For Quick Alerts
ALLOW NOTIFICATIONS  
For Daily Alerts

ಸಿಗರೇಟ್ ಸೇದುವವರಿಗೆ ಸೀಕ್ರೆಟ್ ಡಯಟ್ ಇದು

|
Detox Diet for Smokers
ಈ ಲೇಖನ ಓದುವವರಿಗೆ ಮೊದಲ ಸಲಹೆಯೆಂದರೆ ಧೂಮಪಾನ ತ್ಯಜಿಸಿ ಎನ್ನುವುದು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮಾರ್ಗದ ಹೊರತು ಬೇರೆ ದಾರಿಯೇ ಇಲ್ಲ. ಆದರೆ ಧೂಮಪಾನ ಚಟವನ್ನು ಮೈಗೂಡಿಸಿಕೊಂಡು ತಕ್ಷಣವೇ ಬಿಡಲು ಒದ್ದಾಡುತ್ತಿರುವವರು ಈ ಡಯಟ್ ಪಾಲಿಸಬಹುದು.

ಕೆಲವು ಆಹಾರ ಸೇವನೆಯಿಂದ ಸಿಗರೇಟ್ ದುಶ್ಚಟದಿಂದ ದೇಹದಲ್ಲಿ ತುಂಬಿಕೊಂಡ ವಿಷಕಾರಿ ಅಂಶವನ್ನು ತೆಗೆದು ಹಾಕಲು ಸಾಧ್ಯವಿದೆ. ಧೂಮಪಾನದಿಂದ ದೇಹಕ್ಕೆ ಆಗುವ ಅಪಾಯವನ್ನು ಆಹಾರಗಳಿಂದ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಈ ಚಟದಿಂದಾಗುವ ಕೆಲವು ಅಪಾಯವನ್ನು ನಿಯಂತ್ರಣ ಮಾಡಬಹುದಷ್ಟೇ.

ಧೂಮಪಾನಿಗಳ ಡಯಟ್ ನಲ್ಲಿ ಏನೇನಿರಬೇಕು?

1. ಗ್ರೀನ್ ಟೀ: ನೀವು ಟೀ ಅಥವಾ ಕಾಫಿ ಸೇವಿಸುವುದಾದರೆ ತಕ್ಷಣವೇ ಅದನ್ನು ನಿಲ್ಲಿಸಿ. ಈಗಾಗಲೇ ಸಿಗರೇಟ್ ಸೇವನೆಯಿಂದ ದೇಹದಲ್ಲಿ ಸಾಕಷ್ಟು ವಿಷಕಾರಿ ಅಂಶಗಳಿರುತ್ತವೆ. ಜೊತೆಗೆ ಟೀ ಕಾಫಿ ಇದ್ದರೆ ಇನ್ನಷ್ಟು ಪ್ರಚೋದನೆ ನೀಡಿದಂತೆ. ಕಾಫಿಯಲ್ಲಿನ ಕೆಲ ಅಂಶ ಇನ್ನಷ್ಟು ವಿಷವನ್ನು ದೇಹಕ್ಕೆ ಸೇರಿಸುತ್ತದೆ.

ಆದ್ದರಿಂದ ನಿಮ್ಮ ಅಭ್ಯಾಸವನ್ನು ಗ್ರೀನ್ ಟೀಗೆ ಬದಲಿಸಿಕೊಳ್ಳಿ. ಗ್ರೀನ್ ಟೀಯಲ್ಲಿ ಆಂಟಿಯಾಕ್ಸಿಡಂಟ್ ಇರುವುದರಿಂದ ತುಂಬಾ ಅನುಕೂಲವಿದೆ. ಇದನ್ನು ಔಷಧಿಯಂತೆ ಕುಡಿಯಬೇಕಿಲ್ಲ. ಒಮ್ಮೆ ಗ್ರೀನ್ ಟೀ ಟೇಸ್ಟ್ ಮಾಡಿದರೆ ಸಾಕು, ನೀವೇ ಕಾಫಿ ಟೀ ಬದಿಗಿಟ್ಟು, ಗ್ರೀನ್ ಟೀ ಚಟವನ್ನೂ ಅಂಟಿಸಿಕೊಳ್ಳುತ್ತೀರ.

2. ಬೆಳ್ಳುಳ್ಳಿ: ನೀವು ತಿನ್ನುವ ಆಹಾರಕ್ಕೆಲ್ಲಾ ಬೆಳ್ಳುಳ್ಳಿ ಬಳಸಿ. ಸಲಾಡ್, ಸೂಪು, ಕರಿ ಯಾವುದಕ್ಕಾದರೂ ಸರಿ ಬೆಳ್ಳುಳ್ಳಿ ಮಿಶ್ರಣವಿರಲಿ. ನಿಮಗೆ ಬೆಳ್ಳುಳ್ಳಿ ವಾಸನೆ ಅಹಿತವೆನಿಸಲಿಲ್ಲ ಎಂದರೆ ದಿನಕ್ಕೆ 4-5 ಎಸಳು ಬೆಳ್ಳುಳ್ಳಿಯನ್ನೂ ಹಾಗೆಯೂ ತಿಂದರೆ ಇನ್ನೂ ಹೆಚ್ಚು ಅನುಕೂಲ. ಬೆಳ್ಳುಳ್ಳಿಯಲ್ಲಿ ವಿಶೇಷವಾದ ಗಡ್ಡೆ ನಿವಾರಕ ಅಂಶವಿರುವುದರಿಂದ ಧೂಮಪಾನಿಗಳಿಗೆ ಹೆಚ್ಚು ನೆರವಾಗುತ್ತದೆ. ಸಿಗರೇಟ್ ದೇಹದಲ್ಲಿ ಕ್ಯಾರ್ಸಿಮೊನಾ ಉತ್ಪಾದಿಸಿದರೆ, ಬೆಳ್ಳುಳ್ಳಿ ಅದನ್ನು ನಿರ್ಣಾಮ ಮಾಡಲು ಸಹಕರಿಸುತ್ತದೆ.

