For Quick Alerts
ALLOW NOTIFICATIONS  
For Daily Alerts

ಕೊರೊನಾ ಶೀಘ್ರ ಚೇತರಿಕೆಗೆ ಕೋವಿಡ್ 19 ಗೆದ್ದ ಮಹಿಳೆಯಿಂದ ಟಿಪ್ಸ್

|

ದಿನದಿಂದ ಕೊರೊನಾ ವೈರಸ್‌ ಹೆಚ್ಚಾಗುತ್ತಲೇ ಇದೆ. ಇದರಿಂದ ಮುಕ್ತಿ ಪಡೆಯಲು ಇಡೀ ವಿಶ್ವವೇ ಹರಸಾಹಸ ಪಡುತ್ತಿದೆ. ಕೊರೊನಾ ನಾಶಕ್ಕೆ ಯಾವುದೇ ಲಸಿಕೆ ಇನ್ನೂ ಪತ್ತೆಯಾಗಿಲ್ಲ, ಕೆಲವೊಂದು ಔಷಧಿಗಳು ಪರಿಣಾಮಕಾರಿ ಎಂದು ಹೇಳುತ್ತಿದ್ದರೂ ಕೊರೊನಾ ಅಟ್ಟಹಾಸಕ್ಕೆ ಫುಲ್‌ಸ್ಟಾಪ್‌ ಇಡಲು ಸಾಧ್ಯವಾಗುತ್ತಿಲ್ಲ.

ಇನ್ನು ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಮತ್ತಷ್ಟು ಆತಂಕವನ್ನು ಉಂಟು ಮಾಡುತ್ತಿದೆ. ಈ ಎಲ್ಲದರ ನಡುವೆ ಕೊರೊನಾ ಬಗ್ಗೆ ಇನ್ನೂ ಜನರಲ್ಲಿ ಕೆಲವೊಂದು ತಪ್ಪು ಕಲ್ಪನೆಗಳಿವೆ, ನಿರ್ಲಕ್ಷ್ಯ ಇದೆ ಈ ಕಾರಣಕ್ಕೇ ಕೊರೊನಾವೈರಸ್‌ ಹೆಚ್ಚಾಗುತ್ತಿದೆ.

ಮಾಸ್ಕ್‌ ಧರಿಸಬೇಕೆಂದು ಹೇಳಿದರೆ ದ್ವಿಚಕ್ರ ಓಡಿಸುವಾಗ ತಮ್ಮ ತಲೆ ಸುರಕ್ಷತೆ ಬದಲಿಗೆ ಪೊಲೀಸ್ ಭಯಕ್ಕೆ ಹೆಲ್ಮೆಟ್ ಧರಿಸಿ ಓಡಾಡುವ ರೀತಿಯಲ್ಲಿಯೇ ಮಾಸ್ಕ್‌ ಧರಿಸಿ ಓಡಾಡುವವರಿದ್ದಾರೆ. ಒಂದೇ ಮಾಸ್ಕ್ ಅನ್ನು ಸ್ವಚ್ಛ ಮಾಡದೆ ಬಳಸುವವರಿಗೇನು ಕೊರತೆಯಿಲ್ಲ.

ಏಕೆ ಮಾಸ್ಕ್ ಧರಿಸಲು ಹೇಳುತ್ತಿದ್ದಾರೆ ಎಂದು ಆಲೋಚಿಸುವುದು ಕೂಡ ಇಲ್ಲ. ಇನ್ನು ತರಕಾರಿ ತೊಳೆದು ಒಳಗೆ ತಂದು ಇಡಬೇಕು, ಹೊರಗಿನಿಂದ ತರುವ ಯಾವುದೇ ವಸ್ತುವಾಗಲಿ ಸ್ವಚ್ಛ ಮಾಡಿದ ಬಳಿಕ ಒಳಗಿಡಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತೇ ಇದ್ದರು, ಎಲ್ಲರೂ ಅದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣ್ತಾ ಇಲ್ಲ, ಕಾಣುತ್ತಿದ್ದರೆ ಈ ರೀತಿ ಆಗ್ತಾ ಇರಲಿಲ್ಲ.

