For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯದ ಸೂತ್ರ ಚಕ್ಕೆಯಲ್ಲಿದೆ

|
Cinnamon Health Benefits
ಚೆಕ್ಕೆ ಭಾರತೀಯ ಅಡುಗೆಗಳಲ್ಲಿ ಪ್ರತಿನಿತ್ಯ ಬಳಸಲಾಗುವ ಸಾಂಬಾರು ಪದಾರ್ಥ. ಸುವಾಸನೆಭರಿತ ಚಕ್ಕೆಯಲ್ಲಿ ಕೇವಲ ರುಚಿ ಮಾತ್ರ ಇಲ್ಲ, ಇದರಲ್ಲಿ ಆರೋಗ್ಯಕ್ಕೆ ಪೂರಕವಾಗುವ ಅನೇಕ ಔಷಧೀಯ ಗುಣಗಳೂ ಇವೆ.

ಚೆಕ್ಕೆಯಿಂದ ಆರೋಗ್ಯಕ್ಕೆ ಏನು ಉಪಯೋಗ?

1. ಕೆಲವು ಅಧ್ಯಯನದ ಪ್ರಕಾರ ಕೇವಲ 1/2 ಚಮಚ ಚೆಕ್ಕೆ ಪುಡಿ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸುವಲ್ಲಿ ಹೆಚ್ಚು ಸಹಕಾರಿ.

2. ಟೈಪ್ 2 ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಚಕ್ಕೆ ತುಂಬಾ ಆರೋಗ್ಯಕರ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

3. ಗಾಯ, ಇನ್ನಿತರ ಸೋಂಕುಗಳ ನಿವಾರಣೆಯಲ್ಲೂ ಚೆಕ್ಕೆ ತುಂಬಾ ಉಪಯೋಗಕ್ಕೆ ಬರುತ್ತದೆ ಎನ್ನಲಾಗಿದೆ.

4. ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಚೆಕ್ಕೆ ಒಳ್ಳೆಯ ಉಪಾಯ ಎಂದು ಸಂಶೋಧನೆಯೊಂದು ತಿಳಿಸಿದೆ. ಕ್ಯಾನ್ಸರ್ ಹರಡಲು ಕಾರಣವಾಗುವ ಲ್ಯುಕೆಮಿಯ ಮತ್ತು ಲಿಂಫೋಮ ಎಂಬ ಜೀವಕಣಗಳು ದ್ವಿಗುಣಗೊಳ್ಳುವುದನ್ನು ಚಕ್ಕೆಯಲ್ಲಿನ ಅಂಶ ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.

5. ಚೆಕ್ಕೆಯಲ್ಲಿ ಮ್ಯಾಂಗನೀಸ್, ಫೈಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಹೆಚ್ಚಿರುವುದರಿಂದ ರಕ್ತ ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ.

6. ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಜೇನಿನೊಂದಿಗೆ 1 ಚಮಚ ಚೆಕ್ಕೆ ಪುಡಿ ಬೆರೆಸಿ ಕುಡಿದರೆ ಸಂಧಿವಾತ ಕಡಿಮೆ ಮಾಡುವುದಲ್ಲದೆ ಜ್ಞಾಪಕ ಶಕ್ತಿಯನ್ನೂ ವೃದ್ಧಿಸುತ್ತದೆ.

7. ಇದು ವಿವಿಧ ರೀತಿಯ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಆದ್ದರಿಂದ ಆಹಾರ ಕೆಡದಂತಿರಲು ಚಕ್ಕೆಯನ್ನು ಬಳಸಲಾಗುತ್ತದೆ.

English summary

Cinnamon Spice | Cinnamon and Health Benefits | ಚೆಕ್ಕೆ ಸಾಂಬಾರು ಪದಾರ್ಥ | ಚೆಕ್ಕೆಯಲ್ಲಿರುವ ಆರೋಗ್ಯಕರ ಅಂಶ

Cinnamon is a highly aromatic spice has many medicinal properties which is still yet to be discovered by researches. Today, we shall take a look at the health benefits of Cinnamon. Sneak a peek.
Story first published: Thursday, October 13, 2011, 14:30 [IST]
X
Desktop Bottom Promotion