For Quick Alerts
ALLOW NOTIFICATIONS  
For Daily Alerts

ಇವು HIV ಪಾಸಿಟಿವ್ ನ ಲಕ್ಷಣಗಳಾಗಿರಬಹುದೇ?

By Super
|

ಸಾಮಾನ್ಯವಾಗಿ ಇದುವರೆಗೆ ವಾಸಿಯಾಗದ ಹಾಗೂ ಔಷಧಿಯೇ ಇಲ್ಲದ ರೋಗವೆಂದರೆ ಏಡ್ಸ್ ಎಂದು ಹೇಳಲಾಗುತ್ತದೆ. ಇಂದು ಅದೆಷ್ಟೋ ಜನರಲ್ಲಿ ಈ ರೋಗ ಮನೆಮಾಡಿದೆ. ಆದರೆ ಇದು "ಎಚ್ ಐವಿ ಪಾಸಿಟೀವ್" ಲಕ್ಷಣ ಎಂಬುದೇ ಗೊತ್ತಿಲ್ಲದೆ ರೋಗದಿಂದ ಬಳಲುತ್ತಿರುವ ಹಲವರು ನಮ್ಮನಡುವಿದ್ದಾರೆ.

ಯಾವುದೇ ಸಂದರ್ಭದಲ್ಲಿ ಅನುಮಾನಗಳು ಬಂದರೆ ಅಥವಾ ವೈದ್ಯರು ಹೇಳಿದರೆ ಎಚ್ ಐವಿ ತಪಾಸಣೆ ಮಾಡುವುದು ಅತೀ ಅಗತ್ಯ.ಈ ರೋಗದ ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ಹೇಳಲಾಗಿದೆ.

ಏಡ್ಸ್ (ಪ್ರತಿರಕ್ಷಣ ಕೊರತೆಯ ರೋಗಲಕ್ಷಣ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೊಮ್ ನ ಸ್ವಾಧೀನ) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ ನಿಂದ ಉಂಟಾಗುವ ಒಂದು ರೋಗ. ಇದರಿಂದ ಜನರಲ್ಲಿ ಅನಾರೋಗ್ಯದ ಲಕ್ಷಣಗಳು ಉಂಟಾಗಿ ಸೋಂಕುಗಳಿಂದ ಜನರು ದುರ್ಬಲರಾಗುತ್ತಾರೆ. ಹಾಗೂ ಅವರಲ್ಲಿ ರೋಗಗಳಿಗೆ ಪ್ರತಿರಕ್ಷಣ ಮಾಡುವ ವ್ಯವಸ್ಥೆಯೇ ಬದಲಾಗುತ್ತದೆ. ಇದರಿಂದ ಕಾಯಿಲೆಯು ಮುಂದುವರಿಯುತ್ತದೆ.

ಎಚ್ಐವಿ ಸೋಂಕಿತ ವ್ಯಕ್ತಿಯ (ವೀರ್ಯ ಮತ್ತು ಯೋನಿ ದ್ರವ ಪದಾರ್ಥಗಳು, ರಕ್ತ ಮತ್ತು ಎದೆ ಹಾಲು) ದೇಹದ ದ್ರವಗಳಲ್ಲಿ ಕಂಡುಬರುತ್ತದೆ. ಈ ವೈರಸ್ ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ರಕ್ತ ಅಥವಾ ಲೈಂಗಿಕ ಸಂಪರ್ಕದಿಂದಾಗಿ ಹರಡುತ್ತದೆ. ಜೊತೆಗೆ, ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ, ಮತ್ತು ಸ್ತನ್ಯಪಾನ ಮಾಡುವುದರಿಂದ ಆಕೆಯ ಮಗುವಿಗೆ ಎಚ್ಐವಿ ಉಂಟಾಗುತ್ತದೆ.

ಎಚ್ಐವಿ ಸೋಂಕು, ಯೋನಿ, ಮುಖ ಮೈಥುನ (oral sex) , ಗುದ ಸಂಭೋಗ (anal sex), ರಕ್ತ, ಮತ್ತು ಸೂಜಿಗಳಿಂದ ಹೀಗೆ ಅನೇಕ ರೀತಿಯಲ್ಲಿ ಹರಡಬಹುದಾಗಿದೆ.

