ಕ್ಯಾನ್ಸರ್ ರೋಗದ ಖತರ್ನಾಕ್ ಲಕ್ಷಣಗಳಿವು! ನಿರ್ಲಕ್ಷಿಸದಿರಿ

Posted By: Jaya subramanya
Subscribe to Boldsky

ಇಂದು ಮನುಷ್ಯರನ್ನು ಕಾಡುವ ಹೆಚ್ಚಿನ ರೋಗಗಳು ಯಾವುದೇ ಆಮಂತ್ರಣವಿಲ್ಲದೆಯೇ ದೇಹವನ್ನು ಹೊಕ್ಕಿ ತಮ್ಮ ಇರುವಿಕೆಯನ್ನು ಪ್ರಸ್ತುತಪಡಿಸುತ್ತಿವೆ. ಈ ರೋಗ ನಮ್ಮ ದೇಹದಲ್ಲಿದೆ ಎಂಬುದು ಅರಿವಾಗುವುದೇ ಕೊನೆಯ ಕ್ಷಣದಲ್ಲಿ! ಅಷ್ಟೊತ್ತಿಗೆ ಸಮಯ ಕೂಡ ಮೀರಿ ಆಗಿರುತ್ತದೆ... ಇದಕ್ಕೆಲ್ಲಾ ಕಾರಣ ನಾವು ಆರೋಗ್ಯದ ಮೇಲೆ ನೀಡುತ್ತಿರುವ ನಿರ್ಲಕ್ಷ್ಯದಿಂದ ಈ ರೀತಿಯ ತೊಂದರೆಗಳು ಉಂಟಾಗುತ್ತಿವೆ.   ಸೈಲೆಂಟ್ ಕಿಲ್ಲರ್, 'ಹೊಟ್ಟೆಯ ಕ್ಯಾನ್ಸರ್‌' ಬಗ್ಗೆ ಇರಲಿ ಎಚ್ಚರ!!

ಸಣ್ಣ ಕಾಯಿಲೆ ಬಂದಾಗ ಕೂಡ ಅದನ್ನು ಗಮನಿಸದೆಯೇ ಸಿಕ್ಕ ಮಾತ್ರೆಗಳನ್ನು ನುಂಗಿ ವೈದ್ಯರನ್ನು ಕಾಣುವ ಗೊಡವೆಗೇ ಹೋಗುವುದಿಲ್ಲ. ಆದರೆ ಈ ಚಿಕ್ಕ ರೋಗಗಳೇ ಮುಂದೆ ದೊಡ್ಡ ರೋಗವಾಗಿ ಮಾರ್ಪಾಡಾಗುತ್ತದೆ ಎಂಬುದನ್ನು ನಾವು ಆ ಕ್ಷಣದಲ್ಲಿ ಗಮನಿಸುವುದೇ ಇಲ್ಲ. ಇಂತಹುದೇ ಪ್ರಾಣಾಂತಿಕ ಕಾಯಿಲೆಯಾಗಿದೆ ಕ್ಯಾನ್ಸರ್. ಸಣ್ಣ ರೋಗ ಲಕ್ಷಣಗಳಿದ್ದರೂ ಜನರು ಇದನ್ನು ಗಮನಿಸದೇ ಅದು ಉಲ್ಬಣವಾಗುವುದಕ್ಕೆ ತಾವೇ ಕಾರಣರಾಗುತ್ತಿದ್ದಾರೆ.   ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳು

ಇಂದಿನ ಲೇಖನದಲ್ಲಿ ಈ ರೋಗದ ಸಾಮಾನ್ಯ ಲಕ್ಷಣಗಳನ್ನು ನಾವು ನೀಡುತ್ತಿದ್ದು ಇದು ಎಚ್ಚರಿಕೆಯ ಸಂಕೇತವಾಗಿದೆ. ಕ್ಯಾನ್ಸರ್ ಮೊದಲು ಅಂಗಗಳನ್ನು, ರಕ್ತದ ಕಣಗಳನ್ನು ನಂತರ ನರವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತದೆ. ಬನ್ನಿ ಇಂದಿಲ್ಲಿ ನಾವು ತಿಳಿಸಿರುವ ಅಂಶಗಳನ್ನು ನೀವು ಅರಿತುಕೊಂಡಲ್ಲಿ ಕ್ಯಾನ್ಸರ್‌ಗೆ ಬೇಕಾಗಿರುವ ಚಕಿತ್ಸೆಯನ್ನು ಅರಿತುಕೊಳ್ಳಬಹುದಾಗಿದೆ....   

ಚರ್ಮದ ಅಡಿಯ ಗಂಟುಗಳು

ಚರ್ಮದ ಅಡಿಯ ಗಂಟುಗಳು

ಕೆಲವೊಮ್ಮೆ ಚರ್ಮದ ಅಡಿಯಲ್ಲಿ ಚಿಕ್ಕ ಚಿಕ್ಕ ಗಂಟುಗಳಾಗಿದ್ದು ಕೆಲವೊಮ್ಮೆ ಇದರಿಂದ ರಕ್ತ ಒಸರಲೂ ಬಹುದು. ಈ ಗಂಟುಗಳನ್ನು ಒತ್ತಿದಾಗ ನೋವಿಲ್ಲದೇ ಇದ್ದರೆ ಇವುಗಳನ್ನು ಗ್ಯಾಂಗ್ಲಿಯಾನ್ ಗಂಟುಗಳೆಂದು ಕರೆಯಬಹುದಾಗಿದ್ದು ಇವು ನಿರಪಾಯಕಾರಿಯಾಗಿವೆ. ಆದರೆ ಒಂದು ವೇಳೆ ಈ ಗಂಟುಗಳನ್ನು ಒತ್ತಿದಾಗ ನೋವಾದರೆ ಹಾಗೂ ಇವು ನಿಧಾನವಾಗಿ ಬೆಳೆಯುತ್ತಿರುವುದನ್ನು ಗಮನಿಸಿದರೆ ಇದು ಚರ್ಮದ ಕ್ಯಾನ್ಸರ್ (basal skin melanoma) ನ ಲಕ್ಷಣವೆಂದು ತಿಳಿದುಕೊಳ್ಳಬೇಕು.

ಸ್ತನತೊಟ್ಟಿನ ಆಕಾರ ಬದಲಾಗುವುದು!

ಸ್ತನತೊಟ್ಟಿನ ಆಕಾರ ಬದಲಾಗುವುದು!

ಒಂದು ವೇಳೆ ತೊಟ್ಟು ಒಳಗಿನಿಂದ ಎಳೆದುಕೊಂಡಂತೆ ಒಳಸರಿದಿದ್ದಲ್ಲಿ, ಅತಿಯಾಗಿ ಚಪ್ಪಟೆಯಾಗಿದ್ದಲ್ಲಿ ಅಥವಾ ಒಂದು ಪಕ್ಕಕ್ಕೆ ಬಾಗಿದಂತೆ ಕಂಡುಬಂದರೆ ಇದು ಸಹಾ ಸ್ತನ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

ತುರಿಕೆಯ ತ್ವಚೆ

ತುರಿಕೆಯ ತ್ವಚೆ

ಕ್ಯಾನ್ಸರ್ ಬ್ಯಾಕ್ಟೀರಿಯಾ ಆಗಿದ್ದು, ರೋಗವರ್ಧಕ ವ್ಯವಸ್ಥೆಯು ಅದರೊಂದಿಗೆ ಆರಂಭ ಹಂತದಲ್ಲಿ ಹೋರಾಟವನ್ನು ನಡೆಸುತ್ತದೆ. ಈ ಭಾಗದಲ್ಲಿ ರಕ್ತದ ಹರಿವನ್ನು ಇದು ಹೆಚ್ಚಿಸುತ್ತದೆ ಇದರಿಂದ ತುರಿಕೆ ಮತ್ತು ಬೆಚ್ಚನೆಯ ಅನುಭವ ನಿಮಗೆ ಉಂಟಾಗುತ್ತದೆ.

