For Quick Alerts
ALLOW NOTIFICATIONS  
For Daily Alerts

ಇವುಗಳನ್ನು ತಿಂದ ನಂತರ ಎಂದಿಗೂ ನೀರು ಕುಡಿಯುವ ತಪ್ಪನ್ನು ಮಾಡಬೇಡಿ..!

|

ನಮ್ಮ ಆಹಾರ ಪದ್ಧತಿ ಹೇಗಿರುತ್ತದೆಯೋ ಅದೇ ನಮ್ಮ ಆರೋಗ್ಯವನ್ನು ನಿರ್ಧಿಸುತ್ತದೆ. ಆದರೆ ನಾವು ಅಂದುಕೊಂಡಿರುವ ಅದೆಷ್ಟೋ ತಪ್ಪಾದ ಆರೋಗ್ಯ ಮಾಹಿತಿಯಿಂದಾಗಿ ನಮಗೇ ತಿಳಿಯದಂತೇ ನಮ್ಮ ಆರೋಗ್ಯಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿದ್ದೇವೆ.

123
ಹೌದು, ಹೆಚ್ಚು ನೀರು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ನಿಮಗೆ ಗೊತ್ತೆ?, ಆಹಾರ ತಜ್ಞರ ಪ್ರಕಾರ ಇಂಥಾ ಆಹಾರಗಳನ್ನು ಸೇವಿಸಿದ ನಂತರ ನೀರು ಕುಡಿದರೆ ಗ್ಯಾಸ್ ಅಸಿಡಿಟಿ, ಅಜೀರ್ಣ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
1. ನೀರಿನ ಅಂಶ ಹೆಚ್ಚಿರುವ ತರಕಾರಿಗಳು

1. ನೀರಿನ ಅಂಶ ಹೆಚ್ಚಿರುವ ತರಕಾರಿಗಳು

ನೀರಿನ ಅಂಶ ಹೆಚ್ಚಿರುವ ತರಕಾರಿಗಳಲ್ಲಿ ಸೌತೆಕಾಯಿ, ಕಲ್ಲಂಗಡಿ ಇತ್ಯಾದಿ ಹಣ್ಣು/ತರಕಾರಿಗಳು ಸೇರಿವೆ. ಇವುಗಳಲ್ಲಿ ಉತ್ತಮ ಪ್ರಮಾಣದ ನೀರಿನ ಅಂಶ ಇರುತ್ತದೆ, ಅವುಗಳನ್ನು ತಿಂದ ನಂತರ ನೀರು ಕುಡಿಯುವುದನ್ನು ತಪ್ಪನ್ನು ಮಾಡಬೇಡಿ, ಏಕೆಂದರೆ ಇದು ವಾಯು ಸಮಸ್ಯೆಗೆ ಕಾರಣವಾಗಬಹುದು.

2. ಹಾಲು

2. ಹಾಲು

ಹಾಲು ಕುಡಿದ ತಕ್ಷಣ ನೀರು ಕುಡಿಯುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹೊಟ್ಟೆಯಲ್ಲಿ ಶೇಖರಣೆಗೊಂಡು ಮೂತ್ರದ ಮೂಲಕ ಹೊರಬರುತ್ತವೆ. ಇದರೊಂದಿಗೆ ಚಯಾಪಚಯ ಕ್ರಿಯೆಯೂ ನಿಧಾನವಾಗುತ್ತದೆ. ಇದರಿಂದ ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆ ಕಾಡಬಹುದು.

3. ಕಾಲಮಾನದಲ್ಲಿ ಬಿಡುವ ಹಣ್ಣುಗಳು

3. ಕಾಲಮಾನದಲ್ಲಿ ಬಿಡುವ ಹಣ್ಣುಗಳು

ಬೇಸಿಗೆ ಅಥವಾ ಚಳಿಗಾಲದ ಒಟ್ಟಾರೆ ಆಯಾ ಕಾಲಮಾನದಲ್ಲಿ ಬಿಡುವ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬಾರದು. ವಾಸ್ತವವಾಗಿ, ಈ ಹಣ್ಣುಗಳನ್ನು ಸೇವಿಸಿದ ನಂತರ ನೀರನ್ನು ಕುಡಿಯಬೇಕು ಎನಿಸುವುದಿಲ್ಲ ಹಾಗೂ ಕುಡಿದರೆ ಅದರಲ್ಲಿರುವ ಪೋಷಕಾಂಶಗಳು ನೇರವಾಗಿ ನಿಮ್ಮ ಹೊಟ್ಟೆಗೆ ಹೋಗುತ್ತವೆ, ಇದರಿಂದಾಗಿ ಅವುಗಳ ಪೌಷ್ಠಿಕಾಂಶಗಳು ದೇಹಕ್ಕೆ ಸರಿಯಾಗಿ ಲಭ್ಯವಾಗುವುದಿಲ್ಲ.

4. ಬಾಳೆಹಣ್ಣು

4. ಬಾಳೆಹಣ್ಣು

ಬಾಳೆಹಣ್ಣಿನೊಂದಿಗೆ ಹಾಲು ಸೇವಿಸುವುದು ಹೇಗೆ ಹಾನಿಕಾರಕವೋ, ಅದೇ ರೀತಿ ಬಾಳೆಹಣ್ಣಿನ ನಂತರ ನೀರು ಕುಡಿಯುವುದು ಸಹ ಹಾನಿಕಾರಕ. ನೀವು ಇದನ್ನು ಮಾಡಿದಾಗ, ಅದು ನಿಮ್ಮ ಹೊಟ್ಟೆಗೆ ಹೋಗುತ್ತದೆ ಮತ್ತು ವಿಷವಾಗಿ ಮಾರ್ಪಡುತ್ತದೆ. ಇದು ಹೊಟ್ಟೆಯ ಅಸಮಾಧಾನಕ್ಕೆ ಕಾರಣವಾಗಬಹುದು. ವಾಂತಿ ಭಾವನೆ ಬರಬಹುದು.

English summary

After eating this food Dont Drink water it effects on health in kannada

Here we are discussing about After eating this food Dont Drink water it effects on health in kannada. Read more.
Story first published: Wednesday, December 14, 2022, 21:44 [IST]
X
Desktop Bottom Promotion