Just In
- 16 hrs ago
Horoscope Today 21 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 22 hrs ago
ಸತ್ತು ಸ್ವರ್ಗಕ್ಕೆ ಹೋಗಿ ಮತ್ತೆ ಬದುಕಿ ಬಂದ ಪೆರ್ರಿ ಎಂಬ ವ್ಯಕ್ತಿಯ ಕತೆ, ಅಚ್ಚರಿಯಾದರೂ ಇದು ಸತ್ಯ
- 24 hrs ago
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಮೆಡಿಟೇರಿಯನ್ ಡಯಟ್ ಪಾಲಿಸಿದರೆ ಒಳ್ಳೆಯದು, ಏಕೆ?
- 1 day ago
ಸಕ್ಕರೆ ಹಾಕಿದ ಪಾನೀಯ ಕುಡಿದರೆ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುವುದೇ?
Don't Miss
- Technology
ಇನ್ಫಿನಿಕ್ಸ್ ನೋಟ್ 12i ಲಾಂಚ್ ಡೇಟ್ ಬಹಿರಂಗ! ಫೀಚರ್ಸ್ ಹೇಗಿದೆ?
- News
ಲೈಂಗಿಕ ಕಿರುಕುಳ ಪ್ರಕರಣ; ಕೇಂದ್ರ ಸರ್ಕಾರದ ಭರವಸೆಯ ಮೇರೆಗೆ ಧರಣಿ ಕೈ ಬಿಟ್ಟ ಕುಸ್ತಿಪಟುಗಳು
- Movies
ದರ್ಶನ್ಗೆ ಈ ನಟಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ: ಅದಕ್ಕೆ ಕಾರಣ ಇದೇನೆ!
- Sports
ಟಾಸ್ ಗೆದ್ದು ಯಾವುದು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನೇ ಮರೆತ ರೋಹಿತ್!: ತಮಾಷೆಯ ವಿಡಿಯೋ
- Finance
Union Budget: ಕೇಂದ್ರ ಬಜೆಟ್ ಸಂಪೂರ್ಣ ವಿವರ ಮೊಬೈಲ್ನಲ್ಲಿ ಪಡೆಯುವುದು ಹೇಗೆ?
- Automobiles
ಸಾಮಾನ್ಯ ಜನರಲ್ಲದೇ ಸೆಲೆಬ್ರಿಟಿಗಳು ಕೂಡ ಟೊಯೊಟಾ ಇನೋವಾ ಕಾರನ್ನು ಇಷ್ಟಪಡಲು ಕಾರಣಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೇಹದಲ್ಲಿ ಮೆಗ್ನೇಸಿಯಂ ಕಡಿಮೆಯಾದ್ರೆ ಹೃದ್ರೋಗ ಖಚಿತ..! ಈ ಹತ್ತು ಆಹಾರಗಳು ನಿಮ್ಮ ಡಯಟ್‌ನಲ್ಲಿರಲಿ..
ನೀವು ಇದುವರೆಗೂ ಹೆಸರು ಕೇಳಿರದಂತಹ ಕೆಲವೊಂದು ಖಾಯಿಲೆಗಳಿವೆ. ಅದರ ಎಫೆಕ್ಟ್ ಏನಂತ ಗೊತ್ತಾಗೋದು ಅದು ನಮಗೆ ಬಂದಾಗ ಮಾತ್ರ. ಅಂತಹುದೆ ಒಂದು ಸಮಸ್ಯೆ ಹೈಪೋಮ್ಯಾಗ್ನೆಸೆಮಿಯಾ ಅಂತ. ಇದು ದೇಹದಲ್ಲಿ ಮೆಗ್ನೇಷಿಯಂ ಕೊರತೆಯಾದಾಗ ಬರುವಂತಹ ಸಮಸ್ಯೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯಿಸಿದರೆ ಮಾತ್ರ ಹೃದಯಕ್ಕೆ ತೀವ್ರವಾದ ಹಾನಿಯನ್ನುಂಟು ಮಾಡುತ್ತೆ. ಈ ರೋಗದ ಲಕ್ಷಣಗಳು ಮತ್ತಿ ಮೆಗ್ನೇಷಿಯಂ ಹೆಚ್ಚಳಕ್ಕೆ ಯಾವ ಆಹಾರ ಸೇವಿಸಬೇಕು ಎನ್ನುವ ಮಾಹಿತಿ ಈ ಕೆಳಗಿದೆ.
ಮೆಗ್ನೀಷಿಯಂ ಮಟ್ಟ ಕಡಿಮೆಯಾಗಿರುವುದರ ಲಕ್ಷಣ
ಈ ಸಮಸ್ಯೆಯನ್ನು ಕೆಲವು ಚಿಹ್ನೆಗಳು ಮತ್ತು ರೋಗಲಕ್ಷಣಗಳಿಂದ ಗುರುತಿಸಬಹುದು. ಅವೆಂದರೆ,
* ಸ್ನಾಯು ಸೆಳೆತ
* ಈಗಾಗಲೇ ಇರುವ ಆರೋಗ್ಯ ಸಮಸ್ಯೆ ಹೆಚ್ಚಾಗುವುದು
* ಆಸ್ಟಿಯೊಪೊರೋಸಿಸ್
* ಆಯಾಸ ಮತ್ತು ಸ್ನಾಯು ದೌರ್ಬಲ್ಯ
* ರಕ್ತದೊತ್ತಡದಲ್ಲಿ ಇಳಿಕೆ, ಅಥವಾ ಅಧಿಕ ರಕ್ತದೊತ್ತಡ
* ಉಬ್ಬಸ
* ಅನಿಯಮಿತ ಹೃದಯ ಬಡಿತ
ನಿಮ್ಮ ದೇಹದಲ್ಲಿ ಮೆಗ್ನೀಸಿಯಮ್ ಮಟ್ಟವನ್ನು ಸುಧಾರಿಸಲು 10 ಆಹಾರಗಳು
ನಿಮ್ಮ ರಕ್ತದಲ್ಲಿನ ಮೆಗ್ನೀಸಿಯಮ್ ಮಟ್ಟವು ಕಡಿಮೆಯಾಗುತ್ತಿದೆ ಎಂದೆನಿಸಿದರೆ, ನಿಮ್ಮ ದೈನಂದಿನ ಡಯಟ್‌ನಲ್ಲಿ ಈ 10 ಆಹಾರಗಳನ್ನು ಸೇರಿಸಿ. ಇವು ನಿಮ್ಮ ಮೆಗ್ನೀಸಿಯಮ್ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

