For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ಕಡಿಮೆ ಮಾಡುವ 10 ಆಹಾರಗಳು

By ಸಂಕೇತ್
|

ದಿನನಿತ್ಯದ ಜೀವನದಲ್ಲಿ ಸೇವಿಸುವ ಆಹಾರಗಳೆಲ್ಲವೂ ಆರೋಗ್ಯಯುಕ್ತವಾಗಿದ್ದರೆ ಮಾತ್ರ ನಾವು ದಿನವೂ ನಮ್ಮ ಜೀವನಕ್ರಮದಿಂದ ಉಂಟಾಗುವ ಹಲವು ರೋಗಗಳಿಂದ ದೂರವಿರಬಹುದು. ಆದ್ದರಿಂದ ನೀವು ಸೇವಿಸುವ ದಿನನಿತ್ಯದ ಆಹಾರ ನಿಮ್ಮ ಉತ್ತಮ ಆಯ್ಕೆಯಾಗಿರಲಿ ಹಾಗೂ ಆರೋಗ್ಯಕರವಾಗಿರಲಿ.

ಸಲ್ಮಾನ್ ಮೀನಿನ ಊಟ, ನಟ್ಸ್ ಗಳ ಸೇವನೆ, ಆಲೀವ್ ಎಣ್ಣೆಯನ್ನು ಸೇರಿಸಿದ ಆಹಾರ ಇವೆಲ್ಲವೂ ಇನ್ನುಮುಂದೆ ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ನಿಮ್ಮನ್ನು ಕೊಲೆಸ್ಟ್ರಾಲ್ ಮುಕ್ತ ಜೀವನವನ್ನು ನಡೆಸಲು ಸಾಕಷ್ಟು ಸಹಾಯ ಮಾಡುತ್ತದೆ. ಅಮೇರಿಕಾದ ಹೃದಯ ಅಸೋಸಿಯೇಶನ್/ ಹಾರ್ಟ್ ಅಸೋಸಿಯೇಶನ್ ಪ್ರಕಾರ, ಆರೋಗ್ಯಕರ ಆಹಾರ ಸೇವನೆ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಸೇರುವುದನ್ನು ತಪ್ಪಿಸಬಹುದು. ಆದ್ದರಿಂದ ನಿಮ್ಮ ಕೊಲೆಸ್ಟ್ರಾಲ್ ನ್ನು ನೀಗಿಸುವ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ.

ಓಟ್ಸ್

ಓಟ್ಸ್

ನಿಮ್ಮ ಬೆಳಗ್ನ ಉಪಹಾರಕ್ಕೆ ಓಟ್ಸ್ ನ್ನು ಸೇವಿಸಿದರೆ ಸಾಕಷ್ಟು ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ನ್ನು ಕಡಿಮೆಗೊಳಿಸಬಹುದು.ಓಟ್ಸ್ ದಿನದಲ್ಲಿ ಎರಡು ಬಾರಿ ಸೇವಿಸಿದರೆ ಕೇವಲ 6 ವಾರಗಳಲ್ಲಿ 5.3 % ದಷ್ಟು ಕೊಲೆಸ್ಟ್ರಾಲ್ ಕಡಿಮೆಯಾಗುವುದನ್ನು ನೀವೇ ಗಮನಿಸಬಹುದು. ಮೂಲಭೂತವಾಗಿ , ಓಟ್ಸ್ ಕೆಟ್ಟ ಕೊಲೆಸ್ಟ್ರಾಲ್ ಹೀರಿಕೊಳ್ಳುವ ಬೀಟ ಗ್ಲುಕನ್ ಎಂಬ ವಸ್ತುವನ್ನು ಹೊಂದಿರುತ್ತದೆ.

ರೆಡ್ ವೈನ್

ರೆಡ್ ವೈನ್

ನಿಮ್ಮ ಆರೋಗ್ಯಕ್ಕೆ ಪ್ರಮುಖವಾದದ್ದು ರೆಡ್ ವೈನ್, ದ್ರಾಕ್ಷಿಯಿಂದ ತಯಾರಿಸಲಾಗುತ್ತಿದ್ದು ವಾರದಲ್ಲಿ ಎರಡು ಲೋಟ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.

