For Quick Alerts
ALLOW NOTIFICATIONS  
For Daily Alerts

ಬಿಯರ್ ಕುಡಿದರೆ ಹೊಟ್ಟೆಯ ಬೊಜ್ಜು ಬರಲ್ಲ!

By Super
|

ಮದ್ಯ ಪ್ರಿಯರ ಹತ್ತಿರ ಒಂದು ಮದ್ಯದ ಬಾಟಲಿ ಕೊಟ್ಟು "ಇದನ್ನು ಪ್ರತೀದಿನ ಒಂದು ಔನ್ಸ್ ನಷ್ಟು ಮಾತ್ರ ಕುಡಿಯಿರಿ. ಇದರಿಂದ ಆರೋಗ್ಯ ವೃದ್ಧಿಸುವುದು" ಎಂದು ಹೇಳಿ ಸ್ವಲ್ಪ ಹೊತ್ತಿನ ಬಳಿಕ ಬಂದು ಆ ಬಾಟಲಿ ನೋಡಿ, ಖಾಲಿಯಾಗಿರುತ್ತದೆ! ಈ ರೀತಿ ಕುಡಿಯುವುದರಿಂದಲೇ ಅದರ ಪ್ರಯೋಜನವನ್ನು ಪಡೆಯದೆ, ಅನಾರೋಗ್ಯವನ್ನು ತಮ್ಮ ಕೈಯಾರೆ ತಂದು ಕೊಳ್ಳುತ್ತಾರೆ. ವೈನ್ , ಬೀರ್ ಇವುಗಳು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ದರಿಂದ ಮದ್ಯ ಕುಡಿಯುವುದು ತಪ್ಪು ಅನ್ನುವ ಬದಲು ಜನರಿಗೆ ಅದನ್ನು ಕುಡಿಯುವ ಇತಿಮಿತಿ ಗೊತ್ತಿಲ್ಲ ಅನ್ನಬಹುದು.

ಬೀರ್ ಕುಡಿದರೆ ಹೊಟ್ಟೆ ಬರುತ್ತದೆ ಎಂದು ನನ್ನ ಕೆಲವು ಫ್ರೆಂಡ್ಸ್ ಹೇಳುವುದನ್ನು ಕೇಳಿದ್ದೇನೆ. ಆದರೆ ಬೀರ್ ಅನ್ನು ಇತಿ ಮಿತಿಯಲ್ಲಿ ಕುಡಿಯುವವರಿಗೆ ಹೊಟ್ಟೆ ಬೊಜ್ಜು ಬರುವುದಿಲ್ಲ ಹಾಗೂ ಬೀರ್ ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ನಮ್ಮ ನಿಗ್ರಹದಲ್ಲಿದ್ದರೆ ಬಿಯರ್ ದೇಹಕ್ಕೆ ಕೆಟ್ಟದ್ದಲ್ಲ ಎನ್ನುವುದಕ್ಕೆ ಇಲ್ಲಿವೆ ನೋಡಿ 10 ಕಾರಣಗಳು. ಆದರೆ ಇವುಗಳು ನಿಮ್ಮನ್ನು ಕುಡಿತದ ಚಟಕ್ಕೆ ಹಚ್ಚುವ ಕಾರಣಗಳಲ್ಲ.

1. ಬಿಯರ್ ಕುಡಿಯುವವರ ಆಯಸ್ಸು ಹೆಚ್ಚು

1. ಬಿಯರ್ ಕುಡಿಯುವವರ ಆಯಸ್ಸು ಹೆಚ್ಚು

ನಿಯಮಿತವಾದ ಕುಡಿತ ದೇಹಕ್ಕೆ ಒಳ್ಳೆಯದು. ಅತಿ ಹೆಚ್ಚಾಗಿ ಅಳತೆ ಮೀರಿ ಕುಡಿದರೆ ಆಪತ್ತು ತಪ್ಪಿದ್ದಲ್ಲ. ಆದರೆ ಹತ್ತಾರು ಆರೋಗ್ಯ ಸಂಶೋಧನೆಗಳು ತೋರಿಸಿಕೊಟ್ಟ ಪ್ರಕಾರ ಕುಡಿಯದೇ ಇರುವುದೂ ಕೂಡ ಒಳ್ಳೆಯದಲ್ಲ.

