಪದಲ್ಲಿ ಹುರಿದು ತಿಂದರೆ ಲೈಂಗಿಕ ಶಕ್ತಿ ಹೆಚ್ಚುವುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಲೈಂಗಿಕ ನಿಶ್ಯಕ್ತಿ ಇರುವ ವ್ಯಕ್ತಿ ಮಾನಸಿಕ ಖಿನ್ನತೆ ಅನುಭವಿಸುತ್ತಾರೆ. ಅವರ ಖಿನ್ನತೆ ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ.

 ಯೌವನದ ಕಳೆಯನ್ನು ಕಾಪಾಡುತ್ತದೆ

ಯೌವನದ ಕಳೆಯನ್ನು ಕಾಪಾಡುತ್ತದೆ

ಇದನ್ನು ಫೇಸ್ ಪ್ಯಾಕ್ ನಂತೆ ಹಚ್ಚಿದರೆ ಮುಖದಲ್ಲಿ ಬೇಗನೆ ನೆರಿಗೆಗಳು ಬೀಳುವುದಿಲ್ಲ, ಅಲ್ಲದೆ ಮುಖದ ಕಾಂತಿಯನ್ನು ಕೂಡ ಹೆಚ್ಚಿಸುವುದು.

 ಕೂದಲಿನ ಪೋಷಣೆ

ಕೂದಲಿನ ಪೋಷಣೆ

ಉದ್ದಿನ ಬೇಳೆಯನ್ನು ತಿಂದರೆ ಇದರಲ್ಲಿ ಕೂದಲಿನ ಬೆಳವಣಿಗೆಗೆ ಅವಶ್ಯಕವಾದ ಪ್ರೊಟೀನ್ ಮತ್ತು ವಿಟಮಿನ್ಸ್ ಇರುವುದರಿಂದ ಕೂದಲಿನ ಆರೋಗ್ಯ ಹೆಚ್ಚುವುದು.

English summary

Health Benefits Of Urad Dal

Urad dal is also rich in fibre which makes it easy to digest. Some types of dals are good for the heart as well. For example, urad dal benefits the health as it is good for the heart. Consuming urad dal helps to reduce cholesterol and improves cardiovascular health.
 
X
Desktop Bottom Promotion