ಇಲ್ಲಿ ಎಚ್ಐವಿ ಕೆಲವು ಸಾಮಾನ್ಯ ಲಕ್ಷಣಗಳನ್ನು ಹೇಳಲಾಗಿದೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ಎಚ್ಐವಿಯ ಮೊದಲ ಚಿಹ್ನೆಯೆಂದರೆ ಸುಮಾರು 102 ಡಿಗ್ರಿವರೆಗಿನ ಜ್ವರ. ಈ ಜ್ವರ ಉಂಟಾದಾಗ ಆಗಾಗ್ಗೆ ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳು (swollen lymph glands), ಮತ್ತು ನೋಯುತ್ತಿರುವ ಗಂಟಲು ಹೀಗೆ ಇತರ ಸಾಮಾನ್ಯ ರೋಗಲಕ್ಷಣಗಳನ್ನು ಕಾಣುತ್ತೇವೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

2. ಉರಿಯೂತ ಪ್ರತಿಕ್ರಿಯೆಯ ಮೂಲಕ ರೋಗನಿರೋಧಕ ಶಕ್ತಿ ಕಡಿಮೆಯಾಗಿ ನಿಮಗೆ ಸುಸ್ತಾದ ಮತ್ತು ಆಲಸ್ಯದ ಮನೋಭಾವ ಉಂಟಾಗಬಹುದು. ಆಯಾಸ, ಎಚ್ಐವಿಯ ಮೊದಲ ಹಾಗೂ ನಂತರದ ಎರಡೂ ಸಮಯದ ಲಕ್ಷಣವೂ ಆಗಿರಬಹುದು.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

3. ಏಡ್ಸ್ ಸಾಮಾನ್ಯವಾಗಿ ಜ್ವರ, ಮೋನೋನ್ಯುಕ್ಲಿಯೋಸಿಸ್(mononucleosis), ಅಥವಾ ಇನ್ನೊಂದು ವೈರಸ್ ಸೋಂಕು, ಸಿಫಿಲಿಸ್ ಅಥವಾ ಹೆಪಟೈಟಿಸ್ ಮೂಲಕವೂ ಅರಿವಿಗೆ ಬರಬಹುದು.

ಇದು ಆಶ್ಚರ್ಯವೇನಲ್ಲ: ಅನೇಕ ರೋಗಲಕ್ಷಣಗಳು ಕೀಲುಗಳು ಮತ್ತು ಸ್ನಾಯುಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ನೋವು ಸೇರಿದಂತೆ ಎಲ್ಲವೂ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತವೆ. ದುಗ್ಧರಸ ಗ್ರಂಥಿಗಳು ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಭಾಗವಾಗಿದೆ. ಮತ್ತು ಸೋಂಕಾದಾಗ ಊತ ಉಂಟಾಗಲೂ ಇದೇ ಕಾರಣವಾಗುತ್ತದೆ. ನಿಮ್ಮ ಆರ್ಮ್ಪಿಟ್, ತೊಡೆಸಂದು, ಮತ್ತು ಕುತ್ತಿಗೆಗಳಲ್ಲಿ ಈ ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