ಗಾಯಗಳು ಒಣಗುವುದಿಲ್ಲ

ಗಾಯಗಳು ಒಣಗುವುದಿಲ್ಲ

ಯಾವುದೇ ಗಾಯಗಳು ನಿಮ್ಮ ದೇಹದಲ್ಲಿ ಉಂಟಾದಾಗ ಅದು ಒಣಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಇದು ಕ್ಯಾನ್ಸರ್ ದೇಹದಲ್ಲಿ ಬೆಳವಣಿಗೆಯಾಗುತ್ತಿದೆ ಎಂಬುದನ್ನು ತೋರಿಸುವ ಸಂಕೇತವಾಗಿದೆ.

ಬಾಯಿ ಅಥವಾ ನಾಲಿಗೆಯಲ್ಲಿ ಊತಗಳು

ಬಾಯಿ ಅಥವಾ ನಾಲಿಗೆಯಲ್ಲಿ ಊತಗಳು

ವಸಡಿನ ಬದಿಯಲ್ಲಿ ಅಥವಾ ನಾಲಿಗೆಯಲ್ಲಿ ಊತ ಇಲ್ಲವೇ ಬೊಬ್ಬೆಗಳು ಉಂಟಾಗುತ್ತಿರುತ್ತವೆ. ನಿಮ್ಮ ವೈದ್ಯರನ್ನು ಕೂಡಲೇ ಸಂಪರ್ಕಿಸಿ ಅವರಲ್ಲಿ ಇದನ್ನು ತೋರಿಸಿ. ಇದು ಕ್ಯಾನ್ಸರ್‌ನ ಒಂದು ಲಕ್ಷಣವಾಗಿದೆ.

ಜಗಿಯುವುದರಲ್ಲಿ ತೊಂದರೆ ಅಥವಾ ಹಸಿವು ಇಲ್ಲದಿರುವುದು

ಜಗಿಯುವುದರಲ್ಲಿ ತೊಂದರೆ ಅಥವಾ ಹಸಿವು ಇಲ್ಲದಿರುವುದು

ನಿಮಗೆ ಜಗಿಯುವಿಕೆಯಲ್ಲಿ ತೊಂದೆಯುಂಟಾದಾಗ ಅಥವಾ ನಿಮ್ಮ ಜೀರ್ಣ ಕ್ರಿಯೆ ವ್ಯವಸ್ಥೆಯಲ್ಲಿ ತೊಂದರೆಯುಂಟಾದಾಗ ಅದನ್ನು ವೈದ್ಯರ ಬಳಿ ತೋರಿಸಿ. ನೀವು ಸೇವಿಸುವ ಪೋಷಕಾಂಶಗಳು ದೇಹಕ್ಕೆ ಸೇರದಂತೆ ಮಾಡುತ್ತವೆ. ಕ್ಯಾನ್ಸರ್‌ನ ಅತಿ ಮುಖ್ಯ ಲಕ್ಷಣಗಳಲ್ಲಿ ಇದೂ ಒಂದಾಗಿದೆ.

ಕರುಳಿನ ಚಲನೆಗಳಲ್ಲಿ ಬದಲಾವಣೆ

ಕರುಳಿನ ಚಲನೆಗಳಲ್ಲಿ ಬದಲಾವಣೆ

ಕ್ಯಾನ್ಸರ್‌ ಪ್ರಭಾವವನ್ನು ಬೀರುವ ಎಡೆಯಲ್ಲಿ ಕರುಳಿನ ಚಲನೆ ಕೂಡ ಒಂದಾಗಿದೆ. ನಿಮ್ಮ ಮಲದಲ್ಲಿ ರಕ್ತವನ್ನು ಗಮನಿಸಿದಲ್ಲಿ, ಇದು ರಕ್ತ ಕ್ಯಾನ್ಸರ್‌ನ ಲಕ್ಷಣವಾಗಿದೆ.

