For Quick Alerts
ALLOW NOTIFICATIONS  
For Daily Alerts

ಕ್ಯಾಬೇಜ್‌ನಲ್ಲಿದೆ ಕ್ಯಾನ್ಸರ್‌ ತಡೆಗಟ್ಟುವ ಸಾಮರ್ಥ್ಯ

|

ಕ್ಯಾಬೇಜ್ ತಿನ್ನಿ ಕ್ಯಾನ್ಸರ್ ನಿಂದ ದೂರವಿರಿ ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಾದರೆ ಬಡ ಹಾಗೂ ಮಧ್ಯಮ ವರ್ಗದವರು ಮನೆ ಮಠ ಮಾರಿಕೊಳ್ಳಬೇಕಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜೀವನಶೈಲಿ ಬದಲಾವಣೆ ಮಾಡಿದರೆ ಆಗ ಖಂಡಿತವಾಗಿಯೂ ಕ್ಯಾನ್ಸರ ಬರದಂತೆ ತಡೆಯಬಹುದು. ಮುಖ್ಯವಾಗಿ ಪ್ರಕೃತಿದತ್ತವಾದ ಆಹಾರ ಸೇವನೆಯಿಂದ ಕ್ಯಾನ್ಸರ್ ಅನ್ನು ತಡೆಯಬಹುದಾಗಿದೆ. ಪ್ರಕೃತಿಯಲ್ಲಿ ಸಿಗುವಂತಹ ಹಣ್ಣು ಹಾಗೂ ತರಕಾರಿಗಳಲ್ಲಿ ಈ ಗುಣಗಳು ಇವೆ. ಇದನ್ನು ನಾವು ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ಕ್ಯಾನ್ಸರ್ ಅನ್ನು ತಡೆಯಬಹುದು. ಹೆಚ್ಚಿನವರಿಗೆ ಇಷ್ಟವಾಗದೆ ಇರುವಂತಹ ಎಲೆಕೋಸು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳು ಹೇಳಿವೆ. ಅದು ಹೇಗೆ ಎಂದು ತಿಳಿಯುವ.

cabbage heal cancer

ವೈಜ್ಞಾನಿಕ ಲೋಕದಲ್ಲಿ ಇದುವರೆಗೆ ಸಂಪೂರ್ಣವಾಗಿ ಔಷಧಿ ಕಂಡು ಹುಡುಕಲು ಆಗದೆ ಇರುವಂತಹ ಕಾಯಿಲೆಗಳು ಹಲವು. ಇದರಲ್ಲಿ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್ ಎನ್ನುವುದು ಮಹಾಮಾರಿ ಕಾಯಿಲೆ ಎಂದು ಹೇಳಬಹುದಾಗಿದೆ. ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಲು ಕಷ್ಟವಾದರೆ ಅದಕ್ಕೆ ಚಿಕಿತ್ಸೆ ಎನ್ನುವುದು ಶೂನ್ಯಕ್ಕೆ ಸಮಾನ. ಹೀಗಾಗಿ ಯಾವುದೇ ರೀತಿಯ ಕ್ಯಾನ್ಸರ್ ಇರಬಹುದು, ಅದನ್ನು ಮೊದಲ ಹಂತದಲ್ಲೇ ಪತ್ತೆ ಮಾಡುವುದು ಅತೀ ಮುಖ್ಯ. ಒಂದು ವೇಳೆ ಇದು ಪತ್ತೆಯಾದರೂ ಅದರ ಚಿಕಿತ್ಸೆಯು ತುಂಬಾ ದುಬಾರಿ.

ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಾದರೆ ಬಡ ಹಾಗೂ ಮಧ್ಯಮ ವರ್ಗದವರು ಮನೆ ಮಠ ಮಾರಿಕೊಳ್ಳಬೇಕಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜೀವನಶೈಲಿ ಬದಲಾವಣೆ ಮಾಡಿದರೆ ಆಗ ಖಂಡಿತವಾಗಿಯೂ ಕ್ಯಾನ್ಸರ ಬರದಂತೆ ತಡೆಯಬಹುದು. ಮುಖ್ಯವಾಗಿ ಪ್ರಕೃತಿದತ್ತವಾದ ಆಹಾರ ಸೇವನೆಯಿಂದ ಕ್ಯಾನ್ಸರ್ ಅನ್ನು ತಡೆಯಬಹುದಾಗಿದೆ. ಪ್ರಕೃತಿಯಲ್ಲಿ ಸಿಗುವಂತಹ ಹಣ್ಣು ಹಾಗೂ ತರಕಾರಿಗಳಲ್ಲಿ ಈ ಗುಣಗಳು ಇವೆ. ಇದನ್ನು ನಾವು ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ಕ್ಯಾನ್ಸರ್ ಅನ್ನು ತಡೆಯಬಹುದು. ಹೆಚ್ಚಿನವರಿಗೆ ಇಷ್ಟವಾಗದೆ ಇರುವಂತಹ ಎಲೆಕೋಸು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳು ಹೇಳಿವೆ. ಅದು ಹೇಗೆ ಎಂದು ತಿಳಿಯುವ.