4. ಇತರ ಲಕ್ಷಣಗಳಾದ ನೋಯುತ್ತಿರುವ ಗಂಟಲು ಮತ್ತು ತಲೆನೋವು ಇವು ಸಾಮಾನ್ಯವಾಗಿ,ಏಡ್ಸ್ ಬಂದಾಗ ಕಾಣಿಸುವ ಲಕ್ಷಣಗಳು. ನೀವು ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹೆಚ್ಚಿನ ಅಪಾಯ ಎದುರಿಸುತ್ತಿದ್ದರೆ ಎಚ್ಐವಿ ಟೆಸ್ಟ್ ಮಾಡಿಸುವುದು ಒಳ್ಳೆಯದು.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ಚರ್ಮ ರೋಗಗಳು ಏಡ್ಸ್ ಆರಂಭದಲ್ಲಿ ಅಥವಾ ತಡವಾಗಿ ಸಂಭವಿಸಬಹುದು. ತೊಡೆ ಸಂದುಗಳಲ್ಲಿ ಕೆಂಪು ಗುಳ್ಳೆಗಳು ಕಂಡು ಬರುವುದು.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ಸಾಮಾನ್ಯವಾಗಿ 30% ನಿಂದ 60% ಜನರಲ್ಲಿ ಅಲ್ಪಾವಧಿಯ ವಾಕರಿಕೆ, ವಾಂತಿ, ಅಥವಾ ಎಚ್ ಐವಿಯ ಆರಂಭಿಕ ಹಂತಗಳಲ್ಲಿ ಅತಿಸಾರ ಉಂಟಾಗಬಹುದು. ಈ ಲಕ್ಷಣಗಳನ್ನು ಸಾಮಾನ್ಯವಾಗಿ ಸೋಂಕಿನ ಪರಿಣಾಮವಾಗಿ ಉಂಟಾಗುವಂತದ್ದಾಗಿದ್ದು, ಆಂಟಿರೆಟ್ರೋವೈರಲ್ ತೆರಪಿ( antiretroviral therapy) ಮಾಡಿಸಿದಾಗ ತಿಳಿದುಬರುತ್ತದೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ನಿಮ್ಮ ತೂಕ ಅತಿಯಾಗಿ ಕಡಿಮೆಯಾಗುತ್ತಿದೆ ಎಂದಾದರೆ ನಿಮ್ಮಲ್ಲಿ ರೋಗ ನಿರೋಧಕ ವ್ಯವಸ್ಥೆ ಕುಸಿಯುತ್ತಿದೆ ಎಂದರ್ಥ. ಇಂತಹ ರೋಗಿ ಅತಿಯಾಗಿ ತಿನ್ನಲು ಆರಂಭಿಸಿದರೂ ಯಾವುದೇ ಪ್ರಯೋಜನಗಳಾಗುವುದಿಲ್ಲ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ಒಣ ಕೆಮ್ಮು ಮೊದಲು ರೋಗದ ಲಕ್ಷಣ ಎನ್ನಲು ಸಾಧ್ಯವಿಲ್ಲ. ಆದರೆ ಅದು ಒಂದು ವಾರಗಳಾವರೆಗೂ ಕಡಿಮೆಯಾಗದೇ ಇದ್ದಾಗ ತಪಾಸಣೆ ಮಾಡಬೇಕು.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ಎಚ್ ಐವಿ ಹೊಂದಿರುವ ಸಾಕಷ್ಟು ಜನ ಅರ್ಧರಾತ್ರಿಯಲ್ಲಿ ಬೆವರುತ್ತಾರೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ಎಚ್ ಐವಿ ಸೋಂಕಿನ ಆನಂತರದ ಮತ್ತೊಂದು ಲಕ್ಷಣ ಉಗುರಿನಲ್ಲಿ ತೊಂದರೆ.ಅಥವಾ ಬದಲಾವಣೆಗಳನ್ನು ಕಾಣಬಹುದು. (ದಪ್ಪವಾದ ಮತ್ತು ಉಗುರುಗಳು ಬಾಗುತ್ತವೆ), ಉಗುರಿನ ಬಣ್ಣ ಬದಲಾಗುತ್ತದೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

ನಂತರದ ಹಂತಗಳಲ್ಲಿ ಸಾಮಾನ್ಯವಾಗಿ ಮತ್ತೊಂದು ಶಿಲೀಂಧ್ರ ಸೋಂಕು, ಕ್ಯಾಂಡಿಡಾ, (ಒಂದು ರೀತಿಯ ಯೀಸ್ಟ್) ದಿಂದ ಉಂಟಾಗುವ ಬಾಯಿಯ ಸೋಂಕು ಕಾಣಿಸಿಕೊಳ್ಳುತ್ತದೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

