For Quick Alerts
ALLOW NOTIFICATIONS  
For Daily Alerts

ಕೊತ್ತಂಬರಿ ಸೊಪ್ಪಿನಲ್ಲಿರುವ 10 ಔಷಧೀಯ ಗುಣಗಳು

By Super
|

ತಾಜಾ ಕೊತ್ತಂಬರಿ ಸೊಪ್ಪನ್ನು ಹಲವಾರು ಬಗೆಯ ಅಡುಗೆಯ ತಯಾರಿಯಲ್ಲಿ ಬಳಸುತ್ತೇವೆ. ಪ್ರತಿಯೊಬ್ಬರ ಮನೆಯ ರೆಫ್ರಿಜಿರೇಟರ್ ನಲ್ಲಿ ಕೊತ್ತಂಬರಿ ಸೊಪ್ಪು ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಅಲಂಕರಿಸಿರುತ್ತದೆ. ಹಲವಾರು ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು ಒಂದು ಪರಿಣಾಮಕಾರಿ ಗಿಡಮೂಲಿಕೆಯಾಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.

ಈ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ ಸಿಯಂತಹ ವಿಟಮಿನ್‍ಗಳು, ರೈಬೊಫ್ಲವಿನ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್, ಕೊಬ್ಬು, ನಾರು ಮತ್ತು ನೀರು ಇರುತ್ತವೆ. ಕೊತ್ತಂಬರಿ ಸೊಪ್ಪಿನಲ್ಲಿ ಮೆದುವಾದ ಮೆಣಸಿನಂತಹ ರುಚಿಯಿದೆ. ಇದು ಆಹಾರಕ್ಕೆ ಅನುಪಮವಾದ ರುಚಿಯನ್ನು ನೀಡುತ್ತದೆ. ಕೊತ್ತಂಬರಿ ಸೊಪ್ಪಿನ ಬೆಲೆ ತೀರ ಕಡಿಮೆ, ಆದರೆ ಅದರಿಂದುಂಟಾಗುವ ಲಾಭ ಅಮೂಲ್ಯವಾದುದು. ಆಹಾರಕ್ಕೆ ಬಳಕೆಯಾಗುವುದರ ಜೊತೆಗೆ ಈ ಕೊತ್ತಂಬರಿ ಸೊಪ್ಪು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಸಹ ನೆರವಾಗುತ್ತದೆ. ಕೊತ್ತಂಬರಿ ಸೊಪ್ಪಿನಿಂದ ಯಾವೆಲ್ಲ ಕಾಯಿಲೆಗಳಿಗೆ ಪ್ರಯೋಜನ ಪಡೆಯಬಹುದು ಎಂಬ ಮಾಹಿತಿಯನ್ನು ಮುಂದೆ ಒದಗಿಸಿದ್ದೇವೆ. ನೀವೇ ಓದಿ, ಮುಂದೆ ನಿಮಗೆ ಉಪಯೋಗವಾಗಬಹುದು.

ಕಣ್ಣಿನ ಬೇನೆ

ಕಣ್ಣಿನ ಬೇನೆ

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುತ್ತವೆ. ಇವು ಮಕುಲರ್ ಡಿಜೆನರೇಷನ್, ಕಂಜಂಕ್ಟಿವಿಟಿಸ್, ಕಣ್ಣುಗಳಿಗೆ ಉಂಟಾಗುವ ವಯೋ ಸಹಜ ಬೇನೆಗಳು ಮತ್ತು ಒತ್ತಡದಿಂದ ಕಣ್ಣುಗಳಿಗೆ ಆದ ಆಯಾಸವನ್ನು ಪರಿಹರಿಸಲು ನೆರವಾಗುತ್ತವೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಜಜ್ಜಿ, ಅದನ್ನು ನೀರಿನಲ್ಲಿ ಬೇಯಿಸಿ. ನಂತರ ಆ ರಸವನ್ನು ಸ್ವಚ್ಛವಾಗಿರುವ ಬಟ್ಟೆಯ ಮೇಲೆ ಸುರಿದುಕೊಳ್ಳಿ. ಹೀಗೆ ಸುರಿದುಕೊಂಡ ಬಟ್ಟೆಯಿಂದ ನಿಮ್ಮ ಕಣ್ಣಿಗೆ ಕೆಲವು ಹನಿಗಳನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ನೋವು ಮತ್ತು ತುರಿಕೆಗಳು ಹಾಗು ಕಣ್ಣೀರು ಬರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮೂಗಿನಲ್ಲಿ ರಕ್ತಸ್ರಾವ

