Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮೂಲವ್ಯಾಧಿ ತರುವ ಪ್ರಮುಖ ಅಂಶಗಳಿವು!

ಯಾವ ರೀತಿಯ ಆಹಾರಕ್ರಮ ಮತ್ತು ರೀತಿಯ ಜೀವನ ಶೈಲಿ ಈ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿಯೋಣ ಬನ್ನಿ.
ಆಹಾರಕ್ರಮ: ಕಡಿಮೆ ನಾರಿನಂಶವಿರುವ ಆಹಾರಕ್ರಮ ಮಲಬದ್ಧತೆ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಆದ್ದರಿಂದ ಆಹಾರದಲ್ಲಿ ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.
1. ನಾರಿನಂಶವಿರುವ ಆಹಾರ: ಅಧಿಕ ನಾರಿನಂಶವಿರುವ ಸೊಪ್ಪು, ತರಕಾರಿ, ಹಣ್ಣುಗಳು, ಸೌತೆಕಾಯಿ, ಮೂಲಂಗಿ, ಕ್ಯಾರೆಟ್ ಹೆಚ್ಚು ತಿನ್ನಬೇಕು. ಅದರಲ್ಲೂ ಮೂಲಂಗಿಯನ್ನು ಪೈಲ್ಸ್ ಅಥವಾ ಮೂಲವ್ಯಾಧಿ ಇರುವವರು ತಿಂದರೆ ಗುಣಮುಖವಾಗಲು ಸಹಾಯವಾಗುತ್ತದೆ. ಗೋಧಿ, ರಾಗಿ, ಜೋಳದ ಹಿಟ್ಟನ್ನು ಹೊಂದಿರಿ ಮಾಡದೆ ಬಳಸಿದರೆ ಅದರಲ್ಲಿರುವ ನಾರಿನಂಶ ಹಾಗೇ ಇರುತ್ತದೆ. ಪಾಲಿಶ್ ಮಾಡದಿರುವ ಅಕ್ಕಿಯನ್ನು ಬಳಸುವುದು ಒಳ್ಳೆಯದು.
2. ಮಿತಿಯಾದ ಉಪ್ಪಿನ ಸೇವನೆ: ಅತಿಯಾಗಿ ಉಪ್ಪು ತಿನ್ನುವುದರಿಂದ ದೇಹದ ರಕ್ತಪರಿಚಲನೆಯಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಇದರಿಂದ ಗುದದ್ವಾರದಲ್ಲಿ ರಕ್ತನಾಳಗಳು ಉಬ್ಬಿಕೊಂಡು ಮೂಲವ್ಯಾಧಿಗೆ ಕಾರಣವಾಗುತ್ತದೆ.
3. ಚಟ: ಅತಿಯಾದ ಕಾಫಿ ಸೇವನೆ, ಅತಿಯಾದ ಮಸಾಲೆ ಪದಾರ್ಥಗಳು, ಮದ್ಯ, ತಂಪು ಪಾನೀಯಗಳು, ಧೂಮಪಾನ, ತಂಬಾಕು ತಿನ್ನುವುದು ಇವುಗಳ ಚಟವನ್ನು ಬೆಳೆಸಿಕೊಂಡರೆ ಇದು ಮೂಲವ್ಯಾಧಿಯನ್ನು ಹೆಚ್ಚು ಮಾಡುವುದು.
4. ತೂಕ: ಕೂತಲ್ಲಿಯೇ ಕೂತು ಕೆಲಸ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಲು ಮಿತಿಯಲ್ಲಿ ತಿನ್ನುವುದು ಮತ್ತು ನಿಯಮಿತವಾದ ವ್ಯಾಯಾಮ ಮಾಡಬೇಕು.
4. ಮಲಮೂತ್ರಗಳನ್ನು ತಡೆಯುವುದು : ಹೆಚ್ಚಿನವರಲ್ಲಿ ಈ ಅಭ್ಯಾಸ ಇರುತ್ತದೆ. ಆದರೆ ಮಲಮೂತ್ರಗಳನ್ನು ತಡೆಯುವುದು ಒಳ್ಳೆಯ ಅಭ್ಯಾಸವಲ್ಲ. ಈ ರೀತಿ ತಡೆದರೆ ಮೂಲವ್ಯಾಧಿ ಬರುತ್ತದೆ ಅಲ್ಲದೆ ಮೂತ್ರ ತಡೆಯುವುದರಿಂದ ಕಿಡ್ನಿ ಸ್ಟೋನ್ ಉಂಟಾಗುತ್ತದೆ. ಅದರಲ್ಲೂ ಅನೇಕ ಮಹಿಳೆಯರು ಬೆಳಗಿನ ಸಮಯ ಮಲವಿಸರ್ಜನೆ ಮಾಡಬೇಕೆನಿಸಿದಾಗ ಮಾಡದೇ ಮನೆಗೆಲಸದ ಮಧ್ಯೆ ತಡೆದು ನಂತರ ವಿಸರ್ಜಿಸಲು ಹೋಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಈ ರೀತಿ ಮಾಡಿದರೆ ಮೂಲವ್ಯಾಧಿ ಉಂಟಾಗುತ್ತದೆ.
5. ಗರ್ಭಿಣಿಯರಲ್ಲಿ ಮೂಲವ್ಯಾಧಿ: ಗರ್ಭ ಧರಿಸಿದಾಗ ಹೊಟ್ಟೆಯ ಮಾಂಸಖಂಡಗಳು ಹಿಗ್ಗುವುದರಿಂದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ಈ ರೀತಿ ಉಂಟಾಗುತ್ತಿದ್ದರೆ ಮಲಬದ್ಧತೆ ಉಂಟಾಗುತ್ತದೆ. ಆಗ ಸೇವನೆ ಮಾಡುವ ಕಬ್ಬಿಣಾಂಶದ ಮಾತ್ರೆಗಳೂ ಮಲಬದ್ಧತೆ ಉಂಟಾಗಲು ಒಂದು ಕಾರಣವಾಗಿದೆ. ಆದ್ದರಿಂದ ಈ ಸಮಯದಲ್ಲಿ ಅಧಿಕ ನಾರಿನಂಶವಿರುವ ಆಹಾರ ಸೇವನೆ ಒಳ್ಳೆಯದು. ಪದೇ ಪದೇ ಗರ್ಭಾಪಾತವಾಗುತ್ತಿದ್ದರೆ ಈ ರೀತಿಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು.
5. ಒತ್ತಡ: ಅತೀಯಾದ ಭಾರ ಹೊರುವುದು, ಮಾನಸಿಕ ಒತ್ತಡ ಇವುಗಳು ಕೂಡ ದೇಹದ ಆರೋಗ್ಯ ಹಾಳಾಗಲು ಒಂದು ಕಾರಣವಾಗಿದೆ. ವ್ಯಾಯಾಮ ಮತ್ತು ಅಥವಾ ಯೋಗಾಭ್ಯಾಸ ಒಳ್ಳೆಯದು. ಅದರಲ್ಲೂ ನಗುವಿನ ವ್ಯಾಯಾಮ ಒಳ್ಳೆಯದು. ಪೈಲ್ಸ್ ಬಂದು ಚಿಕಿತ್ಸೆ ಮಾಡುವುದಕ್ಕಿಂತ ಅದು ಬರದಂತೆ ಒಳ್ಳೆಯ ಆಹಾರಕ್ರಮ ಪಾಲಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