ಮೂತ್ರದಲ್ಲಿ ಬದಲಾವಣೆ

ಮೂತ್ರದಲ್ಲಿ ಬದಲಾವಣೆ

ಮೂತ್ರ ಸೋಂಕು ನಿಮ್ಮನ್ನು ಕಾಡುವ ಸಂಭವ ಇರುತ್ತದೆ. ನಿಮ್ಮ ಮೂತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವು ಕಂಡುಕೊಳ್ಳುತ್ತೀರಿ. ಅದರ ಬಣ್ಣ, ವಾಸನೆ, ರಕ್ತ ಕಂಡುಬರುವುದು ಮೊದಲಾದವು ನಿಮ್ಮ ಗಮನಕ್ಕೆ ಬಂದಲ್ಲಿ ವೈದ್ಯರನ್ನು ಕಾಣಿ.

ರಕ್ತಸ್ರಾವ

ರಕ್ತಸ್ರಾವ

ಅನಿರೀಕ್ಷಿತವಾಗಿ ರಕ್ತಸ್ರಾವವಾಗುತ್ತಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ. ಗರ್ಭಾಶಯ, ತೊಟ್ಟುಗಳು ಅಥವಾ ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದಲ್ಲಿ ವೈದ್ಯರನ್ನು ಕಾಣಿ.

ಧ್ವನಿಯಲ್ಲಿ ಬದಲಾವಣೆಗಳು

ಧ್ವನಿಯಲ್ಲಿ ಬದಲಾವಣೆಗಳು

ಧ್ವನಿ ಪದರದ ಮೇಲೆ ಕ್ಯಾನ್ಸರ್ ಆಕ್ರಮಣವನ್ನು ಮಾಡಿದ್ದಲ್ಲಿ ನಿಮ್ಮ ಧ್ವನಿಯಲ್ಲಿ ಬದಲಾವಣೆಗಳಾಗುತ್ತವೆ. ಇದಕ್ಕೆ ತುರ್ತಾಗಿ ವೈದ್ಯರನ್ನು ನೀವು ಸಂಪರ್ಕಿಸಲೇಬೇಕು.

ನಿರಂತರ ಕೆಮ್ಮು

ನಿರಂತರ ಕೆಮ್ಮು

ಗಂಟಲು, ಶ್ವಾಸಕೋಶ, ಅನ್ನನಾಳ, ಹೊಟ್ಟೆಯ ಕ್ಯಾನ್ಸರ್ ನಿರಂತರ ಕೆಮ್ಮಿನಿಂದ ಕೂಡಿರುತ್ತದೆ. ನೀವು ಕೆಮ್ಮುವಾಗ ನೋವು ಇಲ್ಲವೇ ರಕ್ತ ಕಂಡುಬಂದಲ್ಲಿ, ನೀವು ಹೆಚ್ಚು ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು.

ಮೂತ್ರವಿಸರ್ಜನೆಯ ವೇಳೆ ಉರಿ

ಮೂತ್ರವಿಸರ್ಜನೆಯ ವೇಳೆ ಉರಿ

ಒಂದು ವೇಳೆ ಮೂತ್ರವಿಸರ್ಜಿಸುವಾಗ ತೀವ್ರತರದ ಉರಿ ಅಥವಾ ಬಿಸಿಯಾಗುತ್ತಿರುವಂತೆ ಅನ್ನಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುತ್ತಿರುವ ಸೂಚನೆಯಾಗಿರಬಹುದು. ಕೇವಲ ಎಳನೀರು ಕುಡಿದರೆ ಉರಿಮೂತ್ರ ಕಡಿಮೆಯಾದರೂ ವೈದ್ಯರಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಅಂತೆಯೇ ವೀರ್ಯದಲ್ಲಿ ರಕ್ತ ಮಿಶ್ರಣವಾಗಿರುವುದು ಕೂಡ ಪ್ರಾಸ್ಟೇಟ್ ಕ್ಯಾನ್ಸರ್‌ನ ಲಕ್ಷಣವಾಗಿದೆ.

