For Quick Alerts
ALLOW NOTIFICATIONS  
For Daily Alerts

ದ್ರಾಕ್ಷಿ ತಿಂದು ಫ್ಯಾಟಿ ಲಿವರ್‌ ಸಮಸ್ಯೆ ಕಡಿಮೆ ಮಾಡಬಹುದೇ?

|

ಹಣ್ಣುಗಳು ನಮ್ಮ ಪ್ರತಿದಿನದ ಆಹಾರದಲ್ಲಿ ಇರಲೇಬೇಕು. ಹೆಚ್ಚು ತರಕಾರಿ ಹಾಗೂ ಹಣ್ಣುಗಳ ಸೇವನೆ ಆರೋಗ್ಯ ಕಾಪಾಡಿಕೊಳ್ಳಲು, ಅನಾರೋಗ್ಯದಿಂದ ದೂರವಿರಲು ಮತ್ತು ದೀರ್ಘಾಯುಷ್ಯವನ್ನು ಸುಧಾರಿಸಲು ಬೇಕೇ ಬೇಕು. ಹಣ್ಣುಗಳಲ್ಲಿ ಒಂದಾದ ದ್ರಾಕ್ಷಿ ಹಣ್ಣು ಹುಳಿ ಇರುತ್ತೆ ಎಂದು ತಿನ್ನದೇ ಇರುವವರು ಅನೇಕರು, ಜೊತೆಗೆ ದ್ರಾಕ್ಷಿ ತಿಂದ್ರೆ ಕಫ ಆಗುತ್ತೆ, ಶೀತ ಆಗುತ್ತೆ ಎನ್ನುವ ನೆಪ ಹೇಳಿ ದ್ರಾಕ್ಷಿಯನ್ನು ದೂರ ಸರಿಸುವವರು ಹೆಚ್ಚು.

how to reduce liver inflammation

ಆದರೆ ದ್ರಾಕ್ಷಿಯ ಸೇವನೆ ಎಷ್ಟೊಂದು ಪ್ರಯೋಜನಗಳನ್ನು ನೀಡುತ್ತೆ ಗೊತ್ತಾ. ಅಲ್ಲದೇ ಇದು ಯಕೃತ್ತಿನ ಸಮಸ್ಯೆ ಅದರಲ್ಲೂ ಫ್ಯಾಟಿ ಲಿವರ್‌ ಅಪಾಯವನ್ನು ಕಡಿಮೆ ಮಾಡುತ್ತೆ ಎನ್ನುತ್ತೆ ಅಧ್ಯಯನಗಳು.

ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ:

ದ್ರಾಕ್ಷಿಯ ಪ್ರಯೋಜನಗಳು

ದ್ರಾಕ್ಷಿಯ ಪ್ರಯೋಜನಗಳು

ದ್ರಾಕ್ಷಿಯನ್ನು ಅದ್ಭುತವಾದ ಹಣ್ಣೆಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಅಂಶಗಳು ಮಧುಮೇಹ, ಬೊಜ್ಜು, ಕ್ಯಾನ್ಸರ್‌ ಮತ್ತು ಉರಿಯೂತದ ಖಾಯಿಲೆಗಳು ಸೇರಿದಂತೆ ಹಲವು ರೋಗಗಳಿಂದ ದೇಹವನ್ನು ರಕ್ಷಿಸುವ ಗುಣ ಹೊಂದಿದೆ. ಅಲ್ಲದೇ ದ್ರಾಕ್ಷಿಯಲ್ಲಿರುವ ಘಟಕಾಂಶಗಳು ಏಜಿಂಗ್‌ ಮತ್ತು ದೀರ್ಘಾಯುಷ್ಯವನ್ನು ಸುಧಾರಿಸುತ್ತವೆ. ಪ್ರಸ್ತುತ ಅಧ್ಯಯನದಲ್ಲಿ ಪಾಶ್ಚಾತ್ಯ ಆಹಾರದಿಂದ ಉಂಟಾಗುವ ಹೆಚ್ಚಾದ ಕೊಬ್ಬಿನ ಪರಿಣಾಮವಾಗಿ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ದ್ರಾಕ್ಷಿ ಹೇಗೆ ಸಹಕರಿಸುತ್ತದೆ ಎನ್ನುವುದನ್ನು ಮೌಲ್ಯಮಾಪನ ಮಾಡಿದ್ದಾರೆ.

ಹೆಚ್ಚಾದ ಕೊಬ್ಬಿನಿಂದಲೇ ಫ್ಯಾಟಿ ಲಿವರ್‌ ಸಮಸ್ಯೆ

ಹೆಚ್ಚಾದ ಕೊಬ್ಬಿನಿಂದಲೇ ಫ್ಯಾಟಿ ಲಿವರ್‌ ಸಮಸ್ಯೆ

ಸ್ಯಾಚುರೇಟೆಡ್‌ ಕೊಬ್ಬು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್‌ ಮತ್ತು ಉಪ್ಪು ಹೆಚ್ಚಾಗಿರುವ ಆಹಾರವು ಬೊಜ್ಜು, ಹೃದಯರಕ್ತನಾಳದ ಖಾಯಿಲೆ ಮತ್ತು ಮಧುಮೇಹ ಮತ್ತು ಮದ್ಯಪಾನ ಸೇವನೆಯಿಂದಲ್ಲದೇ ಉಂಟಾಗುವ ಪಿತ್ತಜನಕಾಂಗದ ಖಾಯಿಲೆ, ಜೀರ್ಣಾಂಗದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇಲಿಗಳ ಮೇಲೆ ಸಂಶೋಧನೆ ಮಾಡಿದ ಪ್ರಕಾರ ಈ ರೀತಿಯ ಆಹಾರ ಸೇವನೆಯು ಇಲಿಗಳ ಜೀವಿತಾವಧಿಯನ್ನು 34% ರಷ್ಟು ಕಡಿಮೆ ಮಾಡುತ್ತದೆಯೆಂದು ತಿಳಿದುಬಂದಿದೆ.

