For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ! ಇಷ್ಟೊಂದು ಆರೋಗ್ಯಕರ ಗುಣ ಕಬ್ಬಿನಲ್ಲಿದೆಯೇ?

By Staff
|

ಬೇಸಿಗೆಯಲ್ಲಿ ದೇಹವು ಬೆವರಿನ ಮೂಲಕ ಹೆಚ್ಚು ನೀರನ್ನು ಕಳೆದುಕೊಳ್ಳುವ ಕಾರಣ ನೀರನ್ನು ಹೆಚ್ಚು ಹೆಚ್ಚಾಗಿ ಕುಡಿಯ ಬೇಕಾಗುತ್ತದೆ. ನೀರಿನ ಬಳಿಕ ಯಾವ ದ್ರವ ಬೇಸಿಗೆಗೆ ಉತ್ತಮ? ಈ ದ್ರವದಲ್ಲಿ ಬೇಸಿಗೆಯಲ್ಲಿ ಬಳಲಿದ್ದ ದೇಹಕ್ಕೆ ಎಲ್ಲಾ ರೀತಿಯ ಪೋಷಣೆ ನೀಡುವ ಪೋಷಕಾಂಶಗಳಿರಬೇಕು. ಹಾಗಿದ್ದರೆ ಈ ಸ್ಥಾನಕ್ಕೆ ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ಅತ್ಯಂತ ಸೂಕ್ತ. ಬೇಸಿಗೆಯ ಝಳಕ್ಕೆ ತಂಪನ್ನೆರೆಯುವ ಪಾನೀಯಗಳಲ್ಲಿ ಕಬ್ಬಿನ ಹಾಲು ಉನ್ನತ ಸ್ಥಾನದಲ್ಲಿದೆ. ಕಬ್ಬಿನ ಹಾಲು ಕುಡಿಯುವುದರಿಂದ ದೇಹ ತಂಪಗಾಗುವುದರ ಜೊತೆಗೇ ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನೂ ಪಡೆಯುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಚರ್ಮದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಏಳುವುದು, ಕೆಂಪಗಾಗುವುದು, ನೀರಿನ ಕೊರತೆಯಿಂದ ಸುಸ್ತು, ಚರ್ಮದ ಸೋಂಕು ಮೊದಲಾದವು ಎದುರಾಗುತ್ತವೆ. ಈ ದಿನಗಳಲ್ಲಿ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ಈ ಎಲ್ಲಾ ತೊಂದರೆಗಳು ಇಲ್ಲವಾಗುತ್ತವೆ.

ಕಾಮಲೆಯನ್ನು ಗುಣಪಡಿಸುತ್ತದೆ

ಕಾಮಲೆಯನ್ನು ಗುಣಪಡಿಸುತ್ತದೆ

ಕಬ್ಬಿನ ಕಾಲು ಕಾಮಲೆ ಇರುವವರೆಗೆ ನೈಸರ್ಗಿಕವಾದ ಔಷಧಿಯಾಗಿದೆ. ಲಿವರ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಈ ಕಾಯಿಲೆ ಬರುತ್ತದೆ. ಕಾಮಲೆ ಬಂದವರು ದಿನಕ್ಕೆ ಎರಡು ಗ್ಲಾಸ್ ಕಬ್ಬಿನ ಜ್ಯೂಸ್ ಕುಡಿದರೆ ಬೇಗನೆ ಗುಣಮುಖವಾಗುವಿರಿ.

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ

ಮೂತ್ರ ಉರಿ, ಗುಪ್ತ ಕಾಯಿಲೆಗಳು, ಎದೆ ಉರಿ, ಹೊಟ್ಟೆ ಉರಿ ಈ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡಿ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಈ ಜ್ಯೂಸ್ ಸಹಕಾರಿಯಾಗಿದೆ.

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಬ್ಬಿನ ಹಾಲಿನ ಅತ್ಯಂತ ಪ್ರಯೋಜನಕಾರಿಯಾದ ಗುಣವೆಂದರೆ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದವರು ಇದನ್ನು ಪ್ರತಿದಿನ ಕುಡಿದರೆ ಆ ಸಮಸ್ಯೆಯಿಂದ ಗುಣಮುಖವಾಗಲು ಸಹಕಾರಿಯಾಗುತ್ತದೆ.

 ಮಧುಮೇಹಿಗಳಿಗೆ ಒಳ್ಳೆಯದು

ಮಧುಮೇಹಿಗಳಿಗೆ ಒಳ್ಳೆಯದು

ಮಧುಮೇಹಿಗಳು ಕಬ್ಬಿನ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಸಮತೋಲನದಲ್ಲಿಡಬಹುದು. ಕೃತಕ ಸಿಹಿ ತಿಂದು ಆರೋಗ್ಯ ಕೆಡಿಸುವ ಬದಲು ಈ ಜ್ಯೂಸ್ ಬೆಸ್ಟ್.

ಪೋಷಕಾಂಶಗಳು

ಪೋಷಕಾಂಶಗಳು

ಕಬ್ಬಿನ ಹಾಲಿನಲ್ಲಿ ಕಬ್ಬಿಣದಂಶ, ಪೊಟಾಷ್ಯಿಯಂ, ಮ್ಯಾಗ್ನಿಷಿಯಂ ಅಂಶವಿದ್ದು ಇದು ವಿಟಮಿನ್ ಗಳ ಕೊರತೆಯನ್ನು ನೀಗಿಸುತ್ತದೆ.

ಶೀತ, ಗಂಟಲು ನೋವಿಗೆ ಉತ್ತಮ ಔಷಧಿ

ಶೀತ, ಗಂಟಲು ನೋವಿಗೆ ಉತ್ತಮ ಔಷಧಿ

ಶೀತ, ಗಂಟಲು ಕೆರತ, ಗಂಟಲು ನೋವು ಈ ರೀತಿ ಸಮಸ್ಯೆ ಕಂಡು ಬಂದರೆ ಕಬ್ಬಿನ ಜ್ಯೂಸ್ ಕುಡಿದರೆ ಗುಣಮುಖವಾಗುವುದು.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕಬ್ಬಿನ ಜ್ಯೂಸ್ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಈ ರೀತಿಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ನಿರ್ಜಲೀಕರಣವನ್ನು ತಡೆಯುತ್ತದೆ

ನಿರ್ಜಲೀಕರಣವನ್ನು ತಡೆಯುತ್ತದೆ

ನಿರ್ಜಲೀಕರಣ ಉಂಟಾದರೆ ಸುಸ್ತು ಕಂಡು ಬರುತ್ತದೆ. ಇದು ನಿರ್ಜಲೀಕರಣವನ್ನು ಹೋಗಲಾಡಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

English summary

Benefits Of Drinking Sugarcane Juice

We find many stalls that sell sugarcane juice. You might be amazed to know that the juicy extract of sugarcane sticks has many health benefits. As the harvest festival is upon us, sugarcane will be commonly found in each and every household.
X
Desktop Bottom Promotion