ಚರ್ಮದ ಬಣ್ಣದಲ್ಲಿ ಬದಲಾವಣೆ

ಚರ್ಮದ ಬಣ್ಣದಲ್ಲಿ ಬದಲಾವಣೆ

ಸುಮಾರು ಐವತ್ತು ವರ್ಷ ದಾಟಿದ ಪುರುಷರು ಚರ್ಮದ ಕ್ಯಾನ್ಸರ್‌ಗೆ ಹೆಚ್ಚು ತುತ್ತಾಗುತ್ತಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಒಂದು ವೇಳೆ ನಿಮ್ಮ ದೇಹದ ಯಾವುದೇ ಭಾಗದಲ್ಲಿ ಚರ್ಮ ತನ್ನ ಸಹಜ ವರ್ಣವನ್ನು ಕಳೆದುಕೊಂಡಿರುವುದು ಅಥವಾ ಬದಲಾವಣೆಗೊಂಡಿರುವುದು ಕಂಡುಬಂದರೆ ತುರ್ತಾಗಿ ಚರ್ಮವೈದ್ಯರನ್ನು ಕಾಣುವುದು ಅಗತ್ಯ.

ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು

ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು

ಒಂದು ವೇಳೆ ಮಲವಿಸರ್ಜನೆಯ ಹೊತ್ತಿನಲ್ಲಿ ನೋವಾಗದೇ ಇದ್ದರೂ ರಕ್ತದಿಂದ ಆವರಿಸಿಕೊಂಡಿರುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಕಾಣಿ. ಇದು ಪೈಲ್ಸ್ ಅಥವಾ ಮೊಳೆರೋಗದ ಲಕ್ಷಣವಾಗಿದ್ದರೆ ಅದರಲ್ಲಿ ನೋವು ಇರುತ್ತಿತ್ತು. ಯಾವುದಕ್ಕೂ ವೈದ್ಯರಿಂದ ತಪಾಸಣೆಗೊಳಪಡುವುದು ಅವಶ್ಯವಾಗಿದೆ.

ಶೀಘ್ರವಾಗಿ ತೂಕ ಇಳಿಯುವುದು

ಶೀಘ್ರವಾಗಿ ತೂಕ ಇಳಿಯುವುದು

ಒಂದು ವೇಳೆ ನೀಮ್ಮ ತೂಕ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಶೀಘ್ರವಾಗಿ ಇಳಿಯುತ್ತಿದ್ದಲ್ಲಿ ಕರುಳು ಅಥವಾ ಯಕೃತ್ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.

ಹತೋಟಿಗೇ ಬಾರದ ಜ್ವರ

ಹತೋಟಿಗೇ ಬಾರದ ಜ್ವರ

ಅತಿ ಹೆಚ್ಚು ಜ್ವರವಿದ್ದು ನಡುಗುತ್ತಿದ್ದರೆ ಮತ್ತು ಯಾವುದೇ ಔಷಧಿಗೆ ಬಗ್ಗದೇ ಇದ್ದರೆ ರಕ್ತದ ಕ್ಯಾನ್ಸರ್ ನ ಲಕ್ಷಣವಿರಬಹುದು. ತಡಮಾಡದೇ ಸೂಕ್ತ ತಪಾಸಣೆಗೊಳಗಾಗುವುದು ಅವಶ್ಯವಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Early Warning Signs Of Cancer That Most People Ignore

    Here, we have listed some of the commonly noticed early warning signs of cancer. As a cancer grows, it will begin to push on to the nearby organs, blood vessels and nerves...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more