ಬಾದಾಮಿ
ಬೀಜಗಳು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿವೆ. ಒಂದು ಹಿಡಿ ಬಾದಾಮಿಯು ನಿಮ್ಮ ಹೃದಯಕ್ಕೆ ಹೆಚಚ್ಚು ಪ್ರಯೋಜನ ನೀಡುತ್ತದೆ, ಆರೋಗ್ಯಕರ ರಕ್ತನಾಳಗಳನ್ನು ನಿರ್ವಹಿಸುವ ಮೂಲಕ ಮತ್ತು ರಕ್ತದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುವ ಮೂಲಕ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ರಕ್ತ ಸಂಚಾರ ಸುಧಾರಿಸುತ್ತದೆ. ರಾತ್ರಿ 8-10 ಬಾದಾಮಿಯನ್ನು ನೆನೆಸಿ ಮರುದಿನ ಬೆಳಿಗ್ಗೆ ಸೇವಿಸಿ. 1 ಔನ್ಸ್ ಬಾದಾಮಿ ನಿಮಗೆ 80 ಮಿಗ್ರಾಂ ಮೆಗ್ನೀಸಿಯಮ್ ಒದಗಿಸುತ್ತದೆ.

ಆವಕಾಡೊ
ಆವಕಾಡೊ ಅಥವಾ ಬಟರ್‌ಫ್ರೂಟ್‌ನಲ್ಲಿ ಆಂಟಿಆಕ್ಸಿಡೆಂಟ್ಸ್ ಸಮೃದ್ಧವಾಗಿವೆ ಮತ್ತು ನಿಮ್ಮ ಹೃದಯದ ಆರೋಗ್ಯಕ್ಕೆ ಉತ್ತಮವಾದ ಅಗತ್ಯ ಕೊಬ್ಬನ್ನು ನಿಮ್ಮ ದೇಹಕ್ಕೆ ಒದಗಿಸುತ್ತವೆ. ಇದು ಹೃದಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ, ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುತ್ತದೆ. ಒಂದು ಕಪ್ ಆವಕಾಡೊ ನಿಮ್ಮ ದೇಹಕ್ಕೆ 44 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಒದಗಿಸುತ್ತದೆ.