ಸಾಲ್ಮನ್ ಮತ್ತು ಫ್ಯಾಟಿ ಮೀನು

ಸಾಲ್ಮನ್ ಮತ್ತು ಫ್ಯಾಟಿ ಮೀನು

ನೈಸರ್ಗಿಕವಾಗಿ ಒಮೆಗಾ-3 ಆಮ್ಲವನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಸಾಲ್ಮನ್ ಮೀನು ಹೃದಯ ಸಂಬಂಧಿ ಖಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ. ಅಲ್ಲದೇ ವಾತ , ಅತಿಯಾದ ಕೊಲೆಸ್ಟ್ರಾಲ್ ಕೂಡ ನಿಮ್ಮ ಬಳಿ ಬರಲಾರದು. ಸಾಲ್ಮನ್, ಸಾರ್ಡಿನ್ಸ್, ಹೆರ್ರಿಂಗ್ ಮೀನುಗಳು ಶೇ 4 ರಷ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತವೆ.

ನಟ್ಸ್

ನಟ್ಸ್

ಏಕಪರ್ಯಾಪ್ತ ಕೊಬ್ಬುಗಳಲ್ಲಿ (ಬೀಜಗಳು, ಧಾನ್ಯಗಳು ಇತ್ಯಾದಿ) ಅತೀ ಕಡಿಮೆ ಕೊಬ್ಬಿನ ಅಂಶದ ಆಸಿಡ್ ಕಣಗಳಿರುತ್ತವೆ. ಹಾಗೂ ಅವುಗಳು ಮೂರು ಕೊಬ್ಬಿನ ಅಂಶಗಳಾದ ಬಹುಅಪರ್ಯಾಪ್ತ ಕೊಬ್ಬಿನ ಅಂಶಗಳು, ಪರ್ಯಾಪ್ತ ಕೊಬ್ಬಿನ ಅಂಶಗಳು ಮತ್ತು ಮತ್ತು ಏಕ ಪರ್ಯಾಪ್ತ ಕೊಬ್ಬಿನ ಅಂಶಗಳಲ್ಲಿ ಬಹಳ ಉತ್ತಮವಾದ ಕೊಬ್ಬಿನ ಅಂಶಗಳಾಗಿವೆ. ಬೀಜಗಳು ಈ ಅಗತ್ಯ ಕೊಬ್ಬಿನ ಅಂಶಗಳನ್ನು ನಿಮ್ಮ ದೇಹಕ್ಕೆ ಸೇರಿಸುವ ಅತ್ಯುತ್ತಮವಾದ ಆಹಾರ ಪದಾರ್ಥಗಳಾಗಿವೆ. ಇವುಗಳು ನೈಸರ್ಗಿಕವಾಗಿದ್ದು ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳು ಅವುಗಳಲ್ಲಿ ಮಿಶ್ರಣವಾಗಿರುವುದು. ಇವುಗಳು ನಮ್ಮ ಹೃದಯವನ್ನು ಆರೋಗ್ಯವಂತವನ್ನಾಗಿ ಮಾಡುತ್ತವೆ

ಬೀನ್ಸ್

ಬೀನ್ಸ್

ನಿಮ್ಮ ನಿತ್ಯದ ಆಹಾರದಲ್ಲಿ ಅರ್ಧ ಕಪ್ ನಷ್ಟು ಬೀನ್ಸ್ ನ್ನು ಸೇರಿಸುವುದರಿಂದ ಶೇ 8 ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಕಪ್ಪು, ಪಿಂಟೋ ಬೀನ್ಸ್ ಗಳು ನಾರಿನ ಅಂಶವನ್ನು ಹೊಂದಿದ್ದು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

ಚಹ

ಚಹ

ಚಹವು ಉತ್ಕರ್ಷಣ ವಿರೋಧಿ (antioxidants) ಮತ್ತು ಕಾಫಿಗಿಂತ ಕಡಿಮೆ ಪ್ರಮಾಣದ ಕೆಫೀನ್ ನ್ನು ಹೊಂದಿರುತ್ತದೆ. ಒಂದು ಲೋಟ ಕಾಫಿ ಸೇವಿಸಿದರೆ 135 ಮಿ.ಗ್ರಾಂ ಕೆಫೀನ್ ದೇಹವನ್ನು ಸೇರುತ್ತದೆ. ಆದರೆ ಚಹ ಕೇವಲ 30-40 ಮಿ.ಗ್ರಾಂ ಅಂಶವನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯತ್ರಿಸಲು ಸಹಾಯಮಾಡುತ್ತದೆ.

