Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗೆ ಲೋಳೆಸರ ಜ್ಯೂಸ್
ಲೋಳೆಸರ ಅತ್ಯಂತ ಉಪಯುಕ್ತವಾದ ಮನೆ ಮದ್ದಾಗಿದೆ. ಮನೆಯಲ್ಲಿ ಇದರ ಒಂದು ಗಿಡವಿದ್ದರೆ ಇದರಿಂದ ತುಂಬಾ ಪ್ರಯೋಜವನ್ನು ಪಡೆಯಬಹುದು. ಈ ಗಿಡವನ್ನು ಬೆಳೆಸುವುದು ಕೂಡ ಸುಲಭ. ಒಂದು ಹೂ ಕುಂಡದಲ್ಲಿ ಸ್ವಲ್ಪ ಮಣ್ಣು ಹಾಕಿ ಗಿಡವನ್ನು ನೆಟ್ಟು ದಿನಾ ಸ್ವಲ್ಪ ನೀರು ಹಾಕಿದರೆ ಗಿಡ ತುಂಬಾ ಸಮೃದ್ಧಿಯಾಗಿ ಬೆಳೆಯುತ್ತದೆ.

ಇದನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತ್ವಚೆಗೆ ಹಚ್ಚಿದರೆ ತ್ವಚೆ ಹೊಳಪನ್ನು ಪಡೆಯುತ್ತದೆ, ತಿಂದರೆ ಮುಟ್ಟಿನ ಹೊಟ್ಟೆ ನೋವು ಸಮಸ್ಯೆಯನ್ನು ಹೋಗಲಾಡಿಸಬಹುದು ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಕಾರಿಯಾಗಿದೆ. ಇದನ್ನು ಹಾಗೇ ತಿನ್ನಲು ಇಷ್ಟವಾಗದವರು ಜ್ಯೂಸ್ ಮಾಡಿ ಕುಡಿಯಬಹುದು. ಇದರಿಂದ ಜ್ಯೂಸ್ ಮಾಡುವುದು ಹೇಗೆ ಎಂದು ಇಲ್ಲಿ ಹೇಳಲಾಗಿದೆ ನೋಡಿ:
ಬೇಕಾಗುವ ಸಾಮಾಗ್ರಿಗಳು:
* ಲೋಳೆಸರ 2 ಚಮಚ
* ಒಂದು ಕಿತ್ತಳೆ ಅಥವಾ ದ್ರಾಕ್ಷಿ ರಸ
* ಒಂದು ಚಮಚ ಸಕ್ಕರೆ
* ಕಾಲು ಗ್ಲಾಸ್ ನೀರು
ತಯಾರಿಸುವ ವಿಧಾನ:
1. ತಾಜಾ ಲೋಳೆಸರವನ್ನು ಮುರಿದು ತಂದು ಅದರ ಸಿಪ್ಪೆಯನ್ನು ತೆಗೆಯಬೇಕು.
2. ನಂತರ ಚಮಚದಿಂದ ಲೋಳೆಸರವನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಸಕ್ಕರೆ, ದ್ರಾಕ್ಷಿ ಅಥವಾ ಕಿತ್ತಳೆ, ಸ್ವಲ್ಪ ನೀರು ಹಾಕಿ ಗಟ್ಟಿ ಪೇಸ್ಟ್ ರೀತಿ ಮಾಡಿದರೆ ಲೋಳೆಸರದ ಜ್ಯೂಸ್ ಕುಡಿಯಲು ರೆಡಿ.
ಉಪಯೋಗ:
* ಇದನ್ನು ಪ್ರತಿನಿತ್ಯ ಬೆಳಗ್ಗೆ ಕುಡಿಯುವವರೆಗೆ ಹೊಟ್ಟೆನೋವು, ಕೂದಲು ಉದುರುವುದು, ಮುಟ್ಟಿನ ಹೊಟ್ಟೆನೋವು, ಮೊಡವೆ ಈ ರೀತಿಯ ಸಮಸ್ಯೆಗಳು ಕಂಡುಬರುವುದಿಲ್ಲ. ಈ ಜ್ಯೂಸ್ ನಿಂದ ಪಡೆಯಬಹುದಾದ ಇತರ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿ.



Click it and Unblock the Notifications