ಬಾಳೆಹಣ್ಣುಗಳು
ಬಾಳೆಹಣ್ಣುಗಳು ಪೊಟ್ಯಾಸಿಯಮ್ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಆದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಕೂಡ ಇದೆ. ಮೆಗ್ನೀಸಿಯಮ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ಹೃದ್ರೋಗ ಮತ್ತು ರಕ್ತದೊತ್ತಡದ ಹೆಚ್ಚಳವನ್ನೂ ನಿಯಂತ್ರಿಸುತ್ತದೆ. ಒಂದು ದೊಡ್ಡ ಬಾಳೆಹಣ್ಣಿನಲ್ಲಿ 37 ಮಿಗ್ರಾಂ ಮೆಗ್ನೀಸಿಯಮ್ ಇರುತ್ತದೆ.

ಆಲೂಗಡ್ಡೆ
ನೀವು ಒಂದು ಮಧ್ಯಮ ಗಾತ್ರದ ಬೇಯಿಸಿದ ಆಲೂಗಡ್ಡೆಯನ್ನು ಸೇವಿಸಿದರೆ ಅದು ನಿಮಗೆ ಸುಮಾರು 28 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಒದಗಿಸುತ್ತದೆ. ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದ ಮೆಗ್ನೀಸಿಯಮ್ ಇ ನಿಮ್ಮ ಹೃದಯವು ಆರೋಗ್ಯಕರವಾಗಿರಲು ಮತ್ತು ಹೃದಯರಕ್ತನಾಳದ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಅಕ್ಕಿ
ಆರೋಗ್ಯ ಸಮಸ್ಯೆಗಳಿದ್ದಾಗ ಬಿಳಿ ಅಕ್ಕಿಗಿಂತ ಬ್ರೌನ್ ರೈಸ್ ಉತ್ತಮವೆಂದು ಹೇಳಲಾಗುತ್ತದೆ. ಈ ಬ್ರೌನ್ ರೈಸ್ ಹೆಚ್ಚು ಪೌಷ್ಟಿಕಾಂಶದ ಧಾನ್ಯವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಉತ್ತಮ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೋಯಾ ಹಾಲು
ಮೆಗ್ನೀಸಿಯಮ್ ಹೃದಯದ ಎಡ ಭಾಗದಲ್ಲಿ ಇರುವ ಪ್ರಮುಖ ಖನಿಜಗಳಲ್ಲಿ ಒಂದಾಗಿದೆ. ಇದು ಸ್ನಾಯು ಕೋಶಗಳಿಗೆ ಹೋಗುವ ಕ್ಯಾಲ್ಸಿಯಂ ಪ್ರಮಾಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಮೆಗ್ನೀಸಿಯಮ್‌ನ ತೀವ್ರ ಕೊರತೆಯಿರುವಾಗ, ಕ್ಯಾಲ್ಸಿಯಂ ನಿಯಂತ್ರಣವಿರದು, ಇದು ಹೃದಯಾಘಾತಕ್ಕೆ ಕಾರಣವಾಗುವ ಸ್ನಾಯು ಕೋಶಗಳ ಹೈಪರ್ ಸಂಕೋಚನಕ್ಕೆ ಕಾರಣವಾಗಬಹುದು. ಒಂದು ಕಪ್ ಸೋಯಾಮಿಲ್ಕ್ ಕುಡಿಯುವುದರಿಂದ ನಿಮ್ಮ ದೇಹಕ್ಕೆ 61 ಮಿಗ್ರಾಂ ಮೆಗ್ನೀಸಿಯಮ್ ದೊರೆಯುತ್ತದೆ.

ಪಾಲಕ್ ಸೊಪ್ಪು
ಆರೋಗ್ಯವಂತರಾಗಬೇಕೆಂದರೆ ನಿಮ್ಮ ಆಹಾರದಲ್ಲಿ ಸೊಪ್ಪು ಇರಲೇಬೇಕೆನ್ನುತ್ತಾರೆ. ಅದರಲ್ಲೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಪಾಲಕ್ ಸೊಪ್ಪಿನ ಸೇವನೆ ಅವಶ್ಯಕ. ಹಸಿರು ಎಲೆಗಳ ತರಕಾರಿಯಾದ ಒಂದು ಕಪ್ ಪಾಲಕ್ 78 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.