2. ಬಿಯರ್ ನೈಸರ್ಗಿಕ ಪೇಯ

2. ಬಿಯರ್ ನೈಸರ್ಗಿಕ ಪೇಯ

ಸತ್ಯಾಂಶವೆಂದರೆ ಬಿಯರ್ ಎನ್ನುವುದು ಕಿತ್ತಳೆ ಜ್ಯೂಸ್ ಮತ್ತು ಹಾಲಿನಂತೆಯೇ ನೈಸರ್ಗಿಕವಾದದ್ದು. ಬಿಯರ್ ಗೆ ಕೆಡದಂತೆ ಉಳಿಸುವ ಪದಾರ್ಥಗಳು ಬೇಕಾಗಿಲ್ಲ. ಬಿಯರ್ ನಲ್ಲಿರುವ ಆಲ್ಕೋಹಾಲ್ ಮತ್ತು ಹಾಪ್ಸ್ ಗಳೇ ನೈಸರ್ಗಿಕ ರಕ್ಷಕಗಳಂತೆ ಕೆಲಸ ಮಾಡುತ್ತವೆ. ಬಿಯರ್ ಅನ್ನು ಕೂಡ ಬ್ರೆಡ್ ಬೇಯಿಸಿ ತಯಾರಿಸುವಂತೆಯೇ ಹುದುಗುಬರಿಸಿ ಸೋಸಿ ಪ್ಯಾಕ್ ಮಾಡಲಾಗುತ್ತದೆ.

3. ಬಿಯರ್ ನಲ್ಲಿ ಕರಗುವ ನಾರಿನಂಶವಿರುತ್ತದೆ

3. ಬಿಯರ್ ನಲ್ಲಿ ಕರಗುವ ನಾರಿನಂಶವಿರುತ್ತದೆ

ಬಿಯರ್ ನಲ್ಲಿರುವ ಕರಗುವ ನಾರಿನಂಶಗಳು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತವೆ. ಬಿಯರ್ ನಲ್ಲಿರುವ ಮ್ಯಾಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಂಶ ನಿಮ್ಮ ದೇಹಕ್ಕೆ ಅತ್ಯಗತ್ಯ.

4. ಬಿಯರ್ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ

4. ಬಿಯರ್ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ

ಬಿಯರ್ ನಲ್ಲಿ ನೇರವಾಗಿ ಕೊಲೆಸ್ಟ್ರಾಲ್ ಇಲ್ಲದಿದ್ದರೂ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಿಯರ್ ನಿರಂತರವಾಗಿ ನಿಯಮಿತವಾಗಿ ಕುಡಿಯುತ್ತಿದ್ದರೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಬಿಯರ್ ದೇಹದಲ್ಲಿನ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಶೇ.4 ರಷ್ಟು ಹೆಚ್ಚಿಸುತ್ತದೆ.

5. ಬಿಯರ್ ಮನಸ್ಸಿಗೆ ಉತ್ತೇಜನ ನೀಡುತ್ತದೆ

5. ಬಿಯರ್ ಮನಸ್ಸಿಗೆ ಉತ್ತೇಜನ ನೀಡುತ್ತದೆ

ನಿಮ್ಮ ಸಹೋದ್ಯೋಗಿಗಳು ಮತ್ತು ಗೆಳೆಯರೊಂದಿಗೆ ಬಿಯರ್ ಕುಡಿದರೆ ಮನಸ್ಸು ಖುಷಿಯಿಂದಿರುತ್ತದೆ.

6. ಬಿಯರ್ ನಲ್ಲಿ ಬಿ-ವಿಟಾಮಿನ್ ಹೇರಳವಾಗಿದೆ

6. ಬಿಯರ್ ನಲ್ಲಿ ಬಿ-ವಿಟಾಮಿನ್ ಹೇರಳವಾಗಿದೆ

ಸೋಸಿರದ ಅಥವಾ ಡಿಮೆ ಸೋಸಿರುವ ಬಿಯರ್ ನಲ್ಲಿ ಪೋಷಕಾಂಶಗಳು ತುಂಬಿರುತ್ತವೆ. ಬಿಯರ್ ನಲ್ಲಿ ಬಿ-ವಿಟಾಮಿನ್ ಹೇರಳವಾಗಿದ್ದು ಅದರಲ್ಲೂ ಫಾಲಿಕ್ ಆ್ಯಸಿಡ್ ಜಾಸ್ತಿಯಿದ್ದು ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.

