For Quick Alerts
ALLOW NOTIFICATIONS  
For Daily Alerts

ಚಿಕ್ಕ ಪ್ರಾಯದಲ್ಲೇ ಕಾಡುತ್ತಿರುವ ಹೃದಯಾಘಾತ: ಹೃದಯವನ್ನು ಜೋಪಾನ ಮಾಡಲು ಏನು ಮಾಡಬೇಕು ಗೊತ್ತಾ?

|

ಹೃದಯ...ಮನುಷ್ಯನ ದೇಹದ ಪ್ರಮುಖ ಅಂಗ. ಮನುಷ್ಯ ಅನಾರೋಗ್ಯ ಪೀಡಿತ ಹೃದಯವನ್ನು ಹೊಂದಿದರೆ ಆತನ ಜೀವನ ಮುಂದಿನ ದಿನಗಳಲ್ಲಿ ಕಷ್ಟಕರವಾಗಲಿದೆ. ಅನೇಕ ಕೇಸ್ ಗಳಲ್ಲಿ ಸಾವು ಕೂಡ ಸಂಭವಿಸುತ್ತದೆ. ನಾವು ಬದುಕಿದ್ದೇವೆ ಎಂದರೆ ಅದಕ್ಕೆ ಹೃದಯ ಕಾರಣ. ದೇಹದ ಇತರ ಭಾಗಗಳನ್ನು ಚೆನ್ನಾಗಿ ಇಡುವ ಕೆಲಸ ಕೂಡ ಹೃದಯದ್ದೇ ಆಗಿದೆ. ದೇಹದ ಇತರ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಿ ಕೊಡುವ ಕೆಲಸವನ್ನು ಹೃದಯ ಮಾಡುತ್ತದೆ. ಈ ಮೂಲಕ ಮನುಷ್ಯನನ್ನು ಆರೋಗ್ಯವಾಗಿ ಹೃದಯ ಇಡುತ್ತದೆ. ಈ ಮೂಲಕ ಹೃದಯವು ದೇಹದ ಇತರೆ ಭಾಗಗಳಿಗೆ ಆಮ್ಲಜನಕ ಹಾಗೂ ನ್ಯೂಟ್ರಿಷಿಯನ್ ಅನ್ನು ಒದಗಿಸುತ್ತದೆ.

healthy heart

ಅಲ್ಲದೇ ಹೃದಯವು ಪಂಪಿಂಗ್ ಮೂಲಕ ದೇಹದ ಭಾಗಗಳಲ್ಲಿರುವ ಇಂಗಾಲದ ಡೈ ಆಕ್ಸೈಡ್ ಮತ್ತು ವಿಷಕಾರಿ ಅಂಶವನ್ನು ಹೊರಸೂಸುವ ಕೆಲಸ ಮಾಡುತ್ತದೆ. ಹೀಗಾಗಿ ಹೃದಯ ಅನ್ನೋದು ಎಲ್ಲರಿಗೂ ಮುಖ್ಯ. ಹೃದಯ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಮನುಷ್ಯ ಜೀವನ ಅಂತ್ಯವಾದಂತೆ. ಇಂದಿನ ದಿನಗಳಲ್ಲಿ ಹೃದಯ ಕಾರ್ಯನಿರ್ವಹಿಸೋದು ನಿಲ್ಲಿಸೋದು ಅಥವಾ ಹೃದಯ ಬಡಿತ ನಿಲ್ಲುವ ಘಟನೆಗಳು ನಡೆಯುತ್ತಲೇ ಇದೆ. ಹೃದಯಾಘಾತ ಹೃದಯ ಸ್ಥಂಭನದಂತಹ ಘಟನೆಗಳು ಹೆಚ್ಚುತ್ತಿದೆ.

ಭಾರತದಲ್ಲಿ ಶೇ.25ರಷ್ಟು ಯುವಕರಲ್ಲಿ ಅಂದರೆ 40 ವರ್ಷ ಕೆಳಗಿನ ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹಾಗಾದರೆ ಹೃದ್ರೋಗ ಸಂಭವಿಸಲು ಕಾರಣವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಹೃದಯಾಘಾತ ಎಂದರೇನು?

ಹೃದಯಾಘಾತ ಎಂದರೇನು?

