For Quick Alerts
ALLOW NOTIFICATIONS  
For Daily Alerts

ಲೋಳೆಸರದ ಜ್ಯೂಸ್ ನಿಂದ ಆರೋಗ್ಯ ವೃದ್ಧಿ ಹೇಗೆ?

|
Aloe Vera Juice Benefits
ಲೋಳೆಸರ ಜ್ಯೂಸ್ ಗೆ ಬಹು ಬೇಡಿಕೆ ಇದೆ. ಅದಕ್ಕೆ ಕಾರಣ ಅದರಲ್ಲಿರುವ ಔಷಧೀಯ ಮತ್ತು ಸೌಂದರ್ಯ ವರ್ಧಕ ಗುಣ. ಲೋಳೆಸರವನ್ನು ಬಾಡಿ ಲೋಷನ್, ಕ್ರೀಮ್, ಜೆಲ್ ಮತ್ತು ಶ್ಯಾಂಪೂ ಆಗಿ ಕೂಡ ಬಳಸುತ್ತಾರೆ. ಲೋಳೆರಸದಲ್ಲಿರುವ ಖನಿಜಾಂಶಗಳು, ಅಮೈನೊ ಆಮ್ಲ, ಎಂಜೆಮೈಸ್ ಇವೆಲ್ಲವೂ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ.

ಲೋಳಸರದ ಔಷಧೀಯ ಗುಣಗಳು:

1. ಲೊಳೆಸರ ಅಮೈನೊ ಆಮ್ಲವನ್ನು ಉತ್ಪತ್ತಿ ಮಾಡುವುದರಿಂದ ದೇಹದ ಆರೋಗ್ಯ ಹೆಚ್ಚಾಗುತ್ತದೆ.

2. ಲೋಳೆಸರದಲ್ಲಿ ವಿಟಮಿನ್ ಎ, ಬಿ1, ಬಿ6, ಬಿ12 ಸಿ ಮತ್ತು ಇ ಇವುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

3. ಕ್ಯಾನ್ಸರ್ ರೋಗಿಗಳಿಗೆ ಲೋಳೆಸರದ ಜ್ಯೂಸ್ ಸಹಕಾರಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

4. ಲೋಳೆಸರದ ಸೇವನೆ ಮಲಬದ್ಧತೆ, ಎದೆ ಉರಿ, ಅಜೀರ್ಣ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

5. ರಕ್ತದೊತ್ತಡವನ್ನು ಸಮಪ್ರಮಾಣದಲ್ಲಿಡುವಂತೆ ಮಾಡಿ ಹೃದಯಾಘಾತವಾಗದಂತೆ ತಡೆಯುವಲ್ಲಿ ಲೋಳೆಸರದ ಪಾತ್ರ ಹೆಚ್ಚು.

6. ದೇಹದಲ್ಲಿನ ಅಧಿಕ ಕ್ಯಾಲೋರಿ ಕರಗಿಸಿ ದೇಹದ ತೂಕವನ್ನು ಸಮಪ್ರಮಾಣದಲ್ಲಿಡಬಹುದು.

ಸೌಂದರ್ಯವರ್ಧಕ ಗುಣ:

1. ಲೋಳೆಸರದ ಜ್ಯೂಸ್ ನಲ್ಲಿ ಅಧಿಕ ಕೊಲಜಿನ್ ಅಂಶವಿದ್ದು ಇದು ತ್ವಚೆಯನ್ನು ಕಪ್ಪು ಕಲೆ, ಮೊಡವೆ ಇವುಗಳನ್ನು ಹೋಗಲಾಡಿಸುತ್ತದೆ.

2. ಲೋಳೆಸರದಿಂದ ಮಸಾಜ್ ಮಾಡಿದರೆ ತ್ವಚೆ ಕಾಂತಿ ಹೆಚ್ಚುತ್ತದೆ.

3. ಲೋಳೆಸರವನ್ನು ಮುಖಕ್ಕೆ ಹಚ್ಚಿ ಅಕಾಲಿಕ ನೆರೆಬೀಳುವುದನ್ನು ತಡೆಯಬಹುದು.

4. ಲೋಳೆಸರವನ್ನು ಕೂದಲಿಗೆ ಹಾಕಿದರೆ ತಲೆಹೊಟ್ಟು ಕಡಿಮೆ ಮಾಡಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.

English summary

Aloe Vera Juice Benefits | Aloe Vera For Skin And Body | ಲೋಳೆಸರ ಜ್ಯೂಸ್ ನ ಉಪಯೋಗಳು

Aloe vera juice is one of the most demanding and useful extracts of the aloe vera plant. It is highly consumed due to its strong medicinal and cosmetic benefits.
Story first published: Saturday, December 31, 2011, 11:40 [IST]
X
Desktop Bottom Promotion