ನಾವಿಂದು ಈ ಲೇಖನದಲ್ಲಿ ಕೋವಿಡ್‌-19ನಿಂದ ಚೇತರಿಸಕೊಂಡ ಕೃತಿಕಾ ಸಿಂಗ್ ತಮ್ಮ ಅನುಭವಗಳನ್ನು ಶೇರ್‌ ಮಾಡಿರುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಅವರು ಫೇಸ್‌ಬುಕ್‌ನಲ್ಲಿ ಒಂದು ವೀಡಿಯೋ ಶೇರ್‌ ಮಾಡಿದ್ದು ಅದರಲ್ಲಿ ಕೊರೊನಾ ವೈರಸ್ ಬಗ್ಗೆ ಎಷ್ಟು ಎಚ್ಚರಿಕೆವಹಿಸಬೇಕು ಹಾಗೂ ಬಂದವರು ಬೇಗ ಚೇತರಿಸಿಕೊಳ್ಳಲು ಏನು ಮಾಡಬೇಕು ಎಂಬ ಮಾಹಿತಿ ನೀಡಿದ್ದಾರೆ:

ಮನೆಗೆ ತಂದ ತರಕಾರಿಯಿಂದ ಕೊರೊನಾ ಸೋಂಕು ತಗುಲಿರಬಹುದು

ಮನೆಗೆ ತಂದ ತರಕಾರಿಯಿಂದ ಕೊರೊನಾ ಸೋಂಕು ತಗುಲಿರಬಹುದು

ಕೊರೊನಾ ವೈರಸ್‌ ತಡೆಗಟ್ಟಲು ಎಲ್ಲಾ ರೀತಿಯ ಮುನ್ನೆಚ್ಚರಿಕೆವಹಿಸಿದ್ದೆ ಆದರೆ ಅದು ಹೇಗೆ ಬಂತು ಎಂಬುವುದು ಮಾತ್ರ ಇದುವರೆಗೆ ತಿಳಿದಿಲ್ಲ, ಲಾಕ್‌ಡೌನ್ ಸಮಯದಲ್ಲಿ ಸುಮ್ಮನೆ ಹೊರಗಡೆ ಸುತ್ತಾಡಿಲ್ಲ, ಮನೆಯಿಂದ ಹೊರಗಡೆ ಕಾಲಿಡುವಾಗ ಮಾಸ್ಕ್ ಧರಿಸುತ್ತಿದ್ದೆ, ಸ್ಯಾನಿಟೈಸರ್ ಬಳಸುತ್ತಿದ್ದೆ, ಆದರೂ ಕೊರೊನಾ ಸೋಂಕು ತಗುಲಿತು, ಬಹುಶಃ ಮನೆಗೆ ತಂದ ತರಕಾರಿಯಿಂದಾಗಿ ಸೋಂಕು ತಗುಲಿರಬಹುದು ಎಂಬುವುದು ಕೃತಿಕಾ ಅವರ ಸಂಶಯವಾಗಿದೆ.