ಚಯಾಪಚಯ ಸಮಸ್ಯೆಗೆ ದ್ರಾಕ್ಷಿ

ಚಯಾಪಚಯ ಸಮಸ್ಯೆಗೆ ದ್ರಾಕ್ಷಿ

ವಿಜ್ಞಾನಿಗಳು ನಿರ್ದಿಷ್ಟವಾಗಿ ಯಕೃತ್ತಿನ ಜೀನ್‌ ಅಭಿವ್ಯಕ್ತಿ, ಚಯಾಪಚಯ, ದೀರ್ಘಾಯುಷ್ಟ ಮತ್ತು ಫ್ಯಾಟಿ ಲಿವರ್‌ ಸಮಸ್ಯೆಯ ಮೇಲೆ ದ್ರಾಕ್ಷಿ ಸೇವನೆಯಿಂದ ಉಂಟಾಗುವ ಪರಿಣಾಮವನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದು, ಅಧಿಕ ಕೊಬ್ಬಿನ ಆಹಾರ ಮತ್ತು ಅರೆ ಸಂಶ್ಲೇಷಿತ ಆಹಾರ ಸೇವನೆ ಹೊಂದಿರುವ ಇಲಿಗಳ ಮೇಲೆ ಶೇಕಡಾ 5ರಷ್ಟು ದ್ರಾಕ್ಷಿ ಪೂರಕವನ್ನು ನೀಡಿ ಪರೀಕ್ಷಿಸಲಾಯಿತು. ಇಲಿಗಳ ಮೇಲೆ ಶೇಕಡಾ 5ರಷ್ಟು ದ್ರಾಕ್ಷಿ ಪೂರಕವನ್ನು ನೀಡುವುದು, 70 ಕೆ,ಜಿ ತೂಕವಿರುವ ವ್ಯಕ್ತಿಗೆ 300ಗ್ರಾಂ ದ್ರಾಕ್ಷಿ ಪೂರಕವನ್ನು ನೀಡಿದಷ್ಟು ಸಮನಾಗಿರುತ್ತದೆ.

ಹೆಚ್ಚು ಕೊಬ್ಬಿನ ಆಹಾರದ ಜೊತೆಗೆ ದ್ರಾಕ್ಷಿ

ಹೆಚ್ಚು ಕೊಬ್ಬಿನ ಆಹಾರದ ಜೊತೆಗೆ ದ್ರಾಕ್ಷಿ

ಅಧಿಕ ಕೊಬ್ಬಿನಂಶಯುಕ್ತ ಆಹಾರ ಸೇವನೆಯು ಆಲ್ಕೋಹಾಲ್‌ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆ ಅಂದರೆ ಫ್ಯಾಟಿ ಲಿವರ್‌ ಸಮಸ್ಯೆ ಮಾತ್ರವಲ್ಲ, ಹೃದಯ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಜಗತ್ತಿನಾದ್ಯಂತ ಶೇಕಡಾ 25%ರಷ್ಟು ಮಂದಿ ಈ ಸಮಸ್ಯೆಯಿಂದಲೇ ಬಳಲುತ್ತಾರೆ. ಇಲಿಗಳ ಮೇಲೆ ಅಧ್ಯಯನ ಮಾಡಿರುವ ಪ್ರಕಾರ ಹೆಚ್ಚಿನ ಕೊಬ್ಬಿನ ಆಹಾರದೊಂದಿಗೆ ದ್ರಾಕ್ಷಿಯ ಪೂರಕವನ್ನೂ ನೀಡಿದಾಗ ಮತ್ತು ದ್ರಾಕ್ಷಿ ಸೇವನೆಯೇ ಯಕೃತ್ತಿನಲ್ಲಿ ಲಿಪಿಡ್ ಅಂದರೆ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದ್ರಾಕ್ಷಿಯ ಪೂರಕವು ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸುತ್ತದೆ.

ದ್ರಾಕ್ಷಿಯ ಪೂರಕ ಅಂದರೆ ಔಷಧಿಯು ಲಿಪಿಡ್‌ ಅಂಶಗಳು ಹೆಚ್ಚಾಗುವುದು, ಕೊಲೆಸ್ಟ್ರಾಲ್‌ ಸಂಶ್ಲೇಷಣೆ ಮತ್ತು ಸ್ನಾಯು ಮತ್ತು ಕೊಬ್ಬಿನಿಂದ ಯಕೃತ್ತಿಗೆ ಲಿಪಿಡ್‌ಗಳು ಮರುಹಂಚಿಕೆಗೆ ಸಂಬಂಧಿಸಿದ ಜೀನ್‌ಗಳು ಅಭಿವೃದ್ಧಿಯಾಗುವುದನ್ನು ಋಣಾತ್ಮಕವಾಗಿ ನಿಯಂತ್ರಿಸುತ್ತದೆ.

English summary

Eating Grapes May Reduce The Risk Of Fatty Liver Diseases

How eating grapes help to reduce the fatty liver diseases, read on....
X
Desktop Bottom Promotion