* 3-4 ಅಂಶ ಹಸಿರು: ಹಸಿರು ತರಕಾರಿ, ಸೊಪ್ಪಿನಲ್ಲಿ ದೇಹಕ್ಕೆ ಅವಶ್ಯಕವಾದ ಆಂಟಿಯಾಕ್ಸಿಡೆಂಟ್ ಹೇರಳವಾಗಿರುತ್ತೆ. ಅಷ್ಟೇ ಅಲ್ಲ, ಇವುಗಳಲ್ಲಿ ಕ್ಯಾನ್ಸರ್ ನಿವಾರಕ ವಿಶೇಷವಾದ ಕ್ಯಾರೊಟೊನಾಯ್ಡ್ ಕೂಡ ಇರುವುದರಿಂದ ಧೂಮಪಾನಿಗಳು ನಿರಂತರವಾಗಿ ಸೇವಿಸಿದರೆ ಕ್ಯಾನ್ಸರ್ ಮತ್ತು ಇನ್ನಿತರ ಶ್ವಾಸಕೋಶ ಸಂಬಂಧಿ ಸಮಸ್ಯೆ ಉಂಟಾಗುವುದು ತಪ್ಪುತ್ತದೆ. ಪಾಲಾಕ್, ಬ್ರೊಕೊಲಿ ಮುಂತಾದುವು ಆಹಾರದಲ್ಲಿ ಕಡ್ಡಾಯವಾಗಿ ಇರಲೇಬೇಕು.

* ಕ್ಯಾಪ್ಸಿಕಂ: ದುಂಡುಮೆಣಸಿನಕಾಯಿಯಲ್ಲಿ ಆಂಟಿಯಾಕ್ಸಿಡೆಂಟ್ ಹೆಚ್ಚಿದೆ. ದುಂಡು ಮೆಣಸಿನಕಾಯಿ ಸೇವಿಸಲು ಕ್ಯಾನ್ಸರ್ ರೋಗಿಗಳಿಗೂ ಸಲಹೆ ನೀಡುತ್ತಾರೆ. ಆದ್ದರಿಂದ ಧೂಮಪಾನಿಗಳು ದುಂಡು ಮೆಣಸಿನಕಾಯಿಯನ್ನು ಹೆಚ್ಚು ತಿಂದಷ್ಟೂ ಒಳ್ಳೆಯದು. ಇದನ್ನು ಹಸಿ ತಿನ್ನಬೇಕು. ಫ್ರೈ ಅಥವಾ ಅತಿಯಾಗಿ ಬೇಯಿಸಿದ ದುಂಡು ಮೆಣಸಿನಕಾಯಿ ಪ್ರಯೋಜನಕ್ಕೆ ಬರುವುದಿಲ್ಲ.

* 2-3 ಅಂಶ ಸಿಟ್ರಸ್ ಹಣ್ಣು: ಧೂಮಪಾನಿಗಳ ಆರೋಗ್ಯಕ್ಕೆ ವಿಟಮಿನ್ ಸಿ ಪೂರಿತ ಹಣ್ಣುಗಳು ಅಮೃತವಿದ್ದಂತೆ. ನೀವು ಎಷ್ಟು ಹಣ್ಣುಗಳನ್ನು ತಿನ್ನುತ್ತೀರೊ ಹೆಚ್ಚು ವರ್ಷ ಬದುಕುತ್ತೀರ. ಆದ್ದರಿಂದ ದಿನಕ್ಕೆ ಒಂದಾದರೂ ವಿಟಮಿನ್ ಸಿ ಇರುವ ಹಣ್ಣನ್ನು ಸೇವಿಸಿ. ಟೊಮೆಟೊ, ಕಿತ್ತಳೆ ಮುಂತಾದ ಹಣ್ಣುಗಳು ಧೂಮಪಾನ ಚಟದಿಂದ ಮೈಗಂಟಿಸಿಕೊಳ್ಳಬಹುದಾದ ರೋಗವನ್ನು ಸ್ವಲ್ಪ ಮಟ್ಟಿಗೆ ತಡೆಯಲು ರೋಗನಿರೋಧಕ ಶಕ್ತಿ ನೀಡುತ್ತದೆ.

English summary

Detox Diet for Smokers, Smokers Health, ಧೂಮಪಾನಿಗಳ ಡಯಟ್, ವಿಷಕಾರಿ ಅಂಶ ಹೋಗಿಸುವ ಆಹಾರ, ಧೂಮಪಾನಿಗಳ ಆರೋಗ್ಯ

First advice if you are reading this article; quit smoking, there is no alternative to it. However if you are one of those incurable nicotine addicts, then this smokers diet might help you live longer than you ideally would. It is a detox diet to remove the toxins that you insist on filling your body with because of your habit. It not possible to reverse the ill effects on the health of a smoker, what you can do is damage control.
Story first published: Monday, December 12, 2011, 16:12 [IST]
X
Desktop Bottom Promotion