Just In
Don't Miss
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಸಮಸ್ಯೆ ಗಂಭೀರ ಕಾಯಿಲೆಯ ಲಕ್ಷಣವಂತೆ
ಮನುಷ್ಯನ ಇಡೀ ದೆಹವವನ್ನು ಆಕ್ರಮಿಸಿರುವ ಚರ್ಮವು ನಮ್ಮ ಆರೋಗ್ಯದ ಕನ್ನಡಿ. ಚರ್ಮ ನಮ್ಮ ದೇಹಕ್ಕೆ ಎಎಷ್ಟು ಪ್ರಮುಖವಾದದ್ದು ಹಾಗೂ ಇದು ಎಷ್ಟು ರಕ್ಷಣಾತ್ಮಕವಾಗಿ ನಮ್ಮ ದೇಹವನ್ನು ಕಾಪಾಡುತ್ತದೆ ಎಂಬುದರ ಅರಿವು ಸಹ ಸಾಮಾನ್ಯ ಜನರಿಗೆ ಇರುವುದಿಲ್ಲ. ನಮ್ಮ ಇಡೀ ದೇಹದ ಆರೋಗ್ಯ ವ್ಯವಸ್ಥೆಯನ್ನು ಪ್ರತಿಬಿಂಬಿಸುವುದೇ ನಮ್ಮ ಚರ್ಮ. ದೇಹದಲ್ಲಿ ಏನು ನಡೆಯುತ್ತಿದೆ ಅದು ಕೆಲವೊಮ್ಮೆ ಚರ್ಮದ ಮೇಲೆ ಪರಿಣಾಮ ಬೀರುವುದು.
ತಜ್ಞರ ಪ್ರಕಾರ ನಮ್ಮ ಅನಾರೋಗ್ಯದ ಮುನ್ಸೂಚನೆ ನೀಡುತ್ತದೆ ನಮ್ ಚರ್ಮ. ಹೌದು ಕೆಲವೊಂದು ಗಂಭೀರ ಕಾಯಿಲೆಗಳನ ಬಗ್ಗೆ ಚರ್ಮವು ತೋರಿಸುತ್ತದೆ, ಯಾವುದು ಆ ಲಕ್ಷಣಗಳು ಮುಂದೆ ನೋಡೋಣ:

ಮೊಡವೆಗಳು
ಮೊಡವೆಗಳು ಯಾವುದಾದರೂ ಒಂದು ಗಂಭೀರ ಸಮಸ್ಯೆಯ ಲಕ್ಷಣವಾಗಿರಬಹುದು. ಇಂತಹ ಬದಲಾವಣೆಗಳು ಕಂಡುಬಂದರೆ ಆಗ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(ಪಿಸಿಒಎಸ್)ನ ಲಕ್ಷಣವಾಗಿರಬಹುದು. ಇದು ಹಾರ್ಮೋನ್ ಅಸಮತೋಲನದಿಂದಾಗಿ ಕಾಣಿಸಿಕೊಳ್ಳೂವಂತಹ ಕಾಯಿಲೆ. ಮಹಿಳೆಯರ ದೇಹದಲ್ಲಿ ಆಂಡ್ರೋಜೆನ್ ಎನ್ನುವ ಪುರುಷ ಹಾರ್ಮೋನ್ ಕಾಣಿಸಿಕೊಂಡರೆ ಆಗ ಮೊಡವೆಗಳೂ ಅತಿಯಾಗಿ ಮೂಡುವುದು. ಅಸಾಮಾನ್ಯ ಋತುಚಕ್ರದ ಜತೆಗೆ ಮೊಡವೆಗಳು ಅತಿಯಾಗಿ ಮೂಡುತ್ತಲಿದ್ದರೆ ಪಿಸಿಒಎಸ್ ಲಕ್ಷಣ.

