For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ

|

ಎಣ್ಣೆಯಲ್ಲಿ ಕರಿದ ಬಜ್ಜಿ ಬೊಂಡ, ರುಚಿ-ರುಚಿಯಾದ ಕುಕ್ಕೀಸ್, ಚೀಸ್‌, ಬೆಣ್ಣೆ ಹಾಕಿದ ರುಚಿ ರುಚಿಯಾದ ಆಹಾರ ಪದಾರ್ಥ ಇನ್ನು ನಾನ್‌ವಜ್‌ಗಳಾದರೆ ಬಿರಿಯಾನಿ, ಟಿಕ್ಕಾ ಕಬಾಬ್ ಈ ರೀತಿಯ ಆಹಾರಗಳನ್ನು ಸವಿಯುವಾಗ ತುಂಬಾನೇ ಇಷ್ಟವಾಗುತ್ತದೆ.

Foods to control High Cholesterol

ಅಪರೂಪಕ್ಕೆ ಈ ರೀತಿಯ ಆಹಾರಗಳನ್ನು ತಿಂದರೆ ತೊಂದರೆಯಿಲ್ಲ, ಆದರೆ ಈ ರೀತಿ ಕೊಬ್ಬಿನಂಶವಿರುವ ಆಹಾರವನ್ನು ತಿನ್ನುವುದು ಮಿತಿ ಮೀರಿದರೆ ಮಾತ್ರ ಕಷ್ಟ. ಆಗ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಅಷ್ಟು ಮಾತ್ರವಲ್ಲ ತುಂಬಾ ಹೊತ್ತು ಕೂತುಕೊಂಡು ಕೆಲಸ ಮಾಡುವುದರಿಂದಲೂ ಕೊಲೆಸ್ಟ್ರಾಲ್ ಹೆಚ್ಚಾಗುವುದು.

ಕೊಲೆಸ್ಟ್ರಾಲ್ ಎಂಬುವುದು ನಮ್ಮ ದೇಹದ ಪ್ರತಿಯೊಂಂದು ಕಣದಲ್ಲಿ ಇರುತ್ತದೆ. ಇದು ಅವಶ್ಯಕ ಕೂಡ. ಜೀರ್ಣಕ್ರಿಯೆಗೆ, ಹಾರ್ಮೋನ್‌ಗಳ ಉತ್ಯಾದನೆಗೆ ಮತ್ತಿತರ ಕಾರ್ಯಗಳಿಗೆ ಕೊಲೆಸ್ಟ್ರಾಲ್ ಬೇಕು.

ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧ

ಒಳ್ಳೆಯ ಕೊಲೆಸ್ಟ್ರಾಲ್‌ (HDL)

ಒಳ್ಳೆಯ ಕೊಲೆಸ್ಟ್ರಾಲ್‌ (HDL)

ಅತ್ಯಧಿಕ ಸಾಂದ್ರತೆಯ ಲಿಪೋಪ್ರೋಟೀನ್ ಇದು ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ದೇಹ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ. ಈ ಒಳ್ಳೆಯ ಕೊಲೆಸ್ಟ್ರಾಲ್ ಸೊಂಟದ ಸುತ್ತಲಿನ ಹಾಗೂ ಹಾಗೂ ಇತರ ಕಶ್ಮಲಗಳನ್ನು ಲಿವರ್‌ಗೆ ಕಳುಹಿಸುತ್ತದೆ, ಲಿವರ್‌ ತನ್ನ ಕಾರ್ಯದ ಮೂಲಕ ಅದನ್ನು ದೇಹದಿಂದ ಹೊರ ಹಾಕುತ್ತೆ.

ಕೆಟ್ಟ ಕೊಲೆಸ್ಟ್ರಾಲ್ ( LDL)

ಕೆಟ್ಟ ಕೊಲೆಸ್ಟ್ರಾಲ್ ( LDL)

ಇದು ದೇಹದ ಎಲ್ಲಾ ಭಾಗದ ಕಣಗಳಿಗೆ ಕೊಬ್ಬು ಕಳುಹಿಸುವ ಕಾರ್ಯ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಆರೋಗ್ಯ ಹಾಳಾಗುವುದು, ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆ ಕಂಡು ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ರಕ್ತನಾಳಗಳಿಗೆ ತಡೆಯೊಡ್ಡುತ್ತದೆ. ಇದರಿಂದ ರಕ್ತಸಂಚಾರಕ್ಕೆ ತೊಂದರೆಯುಂಟಾಗು ಪಾರ್ಶ್ವವಾಯು ಕೂಡ ಉಂಟಾಗಬಹುದು.

ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣಗಳು

ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣಗಳು

1.ಅನಾರೋಗ್ಯಕರ ಆಹಾರಕ್ರಮ

ಅತ್ಯಧಿಕ ಕೊಲೆಸ್ಟ್ರಾಲ್‌ಗೆ ಪ್ರಮುಖ ಕಾರಣವೆಂದರೆ ಸರಿಯಿಲ್ಲದ ಆಹಾರಕ್ರಮ. ಮಾಂಸ, ಪ್ರಾಣಿಗಳ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಉಂಟಾಗುವುದು.

2. ಒಬೆಸಿಟಿ: ಯಾರಲ್ಲಿ ಒಬೆಸಿಟಿ ಇರುತ್ತದೋ ಅವರಿಗೆ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಬಹುದು. ಆದ್ದರಿಂದ ಮೈ ತೂಕದ ಕಡೆ ಗಮನ ನೀಡಿ.

3. ವ್ಯಾಯಾಮ ಮಾಡದೇ ಇರುವುದು

ಶರೀರಕ್ಕೆ ಚಟುವಟಿಕೆ ಕಡಿಮೆಯಾದರೆ, ವ್ಯಾಯಾಮ ಇಲ್ಲದೇ ಹೋದರೆ ಕೊಲೆಸ್ಟ್ರಾಲ್ ಸಮಸ್ಯೆ ಉಂಟಾಗುವುದು.

4. ಧೂಮಪಾನ: ಧೂಮಪಾನಿಗಳ ರಕ್ತನಾಳಕ್ಕೆ ಹಾನಿಯುಂಟಾಗುತ್ತದೆ, ಇದರಿಂದಾಗೊ ಕೊಬ್ಬು ಸಂಗ್ರಹವಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು.

5. ಮಧುಮೇಹ: ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಇದು ರಕ್ತನಾಳವನ್ನು ಕಿರಿದಾಗಿಸುತ್ತದೆ. ಇದರಿಂದ ಕೂಡ ಮಧುಮೇಹದ ಸಮಸ್ಯೆ ಉಂಟಾಗುವುದು.

ಕೊಲೆಸ್ಟ್ರಾಲ್‌ ಸಮಸ್ಯೆ ಹೆಚ್ಚಾದವರು ಏನು ಮಾಡಬೇಕು?

ಕೊಲೆಸ್ಟ್ರಾಲ್‌ ಸಮಸ್ಯೆ ಹೆಚ್ಚಾದವರು ಏನು ಮಾಡಬೇಕು?

ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ತಿನ್ನುವ ಆಹಾರ ಹಾಗೂ ದೇಹದ ತೂಕದ ಕಡೆ ತುಂಬಾ ಗಮನ ನೀಡಬೇಕು. ಆಹಾರ ಸೇವನೆಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶ ಇರುವ ಆಹಾರ ಇರುವಂತೆ ನೋಡಿಕೊಳ್ಳಬೇಕು. ಸ್ಯಾಚುರೇಟಡ್‌ ಕೊಬ್ಬಿನಂಶ ಇರುವ ಆಹಾರದ ಬದಲಿಗೆ ಒಳ್ಳೆಯ ಕೊಬ್ಬಿನಂಶ ಇರುವ ಆಹಾರ ಸೇವನೆ ಒಳ್ಳೆಯದು.

ಕೊಲೆಸ್ಟ್ರಾಲ್ ಇರುವವರು ನಟ್ಸ್, ಬಾದಾಮಿ, ವಾಲ್ನಟ್ ರೀತಿಯ ಆಹಾರಗಳನ್ನು ತೆಗೆದುಕೊಳ್ಳಬೇಕು, ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು. ಅಲ್ಲದೆ ಮದ್ಯಪಾನ ಅಭ್ಯಾಸ ಇರುವವರು ತುಂಬಾ ಕುಡಿಯಬಾರದು.

