For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿಯಲ್ಲಿರುವ ಪ್ರಮುಖ 15 ಗುಣಗಳು

By ಲೇಖಕ
|

ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ. ಈ ಪವಾಡ ಸದೃಶ ಗುಣವುಳ್ಳ ಬೆಳ್ಳುಳ್ಳಿಯನ್ನು ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಬಳಸುತ್ತಿದ್ದಾರೆ.

ಬೆಳ್ಳುಳ್ಳಿಯಲ್ಲಿ ಪ್ರಬಲವಾದ ಗಂಧಕದ ಸಂಯುಕ್ತಗಳಿರುವುದರಿಂದ ಇದಕ್ಕೆ ಘಾಟಿನ ವಾಸನೆಯಿದೆ. ಇದರಲ್ಲಿ ಅಲ್ಲಿಸಿನ್ ಎನ್ನುವ ಸಂಯುಕ್ತದಲ್ಲಿ ಆ್ಯಂಟಿ-ಬ್ಯಾಕ್ಟಿರಿಯಲ್, ಆ್ಯಂಟಿ-ವೈರಲ್, ಆ್ಯಂಟಿ-ಫಂಗಲ್ ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್ ಗುಣಗಳಿವೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ತುರಿದು ಅಥವಾ ಕತ್ತರಿಸಿ ಸ್ವಲ್ಪ ಹೊತ್ತು ಇಟ್ಟು ನಂತರ ಬಳಸಿದರೆ ಹೆಚ್ಚು ಉಪಯೋಗಗಳನ್ನು ಪಡೆಯಬಹುದು. ಬೆಳ್ಳುಳ್ಳಿಯಲ್ಲಿ ಸೆಲೆನಿಯಂನ ಅಂಶವಿರುತ್ತದೆ. ಇದು ಅಲ್ಲಿಸಿನ್ ಅಜೊಯೆನೆ, ಅಲ್ಲಿನ್ ಇತ್ಯಾದಿ ಸಂಯುಕ್ತಗಳೊಂದಿಗೆ ಸೇರಿ ನಮ್ಮ ದೇಹದ ರಕ್ತಪರಿಚಲನೆ, ಜೀರ್ಣಾಂಗಗಳು ಮತ್ತು ರೋಗನಿರೋಧಕ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವುದರಿಂದ ಅನೇಕ ಆರೋಗ್ಯ ಲಾಭ ಪಡೆಯಬಹುದು.

ಬೆಳ್ಳುಳ್ಳಿಯ 15 ಉಪಯೋಗಗಳು ತಿಳಿಯಲು ಸ್ಲೈಡ್ ನೋಡಿ:

ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿವೈರಲ್

ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿವೈರಲ್

ಬೆಳ್ಳುಳ್ಳಿಯು ತನ್ನ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿವೈರಲ್ ಗುಣಗಳಿಗಾಗಿ ಪ್ರಸಿದ್ಧವಾಗಿದೆ. ಇದು ಬ್ಯಾಕ್ಟೀರಿಯಲ್, ವೈರಲ್, ಫಂಗಲ್, ಈಸ್ಟ್ ಮತ್ತು ಹುಳಗಳ ಸೋಂಕನ್ನು ನಿಯಂತ್ರಿಸಲು ನೆರವು ನೀಡುತ್ತದೆ. ತಾಜಾ ಬೆಳ್ಳುಳ್ಳಿಯು ಬ್ಯಾಕ್ಟಿರಿಯಾ E, ಕೊಲಿ, ಸಲ್ಮೊನೆಲ್ಲ, ಎಂಟೆರಿಟಿಡಿಸ್ ಇತ್ಯಾದಿಯನ್ನು ಕೊಲ್ಲುವ ಮೂಲಕ ಆಹಾರದ ವಿಷವನ್ನು ತಡೆಗಟ್ಟುತ್ತದೆ.

