For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಭಾಗ್ಯಕ್ಕಾಗಿ ಟೊಮೆಟೊ ಸೂಪ್!

|
Tomato Soup
ಟೊಮೆಟೊ ಸೂಪ್ ಬಾಯಿಗೆ ರುಚಿ ಆರೋಗ್ಯಕ್ಕೂ ಒಳ್ಳೆಯದು. ಈ ಸೊಪ್ ನಲ್ಲಿ ಕೊಬ್ಬಿನಂಶ ಅಧಿಕವಿರುವುದಿಲ್ಲ, ಆದ್ದರಿಂದ ತೂಕ ಕಡಿಮೆಯಾಗಲು ಮಾಡುವ ಡಯಟ್ ನಲ್ಲಿ ಟೊಮೆಟೊ ಸೂಪ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುವುದು. ಈ ಸೂಪ್ ಸೇವಿಸಿದರೆ ಇತರ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆ ಪ್ರಯೋಜನಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

1. ಕ್ಯಾನ್ಸರ್ ವಿರೋಧಿ: ಟೊಮೆಟೊದಲ್ಲಿ ಲೈಕೊಪೆನೆ (Lycopene) ಮತ್ತು ಕೆರಾಟೆನೋಯಡ್ಸ್ ( arotenoids) ಎಂಬ antioxidants ಇದ್ದು, ಇವುಗಳು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.

2. ಕೊಲೆಸ್ಟ್ರಾಲ್ ನಿಯಂತ್ರಕ: ಟೊಮೆಟೊ ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ವಿಟಮಿನ್ ಬಿ ಮತ್ತು ಪೊಟಾಷ್ಯಿಯಂ ಅಂಶವಿದ್ದು ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

3. ಧೂಮಪಾನದಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ: ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಂಶ ಗೊತ್ತಿದ್ದರೂ ಅದರ ಚಟವಿರುವವರು ಅದನ್ನು ಬಿಡಲು ಗಟ್ಟಿ ಮನಸ್ಸು ಮಾಡುವುದಿಲ್ಲ. ಧೂಮಪಾನ ಮಾಡುತ್ತಿದ್ದರೆ ಕ್ರಮೇಣ ಮಾರಕ ರೋಗಗಳು ಬರುತ್ತವೆ. ಆದರೆ ಪ್ರತಿನಿತ್ಯ ಟೊಮೆಟೊ ಸೂಪ್ ಕುಡಿದರೆ ಧೂಮಪಾನದಿಂದ ಬರುವ ಕಾಯಿಲೆಯ ತೀವ್ರತೆಯನ್ನು ತಕ್ಕಮಟ್ಟಿಗೆ ತಡೆಯಬಹುದು.

4. ದೇಹದ ತೂಕ ಕಡಿಮ ಮಾಡುತ್ತದೆ. ಟೊಮೆಟೊ ಸೂಪ್ ಸೇವಿಸಿದರೆ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಸೂಪ್ ಸೇವಿಸಿದಾಗ ಹೊಟ್ಟೆ ತುಂಬುವುದರಿಂದ ಊಟವನ್ನು ಮಿತಿಯಲ್ಲಿ ತಿನ್ನುತ್ತೇವೆ. ಆದ್ದರಿಂದ ಟೊಮೆಟೊ ಸೂಪ್ ಅನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ದೇಹದ ತೂಕ ಕಡಮೆಯಾಗಿರುವುದು ನಿಮ್ಮ ಗಮನಕ್ಕೆ ಬರುವುದು.

5. ತ್ವಚೆ ಆರೋಗ್ಯಕ್ಕೆ ಒಳ್ಳೆಯದು: ಆಕರ್ಷಕ ತ್ವಚೆ ಬಯಸುವವರು ಪ್ರತಿನಿತ್ಯ ಟೊಮೆಟೊ ಸೂಪ್ ಕುಡಿಯುವುದು ಒಳ್ಳೆಯದು. ಟೊಮೆಟೊದಲ್ಲಿರುವ ವಿಟಮಿನ್ ಎ, ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಈ ಅಂಶಗಳು ಮೊಡವೆ, ಕಪ್ಪುಕಲೆ ಇವುಗಳು ಬೀಳದಂತೆ ತಡೆಗಟ್ಟಲು ಸಹಕಾರಿಯಾಗಿದೆ.

English summary

Health Benefits From Tomato Soup | Tips For Health | ಟೊಮೆಟೊ ಸೂಪ್ ನಿಂದ ಹೆಚ್ಚಿಸಬಹುದು ಆರೋಗ್ಯ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Soup diet is one of the most popular diets that is effective to lose weight and stay healthy at the same time. The tomato soup has many health benefits thus making it one of the must have soups in your diet. Lets brief out...
X
Desktop Bottom Promotion