For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್‌ಫುಲ್‌ ಮದ್ದು

|

ಲೈಂಗಿಕತೆಯು ಸಂಬಂಧವನ್ನು ಸದಾ ಆಕ್ಟೀವ್‌ ಆಗಿರಿಸುವಂತಹ ಸಹಜ ಕ್ರಿಯೆ. ಕೆಲವೊಮ್ಮೆ ಮನಸ್ಸು ಬಯಸಿದರೂ ದೇಹ ಒಲ್ಲೆ ಎನ್ನುತ್ತದೆ. ಕೆಲವರು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಕಾಮೋತ್ತೇಜಕ ವರ್ಧಕಗಳು ಸೇರಿದಂತೆ ಹಲವು ವಿಧಾನಗಳನ್ನು ಹುಡುಕುತ್ತಾರೆ. ಆದರೆ ಯಾವುದೇ ವಯಾಗ್ರ ಮಾತ್ರೆಗಳನ್ನು ಸೇವಿಸದೇ ನಿಮ್ಮ ಪ್ರಣಯಜೀವನವನ್ನು ಇನ್ನಷ್ಟು ವಿಶೇಷವಾಗಿಸಲು ಲೈಂಗಿಕ ಶಕ್ತಿಯನ್ನು ಉತ್ತೇಜಿಸುವ ಮದ್ದು ಕೆಲವೊಂದು ಹಣ್ಣುಗಳಲ್ಲಿದೆ.

Fruits To Boost Your Stamina In Bed

ಹೌದು.. ನಿಮಿರುವಿಕೆ, ಶೀಘ್ರ ಸ್ಖಲನ ಮುಂತಾದ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದಲ್ಲಿ, ತಪ್ಪದೇ ಈ ಹಣ್ಣುಗಳನ್ನಂತೂ ಸೇವಿಸಲೇಬೇಕು. ಹಾಗಾದರೆ ಲೈಂಗಿಕ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುವ ಆ ಹಣ್ಣುಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ನೈಸರ್ಗಿಕ ವಯಾಗ್ರ ಎಂದೇ ಜನಪ್ರಿಯವಾಗಿರುವ ಕಲ್ಲಂಗಡಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ಸ್ ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿರುತ್ತೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಇನ್ನೊಂದು ಅಂಶವೆಂದರೆ ಸಿಟ್ರುಲಿನ್‌. ಇದು ಒಂದು ರೀತಿಯ ಅಮೈನೋ ಆಮ್ಲವಾಗಿದ್ದು, ಇದು ನಿಮಿರುವಿಕೆಯನ್ನು ಉತ್ತೇಜಿಸುತ್ತದೆ.

ವಯಾಗ್ರವು ಶಿಶ್ನಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಕೆಲಸದ ಜೊತೆಗೆ ಉದ್ರೋಕಗೊಂಡಾಗ ನಿಮಿರುವಿಕೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಈ ವಯಾಗ್ರದಂತೆಯೇ ಸಿಟ್ರುಲಿನ್‌ ಕೂಡಾ ಕೆಲಸ ಮಾಡುತ್ತದೆ. ಆದರೆ ಇದು ವಯಾಗ್ರಕ್ಕಿಂತ ಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತದೆ.

ಸಂಶೋಧನೆಯ ಪ್ರಕಾರ ಸಿಟ್ರುಲಿನ್‌ ಅನ್ನು ದೇಹವು ಅರ್ಜಿನೈನ್‌ ಎಂದು ಕರೆಯಲ್ಪಡುವ ಮತ್ತೊಂದು ಅಮೈನೋ ಆಮ್ಲವಾಗಿ ಪರಿವರ್ತನೆಯಾಗುತ್ತದೆ ಎನ್ನಲಾಗಿದೆ. ಈ ಅರ್ಜಿನೈನ್‌ ನೈಟ್ರಿಕ್‌ ಆಕ್ಸೈಡ್‌ ಆಗಿ ಪರಿವರ್ತನೆಯಾಗುತ್ತದೆ. ಇದು ರಕ್ತನಾಳಗಳನ್ನು ಅಗಲವಾಗಿ ತೆರೆಯುತ್ತದೆ. ಶಿಶ್ನಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ನಿಮಿರುವಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ನೈಸರ್ಗಿಕ ವಯಾಗ್ರವನ್ನು ಬಯಸುವ ಪುರುಷರು ಕಲ್ಲಂಗಡಿ ಹಣ್ಣನ್ನು ಧಾರಾಳವಾಗಿ ತಿನ್ನಬಹುದು.

