For Quick Alerts
ALLOW NOTIFICATIONS  
For Daily Alerts

ಜ್ಯೂಸ್ ಅತಿಯಾಗಿ ಕುಡಿದರೆ ತಪ್ಪದು ತೊಂದರೆ!

|
Drinking More Fruit Juice Bad for Health
ಆರೋಗ್ಯವಾಗಿರಲು ಹಣ್ಣು ಅಥವಾ ಹಣ್ಣಿನ ಜ್ಯೂಸ್ ಸೇವನೆ ದೇಹಕ್ಕೆ ಅತ್ಯಗತ್ಯ. ಹಾಗಂತ ಅತಿಯಾಗಿ ಜ್ಯೂಸ್ ಕುಡಿಯುತ್ತಿದ್ದರೆ ಅದೂ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ಜ್ಯೂಸ್ ನಲ್ಲಿರುವ ಅತಿಯಾದ ಸಕ್ಕರೆ ಅಂಶ ದೇಹಕ್ಕೆ ಅಷ್ಟು ಒಳಿತಲ್ಲ, ಅದರಲ್ಲೂ ದಿನಾ ಜ್ಯೂಸ್ ಕುಡಿಯುವುದು ಒಳ್ಳೆಯದಲ್ಲ ಎಂದು ಸಂಶೋಧನೆ ತಿಳಿಸಿದೆ. ಐದು ದಿನಗಳ ಅಂತರದಲ್ಲಿ ಜ್ಯೂಸ್ ಸೇವಿಸಬಹುದು, ಆದರೆ ಅದರಲ್ಲೂ ಸಕ್ಕರೆ ಅಂಶವನ್ನು ಗಮನದಲ್ಲಿಟ್ಟುಕೊಂಡು ಸೇವಿಸಬಹುದು ಎಂದು ತಿಳಿಸಿದೆ.

ಹಣ್ಣಿನಲ್ಲಿ ಸಕ್ಕರೆ ಅಂಶ ಸಮಪ್ರಮಾಣದಲ್ಲಿರುತ್ತದೆ, ಆದರೆ ಜ್ಯೂಸ್ ತಯಾರಿಸುವಾಗ ಇದಕ್ಕೆ ಸಕ್ಕರೆ ಮತ್ತು ಹಾಲನ್ನು ಬೆರೆಸುವುದರಿಂದ ಬೊಜ್ಜು ಮತ್ತು ಡಯಾಬಿಟಿಸ್ ಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದೆ. ಆದ್ದರಿಂದ ಮಕ್ಕಳಿಗೆ ಹೆಚ್ಚು ಜ್ಯೂಸ್ ಕುಡಿಸುವ ಬದಲು ನೀರನ್ನೇ ಸೇವಿಸುವಂತೆ ಮಾಡಲು ಪೋಷಕರಿಗೆ ಸಲಹೆ ನೀಡಿದೆ.

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಹಣ್ಣಿನ ಜ್ಯೂಸ್ ಗಳು ಹೆಚ್ಚು ಇಷ್ಟವಾಗತೊಡಗುತ್ತವೆ. ಆದರೆ ಇದರ ನಿರಂತರ ಸೇವನೆ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ತಿಳಿಸಿದೆ.

English summary

Fruit juice | Drinking More Fruit Juice Bad for Health | ಹಣ್ಣಿನ ಜ್ಯೂಸ್ | ಜ್ಯೂಸ್ ಅತಿಯಾದ ಸೇವನೆ ಆರೋಗ್ಯಕ್ಕೆ ಮಾರಕ

Drinking too much of fruit juice is not good for health, where the juice contains heavy sugar may affect the health by increasing obesity and diabetes.
Story first published: Tuesday, September 27, 2011, 10:35 [IST]
X
Desktop Bottom Promotion