ಎಲೆಕೋಸಿನಲ್ಲಿ ಇರುವ ಪೋಷಕಾಂಶಗಳು

ಎಲೆಕೋಸಿನಲ್ಲಿ ಇರುವ ಪೋಷಕಾಂಶಗಳು

ಹೂಕೋಸನ್ನು ಹೆಚ್ಚಾಗಿ ಸಲಾಡ್ ಹಾಗೂ ಇತರ ಖಾದ್ಯಗಳಾಗಿ ಬಳಸಿಕೊಳ್ಳಲಾಗುತ್ತದೆ. ಹೂಕೋಸಿನಲ್ಲಿ ದೇಹದ ಆರೋಗ್ಯಕ್ಕೆ ಬೇಕಾದ ಕೆಲವು ಪ್ರಮುಖ ಅಂಶಗಳು ಇವೆ. ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಮೆಗ್ನಿಶೀಯಂ, ಮ್ಯಾಂಗನೀಸ್ ಮತ್ತು ಕೆಲವು ಕ್ಯಾರೊಟಾನಾಯ್ಡ್ ಗಳು ಇವೆ.

ಎಲೆಕೋಸ್(ಕ್ಯಾಬೇಜ್) ನಮ್ಮ ದೇಹಕ್ಕೆ ಹೇಗೆ ನೆರವಾಗುವುದು?

ಎಲೆಕೋಸ್(ಕ್ಯಾಬೇಜ್) ನಮ್ಮ ದೇಹಕ್ಕೆ ಹೇಗೆ ನೆರವಾಗುವುದು?

ಇಷ್ಟೆಲ್ಲಾ ಪೋಷಕಾಂಶಗಳು ಬೇರೆ ಆಹಾರದಲ್ಲಿ ಕೂಡ ಲಭ್ಯವಾಗಬಹುದು ಎಂದು ನೀವು ಮನಸ್ಸಿನಲ್ಲೇ ಅನಿಸಿಕೊಳ್ಳಬಹುದು. ಆದರೆ ಹೂಕೋಸಿನಲ್ಲಿ ಇರುವಂತಹ ಕೆಲವು ಆರೋಗ್ಯ ಲಾಭಗಳೆಂದರೆ ರಕ್ತದೊತ್ತಡ ತಗ್ಗಿಸುವುದು, ಜೀರ್ಣಕ್ರಿಯೆ ಸುಧಾರಣೆ, ಉರಿಯೂತ ತಗ್ಗಿಸುವುದು, ಹೃದಯದ ಆರೋಗ್ಯ ಕಾಪಾಡುವುದು, ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು, ಕ್ಯಾನ್ಸರ್ ತಡೆಯುವುದು.

ಕ್ಯಾಬೇಜ್ ನ ಯಾವ ಅಂಶವು ಕ್ಯಾನ್ಸರ್ ತಡೆಯುತ್ತದೆ?

ಕ್ಯಾಬೇಜ್ ನ ಯಾವ ಅಂಶವು ಕ್ಯಾನ್ಸರ್ ತಡೆಯುತ್ತದೆ?

ಕ್ಯಾಬೇಜ್ ನಲ್ಲಿ ಪ್ರಮುಖವಾಗಿ ಸಲ್ಫರ್ ಹೊಂದಿರುವಂತಹ ಗ್ಲುಕೋಸಿನೊಲೇಟ್‌ಗಳು ಇವೆ. ಇವು ದೇಹದಲ್ಲಿ ವಿಘಟನೆಗೊಳ್ಳುವುದು ಮತ್ತು ಕ್ಯಾನ್ಸರ್ ತಡೆಯುವಂತಹ ಐಸೊಥಿಯೊಸೈನೇಟ್‌, ಇಂಡೋಲ್‌, ನೈಟ್ರೈಲ್‌ ಮತ್ತು ಥಿಯೋಸಯನೇಟ್‌ಗಳನ್ನು ನಿರ್ಮಾಣ ಮಾಡುವುದು.