7. ಬಿಯರ್ ನೀರಿಗಿಂತ ಜಾಗರೂಕ

7. ಬಿಯರ್ ನೀರಿಗಿಂತ ಜಾಗರೂಕ

ಬಿಯರ್ ತಯಾರಿಸಿ ಅವುಗಳನ್ನು ಕೆಡದಂತೆ ರಕ್ಷಿಸಲು ಸ್ವಚ್ಚವಾದ ಬಾಟಲಿಗಳಲ್ಲಿ ತುಂಬಿಡಲಾಗುತ್ತದೆ.

8. ಬಿಯರ್ ಹಾರ್ಟ್ ಅಟ್ಯಾಕ್ ತಡೆಗಟ್ಟುತ್ತದೆ

8. ಬಿಯರ್ ಹಾರ್ಟ್ ಅಟ್ಯಾಕ್ ತಡೆಗಟ್ಟುತ್ತದೆ

ವಿಟಾಮಿನ್ ಗಳ ಹೊರತಾಗಿ ಬಿಯರ್ ಒಳ್ಳೆಯ ಅಂಶಗಳನ್ನು ಹೊಂದಿದೆ. ನಿಯಮಿತವಾದ ಬಿಯರ್ ಸೇವನೆ ಶೇ.24.7 ರಷ್ಟು ಹೃದಯ ತೊಂದರೆಗಳನ್ನು ನಿಯಂತ್ರಿಸುತ್ತದೆ.

9. ಬಿಯರ್ ಕ್ಯಾನ್ಸರ್ ವಿರುದ್ದ ಹೋರಾಡುತ್ತದೆ

9. ಬಿಯರ್ ಕ್ಯಾನ್ಸರ್ ವಿರುದ್ದ ಹೋರಾಡುತ್ತದೆ

ಕ್ಸ್ಯಾಂತೋಹ್ಯುಮೋಲ್ ಎಂದು ಕರೆಯಲ್ಪಡುವ ಪ್ಲೇವೋನಾಯ್ಡ್ ಹೋಪ್ಸ್ ಕಂಡು ಬರುತ್ತದೆ. ಸಮರ್ಥ antioxidants ಕ್ಯಾನ್ಸರ್ ಹರಡುವ ಎಂಜೈಮ್ಸ್ ಗಳೊಂದಿಗೆ ಹೋರಾಡುತ್ತವೆ.

10. ಬಿಯರ್ ಕುಡಿಯುವುದರಿಂದ ದಪ್ಪಗಾಗುವುದಿಲ್ಲ

10. ಬಿಯರ್ ಕುಡಿಯುವುದರಿಂದ ದಪ್ಪಗಾಗುವುದಿಲ್ಲ

2003 ರಲ್ಲಿ ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಸಂಶೋಧಕರು ನಡೆಸಿದ ಅಧ್ಯಯನದಂತೆ ಬಿಯರ್ ಕುಡಿಯುವದಕ್ಕೂ ದಪ್ಪಗಾಗಿ ತೂಕ ಹೆಚ್ಚುವುದಕ್ಕೂ ಸಂಬಂಧವಿಲ್ಲ. ಬಿಯರ್ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಮತ್ತು ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ. ನಿಯಮಿತವಾಗಿ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಉತ್ತಮ.

English summary

Health Benefits Of Drinking Beer | Tips For Health | ಬಿಯರ್ ಕುಡಿತದಿಂದ ಆರೋಗ್ಯಕ್ಕಾಗುವ ಲಾಭಗಳು! | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Here are 10 reasons why beer is not really bad for you, if had in moderation. Please note, this is not an encouragement to imbibe, especially if you are a teetotaler or have a medical condition
X
Desktop Bottom Promotion