12. ಜ್ಞಾನಕ್ಕೆ ಸಂಬಂಧಿಸಿದ ಬುದ್ಧಿ ಮಾಂದ್ಯತೆ ಸಮಸ್ಯೆಗಳು ನಂತರದ ಹಂತದಲ್ಲಿ ಉದ್ಭವಿಸುತ್ತದೆ. ಜೊತೆಗೆ ಮಾನಸಿಕ ಸಮಸ್ಯೆಗಳು ಸಿಟ್ಟು, ಕಿರಿಕಿರಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ವರ್ತನೆಗಳಲ್ಲಿ ಬದಲಾವಣೆಗಳಾಗುತ್ತವೆ. ಏಕಾಗ್ರತೆ,ಹೊಂದಾಣಿಕೆ ಮೊದಲಾದ ಲಕ್ಷಣಗಳು ಏಡ್ಸ್ ಬಾದಿತರಿಂದ ದೂರಾಗುತ್ತವೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

13. ಕೋಲ್ಡ್ ಸೋರ್ಸ್ (ಮೌಖಿಕ ಹರ್ಪೀಸ್) ಮತ್ತು ಜನನಾಂಗ ಹರ್ಪೀಸ್ ಏಡ್ಸ್ ಕೊನೆಯ ಹಂತದಲ್ಲಿ ಎಚ್ ಐವಿ ಸೋಂಕಿನ ಚಿಹ್ನೆ.

ಜನನಾಂಗ ಹರ್ಪೀಸ್ ಸುಲಭವಾಗಿ ಲೈಂಗಿಕ ಸಮಯದಲ್ಲಿ ದೇಹದಲ್ಲಿ ಸೇರಿ ಹುಣ್ಣು ಉಂಟಾಗುತ್ತದೆ. ಮತ್ತು ಎಚ್ ಐವಿ ಹೊಂದಿರುವ ಜನರಲ್ಲಿ ಏಕಾಏಕಿ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

14. ಎಚ್ಐವಿ ಕೊನೆ ಭಾಗದಲ್ಲಿ ಕೈ ಅಡಿಗಳಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ಉಂಟಾಗಬಹುದು. ನರಗಳು ವಾಸ್ತವವಾಗಿ ಹಾನಿಗೊಳಗಾಗಿ. ಅನಿಯಂತ್ರಿತ ನರರೋಗಗಳು ಉದ್ಭವಿಸುತ್ತವೆ.

ಏಡ್ಸ್ ರೋಗದ ಲಕ್ಷಣಗಳು

ಏಡ್ಸ್ ರೋಗದ ಲಕ್ಷಣಗಳು

15. ವಿಸ್ತೃತ ಎಚ್ ಐವಿ ಸೋಂಕು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ. ಜ್ವರ ಉಲ್ಭಣಿಸುತ್ತದೆ. ಇದರಿಂದಾಗಿ ತೂಕ ಇಳಿಕೆ ಹಾಗೂ ಆರೋಗ್ಯದಲ್ಲಿ ಅತ್ಯಂತ ಕೆಟ್ಟ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.

ಆದ್ದರಿಂದ ನೀವು ಎಚ್ ಐವಿ ಪಾಸಿಟೀವ್ ಆಗಿರಲಿ ಇಲ್ಲದೇ ಇರಲಿ. ಮುಂಜಾಗ್ರತಾ ಕ್ರಮವಾಗಿ ಎಚ್ ಐವಿ ತಪಾಸಣೆ ಮಾಡಿಸಿ. ಅದರಲ್ಲೂ ಗರ್ಭಿಣಿ ಮಹಿಳೆಯರು ಈ ತಪಾಸಣೆಯನ್ನು ಮಾಡಿಸಬೇಕಾದುದು ಕಡ್ಡಾಯ.

English summary

Find out whether you are HIV positive? | Health Tips | ಇವು ಎಚ್ ಐ ವಿ ಪಾಸಿಟಿವ್ ನ ಲಕ್ಷಣಗಳಾಗಿರಬಹುದೇ? | ಆರೋಗ್ಯಕ್ಕೆ ಟಿಪ್ಸ್

HIV can be transmitted in many ways, such as vaginal, oral sex, anal sex, blood transfusion, and contaminated hypodermic needles. Here are some common signs of HIV.
X
Desktop Bottom Promotion