ಕೃತಿಕಾ ಸಿಂಗ್‌ ಅವರಲ್ಲಿ ಕಂಡು ಬಂದ ಕೋವಿಡ್‌-19 ಲಕ್ಷಣಗಳು

ಕೃತಿಕಾ ಸಿಂಗ್‌ ಅವರಲ್ಲಿ ಕಂಡು ಬಂದ ಕೋವಿಡ್‌-19 ಲಕ್ಷಣಗಳು

  • ಮೊದಲಿಗೆ ತುಂಬಾ ಗಂಟಲು ನೋವು ಕಂಡು ಬಂತು, ಆಹಾರ ನುಂಗಲು ಕೂಡ ಕಷ್ಟವಾಗ್ತಾ ಇತ್ತು. ಇದರ ಜೊತೆಗೆ ಮೂಗು ಕಟ್ಟಿತು.
  • ಜ್ವರ ಕೂಡ ಕಾಡಿತು, ಆದರೆ ತುಂಬಾ ಜ್ವರ ಅಂತ ಇರಲಿಲ್ಲ, 100 ಡಿಗ್ರಿF ಒಳಗೆ ಜ್ವರ ಕಂಡು ಬರ್ತಾ ಇತ್ತು. ಜ್ವರ ಹೆಚ್ಚಾಗುತ್ತಲೂ ಇರಲಿಲ್ಲ, ಕಡಿಮೆಯಾಗುತ್ತಲೂ ಇರಲಿಲ್ಲ.
  • ಜೊತೆಗೆ ಮೈ ಕೈ ನೋವು ಕಾಣಿಸಿಕೊಂಡಿತು, ತಲೆಸುತ್ತು, ಸುಸ್ತು ಕಂಡು ಬಂತು. ಈ ಮೊದಲು ನನಗೆ ಜ್ವರ ಬಂದಾಗ ಇಷ್ಟೊಂದು ಮೈ ಕೈ ನೋವು ಇರಲಿಲ್ಲ, ಆದರೆ ಈ ಬಾರಿ ಸ್ನಾನ ಮಾಡುವಾಗ ಒಂದು ಮಗ್‌ ನೀರು ಎತ್ತಲೂ ಕಷ್ಟವಾಗ್ತಾ ಇತ್ತು ಎಂದು ಕೃತಿಕಾ ಹೇಳಿದ್ದಾರೆ.
  • ನಂತರ ಆ್ಯಂಟಿಬಯೋಟಿಕ್ ಮಾತ್ರೆ ತೆಗೆದುಕೊಳ್ಳುತ್ತಾರೆ, ಆಗ ಗಂಟಲು ನೋವು ಕಡಿಮೆಯಾಗುತ್ತದೆ. ಆಗ ಕೃತಿಕಾರವರು ವೈರಲ್‌ ಸೋಂಕಿನಿಂದಾಗಿ ಈ ರೀತಿ ಉಂಟಾಗಿರಬಹುದೆಂದು ಭಾವಿಸುತ್ತದೆ. ಆದರೆ 5-6 ದಿನಗಳಾಗುವಷ್ಟರಲ್ಲಿ ಅವರಲ್ಲಿ ವಾಸನೆ ಗ್ರಹಿಸುವ ಸಾಮಾರ್ಥ್ಯ ಕಡಿಮೆಯಾಗುತ್ತದೆ. ಅವರಿಗೆ ತಿನ್ನುವ ಆಹಾರದಲ್ಲಿ ರುಚಿ ತಿಳಿಯುತ್ತಿರಲಿಲ್ಲ, ಯಾವುದೇ ವಾಸನೆ ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ.

ಆಗ ಅವರು ಸಂಶಯ ಬಂದು ಕೋವಿಡ್-19 ಪರೀಕ್ಷೆ ಮಾಡಿಸುತ್ತಾರೆ, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು.

ಕೊರೊನಾ ದೃಢಪಟ್ಟಾಗ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಕೃತಿಕಾ

ಕೊರೊನಾ ದೃಢಪಟ್ಟಾಗ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಕೃತಿಕಾ

ಕೊರೊನಾ ಎಂದು ಕೇಳುವಾಗಲೇ ಭಯವಾಗುತ್ತದೆ, ಇನ್ನು ಅದು ಬಂದಿದೆ ಎಂದಾಗ ಮಾನಸಿಕ ಒತ್ತಡ, ಆತಂಕ ಉಂಟಾಗುವುದು ಸಹಜ. ಅದೇ ರೀತಿ ಕೃತಿಕಾ ಅವರಿಗೂ ತುಂಬಾ ಶಾಕ್ ಉಂಟಾಗಿತ್ತು. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತು. ನಂತರ ಚಿಕಿತ್ಸೆಗೆ ದಾಖಲಾದರು.

