For Quick Alerts
ALLOW NOTIFICATIONS  
For Daily Alerts

ಹೊಟ್ಟೆ ತಳಮಳಗೊಂಡಿದ್ದರೆ ಏನೇನು ತಿನ್ನಬಹುದು?

|
Food to Improve Bowel
ಮಲಬದ್ಧತೆಯಿಂದಾಗಿ ಹೊಟ್ಟೆ ನೋವು ಮತ್ತು ಅಸಮರ್ಪಕ ಪಚನಕ್ರಿಯೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅನಾರೋಗ್ಯಕರ ಮತ್ತು ಸುಲಭವಾಗಿ ಜೀರ್ಣಗೊಳ್ಳದ ಆಹಾರ ಸೇವನೆಯೇ ಇದಕ್ಕೆ ಮೂಲಕಾರಣ. ಆದರೆ ಕೆಲವು ರೀತಿಯ ಆಹಾರವನ್ನು ದಿನನಿತ್ಯ ರೂಢಿಸಿಕೊಳ್ಳುವುದರಿಂದ ಪಚನಕ್ರಿಯೆ ವೃದ್ಧಿಸಿ ಆಗಾಗ್ಗೆ ಕಾಡುವ ಹೊಟ್ಟೆ ತಳಮಳದಿಂದ ಮುಕ್ತಿ ಹೊಂದಬಹುದು.

ಮಲಬದ್ಧತೆ ತಡೆಯುವ 5 ರೀತಿಯ ಆಹಾರಗಳು:
* ನಾರಿನಂಶ ಹೆಚ್ಚಿರುವ ತರಕಾರಿ: ತಾಜಾ ತರಕಾರಿಗಳಾದ ಬೀನ್ಸ್, ಕೊತ್ತಂಬರಿ,ಖರ್ಬೂಜ, ಹೂಕೋಸು, ಎಲೆಕೋಸು, ಬ್ರೊಕೋಲಿ, ಈರುಳ್ಳಿ, ಟೊಮೆಟೊ, ಕ್ಯಾರೆಟ್ ಮುಂತಾದುವುಗಳಲ್ಲಿ ಹೇರಳ ನಾರಿನಂಶವಿದೆ. ಇವುಗಳಲ್ಲಿ ನೀರಿನಂಶವೂ ಹೆಚ್ಚಿರುವುದರಿಂದ ಮಲಬದ್ಧತೆಗೆ ತುಂಬಾ ಸಹಕಾರಿ.

* ಗೋಧಿ ಮತ್ತು ಓಟ್ಸ್: ಎಲ್ಲಾ ಧಾನ್ಯಗಳೂ ಜೀರ್ಣಿಸಿಕೊಳ್ಳಲು ಸುಲಭವಾಗಿರುತ್ತದೆ ಮತ್ತು ಹೆಚ್ಚು ನಾರಿನಂಶ ಹೊಂದಿರುತ್ತದೆ. ಗೋಧಿ, ಅನ್ನ, ಓಟ್, ಬಾರ್ಲೆ ಮುಂತಾದುವು ಗ್ಯಾಸ್ಟ್ರಿಕ್ ನೊಂದಿಗೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಯನ್ನೂ ನೀಗಿಸುತ್ತದೆ.

* ಬಾಳೆ ಹಣ್ಣು: ಬಾಳೆಹಣ್ಣು ಮಲಬದ್ಧತೆಗೆ ಅತಿ ಪರಿಣಾಮಕಾರಿ ಹಣ್ಣು. ಇನ್ನಿತರ ಹಣ್ಣುಗಳಾದ ಸೇಬು, ಪಪ್ಪಾಯ, ಕಲ್ಲಂಗಡಿ, ದ್ರಾಕ್ಷಿ, ಮಾವನ್ನೂ ಕೂಡ ತಿನ್ನಬಹುದು.

* ಬಾದಾಮಿ: ಆಪ್ರಿಕಾಟ್, ಬಾದಾಮಿ, ಖರ್ಜೂರ, ಒಣದ್ರಾಕ್ಷಿ, ಪಿಯರ್ಸ್ ಈ ಹಣ್ಣುಗಳು ಆರೋಗ್ಯಕರ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಪೂರಕವಾಗಿದೆ. ಸಾಯಂಕಾಲದ ಸಮಯ ಜೀರ್ಣಿಸಲು ಕಷ್ಟವೆನಿಸುವ ಚಾಟ್ಸ್ ಬದಲು ಈ ಹಣ್ಣನ್ನು ಸೇವಿಸಿದರೆ ಒಳ್ಳೆಯದು.

* ನೀರು: ಇದು ಆಹಾರವಲ್ಲದಿದ್ದರೂ ಮಲಬದ್ಧತೆ ನಿವಾರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಅಂಶ. ದೇಹದಲ್ಲಿ ನೀರಿದ್ದರೆ ಎಲ್ಲಾ ಕಾರ್ಯಗಳೂ ಸರಾಗವಾಗಿ ನಡೆಯುತ್ತದೆ. ಆದ್ದರಿಂದ ದಿನಕ್ಕೆ 8-10 ಗ್ಲಾಸ್ ನೀರು ಸೇವನೆಯಿದ್ದರೆ ಒಳ್ಳೆಯದು.

English summary

Food to Improve Bowel Movement | Prevent Constipation | ಹೊಟ್ಟೆ ತಳಮಳಕ್ಕೆ ಈ ಆಹಾರ ಸೇವಿಸಿ | ಮಲಬದ್ಧತೆ ನಿವಾರಿಸುವ ಆಹಾರ

Constipation can lead to stomach ache and improper bowel movements can also cause gastric. Unhealthy and not so easy to digest food are common reasons behind having constipation. However, if you eat the right food, you can improve your bowel movements and improve stool consistency to pass out easily. Here are top 5 foods which can promote your bowel movements and prevents constipation.
Story first published: Thursday, December 8, 2011, 13:56 [IST]
X
Desktop Bottom Promotion