ನಮ್ಮ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಯು ಕೊಲೆಸ್ಟ್ರಾಲ್ ಪ್ಲೇಕ್ ನ ಶೇಖರಣೆಯಿಂದ ಅಥವಾ ಕೆಲವು ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯಕ್ಕೆ ರಕ್ತ ಹರಿವೆಕೆ ನಿಂತು ಹೋಗಿ ಹೃದಯಾಘಾತ ಸಂಭವಿಸುತ್ತದೆ. ಈ ರೀತಿ ರಕ್ತ ಹೆಪ್ಪು ಕಟ್ಟುವುದು ಅಥವಾ ರಕ್ತ ಹರಿವಿಕೆ ನಿಲ್ಲುವುದರಿಂದ ಹೃದಯಕ್ಕೆ ಬೇಕಾದ ರಕ್ತ ಸಿಗದೆ ಹೃದಯವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತದೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ. ಇನ್ನು ಈ ಹೃದ್ರೋಗಕ್ಕೆ ಕುಟುಂಬದ ಇತಿಹಾಸ, ಕಿರಿದಾದ ಹೃದಯ ನಾಳಗಳು, ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ , ಕಡಿಮೆ ಮಟ್ಟದ ಉತ್ತಮ ಕೊಲೆಸ್ಟ್ರಾಲ್ , ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು , ನಿಷ್ಕ್ರಿಯತೆ, ಕಳಪೆ ಆಹಾರ ಆಯ್ಕೆಗಳು ಮತ್ತು ಧೂಮಪಾನದಿಂದ ಸಂಭವಿಸಬಹುದು. ನಮ್ಮ ಜೀವನ ಪದ್ದತಿ ಹಾಗೂ ಆಹಾರ ಪದ್ದತಿ ಚೆನ್ನಾಗಿದ್ದರೆ ನಾವು ಹೃದ್ರೋಗ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಹೃದಯಾಘಾತದ ಲಕ್ಷಣಗಳು!

ಹೃದಯಾಘಾತದ ಲಕ್ಷಣಗಳು!

ಹೃದಯಾಘಾತವಾದಾಗ ಎಡ ಭಾಗದ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಆದರೆ ಎಲ್ಲರಿಗೆ ಈ ರೀತಿ ಆಗಬೇಕಾಗಿಲ್ಲ, ಕೆಲವರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ, ಭುಜಗಳಲ್ಲಿ ನೋವು ಬರಬಹುದು. ಈ ರೀತಿಯ ನೋವು ಕೆಲ ದಿನಗಳ ಮುಂಚೆಯೇ ಕಂಡು ಬರುಬಹುದು. ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಸಹ ದೇಹ ಬೆವರಬಹುದು. ಉಸಿರಾಡಲು ಕಷ್ಟವಾಗುವುದು, ವಾಕರಿಕೆ, ತಲೆ ಸುತ್ತುವುದು, ವೇಗವಾದ ಎದೆ ಬಡಿತವೂ ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ. ಈ ರೀತಿ ಸಮಸ್ಯೆಗಳು ಹತ್ತು ನಿಮಿಷಗಳಿಗೂ ಹೆಚ್ಚು ಕಾಣಿಸಿಕೊಂಡಲ್ಲಿ ನಿರ್ಲಕ್ಷ್ಯ ವಹಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಆರೋಗ್ಯಕರ ಹೃದಯಕ್ಕಾಗಿ ಈ ಟಿಪ್ಸ್ ಅನ್ನು ಪಾಲಿಸಿ!

ಆರೋಗ್ಯಕರ ಹೃದಯಕ್ಕಾಗಿ ಈ ಟಿಪ್ಸ್ ಅನ್ನು ಪಾಲಿಸಿ!

ಈಗಾಗಲೇ ಹೇಳಿದ ಹಾಗೇ ಹೃದ್ರೋಗಕ್ಕೆ ನಮ್ಮ ಜೀವನ ಪದ್ದತಿ ಹಾಗೂ ಆರೋಗ್ಯಪದ್ದತಿಯೇ ಮುಖ್ಯ ಕಾರಣವಾಗಿರುತ್ತದೆ. ಹೀಗಾಗಿ ನಾವು ಉತ್ತಮ ಆಹಾರ ಪದ್ದತಿ ಹಾಗೂ ಜೀವನ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

ಉತ್ತಮ ಆಹಾರ!

ಉತ್ತಮ ಆಹಾರ!

