Just In
Don't Miss
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Movies
'ಕೆಜಿಎಫ್ 2' ನಟನ ಬೆಂಜ್ ಕಾರು ಅಪಘಾತ: ನಟ ಜಸ್ಟ್ ಮಿಸ್!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಪಾಲಿಸಿ ಈ ಸರಳ ಆಯುರ್ವೇದ ಟಿಪ್ಸ್
ಮೇ ತಿಂಗಳಿನಲ್ಲಿಯೇ ಕೆಲವು ಕಡೆ ಪ್ರವಾಹದ ಭೀತಿ ಎದುರಾಗಿದೆ. ಧೋ ಎಂದು ಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಜನರು ಕಂಗಲಾಗಿದ್ದಾರೆ. ಇನ್ನು ನಾಲ್ಕು ತಿಂಗಳು ಮಳೆಗಾಲ.
ಮಳೆಗಾಲ ಎಂದರೆ ಆರೋಗ್ಯ ಸಮಸ್ಯೆ ತುಸು ಹೆಚ್ಚಾಗಿಯೇ ಕಾಡುತ್ತದೆ. ನೆಗಡಿ, ಕೆಮ್ಮು, ಜ್ವರ ಈ ಸಮಸ್ಯೆಗಳು ಹೆಚ್ಚಿನವರನ್ನು ಕಾಡುವುದು. ಅದರಲ್ಲೂ ಮಳೆಗಾಲದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸ್ವಾಭಾವಿಕವಾಗಿ ದುರ್ಬಲವಾಗಿರುತ್ತದೆ. ಇನ್ನು ಜೀರ್ಣಶಕ್ತಿ ಸಾಮರ್ಥ್ಯ ಕೂಡ ಕಡಿಮೆ ಇರುತ್ತದೆ. ಈ ಸಮಯದಲ್ಲಿ ನಮ್ಮ ಜೀವನಶೈಲಿ ಹಾಗೂ ಆರೋಗ್ಯಶೈಲಿಯಲ್ಲಿ ಬದಲಾವಣೆ ತಂದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು.
ಇನ್ನು ಕೊರೊನಾ ಅತಂಕ ಮತ್ತೆ ಕಾಡಿರುವುದರಿಂದ ಸಾಮಾನ್ಯ ನೆಗಡಿ, ಕೆಮ್ಮು ಬಂದರೂ ಕೊರೊನಾ ಇರಬಹುದಾ ಎಂಬ ಆತಂಕ ಕಾಡಬಹುದು ಅಥವಾ ಕೊರೊನಾ ಲಕ್ಷಣಗಳು ಕಂಡು ಬಂದರೂ ಪ್ರಾರಂಭದಲ್ಲಿ ಅದು ಸಾಮಾನ್ಯ ಶೀತ-ಕೆಮ್ಮು ಅಂತ ಭಾವಿಸಿ ಮತ್ತಷ್ಟು ಜನರಿಗೆ ಕೊರೊನಾ ಹರಡುವ ಸಾಧ್ಯತೆ ಇದೆ. ಆದ್ದರಿಂದ ಈ ಮಳೆಗಾಲದಲ್ಲಿ ತುಂಬಾನೇ ಹುಷಾರಾಗಿರಬೇಕು. ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಏನು ಮಾಡಬೇಕು ಎಂಬುವುದು ಆಯುರ್ವೇದದಲ್ಲಿ ಹೇಳಲಾಗಿದೆ.
ಈ ಆಯುರ್ವೇದ ಟಿಪ್ಸ್ ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಲು ಸಹಕಾರಿ:

ವಾತ, ಪಿತ್ತ, ಕಫ ದೋಷದ ಬಗ್ಗೆ ಎಚ್ಚರವಹಿಸಬೇಕು
ಆಯುರ್ವೇದ ಪ್ರಕಾರ ಮಳೆಗಾಲದಲ್ಲಿ ವಾತ, ಪಿತ್ತ, ಕಫದ ಸಮಸ್ಯೆ ಹೆಚ್ಚಾಗಿ ಕಾಡುವುದು, ಈ ದೋಷದಿಂದಾಗಿ ರೋಗ ನಿರೋಧಕ ಸಾಮಾರ್ಥ್ಯ ಕಡಿಮೆಯಾಗುವುದು. ಕಫ, ಪಿತ್ತ ದೋಷದಿಂದಾಗಿ ದೇಹದಲ್ಲಿ ಜೀರ್ಣಕ್ರಿಯೆ ಕೂಡ ಕಡಿಮೆಯಾಗುವುದು, ಇದರಿಂದಾಗಿ ದೇಹದಲ್ಲಿ ಕಶ್ಮಲ ಹೆಚ್ಚುವುದು. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ದೇಹದಲ್ಲಿ ಕಶ್ಮಲ ಹೆಚ್ಚುವುದು. ಅದನ್ನು ಹೊರಹಾಕಬೇಕು ಇಲ್ಲದಿದ್ದರೆ ಕಾಯಿಲೆ ಹೆಚ್ಚುವುದು.

