For Quick Alerts
ALLOW NOTIFICATIONS  
For Daily Alerts

ಸ್ಥೂಲ ಕಾಯದ ಸಮಸ್ಯೆಯಿಂದ ಹೊರಬರುವುದು ಹೇಗೆ?

|

ಸ್ಥೂಲಕಾಯ ಅಥವಾ ಬೊಜ್ಜಿನಿಂದ ಮುಕ್ತಿ ಪಡೆಯುವುದು ಅಸಾಧ್ಯ ಎಂದು ತೋರುವಾಗ ಪಥ್ಯ ಮತ್ತು ವ್ಯಾಯಾಮಗಳಿಂದ ನಿಭಾಯಿಸಬಹುದು. ಸ್ಥೂಲಕಾಯದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಅಥವಾ ಬೊಜ್ಜನ್ನು ಕರಗಿಸಲು ಆರೋಗ್ಯಕರವಾದ ಆಹಾರ ಪದ್ದತಿ ಮತ್ತು ಸರಿಯಾದ ವ್ಯಾಯಾಮಗಳಿಂದ ಸಾಧ್ಯವಿದೆ ಎಂಬುದನ್ನು ಮರೆಯಬಾರದು.

ಹಂತಗಳು:

1. ಮೊದಲ ಹಂತವೆಂದರೆ, ನಿಮ್ಮ ಬೊಜ್ಜನ್ನು ಕರಗಿಸುವ ಸವಾಲಿನಿಂದ ಭಯಬೀಳಬೇಡಿ. ದೊಡ್ಡ ಪರ್ವತಶ್ರೇಣಿಯನ್ನು ಹತ್ತಬೇಕಾದರೆ ಹೆದರುವ ನೋಟ ಎಲ್ಲರಿಗೂ ಎದುರಾಗುತ್ತದೆ. ಆದರೆ ನಿಮ್ಮ ಗುರಿ ಕಷ್ಟ ಸಾಧ್ಯವಾದರೂ ಸಾಧಿಸಬಲ್ಲ ತಾಕತ್ತಿದೆ ಎಂಬ ಧೈರ್ಯ ಮತ್ತು ಧನಾತ್ಮಕ ಯೋಚನೆ ನಿಮಗೆ ಯಶಸ್ಸು ತಂದು ಕೊಡಬಲ್ಲದು.

How to Diet and Exercise With Obesity

2. ದೊಡ್ಡ ಹಂತಗಳನ್ನು ಏರುವ ಮುನ್ನ ಸಣ್ಣ ಸಣ್ಣ ಹಂತಗಳನ್ನು ಮೊದಲು ದಾಟಿ. ಆಳವಾದ ಕೊನೆಯನ್ನು ತಲುಪಬೇಕಾದ ಪ್ರಲೋಭನೆ ಉಂಟಾದರೂ ಮೊದಲ ಹಂತದಿಂದಲೇ ಎಲ್ಲವೂ ಪ್ರಾರಂಭಗೊಳ್ಳಬೇಕು.

3. ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿ. ಇದು ಹಳೆಯದಾದ ಸವೆದ ಮಾತಾದರೂ ಡ್ರೈವಿಂಗ್ ನ ಬದಲು ನಡೆಯುವುದು ಅಥವಾ ಎಲಿವೇಟರ್ ಬದಲಿಗೆ ಮೆಟ್ಟಿಲು ಹತ್ತುವುದು ಮುಂತಾದವುಗಳಿಂದ ದೊಡ್ಡ ಮಟ್ಟದ ಪರಿಣಾಮವಿದೆ.

4. ಪಥ್ಯವನ್ನು ಹಾಳು ಮಾಡಬೇಡಿ. ಇದು ಅನಾರೋಗ್ಯಕರ ಮತ್ತು ಅಪರೂಪಕ್ಕೆ ಮಾತ್ರ ಪರಿಣಾಮ ಬೀರುತ್ತದೆ.

5. ನಿಮ್ಮ ಕಾರ್ಯ ಚಟುವಟಿಕೆಗಳನ್ನು ಮಾಡುವುದರ ಜೊತೆಗೆ ನಿಧಾನವಾಗಿ ನೀವು ಸೇರಿಸುವ ಆಹಾರದ ಪ್ರಮಾಣವನ್ನು ಇಳಿಸುತ್ತ ಬನ್ನಿ.

6. ನಿಮಗೆ ಇಷ್ಟವಾದ ಆರೋಗ್ಯಕರ ಆಹಾರಗಳನ್ನು ಸೇವಿಸಿ. ಹಣ್ಣು-ಹಂಪಲುಗಳು ಸಿಹಿ ಪದಾರ್ಥಗಳಿಗೆ ಪರ್ಯಾಯ ಆಹಾರಗಳು.