ನಿತ್ಯವು ಉತ್ತಮ ಆಹಾರ ಸೇವಿಸಿದರೆ ನಾವು ಹೃದ್ರೋಗ ಬಿಡಿ ಎಲ್ಲ ರೋಗದಿಂದ ಮುಕ್ತರಾಗಬಹುದು. ಹೌದು, ನೀವು ತಿನ್ನುವ ಆಹಾರವು ನಿಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ ಏಕೆಂದರೆ ಇದು ಅಂಗಗಳ ದೈನಂದಿನ ಕಾರ್ಯನಿರ್ವಹಣೆಗೆ ಅಗತ್ಯವಾದ ಇಂಧನವನ್ನು ಒದಗಿಸುತ್ತದೆ. ಹೀಗಾಗಿ ಹೃದಯವನ್ನು ಆರೋಗ್ಯವಾಗಿಡುವ ಆಹಾರವನ್ನು ನಾವು ನಿತ್ಯವು ಸೇವಿಸಿದರೆ ಉತ್ತಮ. ತಾಜಾ ಹಣ್ಣುಗಳನ್ನು ಸೇವಿಸಬೇಕು. ಕಾರ್ಬೋಹೈಡ್ರೇಟ್ ಯುಕ್ತ ಆಹಾರಗಳ ಸೇವನೆಯಿಂದ ಹೃದಯವನ್ನು ಆರೋಗ್ಯವಾಗಿ ಇಡಬಹುದಾಗಿದೆ. ಇನ್ನು ಹಸಿರು ತರಕಾರಿಗಳನ್ನು ಸೇವನೆ ಮಾಡುವುದು ಉತ್ತಮ. ಇನ್ನು ಸಂಸ್ಕರಿಸಿದ, ಜಂಕ್ ಫುಡ್ ಗಳಿಂದ ದೂರ ಇರುವುದು ಒಳ್ಳೆಯದು.

ದಿನನಿತ್ಯ ವ್ಯಾಯಾಮ!

ದಿನನಿತ್ಯ ವ್ಯಾಯಾಮ!

ದಿನ ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ಆಕಾರವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ ಮಾತ್ರವಲ್ಲ ನಿಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಹೌದು ದಿನ ನಿತ್ಯ ಸುಮಾರು 30 ನಿಮಿಷ ಅಥವಾ ವಾರದಲ್ಲಿ ಒಟ್ಟು 150 ನಿಮಿಷಗಳ ವ್ಯಾಯಾಮವು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ರಕ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ವ್ಯಾಯಾಮದ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

ಮದ್ಯಪಾನ ಬಿಟ್ಟುಬಿಡಿ!

ಮದ್ಯಪಾನ ಬಿಟ್ಟುಬಿಡಿ!

ಹೃದಯಾಘಾತದ ಪ್ರಾಥಮಿಕ ಅಪಾಯಕಾರಿ ಅಂಶಗಳಲ್ಲಿ ಮದ್ಯಪಾನ ಕೂಡ ಒಂದು. ಹೃದಯಾಘಾತ ಸಂಭವಿಸಿದ ಅನೇಕರ ಪೈಕಿ ಮದ್ಯಪಾನದಂತಹ ಜೀವನಶೈಲಿ ಹೊಂದಿದವರಿಗೆ ಅಪಾಯ ಜಾಸ್ತಿ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಹೆಚ್ಚು ಆಲ್ಕೋಹಾಲ್ ಕುಡಿಯುವುದು ಹೃದಯಕ್ಕೆ ಎಂದಿಗೂ ಒಳ್ಳೆಯದಲ್ಲ ಮತ್ತು ಕಾಲಾನಂತರದಲ್ಲಿ ಅದು ನಿಮ್ಮ ಹೃದಯವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ, ಹೃದಯಾಘಾತವನ್ನು ತಡೆಗಟ್ಟಲು, ಆಲ್ಕೊಹಾಲ್ ಸೇವನೆಯನ್ನು ತ್ಯಜಿಸಬೇಕು. ಮದ್ಯಪಾನ ಬಿಡುವ ಮೂಲಕ ಆರೋಗ್ಯಕರ ಜೀವನ ಹೊಂದಬಹುದು.

ತಂಬಾಕು ಸೇವನೆ!

ತಂಬಾಕು ಸೇವನೆ!