 ಬೇಗ ಚೇತರಿಸಿಕೊಳ್ಳಲು ಕೃತಿಕಾ ಸಿಂಗ್ ನೀಡಿರುವ ಟಿಪ್ಸ್

ಬೇಗ ಚೇತರಿಸಿಕೊಳ್ಳಲು ಕೃತಿಕಾ ಸಿಂಗ್ ನೀಡಿರುವ ಟಿಪ್ಸ್

1. ಕೊರೊನಾದಿಂದ ಚೇತರಿಸಿಕೊಳ್ಳಲು ವಿಟಮಿನ್ ಸಿ ಅಗ್ಯತ, ವಿಟಮಿನ್‌ ಸಿ ಹಣ್ಣುಗಳಲ್ಲಿ ಇರುತ್ತವೆ, ನಿಂಬೆ ಹಣ್ಣಿನಲ್ಲಿರುತ್ತದೆ, ಆದರೆ ಅವಷ್ಟೇ ಸಾಕಾಗುವುದಿಲ್ಲ, ಅದರ ಜೊತೆಗೆ ವಿಟಮಿನ್ ಸಿ ಮಾತ್ರೆ ತೆಗೆದುಕೊಳ್ಳಬೇಕು.

2. ಇನ್ನು ದೇಹದಲ್ಲಿ ಶಕ್ತಿ ತುಂಬಾ ಕಡಿಮೆ ಇರುತ್ತದೆ, ಎದ್ದು ಓಡಾಡಲು ಕಷ್ಟವಾಗುವುದು, ದೇಹದಲ್ಲಿ ಚೈತನ್ಯ ತುಂಬಲು ಮಲ್ಟಿ ವಿಟಮಿನ್ ಮಾತ್ರೆ ತೆಗೆದುಕೊಳ್ಳಬೇಕು.

3. ಬಿಸಿ ನೀರನ್ನು ಕುಡಿಯುತ್ತಾ ಇರಬೇಕು. ಬಿಸಿ ನೀರನ್ನು ಬಾಟಲಿನಲ್ಲಿ ತುಂಬಿ ಆಗಾಗ ಕುಡಿಯುವುದರಿಂದ ಗಂಟಲು ಸರಿಯಾಗುತ್ತದೆ.

4. ಹಬೆ ತೆಗೆದುಕೊಳ್ಳಬೇಕು

5. ಅರಿಶಿಣ ಹಾಕಿದ ನೀರು ಕುಡಿಯಿರಿ

6. ಕಷಾಯ ಮಾಡಿ ಕುಡಿಯಿರಿ

7. ಸರಿಯಾಗಿ ತೊಳೆದ ತರಕಾರಿ, ಹಣ್ಣುಗಳನ್ನು ತಿನ್ನಿ.

8. ಸಕ್ಕರೆ ಹಾಗೂ ಮೈದಾ ಆಹಾರಗಳಿಂದ ದೂರವಿರಿ..

ಕಾಯಿಲೆ ಬಂದು ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರುವುದಕ್ಕೆ ಮೊದಲೇ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು. ಕೃತಿಕಾ ಅವರು ನೀಡಿರುವ ಟಿಪ್ಸ್ ಪಾಲಿಸಿದರೆ ಈ ಸಾಂಕ್ರಾಮಿಕ ಪಿಡುಗಿನಿಂದ ರಕ್ಷಿಸಿಕೊಳ್ಳಬಹುದು. ನಿಮ್ಮ ಹಾಗೂ ಮನೆಯವರ ಆರೋಗ್ಯದ ಕಡೆಗೆ ಸಾಕಷ್ಟು ಮುನ್ನೆಚ್ಚರಿಕೆವಹಿಸಿ. Stay Safe...

English summary

Tips From Coronavirus Recovered Woman To Avoid Covid-19

Covid recovered kritika sing has shared her experience and give tips to fast recover from corona have a look...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X