ವಿಚಿತ್ರ ದದ್ದು
ಕೆಲವೊಂದು ಸಲ ಯಾವುದೇ ಸಾಬೂನು ಅಥವಾ ಬೇರೆ ರಾಸಾಯನಿಕಗಳು ದೇಹದಲ್ಲಿನ ದದ್ದುಗಳಿಗೆ ಕಾರಣವಾಗಿರಬಹುದು. ಆದರೆ ಇಂತಹ ಸಮಸ್ಯೆಯು ಕಾಣಿಸಿದರೆ ಆಗ ನೀವು ತಕ್ಷಣವೇ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ. ಕೀಟಗಳು ಕಡಿದರೆ ಆಗ ದಪ್ಪದ ಗೂಳಿ ಕಣ್ಣಿನಂತಹ ದದ್ದುಗಳು ಕಾಣಿಸಬಹುದು. ಇದು ಗುಲಾಬಿ ಬಣ್ಣದ ಸಣ್ಣ ಮಟ್ಟದಿಂದ ಹಿಡಿದು ದೊಡ್ಡ ಗಾತ್ರದ ತನಕ ಇರಬಹುದು. ಇದು ಮೊಣಕೈ, ಕೈಗಳು ಮತ್ತು ಹಿಂಗಾಲುಗಳಲ್ಲಿ ಕಾಣಿಸಬಹುದು. ನೀವು ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯುತ್ತಲಿದ್ದರೆ ಆಗ ನೀವು ಚರ್ಮದಲ್ಲಿ ಇಂತಹ ಸಮಸ್ಯೆಯು ಕಾಣಿಸಿಕೊಳ್ಳಬಹುದು.

ಚರ್ಮದ ಮೇಲೆ ಚರ್ಮ ಬೆಳೆಯುವುದು
ಈ ಚರ್ಮದ ಬೆಳವಣಿಗೆಯು ಕೆಲವೊಂದು ಸಂದರ್ಭದಲ್ಲಿ ಸಾಮಾನ್ಯವಾಗಿ ಇರುವುದು. ಆದರೆ ಅತಿಯಾಗಿ ಬೆಳವಣಿಗೆ ಆಗುತ್ತಲಿದ್ದರೆ ಇದು ಟೈಪ್ 2 ಮಧುಮೇಹದ ಲಕ್ಷಣ. ಇನ್ಸುಲಿನ್ ಕಾರಣದಿಂದಾಗಿ ಇದು ಬೆಳವಣಿಗೆ ಆಗಬಹುದು. ಟೈಪ್ 2 ಮಧುಮೇಹಿಗಳಿಗೆ ಅತಿಯಾದ ಬಾಯಾರಿಕೆ, ಗಾಯವು ನಿಧಾನವಾಗಿ ಒಣಗುವುದು ಮತ್ತು ಅತಿಯಾದ ಹಸಿವು ಕಾಣಿಸಬಹುದು.

