For Quick Alerts
ALLOW NOTIFICATIONS  
For Daily Alerts

ಅತಿಯಾಗಿ ವ್ಯಾಯಾಮ ಮಾಡಿದರೆ ಹೃದಯಕ್ಕೆ ತೊಂದರೆ!

|
Exercise and Health
ಹೆಚ್ಚು ವ್ಯಾಯಾಮ ಮಾಡಿದರೆ ಹೃದಯದ ಬಡಿತದಲ್ಲಿ ಏರಿಳಿತ ಉಂಟಾಗಿ ಅರಿದ್ಮಿಯಾ ಎಂಬ ಹೃದಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ವಿಡನ್ ಅಧ್ಯಯನವೊಂದು ತಿಳಿಸಿದೆ.

ನಿರಂತರವಾಗಿ ವ್ಯಾಯಾಮ ಮತ್ತು ಅಭ್ಯಾಸದಲ್ಲಿ ತೊಡಗುವ ಕ್ರೀಡಾಪಟುಗಳನ್ನು ಪರಿಶೀಲಿಸಿದಾಗ ಅವರ ಹೃದಯ ಬಡಿತದಲ್ಲಿ ಏರಿಳಿತ ಕಂಡುಬಂದಿದೆ.

ಅರಿದ್ಮಿಯಾ ಎಂಬ ಸಮಸ್ಯೆ ಮಾರಕವಲ್ಲದಿದ್ದರೂ, ಕೆಲವೊಮ್ಮೆ ಲಕ್ವ ಮತ್ತು ಇನ್ನಿತರ ಗಂಭೀರ ಸಮಸ್ಯೆಗಳನ್ನು ತರುವ ಸಾಧ್ಯತೆ ಇದೆ ಎಂದಿದ್ದಾರೆ. ತುಂಬಾ ವ್ಯಾಯಾಮ ಮಾಡುವವರು ಈ ಸಮಸ್ಯೆ ತಮ್ಮಲ್ಲಿ ಕಾಣಿಸಿಕೊಂಡರೆ ತಕ್ಷಣವೇ ಗುರುತಿಸಬೇಕು ಮತ್ತು ಈ ಕುರಿತು ವೈದ್ಯರಲ್ಲಿ ಸಲಹೆ ತೆಗೆದುಕೊಳ್ಳಬೇಕು ಎಂದು ಹೃದಯ ತಜ್ಞ ಜೋಹನ್ ಸಾಂಡ್ ಸ್ಟ್ರಾಮ್ ತಿಳಿಸಿದ್ದಾರೆ.

ಒಟ್ಟಾರೆ ಆರೋಗ್ಯಕ್ಕೆ ವ್ಯಾಯಾಮ ತುಂಬಾ ಅವಶ್ಯಕ. ಆದರೆ ಹೃದಯದಲ್ಲಿ ಸ್ವಲ್ಪ ಏರು ಪೇರು ಕಂಡುಬಂದರೆ ವೈದ್ಯರಿಂದ ಅವಶ್ಯಕ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಂಡರೆ ಒಳಿತು ಎಂದಿದ್ದಾರೆ.

English summary

Exercise and Health | More Exercise Affect Heart | ವ್ಯಾಯಾಮ ಮತ್ತು ಆರೋಗ್ಯ | ಹೆಚ್ಚು ವ್ಯಾಯಾಮದಿಂದ ಹೃದಯಕ್ಕೆ ತೊಂದರೆ

Exercise is very essential for overall health. But if it cross the limit, it may affect your heart, a research says
Story first published: Monday, January 2, 2012, 11:28 [IST]
X
Desktop Bottom Promotion