ಮೂಗಿನಲ್ಲಿ ರಕ್ತಸ್ರಾವ

20 ಗ್ರಾಂನಷ್ಟು ತಾಜ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ. ಸ್ವಲ್ಪ ಪ್ರಮಾಣದ ಕರ್ಪೂರದ ಜೊತೆಗೆ ಇದನ್ನು ಬೆರೆಸಿ ಚೆನ್ನಾಗಿ ಜಜ್ಜಿ. ನಂತರ ಇವೆರಡ ಮಿಶ್ರಣವನ್ನು ತೆಗೆದುಕೊಂಡು, ಅದರ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಿಂಡಿ. ಮೂಗಿನ ರಕ್ತ ಸ್ರಾವವು ತತ್‍ಕ್ಷಣಕ್ಕೆ ನಿಲ್ಲುತ್ತದೆ. ಇಲ್ಲದಿದ್ದರೆ ಈ ಮಿಶ್ರಣವನ್ನು ನಿಮ್ಮ ಹಣೆಗೆ ಹಚ್ಚಿ. ಆಗಲೂ ಸಹ ಮೂಗಿನಲ್ಲಿ ರಕ್ತಸ್ರಾವ ನಿಲ್ಲುತ್ತದೆ. ಇದರ ಜೊತೆಗೆ ತಾಜಾ ಕೊತ್ತಂಬರಿ ಸೊಪ್ಪಿನ ವಾಸನೆಯನ್ನು ಸೇವಿಸುವುದು ಸಹ ಈ ಸಮಸ್ಯೆಗೆ ಪ್ರಯೋಜನಕಾರಿಯಾಗಿರುತ್ತದೆ.

ಚರ್ಮ ವ್ಯಾಧಿಗಳು

ಚರ್ಮ ವ್ಯಾಧಿಗಳು

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಬೂಷ್ಟು ನಿರೋದಕ, ನಂಜು ನಿರೋಧಕ, ನಂಜು ನಿವಾರಕ ಮತ್ತು ಕೊಳೆ ನಿರೋಧಕ ಗುಣಗಳು ಇರುವುದರಿಂದ ಇದು ಹಲವಾರು ಚರ್ಮ ವ್ಯಾಧಿಗಳನ್ನು ಗುಣಪಡಿಸುತ್ತದೆ. ಇದಕ್ಕಾಗಿ ನೀವು ಕೊತ್ತಂಬರಿ ರಸವನ್ನು ಸೇವಿಸಿ ಅಥವಾ ಅದರ ಪೇಸ್ಟನ್ನು ಚರ್ಮಕ್ಕೆ ಲೇಪಿಸಿ. ತುರಿಕೆ ಮತ್ತು ಕಜ್ಜಿ ಅಥವಾ ಹುಳುಕಾಟಕ್ಕೆ ತಾಜ ಕೊತ್ತಂಬರಿ ಸೊಪ್ಪಿನ ರಸವನ್ನು ಮತ್ತು ಜೇನು ತುಪ್ಪವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸಮಸ್ಯೆ ಇರುವ ಭಾಗಕ್ಕೆ ಲೇಪಿಸಿ. 15 ನಿಮಿಷ ಬಿಟ್ಟು , ಈ ಭಾಗವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.

ಗರ್ಭಿಣಿರಲ್ಲಿ ಕಂಡು ವಾಂತಿಗೆ ಮನೆ ಮದ್ದು

ಗರ್ಭಿಣಿರಲ್ಲಿ ಕಂಡು ವಾಂತಿಗೆ ಮನೆ ಮದ್ದು

ಗರ್ಭಿಣಿಯಾದ ಹೊಸತರಲ್ಲಿ ಹಲವಾರು ಹೆಂಗಸರಿಗೆ ವಾಂತಿ ಮತ್ತು ನಾಸಿಯಾದ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಅದಕ್ಕಾಗಿ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದು ಆರಿದ ನಂತರ ಅದನ್ನು ಸೇವಿಸಿ ವಾಂತಿಯಿಂದ ಉಪಶಮನ ಪಡೆಯಿರಿ.

ಸಿಡುಬು

ಸಿಡುಬು

ಕೊತ್ತಂಬರಿ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್‍ಗಳು, ಆಂಟಿ ಮೈಕ್ರೋಬಿಯಲ್ ಮತ್ತು ಅಂಟಿ ಇನ್‍ಪೆಕ್ಷಿಯಸ್ ಅಂಶಗಳು ಹಾಗು ಆಮ್ಲಗಳು ಯಥೇಚ್ಛ ಪ್ರಮಾಣದಲ್ಲಿವೆ. ಇದರ ಜೊತೆಗೆ ಕೊತ್ತಂಬರಿ ಸೊಪ್ಪಿನಲ್ಲಿರುವ ಕಬ್ಬಿಣ ಮತ್ತು ವಿಟಮಿನ್ ಸಿ ಗಳು ಸಹ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇವುಗಳು ಸಿಡುಬಿನ ಮೇಲೆ ಪರಿಣಾಮವನ್ನು ಬೀರಿ, ಅದರ ನೋವನ್ನು ಉಪಶಮನಗೊಳಿಸುತ್ತವೆ.