ಚರ್ಮದ ಅಡಿ ಭಾಗದಲ್ಲಿ ಮೆತ್ತಗಿನ ಕೆಂಪು ಉಬ್ಬುಗಳು
ಹೊಟ್ಟೆ ಮತ್ತು ಚರ್ಮಕ್ಕೆ ನೇರಾನೇರ ಸಂಪರ್ಕವು ಇಲ್ಲದೆ ಇರಬಹುದು. ಆದರೆ ಹೊಟ್ಟೆಯ ಉರಿಯೂತದ ಸಮಸ್ಯೆ(ಐಬಿಡಿ) ಚರ್ಮದ ಮೇಲೆ ಪ್ರಭಾವ ಬೀರಬಹುದು. ಕಾಲುಗಳಲ್ಲಿ ಕೆಲವೊಂದು ಸಲ ಕೆಂಪಾದ ಗಂಟುಗಳು ಕಾಣಿಸಬಹುದು. ಇದು ಚರ್ಮದ ಆಳದ ತನಕ ಹೋಗಬಹುದು. ಈ ಸಮಸ್ಯೆಯನ್ನು ಎರಿಥೆಮಾ ನೋಡೋಸಮ್ ಎಂದು ಕರೆಯಲಾಗುತ್ತದೆ ಮತ್ತು ಇದು ದೇಹದಲ್ಲಿ ರೋಗಲಕ್ಷಣಗಳು ಹೆಚ್ಚಾದಾಗ ಕಾಣಿಸಬಹುದು. ನಿರಂತರ ಅತಿಸಾರ ಮತ್ತು ಮಲದಲ್ಲಿ ರಕ್ತ ಬರುವ ವೇಳೆ ಇದು ಕಾಣಿಸಬಹುದು. ಮಲದಲ್ಲಿ ರಕ್ತವು ನಿಮಗೆ ಚಿಂತೆ ಉಂಟು ಮಾಡಬಹುದು. ಆದರೆ ಇದು ಒಂದು ರೀತಿಯ ಸಾಮಾನ್ಯ ಅರೋಗ್ಯ ಸಮಸ್ಯೆಯಾಗಿದ್ದು, ಯಾವುದೇ ಹಾನಿ ಉಂಟು ಮಾಡದು.

ತುಂಬಾ ತುರಿಕೆ
ಒಣ ಚರ್ಮವಿದ್ದರೆ ಆಗ ಚಳಿಗಾಲದಲ್ಲಿ ದೇಹದಲ್ಲಿ ತುರಿಕೆ ಕಾಣಿಸಿಕೊಳ್ಳುವುದು. ಆದರೆ ಮೊಶ್ಚಿರೈಸ್ ಒದಗಿಸಿದ ಬಳಿಕವೂ ನಿಮಗೆ ಹೀಗೆ ತುರಿಕೆ ಕಾಣಿಸಿಕೊಳ್ಳುತ್ತಲಿದ್ದರೆ ನಿಮಗೆ ಯಾವುದಾದರೂ ಗಂಭೀರ ಚರ್ಮದ ಸಮಸ್ಯೆ ಇದೆ ಎಂದು ಹೇಳಬಹುದು. ರಕ್ತದ ಕ್ಯಾನ್ಸರ್ ಅಥವಾ ಲಿಂಫೋಮಾದಿಂದಾಗಿ ಹೀಗೆ ಆಗಬಹುದು. ಕಿಡ್ನಿ ಮತ್ತು ಯಕೃತ್ ನ ಕಾಯಿಲೆಯಿಂದಲೂ ಇದು ಬರಬಹುದು.

ಮುಖದ ಮೇಲೆ ಹೊಸ ಮಚ್ಚೆಗಳು
ಮೆಲನೊಮಾದಿಂದಾಗಿ ಮುಖದ ಮೇಲೆ ಮಚ್ಚೆಗಳು ಮೂಡುವಂತೆ ಮಾಡಬಹುದು. ಆದರೆ ಇದು ಚರ್ಮದ ಕ್ಯಾನ್ಸರ್ ನ ಲಕ್ಷಣವಾಗಿದ್ದರೆ ಆಗ ಅದು ದೀರ್ಘ ಕಾಲ ತನಕ ಸಣ್ಣ ಮಚ್ಚೆಯಾಗಿ ಹಾಗೆ ಉಳಿಯುವುದಿಲ್ಲ. ಅದು ಬೆಳೆಯುತ್ತಲೇ ಇರುವುದು. ಮಚ್ಚೆಯು ತನ್ನ ಗಾತ್ರ, ಬಣ್ಣ ಮತ್ತು ಆಕಾರದಲ್ಲಿ ಬದಲಾವಣೆಗಳು ಆದರೆ ಆಗ ಖಂಡಿತವಾಗಿಯೂ ಇದು ಚರ್ಮದ ಕ್ಯಾನ್ಸರ್ ನ ಲಕ್ಷಣವೆಂದು ಹೇಳಬಹುದಾಗಿದೆ.

