For Quick Alerts
ALLOW NOTIFICATIONS  
For Daily Alerts

ಕರಿಬೇವಿನಿಂದ ದೇಹದ ತೂಕ ಕಡಿಮೆಯಾಗುವುದೆ?

|
ಕರಿಬೇವಿನ ಎಲೆಯನ್ನು ಅಡುಗೆಯಲ್ಲಿ ಬಳಸಿದರೆ ಅಡುಗೆ ಘಮ್ಮೆನ್ನುವುದು. ಕೂದಲಿನ ಆರೈಕೆಯಲ್ಲಿ ಕೂಡ ಕರಿಬೇವಿನ ಎಲೆಯನ್ನು ಬಳಸಲಾಗುವದು. ರುಚಿ, ಸೌಂದರ್ಯ, ಆರೋಗ್ಯಕ್ಕೆ ಹೀಗೆ ಅನೇಕ ಗುಣಗಳನ್ನು ಈ ಕರಿಬೇವು ಹೊಂದಿದೆ. ಬನ್ನಿ ಕರಿಬೇವಿನ ನಾನಾ ರೀತಿಯ ಉಪಕಾರಗಳ ಬಗ್ಗೆ ತಿಳಿಯೋಣ:

1. ಹೊಟ್ಟೆ ಸಮಸ್ಯೆ ಮತ್ತು ಅಜೀರ್ಣ ನಿವಾರಿಸಲು ಕರಿಬೇವು ಒಳ್ಳೆಯದು. ಕರಿಬೇವಿನ ಎಲೆಯಿಂದ ರಸ ಹಿಂಡಿ ಸ್ವಲ್ಪ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ತಿಂದರೆ ಹೊಟ್ಟೆ ಮತ್ತು ಅಜೀರ್ಣ ಸಮಸ್ಯೆ ನಿವಾರಣೆಯಾಗುವುದು.

2.
ದಿನವೂ ಕರಿಬೇವಿನ ಎಲೆ ತಿಂದರೆ ದೇಹದ ತೂಕ ಕಡಿಮೆಯಾಗುವುದು.

3. ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.

4. ತಲೆಗೆ ಹಚ್ಚುವ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚುವುದು ಒಳ್ಳೆಯದು.

English summary

Benefit From Curry Leaves | Health And Beauty | ಕರಿ ಬೇವಿನ ಎಲೆಯ ಪ್ರಯೋಜನಗಳು | ಆರೋಗ್ಯ ಮತ್ತು ಸೌಂದರ್ಯ

Curry leaf has many health benefit. It stimulates digestive enzymes and helps break down food more easily. And also helpful for hair growth.
Story first published: Monday, March 19, 2012, 18:01 [IST]
X
Desktop Bottom Promotion