ಚರ್ಮದ ಸೋಂಕನ್ನು ನಿವಾರಿಸುತ್ತದೆ

ಚರ್ಮದ ಸೋಂಕನ್ನು ನಿವಾರಿಸುತ್ತದೆ

ಬೆಳ್ಳುಳ್ಳಿಯಲ್ಲಿರುವ ಕೆಮಿಕಲ್ ಅಜೊಯೆನೆಯು ಉಗುರು ಸುತ್ತು ಮತ್ತು ಅಥ್ಲೆಟ್ಸ್ ಫೂಟ್ ನಂತಹ ಫಂಗಲ್ ಸೋಂಕನ್ನು ತಡೆಗಟ್ಟುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ಬೆಳ್ಳುಳ್ಳಿಯಲ್ಲಿರುವ ಗುಣಗಳು ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಆ್ಯಂಜಿಯೊಟೆನ್ಸಿನ್ II ಎನ್ನುವ ಪ್ರೋಟೀನ್ ನಮ್ಮ ರಕ್ತನಾಳಗಳು ಸಂಕುಚಿತಗೊಳಿಸಿ ರಕ್ತದೊತ್ತಡವನ್ನುಂಟುಮಾಡುವಲ್ಲಿ ನೆರವಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಈ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಪಾಲೊಸಲ್ಫೈಡ್ಸ್ ಹೈಡ್ರೋಜಿನ್ ಸಲ್ಫೈಡ್ ಎನ್ನುವ ಅನಿಲವಾಗಿ ಕೆಂಪು ರಕ್ತ ಕಣಗಳಿಂದ ಪರಿವರ್ತಿತಗೊಳ್ಳುತ್ತದೆ. ಹೈಡ್ರೋಜಿನ್ ಸಲ್ಫೈಡ್ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ಬೆಳ್ಳುಳ್ಳಿಯು ಹೃದಯವನ್ನು ಹೃದಯ ಸಂಬಂಧಿ ತೊಂದರೆಗಳಾದ ಹೃದಯಾಘಾತ ಮತ್ತು ಅಥೆರೊಸ್ಕಲೆರೊಸ್ (atherosclerosis)ನಿಂದ ರಕ್ಷಿಸುತ್ತದೆ. ಬೆಳ್ಳುಳ್ಳಿಯ ಈ ಹೃದಯವನ್ನು ಕಾಪಾಡುವ ಗುಣಗಳಿಗೆ ಹಲವು ಕಾರಣಗಳಿವೆ. ವಯಸ್ಸಿನ ಕಾರಣದಿಂದಾಗಿ ಅಪಧಮನಿಗಳಿಗೆ ಹಿಗ್ಗುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯು ಇದನ್ನು ಕಡಿಮೆಗೊಳಿಸುತ್ತದೆ ಮತ್ತು ಹೃದಯಕ್ಕೆ ಆಕ್ಸಿಜನ್ ಕಣಗಳಿಂದುಂಟಾಗುವ ತೊಂದರೆಯನ್ನು ತಪ್ಪಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ಯುಕ್ತ ಸಂಯುಕ್ತಗಳು ರಕ್ತನಾಳಗಳು ಕಟ್ಟಿಕೊಳ್ಳುವುದನ್ನು ಮತ್ತು ಅಥೆರೊಸ್ಕಲೆರೊಸಿಸ್ನ ನಿಧಾನ ಬೆಳವಣಿಗೆಯನ್ನು ತಪ್ಪಿಸುತ್ತದೆ. ರಕ್ತ ನಾಳಗಳು ಕಟ್ಟಿಕೊಳ್ಳುವುದನ್ನು ಬೆಳ್ಳುಳ್ಳಿ ತಪ್ಪಿಸುತ್ತದೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಬೆಳ್ಳುಳ್ಳಿಯಲ್ಲಿ ರಕ್ತದ ಟ್ರಿಗ್ಲೈಸೆರಿಡೆಸ್, ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ ಮತ್ತು ಆರ್ಟೀರಿಯಲ್ ಪ್ಲೆಕ್ಯೂ ರಚನೆಗೊಳ್ಳುವುದನ್ನು ಕಡಿಮೆಗೊಳಿಸುತ್ತದೆ.

ಅಲರ್ಜಿಗಳನ್ನು ತಡೆಗಟ್ಟುತ್ತದೆ

ಅಲರ್ಜಿಗಳನ್ನು ತಡೆಗಟ್ಟುತ್ತದೆ

ಬೆಳ್ಳುಳ್ಳಿಯು ಆ್ಯಂಟಿ-ಇನ್ಫ್ಲಾಮೆಂಟೊರಿ ಗುಣಕ್ಕಾಗಿ ಪ್ರಸಿದ್ಧವಾಗಿದೆ. ಇದು ದೇಹಕ್ಕೆ ಅಲರ್ಜಿಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಬೆಳ್ಳುಳ್ಳಿಯಲ್ಲಿನ ಆ್ಯಂಟಿ-ಆರ್ಥೆಟಿಕ್ ಗುಣಕ್ಕೆ ಕಾರಣ ಡೈಲೈಲ್ ಸಲ್ಫೈಡ್ ಮತ್ತು ಥೈಕ್ರೆಮೊನೊನೆ. . ಹಸಿ ಬೆಳ್ಳುಳ್ಳಿಯ ರಸವನ್ನು ಉರಿ ಮತ್ತು ಕೀಟದ ಕಡಿತಗಳಿಂದುಂಟಾಗುವ ನವೆಯನ್ನು ತಕ್ಷಣ ನಿಲ್ಲಿಸಲು ಬಳಸಬಹುದು.

ಶ್ವಾಸಕೋಶದ ತೊಂದರೆಗಳನ್ನು ನಿವಾರಿಸುತ್ತದೆ

ಶ್ವಾಸಕೋಶದ ತೊಂದರೆಗಳನ್ನು ನಿವಾರಿಸುತ್ತದೆ

ಬೆಳ್ಳುಳ್ಳಿಯನ್ನು ನಿತ್ಯವೂ ಬಳಸುವುದರಿಂದ ಹಲವು ಶೀತದ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದು. ಇದರ ಆ್ಯಂಟಿಬ್ಯಾಕ್ಟಿರಿಯಲ್ ಗುಣವು ಗಂಟಲುರಿ ತಡೆಗಟ್ಟುತ್ತದೆ. ಇದರ ಪಯೋಗವನ್ನು ಶ್ವಾಸನಾಳಗಳ ತೊಂದರೆಗಳಾದ ಅಸ್ತಮ, ಉಸಿರಾಟದ ತೊಂದರೆ ಇತ್ಯಾದಿಗಳನ್ನು ನಿವಾರಿಸುತ್ತದೆ. ದೀರ್ಘಕಾಲದ ಕೆಮ್ಮನ್ನು ಇದು ನಿವಾರಿಸುತ್ತದೆ.

