For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ವಿಟಮಿನ್‌ ಡಿ3 ಮತ್ತು ಕೆ2 ಸೇವಿಸಿದರೆ ಮೂಳೆಗಳಿಗೆ ತುಂಬಾ ಒಳ್ಳೆಯದು, ಹೇಗೆ? ಎಷ್ಟು ಡೋಸ್‌ ತೆಗೆದುಕೊಳ್ಳಬೇಕು?

|

ವಿಟಮಿನ್ ಡಿ 3 ಮತ್ತು ಕೆ2 ಕಾಂಬಿನೇಷನ್‌ ಕಡೆಗೆ ವಿಜ್ಞಾನ ತುಂಬಾನೇ ಒತ್ತು ನೀಡುತ್ತಿದೆ, ಏಕೆಂದರೆ ಮೂಳೆ ಹಾಗೂ ಹೃದಯ ಆರೋಗ್ಯ ಕಾಪಾಡುವಲ್ಲಿ ಈ ಎರಡು ವಿಟಮಿನ್‌ಗಳು ಅದ್ಭುತ.

ಇನ್ನು ಚಳಿಗಾಲದಲ್ಲಂತೂ ಈ ಎರಡು ವಿಟಮಿನ್‌ಗಳು ತುಂಬಾನೇ ಅವಶ್ಯಕ. ಏಕೆಂದರೆ ತುಂಬಾ ಚಳಿ ಇರುವ ಕಡೆ ಮೈಗೆ ಬಿಸಿಲು ಬೀಳುವುದೇ ಕಡಿಮೆ. ಬಿಸಿಲು ಬರುವ ಹೊತ್ತಿಗೆ ಆಫೀಸ್‌ ಸೇರಿರುತ್ತೇವೆ, ಹೀಗಾಗಿ ಸೂರ್ಯನ ಬೆಳಕು ಮೈ ಮೇಲೆ ಬೀಳುವುದಿಲ್ಲ. ಇದರಿಂದ ಮೂಳೆಗಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

vitamins D3

ಆದ್ದರಿಂದಲೇ ಚಳಿಗಾಲದಲ್ಲಿ ಸಂಧಿನೋವು ಇದ್ದವರಿಗೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ದೇಹವು ಕ್ಯಾಲ್ಸಿಯಂ ಡಿ ಹೀರಿಕೊಳ್ಳಲು ವಿಟಮಿನ್‌ ಡಿ ಅವಶ್ಯಕ. ಅದರಲ್ಲೂ ವಿಟಮಿನ್‌ ಡಿ ಹಾಗೂ ಕೆ 3 ಸೇರಿದಾಗ ದೇಹದ ಮೇಲೆ ತುಂಬಾ ಉತ್ತಮ ಪರಿಣಾಮ ಬೀರುತ್ತದೆ. ಆದ್ದರಿಂದಲೇ ನ್ಯೂಟ್ರಿಷಿಯನಿಸ್ಟ್‌ ಈ ಎರಡು ವಿಟಮಿನ್ಸ್ ತೆಗೆದುಕೊಳ್ಳುವಂತೆ ಸೂಚಿಸುತ್ತಿದ್ದಾರೆ.

ಡಿ3 ಮತ್ತು ಕೆ2 ಕಾಂಬಿನೇಷನ್‌
ಈ ಎರಡು ವಿಟಮಿನ್‌ಗಳು ಅದರದ್ದೇ ಆದ ಪ್ರಯೋಜನಗಳನ್ನು ಹೊಂದಿದೆ. ಅದು ಎರಡು ಸೇರಿದಾಗ ಮತ್ತಷ್ಟು ಒಳ್ಳೆಯದು. ಇದರ ಬಗ್ಗೆ ಸೆಲೆಬ್ರಿಟಿ ನ್ಯೂಟ್ರಿಷಿಯನಿಸ್ಟ್‌ ಪೂಜಾ ಮಖಿಜಾ ತಮ್ಮ ಇನ್‌ಸ್ಟಾದಲ್ಲಿ ಮಾಹಿತಿ ನೀಡಿದ್ದಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:


ಡಿ3 ಮತ್ತು ಕೆ2 ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಕಾರಿ

ಈ ಎರಡೂ ವಿಟಮಿನ್‌ಗಳು ದೇಹದ ಚಯಪಚಯ ಕ್ರಿಯೆಗೆ ತುಂಬಾನೇ ಸಹಾಯ ಮಾಡುತ್ತದೆ. ಈ ಎರಡು ವಿಟಮಿನ್‌ಗಳು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಆಗದಂತೆ ನೋಡಿಕೊಂಡು ದೇಹದ ಮೂಳೆಯ ಆರೋಗ್ಯ ವೃದ್ಧಿಸುತ್ತದೆ.