ಅತಿಯಾಗಿ ಬೆವರುವುದು
ನೀವು ಆರಾಮವಾಗಿದ್ದರೂ ಮತ್ತು ಬೇಸಿಗೆ ಸಮಯವಲ್ಲದೆ ಇದ್ದರೂ ಅತಿಯಾಗಿ ಬೆವರುತ್ತಲಿದ್ದರೆ ಇದು ಥೈರಾಯ್ಡ್ ನ ಅತಿಯಾದ ಪ್ರತಿಕ್ರಿಯೆಯಿಂದ ಕಾಣಿಸಿಕೊಂಡ ಲಕ್ಷಣ. ಹೈಪರ್ ಥೈರಾಯ್ಡಿಸಮ್ ಇರುವ ಜನರಲ್ಲಿ ಚಯಾಪಚಯ ಕ್ರಿಯೆಯು ಹೆಚ್ಚಾಗುವುದು. ಇದರಿಂದ ಬೆವರು ಉಂಟಾಗಬಹುದು.

ಕಾಲಿನ ಕೆಳಭಾಗದಲ್ಲಿ ಊತ ಮತ್ತು ಕೆಂಪಾಗುವುದು
ಯಾರಾದರೂ ಹೃದಯ ಸ್ತಂಭನ ಸಮಸ್ಯೆಗೆ ಒಳಗಾಗುತ್ತಿದ್ದರೆ ಆಗ ಅವರ ಹೃದಯವು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ರಕ್ತವನ್ನು ಸರಬರಾಜು ಮಾಡಲು ಸಂಕಷ್ಟಕ್ಕೆ ಸಿಲುಕುವುದು. ಇದರ ಪರಿಣಾಮವಾಗಿ ಕಾಲುಗಳಲ್ಲಿ ರಕ್ತವು ಜಮೆ ಆಗುವುದು. ಕಾಲಿನ ಸಾಕ್ಸ್ ತೆಗೆದ ಬಳಿಕ ಆಳವಾದ ಗೆರೆಗಳು ಕಾಣಿಸಿಕೊಳ್ಳುತ್ತಿದ್ದರೆ ಇದು ಮತ್ತೊಂದು ಲಕ್ಷಣವಾಗಿದೆ. ವಯಸ್ಸಾದವರಲ್ಲಿ ಇಂತಹ ಸಮಸ್ಯೆಯು ಹೆಚ್ಚಾಗಿ ಕಂಡುಬರುವುದು.

ದೊಡ್ಡ ಸಮಸ್ಯೆಯೆಂದು ಭಾವಿಸಬೇಡಿ
ಚರ್ಮದಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ಗಂಭೀರ ಕಾಯಿಲೆಗಳ ಲಕ್ಷಣಗಳಾಗಿರಬಹುದು. ಆದರಲ್ಲೂ ಒಣ ಚರ್ಮ ಮತ್ತು ತುರಿಕೆಯ ಬಗ್ಗೆ ಗಂಭೀರವಾಗಿ ಗಮನಿಸಬೇಕು. ಆದರೆ ನೀವು ಇದು ಅತೀ ದೊಡ್ಡ ಸಮಸ್ಯೆ ಎಂದು ಭಾವಿಸುವುದು ಬೇಡ. ತುರಿಕೆ ಕಾಣಿಸುತ್ತಲಿದ್ದರೆ ಆಗ ನೀವು ಮೊಶ್ಚಿರೈಸರ್ ಹಚ್ಚಿಕೊಳ್ಳಿ. ದದ್ದುಗಳು ಇದ್ದರೆ ಆಗ ನೀವು ಯಾವುದೇ ಕ್ರೀಮ್ ಬಳಸಿಕೊಳ್ಳಿ. ಸಮಸ್ಯೆಯು ಪರಿಹಾರವಾಗದೆ ಇದ್ದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.