For Quick Alerts
ALLOW NOTIFICATIONS  
For Daily Alerts

ಗಂಟಲು ನೋವೇ? ಈ ಆಹಾರಗಳನ್ನು ದೂರವಿಡಿ!

|

ಚಳಿಗಾಲ ಶುರುವಾದರೆ ಸಾಕು ಶೀತ, ಗಂಟಲು ಕಟ್ಟಿದಂತಾಗುವುದು, ಗಂಟಲಿನಲ್ಲಿ ಕೆರೆತ, ಗಂಟಲು ನೋವು, ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ. ಕೆಲವೊಮ್ಮೆ ಔಷಧಿಗಳನ್ನು ತೆಗೆದುಕೊಂಡರೆ ಸ್ವಲ್ಪ ಕಡಿಮೆಯಾಗಿ ಮತ್ತೆ ಈ ಸಮಸ್ಯೆ ಮರುಕಳಿಸುವುದು.

ಹರ್ಬಲ್ ಟೀಗಳನ್ನು ಕುಡಿಯುವುದರಿಂದ, ಸರಿಯಾದ ಆಹಾರಕ್ರಮಗಳನ್ನು ಪಾಲಿಸುವುದರಿಂದ ಗಂಟಲಿನ ಸಮಸ್ಯೆ ಉಂಟಾಗದಂತೆ ತಡೆಯಬಹುದು. ಕೆಲವೊಮ್ಮೆ ಮುಂಜಾಗ್ರತೆ ತೆಗೆದುಕೊಂಡರೂ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ಕೆಲವೊಂದು ಆಹಾರಗಳಿವೆ ಅವುಗಳನ್ನು ಗಂಟಲಿನ ಸಮಸ್ಯೆ ಇರುವವರು ದೂರವಿಡುವುದು ಒಳ್ಳೆಯದು. ಏಕೆಂದರೆ ಆ ಆಹಾರಗಳನ್ನು ತಿನ್ನುವಾಗ ಹಿತ ಅನಿಸಿದರೂ ನಂತರ ಗಂಟಲಿನ ಸಮಸ್ಯೆ ಹೆಚ್ಚಾಗುವುದು. ಉದಾಹರಣೆಗೆ ಗಂಟಲು ಕಟ್ಟಿದರೆ ಅಥವಾ ಕೆರೆತ ಕಂಡು ಬಂದರೆ ಬಿಸಿ ಬಿಸಿ ಕಾಫಿ ಕುಡಿದಾಗ ಹಿತ ಅನಿಸಿದರೂ ನಂತರ ಇದರಿಂದಾಗಿ ಗಂಟಲಿನ ಸಮಸ್ಯೆ ಹೆಚ್ಚಾಗುವುದು. ಗಂಟಲು ನೋವು ಇರುವವರು ಈ ಕೆಳಗಿನ ಆಹಾರಗಳನ್ನು ತಿನ್ನಲು ಹೋಗಲೇಬಾರದು.

ಹುಳಿ ಆಹಾರ

ಹುಳಿ ಆಹಾರ

ಹುಣಸೆ ಹಣ್ಣು, ಕಿತ್ತಳೆ ಹಾಗೂ ಇತರ ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು. ಬೀದಿ ಬದಿಯ ಆಹಾರಗಳನ್ನು ತಿನ್ನಲು ಹೋಗಬಾರದು. ವಿನಿಗರ್ ಹಾಕಿ ತಯಾರಿಸಿದ ಆಹಾರಗಳನ್ನು ಮುಟ್ಟಬೇಡಿ.

ಮಸಾಲೆ

ಮಸಾಲೆ

ಒಣ ಮೆಣಸು, ಕರಿ ಮೆಣಸು, ಚಕ್ಕೆ, ಲವಂಗ, ನಕ್ಷತ್ರ ಮೊಗ್ಗು ಈ ರೀತಿಯ ಆಹಾರಗಳನ್ನು ತಿಂದರೆ ಗಂಟಲಿನ ಸಮಸ್ಯೆಗೆ ಒಳ್ಳೆಯದು ಎಂದು ಭಾವಿಸುತ್ತೇವೆ. ಆದರೆ ಇವುಗಳು ಕೆಮ್ಮು ನಿವಾರಣೆಗೆ ಒಳ್ಳೆಯದು. ಗಂಟಲು ನೋವು ಇದ್ದಾಗ ಇವುಗಳನ್ನು ತಿಂದರೆ ಆ ನೋವನ್ನು ಮತ್ತಷ್ಟು ಜಾಸ್ತಿಯಾಗುವಂತೆ ಮಾಡುತ್ತದೆ.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಕೆಮ್ಮು ಅಥವಾ ಗಂಟಲಿನಲ್ಲಿ ಕೆರೆತ , ಗಂಟಲಿನಲ್ಲಿ ನೋವು ಈ ರೀತಿಯ ಸಮಸ್ಯೆ ಇದ್ದರೆ ಹಾಲಿನ ಸಮಸ್ಯೆಗಳನ್ನು ದೂರವಿಡುವುದು ಒಳ್ಳೆಯದು.

 ಡ್ರೈ ಫುಡ್ಸ್

ಡ್ರೈ ಫುಡ್ಸ್

ಗಂಟಲಿನ ಸಮಸ್ಯೆ ಇರುವಾಗ ಡ್ರೈ ಫುಡ್ಸ್ ಗಳನ್ನು ತಿಂದರೆ ನುಂಗುವುದು ಕಷ್ಟವಾಗುತ್ತದೆ. ಆದ್ದರಿಂದ ಗಂಟಲಿನ ಸಮಸ್ಯೆ ಇದ್ದರೆ ಡ್ರೈ ಫುಡ್ಸ್ ತಿನ್ನದಿದ್ದರೆ ಒಳ್ಳೆಯದು.

ಕೆಫೀನ್

ಕೆಫೀನ್

ಗಂಟಲು ಕಟ್ಟಿದಂತಾಗುವುದು, ಗಂಟಲಿನಲ್ಲಿ ತುರಿತ ಈ ಸಮಸ್ಯೆಗಳಿದ್ದರೆ ಕಾಫಿ ಬದಲು ಮಸಾಲೆ ಟೀ ಹಾಗೂ ಶುಂಠಿ ಟೀ ಕುಡಿಯುವುದು ಒಳ್ಳೆಯದು.

ಮದ್ಯಪಾನ

ಮದ್ಯಪಾನ

ಚಳಿಯಲ್ಲಿ ಬ್ರಾಂಡಿ ಕುಡಿದರೆ ಅದು ದೇಹವನ್ನು ಬೆಚ್ಚಗಿಡುತ್ತದೆ. ಆದರೆ ಗಂಟಲಿನಲ್ಲಿ ಕೆರೆತ, ನೋವು ಈ ರೀತಿಯಿದ್ದರೆ ಆಲ್ಕೋಹಾಲ್ ಕುಡಿಯುವುದು ಒಳ್ಳೆಯದಲ್ಲ.

English summary

Have Sore Throat? Avoid These Foods | Tips For Health | ಗಂಟಲಿನಲ್ಲಿ ನೋವೇ? ಈ ಆಹಾರಗಳನ್ನು ತಿನ್ನಬೇಡಿ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Once the season changes, your throat becomes sore and itchy. Drinking herbal tea, cough syrups and eating right foods can cure a sore throat. But there are few foods that you must avoid.
X
Desktop Bottom Promotion