ಬಾಯಿ ಹುಣ್ಣು

ಬಾಯಿ ಹುಣ್ಣು

ತಾಜಾ ಕೊತ್ತಂಬರಿ ಸೊಪ್ಪಿನ ಎಣ್ಣೆಯಲ್ಲಿ ಸಿಟ್ರೊನೆಲೊಲ್ ಎಂಬ ಅಗತ್ಯ ಅಂಶ ಅಡಗಿದೆ. ಈ ಅಂಶವು ಒಂದು ಪರಿಣಾಮಕಾರಿಯಾದ ನಂಜುನಿರೋಧಕವಾಗಿದೆ. ಇದರ ಜೊತೆಗೆ ಇದು ಅಂಟಿ ಮೈಕ್ರೊಬಿಯಲ್ ಮತ್ತು ಬಾಯಿಯ ಹುಣ್ಣಿನಿಂದಾಗುವ ನೋವನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೊತೆಗೆ ಹುಣ್ಣನ್ನು ಸಹ ಮಾಗುವಂತೆ ಮಾಡುತ್ತದೆ. ಇದರ ಜೊತೆಗೆ ಇವು ಬಾಯಿಯ ದುರ್ವಾಸನೆಯನ್ನು ತೊಲಗಿಸಿ, ಬಾಯಿ ಹುಣ್ಣನ್ನು ವಾಸಿಯಾಗುವಂತೆ ಮಾಡುತ್ತವೆ.

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಒಲಿಕ್ ಆಮ್ಲ, ಲಿನೊಲಿಕ್ ಆಮ್ಲ, ಸ್ಟಿಯರಿಕ್ ಆಮ್ಲ, ಪಲ್ಮಿಟಿಕ್ ಆಮ್ಲ ಮತ್ತು ಆಸ್ಕೊರ್ಬಿಕ್ ಆಮ್ಲ ( ವಿಟಮಿನ್ ಸಿ)ಗಳು ಸಮೃದ್ಧವಾಗಿರುತ್ತವೆ. ಇವುಗಳು ರಕ್ತದಲ್ಲಿರುವ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿಡಲು ಪ್ರಯೋಜನಕಾರಿಯಾಗಿರುತ್ತವೆ. ಇದರ ಜೊತೆಗೆ ಈ ಅಂಶಗಳು ಹೃದಯದಲ್ಲಿರುವ ಅಭಿದಮನಿಗಳು ಮತ್ತು ಅಪದಮನಿಗಳ ನಾಳದಲ್ಲಿ ಅಸ್ತ ವ್ಯಸ್ತವಾಗಿ ಅಡಗಿರುವ ಕೊಲೆಸ್ಟಾಲನ್ನು ಕಡಿಮೆ ಮಾಡಿ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ.

ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಅಗತ್ಯವಾದ ಎಣ್ಣೆ ಅಂಶ ಮತ್ತು ಸಮೃದ್ಧ ಸುವಾಸನೆ ಇದೆ. ಇವುಗಳು ಅಪ್ಪೆಟೈಜರ್ ನಂತೆ ವರ್ತಿಸಿ, ಜಠರದಲ್ಲಿರುವ ಕಿಣ್ವಗಳನ್ನು ಮತ್ತು ಜೀರ್ಣಕಾರಿ ರಸಗಳನ್ನು ಉದ್ದೀಪನಗೊಳಿಸಿ, ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ನೆರವೇರುವಂತೆ ಮಾಡುತ್ತವೆ. ಇದರ ಜೊತೆಗೆ ಕೊತ್ತಂಬರಿ ಸೊಪ್ಪು ಅನೊರೆಕ್ಸಿಯವನ್ನು( ಊಟ ಮಾಡಲು ಇರುವ ವಿನಾಕಾರಣ ಭೀತಿ) ನಿವಾರಿಸಲು ನೆರವಾಗುತ್ತದೆ.

English summary

Fresh Coriander Leaves have great health benefits

Along with increasing taste and flavor of food, coriander leaves also helps to treat many illnesses. Read on to know about some illnesses in which coriander leaves are helpful.
X
Desktop Bottom Promotion