For Quick Alerts
ALLOW NOTIFICATIONS  
For Daily Alerts

ಸಾಂಬಾರ್ ಈರುಳ್ಳಿ ತಿಂದು ಆರೋಗ್ಯವಂತರಾಗಿ

|
ಈರುಳ್ಳಿ ತಳಿಯಲ್ಲಿ ಒಂದಾಗಿರುವ ಈರುಳ್ಳಿ ಹೂವು ಅಥವಾ ಸಾಂಬಾರ್ ಈರುಳ್ಳಿ ಆಹಾರಕ್ಕೆ ರುಚಿ ನೀಡಲು ಬಳಸಲಾಗುತ್ತೆ. ಘಂ ಎನ್ನುವಂತೆ ಸ್ವಾದ ನೀಡುವ ಈ ಸಾಂಬಾರ್ ಈರುಳ್ಳಿಯಿಂದ ಆರೋಗ್ಯಕ್ಕೂ ಹೆಚ್ಚು ಉಪಯೋಗವಿದೆ. ಅದೇನೆಂದು ಮುಂದೆ ತಿಳಿದುಕೊಳ್ಳಿ.

ಸಾಂಬಾರ್ ಈರುಳ್ಳಿಯಿಂದ ಆರೋಗ್ಯಕ್ಕೆ ಏನು ಉಪಯೋಗ ಎಂದು ತಿಳಿದುಕೊಳ್ಳಿ.
1. ವಿಟಮಿನ್ ಸಿ: ಸಾಂಬಾರ್ ಈರುಳ್ಳಿಯಲ್ಲಿ ಹೆಚ್ಚಿನ ವಿಟಮಿನ್ ಸಿ ಇದೆ. ಇದರಲ್ಲಿ ಕ್ರೋಮಿಯಮ್ ಮತ್ತು ಫೈಬರ್ ಕೂಡ ಹೆಚ್ಚಿರುವುದರಿಂದ ಇದರ ಸೇವನೆ ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತದೆ.

2. ಹೃದಯದ ಸಮಸ್ಯೆ: ಈರುಳ್ಳಿ ಹೂವನ್ನು ಸೇವಿಸುವುದರಿಂದ ಹೃದಯದ ತೊಂದರೆಗಳನ್ನು ದೂರವಿರಿಸಬಹುದು. ಇದರಲ್ಲಿ ಹೇರಳವಾಗಿ ಫ್ಲೇವನಾಯ್ಡ್ ಇರುವುದರಿಂದ ಹೃದಯದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಸಹಕಾರಿ.

3. ಸಕ್ಕರೆ ಅಂಶ: ರಕ್ತದಲ್ಲಿ ಮತ್ತು ರಕ್ತನಾಳಗಳಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವಲ್ಲಿ ಈರುಳ್ಳಿ ಹೂವು ತುಂಬಾ ಉಪಯುಕ್ತ.

4.ಕ್ಯಾನ್ಸರ್ ನಿವಾರಣೆ: ಎಲ್ಲ ರೀತಿಯ ಕ್ಯಾನ್ಸರ್, ಅದರಲ್ಲೂ ಗರ್ಭಕೋಶದ ಕ್ಯಾನ್ಸರ್ ತಡೆಯುವಲ್ಲಿ ಸಾಂಬಾರ್ ಈರುಳ್ಳಿ ಹೆಚ್ಚು ಸಹಕಾರಿ.

5. ಹೊಟ್ಟೆ ಸಮಸ್ಯೆ: ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಈ ಈರುಳ್ಳಿ ಸೇವನೆ ಉತ್ತಮ ಪರಿಹಾರ. ಹೊಟ್ಟೆಯಲ್ಲಿ ಕ್ರಿಮಿ ಕೀಟಗಳು ಹೆಚ್ಚಾಗಿ ತೊಂದರೆಯುಂಟಾಗಿದ್ದರೂ ಇದು ಪರಿಣಾಮಕಾರಿಯಾಗುತ್ತದೆ.

6. ಬ್ಯಾಕ್ಟೀರಿಯಾ ವಿರೋಧಿ: ಸಾಂಬಾರ್ ಈರುಳ್ಳಿಯಲ್ಲಿ ಬ್ಯಾಕ್ಟೀರಿಯಶ ವಿರೋಧಿ ಮತ್ತು ಅನೇಕ ಕಾಯಿಲೆಗಳನ್ನು ಹೊತ್ತು ತರುವ ಫಂಗಸ್ ಗಳ ವಿರೋಧಿ ಅಂಶಗಳಿದೆ.

English summary

Spring Onion Health Benefits | Onions and Health | ಸಾಂಬಾರ್ ಈರುಳ್ಳಿಯ ಆರೋಗ್ಯಕರ ಅಂಶಗಳು

Not only onions, spring onions also have lot of healthy properties in it. Including spring onion in food may help to cut the chances of many diseases. Take a look.
Story first published: Saturday, December 3, 2011, 16:04 [IST]
X
Desktop Bottom Promotion