For Quick Alerts
ALLOW NOTIFICATIONS  
For Daily Alerts

ಹಳೆಯದನ್ನು ನೆನೆಸಿಕೊಂಡರೆ ನಿಮಗೇ ಕೆಟ್ಟದ್ದು

|
Negative Past Events are Harmful to Health
ಹಳೆಯ ನೆಗಟಿವ್ ಘಟನೆಗಳನ್ನು ನೆನೆಸಿಕೊಳ್ಳುವುದರಿಂದ ನಿಮ್ಮ ಮಾನಸಿಕ ಸ್ಥಿತಿಯನ್ನಷ್ಟೇ ಅಲ್ಲ, ದೈಹಿಕ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿಕೊಟ್ಟಿದೆ.

ಗ್ರನಾಡ ಯೂನಿವರ್ಸಿಟಿ ನಡೆಸಿದ ಈ ಸಂಶೋಧನೆಯಿಂದ, ಕಳೆದುಹೋದ ಘಟನೆಗಳ ನೆನಪು, ಪ್ರಸ್ತುತ ಅನುಭವ ಮತ್ತು ಮುಂದಿನ ಜೀವನದ ನಿರೀಕ್ಷೆ ಎಲ್ಲವೂ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಮತ್ತು ಇದು ಜೀವನದ ಗುಣಮಟ್ಟವನ್ನೂ ಬದಲಾಯಿಸುತ್ತದೆ ಎಂದು ತಿಳಿಸಿದೆ.

ವ್ಯಕ್ತಿಯು ತನ್ನ ಕಳೆದುಹೋದ ಜೀವನದೆಡೆಗೆ ಋಣಾತ್ಮಕ ಚಿಂತನೆ ಹೊಂದಿದ್ದರೆ ಅದು ಅವರನ್ನು ವರ್ತಮಾನ ಮತ್ತು ಭವಿಷ್ಯದೆಡೆಗೂ ಋಣಾತ್ಮಕ ಭಾವನೆ ಹೊಂದುವಂತೆ ಪ್ರೇರೇಪಿಸುತ್ತದೆ ಎಂದು ತಿಳಿಸಿದೆ. ಈ ರೀತಿ ಋಣಾತ್ಮಕ ಚಿಂತನೆಗಳು ಸಂಬಂಧಗಳು ಮತ್ತು ಜೀವನಶೈಲಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಆರಂಭಿಸುತ್ತದೆ ಎಂದಿದೆ.

ಸಂಶೋಧನೆಗೆಂದು 50 ಜನರನ್ನು ಒಳಪಡಿಸಲಾಗಿದ್ದು, (20-70 ವಯೋಮಿತಿಯ 25 ಮಹಿಳೆ ಮತ್ತು 25 ಪುರುಷರು). ನೆಗಟಿವ್ ಚಿಂತನೆ ಹೊಂದಿದ್ದವರು ಕೆಲಸದಲ್ಲಿಯೂ ತಮ್ಮ ಸಾಮರ್ಥ್ಯವನ್ನು ನಿಯಮಿತಗೊಳಿಸಿರುತ್ತಾರೆ ಮತ್ತು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ತಿಳಿದುಬಂದಿದೆ. ಇವಕ್ಕೆಲ್ಲ ಹಳೆಯ ಕಹಿ ಅನುಭವಗಳೇ ಮೂಲಕಾರಣವಾಗಿದ್ದು, ಇಂತಹವರು ಬೇಗನೆ ಒತ್ತಡಕ್ಕೆ, ಆತಂಕಕ್ಕೆ ಒಳಗಾಗುತ್ತಾರೆ ಎಂದೂ ತಿಳಿದುಬಂದಿದೆ.

English summary

Negative Past Events are Harmful to Health | Depression and Health | ಹಳೆಯ ಕಹಿ ಘಟನೆ ಆರೋಗ್ಯಕ್ಕೆ ಮಾರಕ | ಒತ್ತಡ ಮತ್ತು ಆರೋಗ್ಯ

If you are remembering your past events in a negative manner, this may harm your health also. A new study claimed that remembering negative past events may affect both psychological and physical health of the person.
Story first published: Tuesday, September 27, 2011, 17:28 [IST]
X
Desktop Bottom Promotion