ಧೂಮಪಾನ ಅಥವಾ ತಂಬಾಕು ಸೇವನೆ ನಿಮ್ಮ ಹೃದಯದ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ, ಹೃದಯವನ್ನು ಆರೋಗ್ಯಕರವಾಗಿಡಲು ನೀವು ಯಾವುದೇ ರೂಪದಲ್ಲಿ ತಂಬಾಕು ಸೇವನೆಯನ್ನು ಮಾಡಬಾರದು. ಧೂಮಪಾನವಂತು ಬಿಟ್ಟು ಬಿಡಿ. ಧೂಮಪಾನ ನಿಮ್ಮ ಹೃದಯವನ್ನು ಅನಾರೋಗ್ಯಪೀಡಿತವನ್ನಾಗಿ ಮಾಡುತ್ತದೆ.

ಒತ್ತಡ, ಆತಂಕ ಕಡಿಮೆಗೊಳಿಸಿ!

ಒತ್ತಡ, ಆತಂಕ ಕಡಿಮೆಗೊಳಿಸಿ!

ಹೃದಯಾಘಾತಕ್ಕೆ ಪ್ರಮುಖ ಅಪಾಯಕಾರಿ ಅಂಶವೆಂದರೆ ಒತ್ತಡ ಮತ್ತು ಆತಂಕ. ಹೌದು, ಒತ್ತಡ ಮತ್ತು ಆತಂಕವೂ ಹೃದಯಘಾತಕ್ಕೆ ಮತ್ತೊಂದು ಮೂಲ ಆದ್ದರಿಂದ ಒತ್ತಡ ಹಾಗೂ ಆತಂಕವನ್ನು ದೂರಗೊಳಿಸಿ. ಧ್ಯಾನ, ಪರಿಣಾಮಕಾರಿ ಯೋಗ ಮತ್ತು ಚಿತ್ರಕಲೆ, ಈಜು, ತೋಟಗಾರಿಕೆ ಅಥವಾ ಸಂಗೀತ ಮುಂತಾದ ಇತರ ಮನರಂಜನಾ ಚಟುವಟಿಕೆಗಳ ಮೂಲಕ ಒತ್ತಡದ ಮಟ್ಟವನ್ನು ಕಡಿಮೆ ಮಾಡಬೇಕಾಗುತ್ತದೆ.

ಆರೋಗ್ಯಕರ ಹೃದಯಕ್ಕೆ ಯೋಗ!

ಆರೋಗ್ಯಕರ ಹೃದಯಕ್ಕೆ ಯೋಗ!

ಯೋಗದ ಮೂಲಕ ಹೃದಯಘಾತದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಹೌದು, ಯೋಗದ ಹಲವು ಆಸನಗಳ ಮೂಲಕ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದಾಗಿದೆ. ಉತ್ತಿತ ತ್ರಿಕೋನಾಸನ ಅಥವಾ ವಿಸ್ತೃತ ತ್ರಿಕೋನ ಭಂಗಿ, ಪಶ್ಚಿಮೋತ್ತನಾಸನ ಅಥವಾ ಕುಳಿತಿರುವ ಮುಂದಕ್ಕೆ ಬಾಗಿದ ಭಂಗಿ, ಅರ್ಧ ಮತ್ಸ್ಯೇಂದ್ರಾಸನ ಅಥವಾ ಅರ್ಧ ಬೆನ್ನುಮೂಳೆಯ ತಿರುವು ಆಸನ ಹೃದಯದ ಆರೋಗ್ಯ ಕಾಪಾಡಲು ಉತ್ತಮ.

ಕೊಲೆಸ್ಟ್ರಾಲ್ ನಿಯಂತ್ರಿಸಿ!

ಕೊಲೆಸ್ಟ್ರಾಲ್ ನಿಯಂತ್ರಿಸಿ!

ಕಳಪೆ ಹೃದಯ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಕೊಡುಗೆ ಪ್ರಮುಖವಾಗಿದೆ. ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಹೃದಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ, ಹೃದಯವನ್ನು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಇರಿಸಿಕೊಳ್ಳಲು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

English summary

Heart Attack At Young Age : Tips To Follow For A Healthy Heart in kannada

Heart Attack At Young Age : How You Can Prevent Heart Attack, here is tips.....
Story first published: Tuesday, August 30, 2022, 11:36 [IST]
X
Desktop Bottom Promotion