ಇವುಗಳ ಜೊತೆ ಸರಿಯಾದ ಮೈತೂಕ ನಿಮ್ಮದಾಗಿಸಿಕೊಳ್ಳಬೇಕು. ಇದಕ್ಕಾಗಿ ವ್ಯಾಯಾಮ, ಆಹಾರಕ್ರಮ ಪಾಲಿಸಬೇಕು.

ಕೊಲೆಸ್ಟ್ರಾಲ್ ಇರುವವರಿಗೆ ಯಾವ ಆಹಾರ ಸೇವನೆ ಒಳ್ಳೆಯದು:

ಕೊಲೆಸ್ಟ್ರಾಲ್ ಇರುವವರಿಗೆ ಯಾವ ಆಹಾರ ಸೇವನೆ ಒಳ್ಳೆಯದು:

ಎಣ್ಣೆ, ತುಪ್ಪ, ವನಸ್ಪತಿ ಈ ರೀತಿಯ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು. ಅಲ್ಲದೆ ಸಂಸ್ಕರಿಸಿದ ಆಹಾರವನ್ನೂ ಬಳಸಬಾರದು. ಇನ್ನು ಕುಕ್ಕೀಸ್‌, ಚಿಪ್ಸ್ ಮುಂತಾದ ಆಹಾರ ಪದಾರ್ಥಗಳನ್ನು ಸ್ನ್ಯಾಕ್ಸ್ ಆಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು.

ಬದಲಿಗೆ ಈ ಬಗೆಯ ಆಹಾರ ಸೇವಿಸಿ

* ಬೀನ್ಸ್, ಧಾನ್ಯಗಳು

* ನಟ್ಸ್

* ಆಲೀವ್ ಎಣ್ಣೆ

* ಗೋಧಿ, ಬಾರ್ಲಿ

* ಮೀನು

* ಅತ್ಯಧಿಕ ನಾರಿನಂಶವಿರುವ ಎಣ್ಣೆ

* ಬೆಣ್ಣೆಹಣ್ಣು

ಕೊಲೆಸ್ಟ್ರಾಲ್ ಇರುವವರಿಗೆ ಯಾವ ಆಹಾರ ಒಳ್ಳೆಯದು

ಕೊಲೆಸ್ಟ್ರಾಲ್ ಇರುವವರಿಗೆ ಯಾವ ಆಹಾರ ಒಳ್ಳೆಯದು

ಕಿಡ್ನಿ ಬೀನ್ಸ್ ಸಲಾಡ್

ಬೇಯಿಸಿದ ಕಿಡ್ನಿ ಬೀನ್ಸ್‌ಗೆ ಸ್ವಲ್ಪ ಕಾಟೇಜ್ ಚಿಸ್, ತರಕಾರಿಗಳು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಆಲೀವ್‌ ಎಣ್ಣೆ ಹಾಕಿ ಮಿಕ್ಸ್ ಮಾಡಿದರೆ ಸವಿಯಲು ತುಂಬಾನೇ ರುಚಿಯಾಗಿರುತ್ತೆ.

ಸಾಲಮೋನ್

ನೀವು ಇದನ್ನು ಸಾರು ಮಾಡಬಹುದು ಅಥವಾ ಗ್ರಿಲ್ಡ್ ರೀತಿಯಲ್ಲಿ ಮಾಡಿ ಸವಿಯಬಹುದು, ಆದರೆ ಫ್ರೈ ಮಾಡಬೇಡಿ.

* ಹೆಸರು ಬೇಳೆ, ಪನ್ನೀರ್

* ಚಿಯಾ ಶೀಡ್ಸ್ ಸ್ಮೂತಿ

ಹೀಗೆ ಒಳ್ಳೆಯ ಕೊಲೆಸ್ಟ್ರಾಲ್ ಇರುವ ಆಹಾರ ಸವಿಯಬಹುದು.

English summary

Foods, Tips and Healthy Recipes To Manage Your High Cholesterol Levels

Here is Foods, Tips and Healthy Recipes To Manage Your High Cholesterol Levels, read on.
X
Desktop Bottom Promotion