For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಾಗ ಏನು ತಿನ್ನಬೇಕು?

|
Food to Treat Gastroenteritis
ಅನಾರೋಗ್ಯಕರ ಆಹಾರದಿಂದ ಕೆಲವೊಮ್ಮೆ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ. ವೈರಸ್ ಸೋಂಕಿನಿಂದ ಹೊಟ್ಟೆಯಲ್ಲಿ ಉರಿ ಅನುಭವವಾಗುತ್ತದೆ.

ಈ ಸಮಯದಲ್ಲಿ ಭೇದಿ, ತಲೆತಿರುಗುವಿಕೆ, ವಾಂತಿ ಮತ್ತು ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡು ಸುಸ್ತಿಗೆ ಎಡೆಮಾಡಿಕೊಡುತ್ತದೆ. ಇಂತಹ ಸಂದರ್ಭದಲ್ಲಿ ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಅವಶ್ಯಕ. ಯಾವ ರೀತಿಯ ಆಹಾರ ಸೇವಿಸಬೇಕು ಎಂದು ಇಲ್ಲಿ ತಿಳಿದುಕೊಳ್ಳಿ.

ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಾಗ ಈ ಆಹಾರ ಕ್ರಮವಿರಲಿ:

1. ಈ ಸಮಯದಲ್ಲಿ ಖಾರವಿಲ್ಲದ ಮತ್ತು ಸುಲಭವಾಗಿ ಜೀರ್ಣಗೊಳ್ಳುವಂತಹ ಆಹಾರ ಸೇವನೆ ಉತ್ತಮ. ತುಂಬಾ ವಾಂತಿಯಾಗುತ್ತಿದ್ದರೆ ಬ್ರೆಡ್ ಟೋಸ್ಟ್ ತಿಂದರೆ ಸಾಕು.

2. ಗ್ಯಾಸ್ಟ್ರಿಕ್ ಇರುವ ಸಂದರ್ಭದಲ್ಲಿ ಸಿಟ್ರಸ್ ಹಣ್ಣುಗಳ ಸೇವನೆ ಒಳ್ಳೆಯದು. ಸಿಟ್ರಸ್ ಅಂಶ ದೇಹದೊಳಗೆ ಹೋಗುವುದರಿಂದ ವಾಂತಿ ಅತಿ ಪರಿಣಾಮಕಾರಿಯಾಗಿ ನಿವಾರಣೆಯಾಗುತ್ತದೆ. ನಿಂಬೆ, ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳನ್ನು ತಿನ್ನಬಹುದು.

3. ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಕೊಂಡಾಗ ಸಾಮಾನ್ಯ ಆಹಾರಕ್ಕಿಂತ ಸೂಪ್ ಸೇವನೆಯಿರಲಿ. ತುಂಬಾ ರುಚಿಕರ ಮತ್ತು ಜೀರ್ಣಕ್ರಿಯೆಗೆ ಸಹಕರಿಸುವ ತರಕಾರಿಯ ಸೂಪ್ ಮಾಡಿಕುಡಿಯಬಹುದು. ಇದರಿಂದ ಸಿಗುವ ನೀರಿನ ಅಂಶದಿಂದ ದೇಹದಲ್ಲಿನ ವಿಷಕಾರಿ ಅಂಶವನ್ನು ಸುಲಭವಾಗಿ ಹೊರಹಾಕುತ್ತದೆ.

4. ಹಾಲು ಮತ್ತು ಚೀಸ್ ಸೇವನೆ ಈ ಸಂದರ್ಭದಲ್ಲಿ ಬೇಡ. ಆದರೆ ಮಜ್ಜಿಗೆ ಈ ಸಮಯಕ್ಕೆ ತುಂಬಾ ಸೂಕ್ತ.

5. ಗ್ಯಾಸ್ಟ್ರಿಕ್ ಆದಾಗ ಚೆನ್ನಾಗಿ ಬೇಯಿಸಿದ ಆಹಾರ ತಿನ್ನಬೇಕು. ಬೇಯಿಸಿದ ಆಲೂಗಡ್ಡೆ, ಬೀನ್ಸ್, ಕ್ಯಾರೆಟ್, ಪಾಸ್ತಾ ಮುಂತಾದುವನ್ನು ತಿನ್ನಬಹುದು. ಇದು ಸುಲಭವಾಗಿ ಜೀರ್ಣಗೊಳ್ಳುತ್ತವೆ.

6. ಹೊಟ್ಟೆ ಸರಿಯಾಗಿ ಕೆಲಸ ಮಾಡಬೇಕೆಂದರೆ ಬಾಳೆಹಣ್ಣನ್ನು ತಿನ್ನಿ. ಸೇಬಿನ ಜ್ಯೂಸ್, ಕಿತ್ತಳೆ ಜ್ಯೂಸ್ ಕೂಡ ಕುಡಿಯಬಹುದು.

7. ಗ್ಯಾಸ್ಟ್ರಿಕ್ ಸಮಯದಲ್ಲಿ ದೇಹದ ನೀರಿನಂಶ ಕುಗ್ಗಿ ಸುಸ್ತಾಗುತ್ತದೆ. ಆದ್ದರಿಂದ ಹೆಚ್ಚು ನೀರನ್ನು ಕುಡಿಯಬೇಕು.

English summary

Food to Treat Gastroenteritis | Treat Stomach Flu | ಗ್ಯಾಸ್ಟ್ರಿಕ್ ಸಮಸ್ಯೆಗೆ ಆಹಾರ ಸೇವನೆ | ಹೊಟ್ಟೆ ನೋವಿಗೆ ಯಾವ ಆಹಾರ?

Gastroenteritis is caused due to eating contaminated and unhealthy food. Gastroenteritis is the inflammation in the intestines or stomach or both due to a virus which develops after eating unhealthy and contaminated food. So It is best to have simple food while suffering from gastroenteritis. Following are food to have during gastroenteritis or stomach flu.
Story first published: Tuesday, November 8, 2011, 16:29 [IST]
X
Desktop Bottom Promotion