ಪ್ರಕೃತ್ತಿ ಕಡೆ ಗಮನ ನೀಡಿ
ಕಾಲಕ್ಕೆ ಬದಲಾದಂತೆ ನಮ್ಮ ಆಹಾರಶೈಲಿಯಲ್ಲಿ ಬದಲಾವಣೆ ಮಾಡಬೇಕು. ಮಳೆಗಾಲದಲ್ಲಿ ಮಳೆಗಾಲಕ್ಕೆ ಸೂಕ್ತವಾದ ಆಹಾರ ಸೇವಿಸಬೇಕು. ಮೈ ಬೆಚ್ಚಗಿಡುವ ಆಹಾರ ಸೇವಿಸಬೇಕು. ಈ ಸಮಯದಲ್ಲಿ ಘನ ಅಹಾರ ಬದಲಿಗೆ ಸುಲಭದಲ್ಲಿ ಜೀರ್ಣವಾಗುವಂಥ ಲಘು ಆಹಾರ, ಸೂಪ್‌ನಂಥ ದ್ರವಾಹಾರ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ದೇಹದಲ್ಲಿನ ಕಶ್ಮಲವನ್ನು ಹೊರಹಾಕಬಹುದು. ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ದೇಹ ನಿರೋಧಕ ಶಕ್ತಿ ಹೆಚ್ಚಾದರೆ ಕೊರೊನಾ ವೈರಸ್ ಬಗ್ಗೆಯೂ ಭಯ ಪಡಬೇಕಾಗಿಲ್ಲ, ರೋಗ ನಿರೋಧಕ ಶಕ್ತಿ ಚೆನ್ನಾಗಿರುವವರ ಮೇಲೆ ಕೊರೊನಾ ವೈರಸ್ ಯಾವುದೇ ಪರಿಣಾಮ ಬೀರಲ್ಲ ಎಂಬುವುದು ಈಗಾಗಲೇ ಸಾಬೀತಾಗಿದೆ. ಜೊತೆಗೆ ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯನ್ನೂ ತಡೆಗಟ್ಟಬಹುದು.

ಮಳೆಗಾಲದಲ್ಲಿ ಆಹಾರಕ್ರಮ
* ಹುಳಿ, ಸಿಹಿ, ಉಪ್ಪು ಇರುವ ಆಹಾರವನ್ನು ಸೇವಿಸಿ.
* ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಲಘುವಾಗಿ ಸೇವಿಸಿ.
* ಬಿಸಿ-ಬಿಸಿ ಆಹಾರ ಸೇವಿಸಿ.
* ಶುಂಠಿ-ಬೆಳ್ಳುಳ್ಳಿ, ಕಾಳು ಮೆಣಸು, ಇಂಗು, ನಿಂಬೆ ಹಣ್ಣು ನಿಮ್ಮ ಆಹಾರದಲ್ಲಿ ಇರಲಿ, ಇವುಗಳು ಜೀರ್ಣಕ್ರಿಯೆಗೆ ಸಹಕಾರಿ.
* ಈ ಸಮಯದಲ್ಲಿ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ.
* ಕರಿ ಜೀರಿಗೆ ಇದ್ದರೆ ಸೇವಿಸಿ.
* ಹೆಸರುಕಾಳು, ಚೆನ್ನಾ, ಜೋಳ, ಕಡ್ಲೆ ಹಿಟ್ಟಿನ ಪದಾರ್ಥ, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ ಈ ಬಗೆಯ ಆಹಾರ ಸೇವಿಸಿ.

ಜೀವನಶೈಲಿ
* ದೇಹವನ್ನು ಬೆಚ್ಚಗೆ ಇಡಿ
* ಬಿಸಿ-ಬಿಸಿ ನೀರಿನಲ್ಲಿ ಸ್ನಾನ ಮಾಡಿ.
* ಪಾದಗಳ ಆರೈಕೆ ಕಡೆ ಗಮನ ನೀಡಿ.
* ಪ್ರತಿದಿನ ದೇಹಕ್ಕೆ ಎಣ್ಣೆ ಹಚ್ಚಿ ಆರೈಕೆ ಮಾಡುವುದು ಒಳ್ಳೆಯದು.
* ಹಗಲು ಹೊತ್ತಿನಲ್ಲಿ ನಿದ್ರಿಸಬೇಡಿ
* ಮಳೆಯಲ್ಲಿ ಒದ್ದೆಯಾದರೆ ಕೂಡಲೇ ಬಟ್ಟೆ ಬದಲಾಯಿಸಿ
* ಮಳೆಗಾಲದಲ್ಲಿ ಮಧ್ಯಾಹ್ನದ ನಂತರ ಬರುವ ಬಿಸಿಲಿನಲ್ಲಿ ನಿಲ್ಲಬೇಡಿ
* ಈ ಸಮಯದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದರೆ ಒಳ್ಳೆಯದು.