ಸಕ್ಕರೆ ಕಾಯಿಲೆ

ಸಕ್ಕರೆ ಕಾಯಿಲೆ

ಬೆಳ್ಳುಳ್ಳಿಯು ಇನ್ಸುಲಿನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ನರಹುಲಿ(warts) ವಿರುದ್ಧ ಪರಿಣಾಮಕಾರಿ

ನರಹುಲಿ(warts) ವಿರುದ್ಧ ಪರಿಣಾಮಕಾರಿ

ಕಾಲುಗಳಲ್ಲಿನ ಮತ್ತು ಕೈಗಳಲ್ಲಿನ ನರಹುಲಿ ಸ್ಥಿತಿಯನ್ನು ಸುಧಾರಿಸುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ದಿನವೂ ಬೆಳ್ಳುಳ್ಳಿಯನ್ನು ಬಳಸುವುದರಿಂದ ಹಲ ಬಗೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸಬಹುದು. ಇದರಲ್ಲಿನ ಕ್ಯಾನ್ಸರ್ ನಿರೋಧಕ ಗುಣಕ್ಕೆ ಕಾರಣ ಅಲೈಲ್ ಸಲ್ಫೈಡ್ಸ್.

ಮೆಟಬಾಲಿಸಂ ಹೆಚ್ಚಿಸುತ್ತದೆ

ಮೆಟಬಾಲಿಸಂ ಹೆಚ್ಚಿಸುತ್ತದೆ

ಫೆರ್ರೊಪೊರ್ಟಿನ್ ಎನ್ನುವ ಪ್ರೊಟೀನ್ ಕಬ್ಬಿಣವನ್ನು ಹೀರಿಕೊಳ್ಳಲು ಮತ್ತು ಬಿಡುಗಡೆಗೊಳಿಸಲು ಸಹಾಯ ಮಾಡುತ್ತದೆ. ಡಿಯಲೈಲ್ ಸಲ್ಫೈಡ್ಸ್ ಪೆರ್ರೊಪೊರ್ಟಿ ನ್ ನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಮೆಟಬಾಲಿಸಂ ಹೆಚ್ಚಿಸುತ್ತದೆ.

ಭಾವನೆಗಳನ್ನು ಉದ್ರೇಕಿಸುತ್ತದೆ

ಭಾವನೆಗಳನ್ನು ಉದ್ರೇಕಿಸುತ್ತದೆ

ಬೆಳ್ಳುಳ್ಳಿಯಲ್ಲಿರುವ ಆಫ್ಹ್ರೊಡೈಸಿಯಾಕ್ ಗುಣವು (ಲೈಗಿಂಕ ಶಕ್ತಿ ಹೆಚ್ಚಿಸುವ ಗುಣ)ಅದರ ರಕ್ತಪರಿಚಲನೆಯನ್ನು ಹೆಚ್ಚಿಸುವ ಗುಣದಿಂದಾಗಿದೆ.

ಹಲ್ಲುನೋವು

ಹಲ್ಲುನೋವು

ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಗುಣಗಳಿಂದಾಗಿ ಹಲ್ಲುನೋವಿಗೆ ಇದು ಪರಿಣಾಮಕಾರಿ. ಬೆಳ್ಳುಳ್ಳಿಯ ಎಸಳನ್ನು ಜಜ್ಜಿ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಆದರೆ ಇದರಿಂದ ಒಸಡಿನಲ್ಲಿ ಉರಿಯುಂಟಾಗಬಹುದು.

ತೂಕ ಕಡಿಮೆಗೊಳಿಸಲು ನೆರವಾಗುತ್ತದೆ

ತೂಕ ಕಡಿಮೆಗೊಳಿಸಲು ನೆರವಾಗುತ್ತದೆ

ಹಲವು ಸಂಶೋಧಕರ ನಂಬಿಕೆಯ ಪ್ರಕಾರ ಒಬೆಸಿಟಿಯು ದೀರ್ಘಕಾಲದ ಉರಿಯಿಂದುಂಟಾಗಬಹುದು. ಇತ್ತೀಚಿನ ಸಂಶೋಧನೆಯ ಪ್ರಕಾರ ಬೆಳ್ಳುಳ್ಳಿಯು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

English summary

15 Health Benefits Of Garlic

The miracle herb Garlic has been used since time immemorial as a medicine to prevent or treat various diseases and conditions.Here are 15 health benefits of garlic.
X
Desktop Bottom Promotion