ಸಲಹೆಗಳು:

ವ್ಯಾಯಾಮದ ಉಪಯೋಗವನ್ನು ಮರೆಯಬೇಡಿ. ಕೆಲವೊಮ್ಮೆ ವ್ಯಾಯಾಮದಿಂದ ಬಹಳವೇ ಸುಸ್ತಾದಂತೆ ಎನಿಸುವುದು ಮತ್ತು ಯಾವ ಪ್ರಯೋಜನವೂ ಇಲ್ಲದಂತೆ ಕಾಣುವುದು. ಆದರೆ ವ್ಯಾಯಾಮದಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಮತ್ತು ಚಯಾಪಚಯ ಕ್ರಿಯೆಗಳ ವೇಗ ಹೆಚ್ಚುತ್ತದೆ ಮತ್ತು ವ್ಯಾಯಾಮ ನಿಲ್ಲಿಸಿದ ನಂತರ ದೇಹದಲ್ಲಿ ಹೆಚ್ಚಿರುವ ಕ್ಯಾಲೋರಿಗಳು ಕರಗುತ್ತವೆ. ಕೇವಲ ವ್ಯಾಯಾಮದಿಂದ ಮಾತ್ರವಲ್ಲ ಪಥ್ಯದಿಂದಲೂ ಆರೋಗ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಇದೇ ರೀತಿ, ನೀವು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತ ಹೋದರೆ ನಿಮ್ಮ ಹೊಟ್ಟೆ ಕಡಿಮೆ ಪ್ರಮಾಣದ ಆಹಾರಕ್ಕೆ ಹೊಂದಿಕೊಂಡು ಗಾತ್ರವನ್ನು ಚಿಕ್ಕದಾಗಿಸಿಕೊಳ್ಳುತ್ತದೆ. ಇದರಿಂದಾಗಿ ನಿಮಗೆ ಕಡಿಮೆ ಹಸಿವಾದಂತೆ ಭಾಸವಾಗುತ್ತದೆ ಮತ್ತು ಹೊಟ್ಟೆ ಬೇಗ ತುಂಬಿದಂತೆನಿಸುತ್ತದೆ.

ಎಚ್ಚರಿಕೆಗಳು:

ಮುಖ್ಯವಾಗಿ ಇದು ಜೀವನ ಶೈಲಿಯ ಬದಲಾವಣೆ ಎಂಬುದನ್ನು ಮರೆಯಬಾರದು. ಏನೇ ಆದರೂ, ನಿಮ್ಮ ಹಳೆಯ ದೈನದಿಂನ ಚಟುವಟಿಕೆಗಳಿಗೆ ಮರಳದಂತೆ ನೋಡಿಕೊಳ್ಳಿ.

ಈ ಪ್ರಕ್ರಿಯೆ ಕೆಲವು ತಿಂಗಳು ತೆಗೆದುಕೊಳ್ಳಬಹುದು. ನಿಮ್ಮ ಗೆಳೆಯರು ಮತ್ತು ಕುಟುಂಭಸ್ಥರು ನಿಮ್ಮ ಹೊಸ ಚರ್ಯೆಯ ಬಗ್ಗೆ ವಿಶ್ಲೇಷಿಸಬಹುದು. ಆದರೆ ನೀವು ಸರಿಯಾದ ದೈಹಿಕ ಸಾಮರ್ಥ್ಯ ಪಡೆದಿದ್ದೀರಿ ಎಂಬ ನಂಬಿಕೆ ಬರುವವರೆಗೆ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ.

ಅತಿಯಾದ ಒತ್ತಡ ಹಾಕಿ ಕೆಲಸ ಮಾಡಬೇಡಿ. ಹಿತವಾದ ಸ್ಥಿತಿಯಲ್ಲಿ ನಿಮ್ಮ ಪ್ರಯತ್ನ ಸಾಗಲಿ.

English summary

How to Diet and Exercise With Obesity | ಸ್ಥೂಲ ಕಾಯದ ಸಮಸ್ಯೆಯಿಂದ ಹೊರಬರುವುದು ಹೇಗೆ?

Managing to successfully diet and exercise when Obese can seem like an impossibility. However, it must be remembered that the only way to escape from the problems and restraints of Obesity is to tackle it head on with a healthy eating plan and good exercise regime.
Story first published: Wednesday, December 26, 2012, 9:27 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more