ಮೊಸರು
ಹಲವಾರು ಅಂಶಗಳು ಒಟ್ಟಾಗಿ ಮೆಗ್ನೀಸಿಯಮ್ ಹೀರಿಕೊಳ್ಳುವ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತವೆ. ಅಂದರೆ ಮದ್ಯದ ಅತಿಯಾದ ಸೇವನೆ, ಅತಿಸಾರ, ವಾಕರಿಕೆ ಮತ್ತು ವಾಂತಿ. ಇವೆಲ್ಲವೂ ನಿಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳ ಕೊರತೆಯನ್ನು ಉಂಟುಮಾಡಬಹುದು. ಮೆಗ್ನೀಸಿಯಮ್ ರಕ್ತದೊತ್ತಡ ನಿಯಂತ್ರಣ ಮತ್ತು ಉತ್ತಮ ಹೃದಯ ಆರೋಗ್ಯಕ್ಕೆ ಸಂಬಂಧಿಸಿದೆ. 8 ಔನ್ಸ್ ಕಡಿಮೆ ಕೊಬ್ಬಿನ, ಸರಳ ಮೊಸರು ತಿನ್ನುವುದರಿಂದ ನಿಮ್ಮ ದೇಹಕ್ಕೆ 42 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಒದಗಿಸಬಹುದು.

ಕಿಡ್ನಿ ಬೀನ್ಸ್
ದೇಹದಲ್ಲಿ ಮೆಗ್ನೇಷಿಯಂ ಕೊರತೆಯು ಅಪಧಮನಿಗಳಲ್ಲಿನ ಉರಿಯೂತ, ಪಾರ್ಶ್ವವಾಯು, ಇತ್ಯಾದಿಗಳಂತಹ ದೀರ್ಘಕಾಲದ ಹೃದಯದ ಸ್ಥಿತಿಗಳಿಗೆ ದಾರಿ ಮಾಡಿಕೊಡುತ್ತದೆ. ಕಿಡ್ನಿ ಬೀನ್ಸ್ ಅತ್ಯಂತ ಪೌಷ್ಟಿಕ ಆಹಾರವಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳಿಂದ ತುಂಬಿರುತ್ತದೆ. ಅಧ್ಯಯನಗಳ ಪ್ರಕಾರ, ಒಂದು ಕಪ್ ಬೇಯಿಸಿದ ಕಿಡ್ನಿ ಬೀನ್ಸ್ ದೇಹಕ್ಕೆ 74.3 ಗ್ರಾಂ ಮೆಗ್ನೀಸಿಯಮ್ ಅನ್ನು ಒದಗಿಸುತ್ತದೆ.
ಹೋಲ್ ವೀಟ್ ಬ್ರೆಡ್
ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಬಿಳಿ ಬ್ರೆಡ್ ಬದಲು ಗೋಧಿ ಬ್ರೆಡ್ ಆರೋಗ್ಯಕ್ಕೆ ಉತ್ತಮ, ಮೂತ್ರಪಿಂಡಗಳ ಮೂಲಕ ಹೆಚ್ಚುವರಿ ಪ್ರಮಾಣವನ್ನು ಹೊರಹಾಕುವ ಮೊದಲು ದೇಹವು ಯಾವಾಗಲೂ ನೀವು ಸೇವಿಸುವ ಆಹಾರದಿಂದ ಅಗತ್ಯವಾದ ಖನಿಜಗಳನ್ನು ಹೀರಿಕೊಳ್ಳುತ್ತದೆ. ನೀವು ಸೇವಿಸುವ ಆಹಾರ ಅನಾರೋಗ್ಯಕರವಾಗಿದ್ದಾಗ ಮತ್ತು ಮೆಗ್ನೀಸಿಯಮ್ ಮಟ್ಟ ಕಡಿಮೆಯಾಗಿರುವಾಗ ಖನಿಜಗಳ ಹೀರಿಕೊಳ್ಳುವಿಕೆಯು ಇಳಿಕೆಯಾಗುತ್ತದೆ. ಬ್ರೆಡ್ ಮೆಗ್ನೀಸಿಯಮ್‌ನ ಉತ್ತಮ ಮೂಲವಾಗಿದ್ದು ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ದಿನಕ್ಕೆ ಕೇವಲ ಎರಡು ಹೋಳು ಗೋಧಿ ಬ್ರೆಡ್ ಅನ್ನು ಸೇವಿಸುವುದರಿಂದ 46 ಮಿಗ್ರಾಂ ಮೆಗ್ನೀಸಿಯಮ್ ದೊರೆಯುತ್ತದೆ.