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ವಿವಿಧ ರೀತಿಯ ಕ್ಯಾನ್ಸರ್ ಬಗ್ಗೆ ನಡೆಸಿರುವಂತಹ ಅಧ್ಯಯನಗಳು ಹೇಳಿರುವ ಪ್ರಕಾರ ಇಂಡೋಲ್ ಮತ್ತು ಐಸೊಥಿಯೊಸೈನೇಟ್ ನಲ್ಲಿ ಕ್ಯಾನ್ಸರ್ ಬೆಳವಣಿಗೆ ತಡೆಯುವಂತಹ ಶಕ್ತಿ ಇದ್ದು, ಮೂತ್ರಕೋಶ, ಕರುಳು, ಸ್ತನ, ಯಕೃತ್, ಶ್ವಾಸಕೋಶ ಮತ್ತು ಹೊಟ್ಟೆಯ ಕ್ಯಾನ್ಸರ್ ತಡೆಯುವುದು. ಕ್ಯಾನ್ಸರ್ ಕೋಶಗಳ ನಿರ್ಮಾಣಕ್ಕೆ ಕಾರಣವಾಗುವಂತಹ ಡೀಸೆಟಿಲೇಸ್ ಎನ್ನುವ ಅಪಾಯಕಾರಿ ಕಿಣ್ವ ತಡೆಯಲು ಕ್ಯಾಬೇಜ್ ನಲ್ಲಿರುವಂತಹ ಸಲ್ಫರ್ ಅಂಶವು ನೆರವಾಗುವುದು.

ಹಸಿರು ಕ್ಯಾಬೇಜ್ ಗಿಂತಲೂ ಕೆಂಪು ಕ್ಯಾಬೇಜ್ ನಲ್ಲಿರುವಂತಹ ಆಂಥೋಸೈನಿನ್ ಎನ್ನುವ ಆಂಟಿಆಕ್ಸಿಡೆಂಟ್ ಅಂಶವು ಕ್ಯಾನ್ಸರ್ ಕೋಶಗಳು ದ್ವಿಗುಣವಾಗದಂತೆ ತಡೆಯುವುದು.

ಕ್ಯಾಬೇಜ್ ಜ್ಯೂಸ್ ಮಾಡಿಕೊಂಡು ಕುಡಿದರೆ ಅದರಿಂದ ಸ್ತನದ ಕ್ಯಾನ್ಸರ್ ನ ಕೋಶಗಳು ಬೆಳವಣಿಗೆ ಆಗುವುದನ್ನು ತಡೆಯಬಹುದು ಎಂದು ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯು ಹೇಳಿದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳು ಬೆಳವಣಿಗೆ ಆಗುವುದನ್ನು ಮತ್ತು ಅದರ ಬೆಳವಣಿಗೆಯನ್ನು ತಡೆಯುವುದು.

ಕ್ಯಾಬೇಜ್, ಬ್ರೊಕೋಲಿ ಮತ್ತು ಕೇಲ್ ನಲ್ಲಿ ಸಲ್ಫೊರಾಫೇನ್ ಎನ್ನುವ ಅಂಶವಿರುವ ಕಾರಣ ಇದು ಕರುಳಿನ ಕ್ಯಾನ್ಸರ್ ಅನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಇನ್ನೊಂದು ವರದಿಯು ಹೇಳಿದೆ. ಕ್ಯಾಬೇಜ್ ನಲ್ಲಿರುವಂತಹ ಐಸೊಥಿಯೊಸೈನೇಟ್‌ ಮತ್ತು ಕ್ಯಾರೊಟಿನಾಯ್ಡ್‌ಗಳು ಅಂಶಗಳಿಂದಾಗಿ ಅದು ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ಇದೆ ಎಂದು ನ್ಯಾಶನಲ್ ಕ್ಯಾನ್ಸರ್ ಇನ್ ಸ್ಟಿಟ್ಯೂಟ್ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯು ಹೇಳಿದೆ.

ಸಲಹೆ

ಸಲಹೆ

ಕ್ಯಾಬೇಜ್ ನಿಂದ ಹಲವು ವಿಧದ ಕ್ಯಾನ್ಸರ್ ತಡೆಯಬಹುದು ಎಂದು ಅಧ್ಯಯನಗಳು ಹೇಳಿದ್ದರೂ ನೀವು ಇತರ ಹಣ್ಣು ಹಾಗೂ ತರಕಾರಿಗಳನ್ನು ಕೂಡ ಸೇವಿಸುವುದು ಅಗತ್ಯವಾಗಿರುವುದು.

English summary

Cabbage Can Reduce The Risk Of Certain Cancers: Study

Here we are discussing about some studies says cabbage can reduce the risk of certain cancers. Cabbage, the humble vegetable is quite popular around the world due to its versatility that makes its way into cooked dishes, salads and coleslaws. It adds a different flavour and texture to a variety of dishes. But apart from the taste that it offers, cabbage is touted as one of those veggies that can help prevent chronic diseases including cancer.
X
Desktop Bottom Promotion