For Quick Alerts
ALLOW NOTIFICATIONS  
For Daily Alerts

ಮೂಲವ್ಯಾಧಿ ಗುಣವಾಗಲು ಪಾಲಿಸಲೇಬೇಕಾದ ಪಥ್ಯ

|

ಪೈಲ್ಸ್ ಅಥವಾ ಮೂಲವ್ಯಾಧಿ ಏಕೆ ಬರುತ್ತದೆ? ರೀತಿ ಉಂಟಾಗಲು ಕಾರಣವೇನು? ಬಂದರೆ ಯಾವ ಬಗೆಯ ಮನೆ ಮದ್ದುಗಳನ್ನು ತೆಗೆದುಕೊಂಡರೆ ಗುಣವಾಗುವುದು ಎಂದು ತಿಳಿಸಿದ್ದೆವು. ಆದರೆ ಈ ಔಷಧಿಗಳನ್ನು ಪಾಲಿಸುವುದರ ಜೊತೆಗೆ ಪಥ್ಯದ ಆಹಾರ ಸೇವಿಸಿದರೆ ಕಾಯಿಲೆ ಬೇಗ ಗುಣಮುಖವಾಗುತ್ತದೆ. ಆದ್ದರಿಂದ ಮೂಲವ್ಯಾಧಿ ಇರುವವರು ಈ ಕೆಳಗಿನ ಪಥ್ಯದ ಆಹಾರಕ್ರಮ ಪಾಲಿಸುವುದು ಒಳ್ಳೆಯದು.

How Should Be Diet For Piles

1. ತಂಗಳನ್ನ:ಬಿಸಿ ಅನ್ನ ತಿನ್ನುವುದರ ಬದಲು ತಂಗಳನ್ನ ತಿನ್ನುವುದು ಒಳ್ಳೆಯದು. ಹೆಸರು ಬೇಳೆ, ತೊಗರಿಬೇಳೆ,ಮಜ್ಜಿಗೆ, ಹಾಲು, ತುಪ್ಪ, ಬೆಣ್ಣೆ ಸೇವಿಸಿ. ಮೂಲಂಗಿ, ಪಡವಲಕಾಯಿ, ಬಸಳೆ, ಜೀರಿಗೆ, ಹಿಂಗು, ಬಾಳೆಹಣ್ಣು ಆಹಾರಕ್ರಮದಲ್ಲಿದ್ದರೆ ಒಳ್ಳೆಯದು.

2. ಬಾಳೆಹಣ್ಣು: ಬಾಳೆಹಣ್ಣನ್ನು ಬೆಲ್ಲ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ತಿಂದರೆ ತುಂಬಾ ಒಳ್ಳೆಯದು.

3. ಬಾಳೆ: ಬಾಳೆಯ ಹೂವಿನಿಂದ ಮತ್ತು ಬಾಳೆದಿಂಡಿನಿಂದ ಸಾರು, ಪಲ್ಯ ಮಾಡಿ ತಿನ್ನುವುದು ಮಾಡಿದರೆ ಮೂಲವ್ಯಧಿಗೆ ಮಾತ್ರವಲ್ಲ ಕಿಡ್ನಿಗೂ ಒಳ್ಳೆಯದು. ಬಾಳೆ ಹೂವನ್ನು ಅರೆದು ಅದರಿಂದ ರಸ ತೆಗೆದು ಮಜ್ಜಿಗೆ ಜೊತೆ ಬೆರೆಸಿ ಬೆರೆಸಿ ಕುಡಿದರೆ ಒಳ್ಳೆಯದು.

4.ಕರಿಬೇವಿನ ಚಟ್ನಿ: ಕರಿಬೇವನ್ನುನೆರಳಿನಲ್ಲಿ ಒಣಗಿಸಿಕೊಳ್ಳಬೇಕು. ನಂತರ ಸ್ವಲ್ಪ ಎಣ್ಣೆಯಲ್ಲಿ ಮೆಣಸಿನಕಾಯಿ ಮತ್ತು ಹಿಂಗು, ಒಣಗಿದ ಕರಿಬೇವಿನ ಎಲೆ ಹುರಿದು ಹುರಿಗಡಲೆಯೊಂದಿಗೆ ಸೇರಿಸಿ ಪುಡಿ ಮಾಡಿ ಇಟ್ಟುಕೊಂಡು ಅನ್ನ, ಚಪಾತಿ, ರೊಟ್ಟಿ, ದೋಸೆ ತಿನ್ನಲು ಬಳಸಬೇಕು.

5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಚಟ್ನಿ ಮಾಡಿ ತಿಂದರೆ ಒಳ್ಳೆಯದು. ಈ ರೀತಿ ಚಟ್ನಿ ಮಾಡುವಾಗ ಕೊತ್ತಂಬರಿ ಸೊಪ್ಪನ್ನು ಎಣ್ಣೆಯಲ್ಲಿ ಹುರಿದು ಅದನ್ನು ಉಳಿದ ಚಟ್ನಿ ಸಾಮಾಗ್ರಿಗಳ ಜೊತೆ ಹಾಕಿ ತಯಾರಿಸಿದ ಚಟ್ನಿ ಮೂಲವ್ಯಾಧಿ ನಿವಾರಣೆಗೆ ರಾಮಬಾಣವಾಗಿದೆ. ಈ ಚಟ್ನಿಯನ್ನು, ದೋಸೆ, ಇಡ್ಲಿ, ಅನ್ನದ ಜೊತೆ ತಿನ್ನಬಹುದಾಗಿದೆ.