ತುಂಬಾ ಕ್ಯಾಲ್ಸಿಯಂ ಸಪ್ಲಿಮೆಂಟ್ಸ್ ಒಳ್ಳೆಯದಲ್ಲ
ದೇಹಕ್ಕೆ ಕ್ಯಾಲ್ಸಿಯಂ ಅವಶ್ಯಕ ಹಾಗಂತ ದಿನಾ ಕ್ಯಾಲ್ಸಿಯಂ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುವುದು ಕೂಡ ಒಳ್ಳೆಯದಲ್ಲ. ಅಲ್ಲದೆ ಕ್ಯಾಲ್ಸಿಯಂ ಅನ್ನು ನಮ್ಮ ದೇಹವು ಸರಿಯಾದ ರೀತಿಯಲ್ಲಿ ಬಳಸಬೇಕು. ಇಲ್ಲದಿದ್ದರೆ ಅದು ದೇಹದಲ್ಲಿ ಒಂದು ಕಡೆ ಸಂಗ್ರಹವಾದರೆ ಅದರಿಂದ ಇನ್ನಿತರ ಸಮಸ್ಯೆ ಬರಬಹುದು. ಹೃದಯ ಆರೋಗ್ಯಕ್ಕೆ ತೊಂದರೆ ಉಂಟಾಗುವುದು.

ವಿಟಮಿನ್‌ಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಟಮಿನ್ ಡಿ ಹಾಗೂ ವಿಟಮಿನ್ ಕೆ2 ಪರಿಣಾಮಕಾರಿಯಾಗಿದೆ.

ಸಂಧಿವಾತದ ಸಮಸ್ಯೆ ಕಡಿಮೆಯಾಗುವುದು

ಈ ಎರಡು ವಿಟಮಿನ್‌ಗಳನ್ನು ಜೊತೆಯಾಗಿ ತೆಗೆದುಕೊಳ್ಳುವುದರಿಂದ ದೇಹದ ಮೂಳೆ ಆರೋಗ್ಯವಾಗಿರುವುದರಿಂದ ಸಂಧಿವಾತದ ಸಮಸ್ಯೆ ಕಡಿಮೆಯಾಗುವುದು. ಅಲ್ಲದೆ ಇತರ ಸಮಸ್ಯೆಯಾದ ಕಿಡ್ನಿ ಹಾಗೂ ಹೃದಯದ ತೊಂದರೆಗಳನ್ನು ಕೂಡ ತಡೆಟಗಟ್ಟುತ್ತದೆ.

ವಿಟಮಿನ್‌ ಕೆ ಕಡಿಮೆಯಾದರೆ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗುವುದು
ಹೃದಯದ ಆರೋಗ್ಯಕ್ಕೆ ವಿಟಮಿನ್‌ ಕೆ ತುಂಬಾನೇ ಅವಶ್ಯಕ. ಆದ್ದರಿಂದ ಹೃದಯದ ಆರೋಗ್ಯ ವೃದ್ಧಿಸಲು ವಿಟಮಿನ್‌ ಕೆ ತುಂಬಾನೇ ಅವಶ್ಯಕ.

* ಮಾಂಸಾಹಾರ
* ಲಿವರ್
* ಹಾಲು
* ಮೊಟ್ಟೆಯ ಬಿಳಿ

ವಿಟಮಿನ್‌ ಡಿ ಹಾಗೂ ಕೆ ಸಪ್ಲಿಮೆಂಟ್ಸ್‌ ಎಷ್ಟು ತೆಗೆದುಕೊಳ್ಳಬಹುದು?
ದಿನದಲ್ಲಿ 90-100mcg ತೆಗೆದುಕೊಳ್ಳಬಹುದು
ಆದರೆ ರಕ್ತ ತೆಳುವಾಗಿರುವವರಿಗೆ 50 mcgಗೆ ಹೆಚ್ಚು ಕೊಡುವಂತಿಲ್ಲ.

English summary

How vitamins D3, K2 Help To boost bone and heart health in Kannada

vitamins D3, K2 : How vitamins D3, K2 important for bone and heart health, read on...
Story first published: Thursday, November 24, 2022, 18:24 [IST]
X
Desktop Bottom Promotion