ಚಾಕಲೇಟ್ ಗಳು

ಚಾಕಲೇಟ್ ಗಳು

ಚಾಕಲೇಟುಗಳಲ್ಲೂ ಆಂಟಿ ಆಕ್ಸಿಡೆಂಟ್ ಗಳು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶಗಳು ಇರುವ ಕಾರಣ ಆರೋಗ್ಯಕ್ಕೆ ಉತ್ತಮ. 2010 ರ ಜೂನ್ ನಲ್ಲಿ 'ಜರ್ನಲ್ ಆಫ್ ಹೆಪಾಟೊಲೊಜಿ' ಯಲ್ಲಿ ಪ್ರಕಟಿಸಲಾದ ಒಂದ ಅಧ್ಯಯನದ ಪ್ರಕಾರ ಡಾರ್ಕ್ ಚಾಕೋಲೇಟ್ ಗಳಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣದಿಂದಾಗಿ ಇದು ನಮ್ಮ ರಕ್ತ ನಾಳಗಳ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ವೈದ್ಯಕೀಯ ಪರಿಣಿತರು ಹೇಳುವ ಪ್ರಕಾರ ದಿನಕ್ಕೆ 100 ಗ್ರಾಂ ಚಾಕೋಲೇಟ್ ಗಳನ್ನು ಸೇವಿಸಿದರೆ ಹೃದಯ ಸಂಬಂಧಿ ದುರ್ಘಟನೆಗಳ ಸಂಭವ 21 ಶೇಕಡಾ ಕಡಿಮೆಯಾಗುತ್ತದೆ.

ಪಾಲಾಕ್

ಪಾಲಾಕ್

ಹಸಿರು ಎಲೆಗಳ ತರಕಾರಿಗಳು ಸಕಲ ರೋಗಗಳಿಗೂ ರಾಮಬಾಣ.

ಪಾಲಾಕ್ ಸೊಪ್ಪು, ಕ್ಯಾನ್ಸರ್ , ಹೃದ್ರೋಗ ಹಾಗೂ ಆಸ್ಟಿಯೊಪೊರೋಸಿಸ್ ನ್ನು ದೂರವಿಡುವ ಸುಮಾರು 13 ಸುಮಾರು ಫ್ಲೇವನಾಯ್ಡ್ ಸಂಯುಕ್ತಗಳನ್ನು ಹೊಂದಿದೆ ಎಂದು ನಂಬಲಾಗಿದೆ .ದಿನದಲ್ಲಿ ಸೇವಿಸುವ ಅರ್ಧ ಕಪ್ ಈ ಲ್ಯೂಟೀನ್ ಭರಿತ ಆಹಾರಹೃದಯಾಘಾತ ವಿರುದ್ಧ ನಮಗೆ ಕಾವಲಾಗಿ ನಿಲ್ಲುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಈ ತೈಲ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ . ಇದು ಉತ್ತಮ ಕೊಲೆಸ್ಟ್ರಾರಾಲ್ ಮಟ್ಟವನ್ನು ಕಡಿಮೆ ಮಾಡದೆ,ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ (triglycerides) ಗಳನ್ನು ಕಡಿಮೆ ಮಾಡುವ ಮೊನೊ ಬಹು ಅಪರ್ಯಾಪ್ತ ಮೇದಸ್ಸಿನ ಆಮ್ಲಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಅಡಿಗೆಯಲ್ಲಿ ಬೇರೆ ಎಣ್ಣೆಗಳ ಬದಲಿಗೆ ಆಲೀವ್ ಎಣ್ಣೆಯನ್ನೇ ಬಳಸುವುದು ಉತ್ತಮ.

10. ಬೆಣ್ಣೆ ಹಣ್ಣು

10. ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಲ್ಲಿ ಬೆಣ್ಣೆ ಹಣ್ಣು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಬೀಟಾ ಸೈಟೊಸ್ಟಿರೋಲ್ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

English summary

10 Best Foods To Reduce Cholesterol

Changes in your diet like having low saturated fat, trans-fats and low cholesterol foods can help control your cholesterol levels to a great extent. Even weight management plays a crucial role in lowering high cholesterol in the body.
X
Desktop Bottom Promotion