ನಿಂಬೆಹಣ್ಣು

ನಿಂಬೆಹಣ್ಣು

ವಿಟಮಿನ್‌ ಸಿ ಯಿಂದ ಸಮೃದ್ಧವಾಗಿರುವ ನಿಂಬೆಹಣ್ಣು ಅಧಿಕರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮಾತ್ರವಲ್ಲ ನಿಮಿರುವಿಕೆಯ ಸಮಸ್ಯೆಯನ್ನೂ ಸುಧಾರಿಸುತ್ತದೆ. ಹೈಬಿಪಿ ಇರುವವರಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿದ್ದು, ಅಧಿಕ ಕೊಲೆಸ್ಟ್ರಾಲ್‌, ಮಧುಮೇಹವಿರುವವರೂ ನಿಮಿರುವಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಹಾಗಾಗಿ ಪ್ರತಿದಿನ ನಿಂಬೆರಸದ ಸೇವನೆಯು ನಿಮಿರುವಿಕೆಯ ಸಮಸ್ಯೆಯನ್ನು ದೂರ ಮಾಡುತ್ತೆ.

ಇದಲ್ಲದೇ ಒತ್ತಡ, ಖಿನ್ನತೆ ಮತ್ತು ಆತಂಕವು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ ಕಾಮಾಸಕ್ತಿಯನ್ನೂ ಕುಂದಿಸುತ್ತದೆ. ನಿಂಬೆಹಣ್ಣು ಆಂಟಿ ಆಕ್ಸಿಡಂಟ್ಸ್‌ ಮತ್ತು ಉರಿಯೂತ ನಿವಾರಕ ಗುಣಗಳು ಮೆದುಳಿನ ಖಾಯಿಲೆಗಳ ವಿರುದ್ಧ ಕೆಲಸ ಮಾಡುವ ಮೂಲಕ, ಆಂತರಿಕೆ ಸಮತೋಲನವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಮನಸ್ಸು ಸಂತೋಷವಾಗಿದ್ದರೆ ಕಾಮಾಸಕ್ತಿಯೂ ಹೆಚ್ಚಾಗುವುದು. ಅಲ್ಲದೇ ನಿಂಬೆ ಹಣ್ಣಿನ ಜ್ಯೂಸ್‌ ಸೇವನೆಯು ಲೈಂಗಿಕ ಸಂಭೋಗ ಮತ್ತು ಮೂತ್ರ ವಿಸರ್ಜನೆಯ ಸಮಯದಲ್ಲಿ ಉಂಟಾಗುವ ನೋವಿನಿಂದಲೂ ಪರಿಹಾರ ನೀಡುತ್ತದೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ಪೋಷಕಾಂಶ ಭರಿತ ಹಣ್ಣೆಂದರೆ ದಾಳಿಂಬೆ. ಸಾಮಾನ್ಯವಾಗಿ ಹಿಮೋಗ್ಲೋಬಿನ್‌ ಅಂಶವನ್ನು ಹೆಚ್ಚಿಸಲು ಸಜೆಸ್ಟ್‌ ಮಾಡುವ ಹಣ್ಣೆಂದರೆ ಅದು ದಾಳಿಂಬೆ. ಇದು ರಕ್ತದ ಹರಿವನ್ನು ಸುಧಾರಿಸಲೂ ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ ಒಂದು ಲೋಟ ದಾಳಿಂಬೆ ರಸವನ್ನು ಸೇವಿಸಿದ ಪುರುಷರಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಕಂಡುಕೊಳ್ಳುವ ಮೂಲಕ ಇದು ನಿಮಿರುವಿಕೆಯ ಸಮಸ್ಯೆಗೆ ಸಹಾಯ ಮಾಡುತ್ತದೆ ಎಂದು ಪರಿಗಣಿಸಲಾಗಿದೆ.ದಾಳಿಂಬೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ಸ್‌ ಹೆಚ್ಚಾಗಿರುವ ಕಾರಣ ಇದು ಪುರುಷರಿಗೆ ಲೈಂಗಿಕ ಶಕ್ತಿ ಹೆಚ್ಚಿಸಲು ಸಹಕಾರಿ ಮಾತ್ರವಲ್ಲ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಸಿಹಿ ದ್ರಾಕ್ಷಿಹಣ್ಣು

ಸಿಹಿ ದ್ರಾಕ್ಷಿಹಣ್ಣು

ಅಯ್ಯೋ ದ್ರಾಕ್ಷಿ ಹುಳಿ ಎಂದು ಮುಖ ಸಿಂಡರಿಸಬೇಡಿ. ಸಿಟ್ರಸ್‌ ಹಣ್ಣುಗಳಲ್ಲಿ ಒಂದಾದ ದ್ರಾಕ್ಷಿಯು ದೇಹವು ಔಷಧಿಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸಿಲ್ಡೆನಾಫಿಲ್ ವಯಾಗ್ರದಲ್ಲಿನ ಸಕ್ರಿಯ ಘಟಕಾಂಶವಾಗಿದೆ, ಅದನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಆದರೆ ಔಷಧಿಯನ್ನು ಬಹಳಷ್ಟು ದ್ರಾಕ್ಷಿಹಣ್ಣುಗಳೊಂದಿಗೆ ಸೇವಿಸಿದಾಗ, ಫಲಿತಾಂಶಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಸಿಲ್ಡೆನಾಫಿಲ್ ರಕ್ತದಲ್ಲಿ ಹೀರಲ್ಪಡುತ್ತದೆ. ಅಲ್ಲದೇ ದ್ರಾಕ್ಷಿ ರಸದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ನೈಟ್ರಿಕ್‌ ಆಕ್ಸೈಡ್‌ ಪ್ರಮಾಣವನ್ನು ಹೆಚ್ಚಿಸುವುದರಿಂದ ರಕ್ತದ ಹರಿವು ಸರಾಗಗೊಳ್ಳುವುದು. ಇದರಿಂದ ನಿಮಿರುವಿಕೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕಿವಿ ಹಣ್ಣು

