For Quick Alerts
ALLOW NOTIFICATIONS  
For Daily Alerts

ಗ್ರೀನ್ ಮಾತ್ರ ಅಲ್ಲ, ಬ್ಲಾಕ್ ಟೀ ಕೂಡ ಒಳ್ಳೇದು

|
Black Tea is also Healthy as Green Tea
ಬ್ಲಾಕ್ ಟೀ ಕೂಡ ಗ್ರೀನ್ ಟೀನಷ್ಟೇ ಉಪಯೋಗಕಾರಿ ಎಂದಿದೆ ನೂತನ ಸಂಶೋಧನೆ. ಗ್ರೀನ್ ಟೀನಲ್ಲಿರುವ ಆರೋಗ್ಯಕರ ಅಂಶಗಳು ಬ್ಲಾಕ್ ಟೀನಲ್ಲೂ ಇದ್ದು, ಎರಡೂ ಟೀಗಳು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಟೀ ಅಡ್ವೈಸರಿ ಪ್ಯಾನೆಲ್ ಕೈಗೊಂಡಿದ್ದ ಗ್ರೀನ್ ಮತ್ತು ಬ್ಲಾಕ್ ಟೀ ಯಲ್ಲಿನ ಆರೋಗ್ಯಕರ ಅಂಶದ ಕುರಿತಾದ ವಿಮರ್ಶೆಯಿಂದ ಈ ಅಂಶ ತಿಳಿದುಬಂದಿದೆ.

ಅಷ್ಟೇ ಅಲ್ಲ, 2001ರಲ್ಲಿ 17 ಅಧ್ಯಯನಗಳನ್ನು ವಿಮರ್ಶೆ ನಡೆಸಿದಾಗ, ದಿನಕ್ಕೆ ಮೂರು ಬಾರಿ ಬ್ಲಾಕ್ ಟೀ ಸೇವನೆ ಮಾಡಿದವರರಲ್ಲಿ ಹೃದಯಾಘಾತದ ಸಾಧ್ಯತೆ ಶೇಕಡಾ 11 ರಷ್ಟು ಕಡಿಮೆಯಾಗಿದ್ದಾಗಿ ಕಂಡುಬಂದಿದೆ.

ಒಂದು ಕಪ್ ಬ್ಲಾಕ್ ಟೀ ಯನ್ನು ಸ್ವಲ್ಪ ಹಾಲಿನೊಂದಿಗೆ ಬೆರೆಸಿ ಕುಡಿದರೆ ಅದು ಹೃದಯಕ್ಕೆ ಮತ್ತು ರಕ್ತಸಂಚಲನಕ್ಕೆ ಒಳ್ಳೆಯದು ಎಂದೂ ಕೂಡ ಅಧ್ಯಯನ ತಿಳಿಸಿದೆ.

ಕ್ಯಮೇಲಿಯಾ ಸಿನೆನ್ಸಿಸ್ ಎಂಬ ಒಂದೇ ಸಸ್ಯದಿಂದ ಬಂದಿರುವ ಈ ಎರಡು ಮಾದರಿಯ ಟೀಗಳು ಒಂದೇ ಆರೋಗ್ಯ ಉಪಯೋಗವನ್ನು ನೀಡುತ್ತದೆ ಎಂದಿದೆ.

ಗ್ರೀನ್ ಟೀ ನಂತೆಯೇ ಬ್ಲಾಕ್ ಟೀ ನಲ್ಲಿರುವ ಕೆಲವು ಅಂಶಗಳು ಕ್ಯಾನ್ಸರ್, ಲಕ್ವ, ಮಧುಮೇಹ ಮತ್ತು ದಂತ ಕ್ಷಯ, ಇಂತಹ ಸಮಸ್ಯೆಗಳಿಂದ ದೇಹವನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ಡಯಟೀಶಿಯನ್ ಕ್ಯಾರಿ ರುಕ್ಸ್ ಟನ್ ತಿಳಿಸಿದ್ದಾರೆ.

ಎರಡೂ ಟೀಗಳ ಕುರಿತು ಸಂಶೋಧನೆ ನಡೆಸಿದಾಗ ಇವುಗಳ ಪರಿಣಾಮದಲ್ಲಿ ಹೋಲಿಕೆ ಕಂಡುಬಂದಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ. ಆದ್ದರಿಂದ ಗ್ರೀನ್ ಟೀಗೆ ಸರಿಸಮವಾಗಿ ಬ್ಲಾಕ್ ಟೀ ಕೂಡ ಲಾಭ ನೀಡಬಲ್ಲದು ಎಂದು ನ್ಯೂಯಾರ್ಕ್ ಹೆಲ್ತ್ ಡಯಟೀಶೀಯನ್ ನಿಯತಕಾಲಿಕೆ ಪ್ರಕಟಗೊಳಿಸಿದೆ.

English summary

Black Tea is also Healthy as Green Tea | Black Tea Health Benefits | ಗ್ರೀನ್ ಟೀನಷ್ಟೇ ಬ್ಲಾಕ್ ಟೀ ಆರೋಗ್ಯಕರ | ಬ್ಲಾಕ್ ಟೀಯಲ್ಲಿರುವ ಆರೋಗ್ಯಕರ ಅಂಶ

The study had confirmed that both black and green tea have similar health benefits. Green tea and black tea, both come from the plant camellia sinensis contain similar compounds, offers the same health benefits.
Story first published: Monday, October 17, 2011, 16:46 [IST]
X
Desktop Bottom Promotion