6. ಗುಲ್ಕಂದ್ : ಗುಲ್ಕಂದ್ ತಿನ್ನುವುದು ತುಂಬಾ ಒಳ್ಳೆಯದು (ಇದನ್ನು ಮಾಡುವ ರೆಸಿಪಿ ನೋಡಿ ಇಲ್ಲಿದೆ). ದಿನಕ್ಕೆ ಒಂದು ಚಮಚದಂತೆ ತಪ್ಪದೇ ತಿನ್ನಿ (ಗುಲ್ಕಂದ್ ತಿಂದರೆ ದೊರೆಯುವ ಪ್ರಯೋಜನಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ). ಗುಲಾಬಿ ದಳದ ಜ್ಯೂಸ್ ಕೂಡ ತುಂಬಾ ಒಳ್ಳೆಯದು. ಮೂಲವ್ಯಾಧಿಯಲ್ಲಿ ರಕ್ತ ಬೀಳುತ್ತಿದ್ದಲ್ಲಿ ಇದು ಅತ್ಯುತ್ತಮ ಆಹಾರ ಮತ್ತು ಔಷಧಿಯಾಗಿ ಕೆಲಸ ಮಾಡುತ್ತವೆ. ಒಂದು ಚಮಚೆ ಗುಲ್ಕಂದ್ ತಿಂದು ಹಾಲು ಕುಡಿಯಬೇಕು. ಅಥವಾ ಬಾಳೆಹಣ್ಣಿನ ಜೊತೆ ಕೂಡ ತಿನ್ನಬಹುದು.

7. ಪಪ್ಪಾಯಿ: ಪಪ್ಪಾಯಿ ಹಣ್ಣನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಹಾಲು, ಜೇನು ಬೆರೆಸಿ ತಿಂದರೆ ಒಳ್ಳೆಯದು. ಪಪ್ಪಾಯಿ ಜೊತೆ ಬಾಳೆಹಣ್ಣು, ಕರಬೂಜ ಹಣ್ಣುಗಳನ್ನು ಕೂಡ ತಿನ್ನಬಹುದು.

8. ಕರಿಬೇವಿನ ಎಲೆ: ಅಡುಗೆಯಲ್ಲಿ ಸಾಕಷ್ಟು ಕರಿಬೇವಿನ ಎಲೆ ಹಾಕಿ ತಯಾರಿಸುವುದು ಒಳ್ಳೆಯದು. ಕರಿಬೇವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೂಡ ತಿನ್ನಬಹುದು.

9. ಮೂಲಂಗಿ: ಮೂಲಂಗಿಯನ್ನು ಅಡುಗೆಯಲ್ಲಿ ಅಧಿಕ ಬಳಸಿ. ಅದರ ಸೊಪ್ಪಿನಿಂದ ಪಲ್ಯ ತಯಾರಿಸಿ ತಿನ್ನುವುದು ತುಂಬಾ ಒಳ್ಲೆಯದು. ಆಹಾರಗಳಲ್ಲಿ ಅಧಿಕ ನಾರಿನ ಪದಾರ್ಥವಿರುವ ಆಹಾರವನ್ನು ಹೆಚ್ಚಗಿ ಸೇವಿಸಬೇಕು.

10. ನೀರು: ದಿನಕ್ಕೆ ಎಂಟು ಲೋಟ ನೀರು ತಪ್ಪದೆ ಕುಡಿಯಬೇಕು. ಜ್ಯೂಸ್ ಕೂಡ ಕುಡಿಯಬಹುದು. ಕುರುಕಲು ತಿಂಡಿ ಮತ್ತು ಸಾಫ್ಟ್ ಪದಾರ್ಥಗಳನ್ನು (ಪಿಜ್ಜಾ, ಬರ್ಗರ್ ನಂತಹ ವಸ್ತುಗಳು) ತಿನ್ನಬಾರದು.

ಅತೀ ಮುಖ್ಯವಾಗಿ ಜೀವನ ಶೈಲಿ ಬಗ್ಗೆ ಗಮನವಿರಲಿ. ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡು ಅದರಂತೆ ಆಹಾರ ಪದಾರ್ಥಗಳನ್ನು ಪಾಲಿಸಿದರೆ ಅನೇಕ ಕಾಯಿಲೆಗಳು ಉಂಟಾಗುವುದು. ಮೂಲವ್ಯಾಧಿ ಮನೆಯಲ್ಲಿ ಯಾರಿಗಾದರು ಇದ್ದರೆ ಈ ಸಲಹೆಗಳನ್ನು ಪಾಲಿಸಲು ಹೇಳಿ, ಅಲ್ಲದೆ ಇದನ್ನು ಬರದಂತೆ ತಡೆಯಲು ಈ ಮೇಲಿನ ಆಹಾರಗಳನ್ನು ನಮ್ಮ ಆಹಾರಕ್ರಮದಲ್ಲಿ ಅಳವಡಿಸುವುದು ಒಳ್ಳೆಯದು.

English summary

How Should Be Diet For Piles | Tips For Health | ಪೈಲ್ಸ್ ಗೆ ಡಯಟ್ ಹೀಗಿರಲಿ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Recently we have discussed about reason for piles, home remedies for piles but in this article we can learn proper diet for piles patients. If diet patients follow these suggestion it's easy to get rid from piles diseases.
Story first published: Thursday, June 7, 2012, 15:02 [IST]
X
Desktop Bottom Promotion