ಕಿವಿ ಹಣ್ಣು

ಕಿವಿ ಹಣ್ಣಿನಲ್ಲಿ ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಇದೆ. ದಿನಕ್ಕೊಂದು ಕಿವಿ ಹಣ್ಣಿನ ಸೇವನೆ ನಿಮ್ಮ ರಕ್ತವನ್ನು ತೆಳುವಾಗಿಸಲು ಸಹಾಯ ಮಾಡುತ್ತದೆ, ಇದು ಪಾರ್ಶ್ವವಾಯುವಿನ ಸಾಧ್ಯತೆಗಳನ್ನೂ ಕಡಿಮೆಗೊಳಿಸುತ್ತದೆ. ಅಷ್ಟೇಲ್ಲ ಆರೋಗ್ಯಕರ ರಕ್ತದ ಹರಿವು ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತೆ. ನಿಮಿರುವಿಕೆಯ ಸಮಸ್ಯೆಯನ್ನು ನಿವಾರಿಸಿ, ಲೈಂಗಿಕ ತೃಪ್ತಿಯನ್ನು ಪಡೆಯಲು ಈ ಹಣ್ಣನ್ನು ತಪ್ಪದೇ ಸೇವಿಸಬಹುದು. ಇಲಿಗಳ ಮೇಲೆ ಮಾಡಿದ ಸಂಶೋಧನೆಯ ಪ್ರಕಾರ ಕಿವಿ ಹಣ್ಣು ನಿಮಿರುವಿಕೆಯ ಚಿಕಿತ್ಸೆಯಾದ ತಡಾಲಾಫಿಲ್‌ನ ಋಣಾತ್ಮಕ ಅಡ್ಡಪರಿಣಾಮಗಳನ್ನು ಎದುರಿಸುತ್ತವೆಯೆಂದು ಕಂಡುಹಿಡಿಯಲಾಗಿದೆ.

ಕಿತ್ತಳೆ ಮತ್ತು ಬ್ಲೂಬೆರ್ರಿ

ಕಿತ್ತಳೆ ಮತ್ತು ಬ್ಲೂಬೆರ್ರಿ

ಸಾಮಾನ್ಯವಾಗಿ ಬೆರ್ರಿಹಣ್ಣುಗಳನ್ನು ಡಾರ್ಕ್‌ ಚಾಕೋಲೇಟ್‌ನೊಂದಿಗೆ ಸೇವಿಸುವುದನ್ನು ನೀವು ಕಂಡಿರಬಹುದು. ಕಿತ್ತಳೆ ಮತ್ತು ಬ್ಲೂಬೆರ್ರಿ ಫ್ಲೇವನಾಯ್ಡ್‌ ಅಂಶಗಳಿಂದ ತುಂಬಿದ್ದು, ನಿಮಿರುವಿಕೆ ಅಪಸಾಮಾನ್ಯ ಕ್ರಿಯೆಗೆ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿರು ಫ್ಲೇವನಾಯ್ಡ್‌ ಅಂಶಗಳು ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಇದು ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ 'ಫ್ಲೇವನಾಯ್ಡ್‌ ಭರಿತ ಆಹಾರಗಳ ಸೇವನೆಯು ನಿಮಿರುವಿಕೆಯ ಸಮಸ್ಯೆಯ ಸಾಧ್ಯತೆಗಳನ್ನು 9 ರಿಂದ ಶೇಕಡಾ 11ರಷ್ಟು ಕಡಿಮೆ ಮಾಡುತ್ತವೆಯೆಂದು ವಿವರಿಸಿದೆ.

ಪ್ರತಿದಿನ ಒಂದು ಹಣ್ಣನ್ನಾದರೂ ಸೇವಿಸಬೇಕು ಎನ್ನುತ್ತಾರೆ ವೈದ್ಯರು, ಕಾರಣ ಇದರಲ್ಲಿರುವ ಪೋಷಕಾಂಶ ಸತ್ವಗಳು ದೈಹಿಕ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತವೆ. ಅದೇ ರೀತಿ ಉತ್ತಮ ಲೈಂಗಿಕ ಜೀವನಕ್ಕಾಗಿಯೂ ಪುರುಷರು ಈ ಹಣ್ಣುಗಳನ್ನಂತೂ ಸೇವಿಸಲೇಬೇಕು.

English summary

Fruits To Boost Your Stamina In Bed in Kannada

these are the Fruits which can Boost Your Stamina In Bed in Kannada. Read more.
X
Desktop Bottom Promotion